ಒಂದು ಕಪ್ ಚಹಾ ಬೆಲೆ 1,000 ರೂಪಾಯಿ. ಹಾಗಂತ ಕಪ್ ದೊಡ್ಡದಿಲ್ಲ. ಇತರ ಕೆಫೆಗಳ ರೀತಿ ಹರಟೆ ಹೊಡೆಯುತ್ತಾ ಕುಳಿತುಕೊಳ್ಳಲು ಇಲ್ಲಿ ಸಮಯವಿಲ್ಲ. ಇದು ದುಬಾರಿ ಚಹಾ ಎಂದೇ ಗುರುತಿಸಿಕೊಂಡಿದೆ. ಈ ದುಬಾರಿ ಚಹಾದ ವಿಶೇಷತೆ ಏನು? ಎಲ್ಲಿ ಸಿಗುತ್ತೆ?
ಹೈದರಾಬಾದ್(ಮಾ.05) ಭಾರತದ ಬಹುತೇಕರ ಮನೆಯಲ್ಲಿ ದಿನ ಆರಂಭವಾಗುವುದೇ ಚಹಾ ಮೂಲಕ. ಇನ್ನು ಸೂರ್ಯ ಮುಳುಗುವುದರೊಳಗೆ ಮತ್ತೊಂದು ಚಹಾ. ಹೀಗೆ ದಿನದಲ್ಲಿ ಕನಿಷ್ಠ 2 ಚಹಾ ಸಮಾನ್ಯ. ಇದರ ನಡುವೆ ಕೆಲಸದಲ್ಲಿ ಟೀ ಬ್ರೇಕ್, ರಿಲಾಕ್ಸ್ ಸೇರಿದಂತೆ ಹಲವು ಕಾರಣಗಳಿಂದ ಚಹಾ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ. ಚಹಾ ಭಾರತದ ಅತ್ಯಂತ ಪ್ರಮುಖ ಪಾನಿಯಾ. ಒಂದು ರೀತಿ ರಿಫ್ರೆಶನ್ ಡ್ರಿಂಕ್. ಚಹಾಗಾಗಿ ಹಲವು ಕೆಫೆಗಳಿವೆ. 10 ರೂಪಾಯಿಯಿಂದ ಹಿಡಿದು ದುಬಾರಿ ಬೆಲೆಯ ಚಹಾಗಳು ಲಭ್ಯವಿದೆ. 100, 300, 500 ಹೀಗೆ ದುಬಾರಿ ಬೆಲೆ ಚಹಾ ಸವಿಯರು ಜನರು ಕ್ಯೂ ನಿಲ್ಲುತ್ತಾರೆ. ಆದರೆ ಭಾರತದ ಈ ಕೆಫೆಯಲ್ಲಿ ಅತ್ಯಂತ ವಿಶೇಷ ಚಹಾ ಲಭ್ಯವಿದೆ. ಇದರ ಬೆಲೆ ಬರೋಬ್ಬರಿ 1,000 ರೂಪಾಯಿ. ಹಾಗಂತ ಇದು ದೊಡ್ಡ ಕಪ್ ಅಲ್ಲ. ಸಾಮಾನ್ಯ ಸಣ್ಣ ಕಪ್‌ನಲ್ಲೇ ನೀಡಲಾಗುತ್ತದೆ.
ಈ ದುಬಾರಿ ಚಹಾ ಹೆಸರು ಇರಾನಿ ಚಾಯ್. ಇದು ಭಾರತದ ಅತ್ಯಂತ ದುಬಾರಿ ಚಾಯ್ ಮಾತ್ರವಲ್ಲ, ಅತ್ಯಂತ ಸ್ವಾದಿಷ್ಠ ಚಹಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೈದರಾಬಾದ್‌ನಲ್ಲಿರುವ ಕೆಫೆ ನಿಲೋಫರ್‌ನಲ್ಲಿ ಈ ಇರಾನಿ ಚಾಯ್ ಲಭ್ಯವಿದೆ. ವಿಶೇಷ ಅಂದರೆ ಈ ಚಹಾಗೆ ಬಳಸುವ ಚಹಾ ಪುಡಿಯನ್ನು ಅಸ್ಸಾಂನಿಂದ ತರಿಸಿಕೊಳ್ಳಲಾಗುತ್ತದೆ. ಚಹಾ ತೋಟಗಳಲ್ಲಿ ಮಶಿನ್ ತಂತ್ರಜ್ಞಾನ ಬಳಸಿ ತೆಗೆದ ಪುಡಿಯಲ್ಲ. ಕೈಗಳಿಂದ ಜಾಗರೂಕವಾಗಿ. ಒಂದೊಂದು ಎಲೆಯನ್ನು ಗಮನದಲ್ಲಿಟ್ಟುಕೊಂಡು ಕಿತ್ತು ತಂದು ನೈಸರ್ಗಿಕ ವಿಧಾನದಲ್ಲಿ ಒಣಗಿಸಿ ತಯಾರಿಸಿದ ಚಹಾ ಪುಡಿಯಾಗಿದೆ. ಆದರೆ ಚಹಾ ತಯಾರಿಕೆ ಇರಾನಿ ಮಾದರಿಯಲ್ಲಿ ಮಾಡಲಾಗುತ್ತದೆ.
