ಇತ್ತೀಚಿನ ದಿನಗಳಲ್ಲಿ ಗೋಧಿ ಚಪಾತಿ ಆರೋಗ್ಯಕ್ಕೆ ಹಾನಿಕರ ಎಂಬ ವಾದವಿದೆ. ತಜ್ಞರ ಪ್ರಕಾರ, ಹಿಟ್ಟನ್ನು ಕಲಸುವ ವಿಧಾನ ಮುಖ್ಯ. ಹಿಂದಿನ ಕಾಲದಲ್ಲಿ ಹಿಟ್ಟನ್ನು ನಾದಿ, ಮುಚ್ಚಿಡುತ್ತಿದ್ದರು. ಇದರಿಂದ ಗ್ಲುಟನ್ ದೇಹಕ್ಕೆ ಸುಲಭವಾಗಿ ಸೇರುತ್ತಿತ್ತು. ಈಗಿನವರು ತಕ್ಷಣ ಚಪಾತಿ ಮಾಡುತ್ತಾರೆ. ಹಿಟ್ಟನ್ನು ಫ್ರಿಜ್‌ನಲ್ಲಿ ಇಡಬಾರದು. ಗ್ಲುಟನ್ ಸಮಸ್ಯೆ ಇದ್ದರೆ, ಬೇರೆ ಹಿಟ್ಟನ್ನು ಬೆರೆಸಿ ಚಪಾತಿ ಮಾಡಿ, ತಯಾರಿಸಿದ ಒಂದು ಗಂಟೆಯೊಳಗೆ ತಿನ್ನಬೇಕು.
ಇತ್ತೀಚಿಗೆ ತಿಂಗಳಿಗೊಮ್ಮೆ ಭೇದಿ ಕಾಡ್ತಾ ಇತ್ತು. ಸಾಕಪ್ಪ ಸಾಕು ಅಂತ ಡಾಕ್ಟರ್ ಬಳಿ ಹೋದೆ. ಎಲ್ಲ ಟೆಸ್ಟ್ ಮಾಡಿದ ಡಾಕ್ಟರ್, ಗೋಧಿ ಚಪಾತಿ ತಿನ್ಲೇಬೇಡಿ ಅಂತ ತಾಕೀತು ಮಾಡಿದ್ದಾರೆ. ಗೋಧಿ ಚಪಾತಿ ಇಲ್ಲ ಅಂದ್ರೆ ರಾತ್ರಿ ಊಟ ಸೇರೋದಿಲ್ಲ. ಪ್ರತಿ ದಿನ ರಾತ್ರಿ ಡಿನ್ನರ್ ಗೆ ಚಪಾತಿ ಖಾಯಂ ಆಗಿತ್ತು. ಗೋಧಿ (Wheat)ನೂ ತಿನ್ಬಾರದು ಅಂದ್ರೆ ಹೇಗೆ? ಎಷ್ಟೋ ವರ್ಷದಿಂದ ನಮ್ಮ ತಾತ, ಮುತ್ತಾತ ಎಲ್ಲ ಇದನ್ನೇ ತಿಂದಿದ್ದಲ್ವ? ಅವರಿಗೆ ಏನೂ ಆಗಿಲ್ಲ, ನಮಗ್ಯಾಕೆ ಹೀಗೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಗೋಧಿ ಚಪಾತಿ (Wheat Chapati) ಬಹುತೇಕ ಎಲ್ಲರ ಫೆವರೆಟ್. ರಾತ್ರಿ ಊಟಕ್ಕೆ ಚಪಾತಿ ಬೇಕೇಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ. ತುಪ್ಪ ಹಾಕಿ, ಒಲೆ ಮೇಲೆ ನೇರವಾಗಿ ಸುಟ್ಟು, ಗೋಧಿ ಹಿಟ್ಟಿಗೆ ಬೇರೆ ಬೇರೆ ತರಕಾರಿ ರಸ ಸೇರಿಸಿ ಹೀಗೆ ನಾನಾ ವಿಧದಲ್ಲಿ ಚಪಾತಿ ತಯಾರಿಸಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗೋಧಿ ಚಪಾತಿ ಆರೋಗ್ಯ (health)ಕ್ಕೆ ಹಾನಿಕರ ಎಂಬ ಸುದ್ದಿ ಬರ್ತಿದೆ. ಅನೇಕರ ಆರೋಗ್ಯ ಇದ್ರಿಂದ ಹದಗೆಟ್ಟಿದ್ದೂ ಇದೆ. ಅದಕ್ಕೆಲ್ಲ ಕಾರಣ ನಾವು ಚಪಾತಿ ತಯಾರಿಸುವ ವಿಧಾನ ಎನ್ನುತ್ತಾರೆ ತಜ್ಞರು. ಹಿಂದಿನ ಕಾಲದಲ್ಲಿ ಚಪಾತಿ ತಯಾರಿಸುತ್ತಿದ್ದ ವಿಧಾನಕ್ಕೂ ಈಗಿನ ಕಾಲದ ಜನರು ತಯಾರಿಸುತ್ತಿರುವ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅದೇ ಅವ್ರ ಆರೋಗ್ಯ ಹಾಳು ಮಾಡ್ತಿದೆ ಎಂಬುದು ತಜ್ಞರ ವಾದ. ಚಪಾತಿ ಹೇಗೆ ತಯಾರಿಸಿದ್ರೆ ಸರಿ? : ಗೋಧಿ ಹಿಟ್ಟಿನಲ್ಲಿ ಗ್ಲುಟನ್ ಇರುತ್ತದೆ. ಅದು ಹಾನಿಕಾರಕ ಅಂತ ಪರಿಗಣಿಸಲಾಗ್ತಿದೆ. ಸರಿಯಾದ ವಿಧಾನದಲ್ಲಿ ಚಪಾತಿ ತಯಾರಿಸಿದ್ರೆ ಯಾವುದೇ ಸಮಸ್ಯೆ ಆಗೋದಿಲ್ಲ ಅಂತ ಆಹಾರ ತಜ್ಞೆ ನಿಧಿ ಶುಕ್ಲಾ ಹೇಳಿದ್ದಾರೆ.
ಭಾರತದ ಈ ಕೆಫೆಯಲ್ಲಿ ಸಿಗುತ್ತೆ ದುಬಾರಿ ಚಾಯ್, ಇದರ ಬೆಲೆ 1,000 ರೂಪಾಯಿ
ನಿಧಿ ಶುಕ್ಲಾ ಪ್ರಕಾರ, ಹಿಂದಿನ ಕಾಲದಲ್ಲಿ ಜನರು ನೀರು ಅಥವಾ ಎಣ್ಣೆಯನ್ನು ಹಾಕಿ ಗೋಧಿ ಹಿಟ್ಟನ್ನು ಕಲಸ್ತಾ ಇದ್ರು. ಹಿಟ್ಟನ್ನು ಸರಿಯಾಗಿ ನಾದಿದ ನಂತ್ರ ಅದ್ರ ಮೇಲೆ ಒಂದು ಬಟ್ಟೆಯನ್ನು ಮುಚ್ಚಿ ಸ್ವಲ್ಪ ಸಮಯ ಹಾಗೆ ಬಿಡ್ತಾ ಇದ್ರು. ಹೀಗೆ ಮಾಡಿದ್ರೆ ಗೋಧಿಯಲ್ಲಿರುವ ಗ್ಲುಟನ್, ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ನಿಮ್ಮ ದೇಹ ಅದನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಅದ್ರಿಂದ ಯಾವುದೇ ಜೀರ್ಣಕಾರಿ ಸಮಸ್ಯೆ ನಿಮ್ಮನ್ನು ಕಾಡೋದಿಲ್ಲ. ಆದ್ರೆ ಈಗಿನ ಕಾಲದ ಜನರು ಚಪಾತಿ ಹಿಟ್ಟು ಕಲಸಿದ ತಕ್ಷಣ ಚಪಾತಿ ತಯಾರಿಸ್ತಾರೆ. ಹಿಟ್ಟು ಗಟ್ಟಿಯಾಗಲು ಬಿಡೋದಿಲ್ಲ. ಚಪಾತಿ ಹಿಟ್ಟನ್ನು ಕಲಸಿಟ್ಟರೆ ಅದು ಗಟ್ಟಿಯಾಗುತ್ತದೆ, ಆರೋಗ್ಯಕ್ಕೆ ಹಾನಿಕರ ಎಂಬುದು ಈಗಿನವರ ಅಭಿಪ್ರಾಯ. ಆದ್ರೆ ಅವರ ನಂಬಿಕೆ ತಪ್ಪು. ಗೋಧಿ ಹಿಟ್ಟನ್ನು ಸರಿಯಾಗಿ ನಾದಿದ ನಂತ್ರ ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ಆದ್ರೆ ಅದನ್ನು ಫ್ರಿಜ್ ನಲ್ಲಿ ಇಡಬಾರದು. ಫ್ರಿಜ್ ನಲ್ಲಿಟ್ಟ ಹಿಟ್ಟಿನಿಂದ ಚಪಾತಿ ತಯಾರಿಸಿ ತಿಂದರೆ ಅದು ಒಳ್ಳೆಯದಲ್ಲ ಎಂದು ನಿಧಿ ಶುಕ್ಲಾ ಹೇಳಿದ್ದಾರೆ.
ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನಬೇಕೋ ಬೇಡ್ವೋ? ತಿನ್ನುವ ಸರಿಯಾದ ವಿಧಾನ ಇಲ್ಲಿದೆ!
ಚಪಾತಿ ತಯಾರಿಸುವ ವೇಳೆ ಇದು ನೆನಪಿರಲಿ : ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸುತ್ತಿದ್ದರೆ ಅದನ್ನು ಸರಿಯಾಗಿ ನಾದಬೇಕು. ಈಗಾಗಲೇ ನಿಮಗೆ ಗ್ಲುಟನ್ ಸಮಸ್ಯೆ ಇದ್ದರೆ ಬರೀ ಗೋಧಿಯಿಂದ ತಯಾರಿಸಿದ ಚಪಾತಿ ಅಥವಾ ಆಹಾರ ತಿನ್ನಬೇಡಿ. ಗೋಧಿ ಹಿಟ್ಟಿಗೆ ಬೇರೆ ಹಿಟ್ಟನ್ನು ಬೆರೆಸಿ ಚಪಾತಿ ತಯಾರಿಸಿ. ಚಪಾತಿ ಹಿಟ್ಟು ಸಿದ್ಧವಾದ ನಂತ್ರ ಸ್ವಲ್ಪ ಸಮಯ ಅದನ್ನು ಮುಚ್ಚಿಡಿ. ಅದಕ್ಕೆ ನೀರು ಅಥವಾ ಎಣ್ಣೆಯನ್ನು ಸಿಂಪಡಿಸಿ. ಚಪಾತಿ ಹಿಟ್ಟು ಸಿದ್ಧವಾದ ಒಂದು ಗಂಟೆಯೊಳಗೆ ಚಪಾತಿ ಮಾಡಿ.