1,000 ರೂಪಾಯಿ ಇರಾನಿ ಚಾಯ್ ಜೊತೆಗೆ ಕುಕ್ಕೀಸ್ ಹಾಗೂ ಕೇಕ್ ನೀಡಲಾಗುತ್ತದೆ. 18 ಹಾಗೂ 19ನೇ ಶತಮಾನದಲ್ಲಿ ಪರ್ಶಿಯಾದಿಂದ ಭಾರತಕ್ಕೆ ವಲಸೆ ಬಂದ ಇರಾನಿಗಳಿಂದ ಭಾರತದಲ್ಲಿ ಇರಾನಿ ಚಾಯ್ ಜನಪ್ರಿಯವಾಗಿದೆ. ಹೈದರಾಬಾದ್ ನಿಜಾಮರು ಇರಾನಿ ಚಾಯ್‌ಗೆ ಮಾರುಹೋಗಿದ್ದರು. ಹೀಗಾಗಿ ಮೂಲ ಇರಾನಿಗರ ಚಾಯ್ ತರಿಸಿಕೊಂಡು ಕುಡಿಯುತ್ತಿದ್ದರು. ಹೈದರಾಬಾದ್‌ನ ಹಲೆಡೆಗಳಲ್ಲಿ ಮೂಲ ಇರಾನಿಗರು ಆರಂಭಿಸಿದ ಕೆಫೆಯಲ್ಲಿ ಇರಾನಿ ಚಾಯ್ ಲಭ್ಯವಿತ್ತು. ನಿಜಾಮರ ಅರಮನೆಯಲ್ಲಿ ಪ್ರತಿ ದಿನ ಇರಾನಿ ಚಾಯ್ ಕಡ್ಡಯಾವಾಗಿತ್ತು. ಈ ಲೆಗೆಸಿ ಮುಂದುವರಿದಿದೆ. ಇದೀಗ ಹೈದಾರಾಬಾದ್‌ನ ಹಲವು ಕಡೆಗಳಲ್ಲಿ ಇರಾನಿ ಚಾಯ್ ಲಭ್ಯವಿದೆ. ಆದರೆ ಕೆಫೆ ನಿಲೋಫರ್‌ನಲ್ಲಿ ಮೂಲಕ ಇರಾನಿ ಸ್ವಾದದ ಚಾಯ್ ಲಭ್ಯವಿದೆ. ಹೀಗಾಗಿ ಇದರ ಬೆಲೆ 1,000 ರೂಪಾಯಿ.
ಇರಾನಿ ಕಪ್‌ನಲ್ಲಿ ಇರಾನಿ ಚಾಯ್ ಹೀರಲು ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಪ್ರಮುಖಾಗಿ ಕೆಫೆ ನಿಲೋಫರ್‌ನಿಂದ ಪ್ರಮುಖ ಕಾರ್ಯಕ್ರಮಗಳಿಗೆ ಇರಾನಿ ಚಾಯ್ ಬೇಡಿಕೆ ಇದೆ. ಮಹತ್ವದ ಕಾರ್ಯಕ್ರಮಗಳು, ಉದ್ಯಮಿಗಳ ಕಾರ್ಯಗಳಲ್ಲಿ ಇರಾನಿ ಚಾಯ್ ಇರಲೇಬೇಕು ಎಂಬಂತಾಗಿದೆ. ದುಬಾರಿಯಾದರೂ ಇದೀಗ ಜನರು ಇರಾನಿ ಚಾಯ್‌ಗೆ ಮಾರು ಹೋಗಿದ್ದಾರೆ. ಕೇವಲ ಹೈದರಾಬಾದ್‌ನಲ್ಲಿ ಮಾತ್ರವಲ್ಲ, ಭಾರತದ ಹಲವು ನಗರಗಳಲ್ಲಿ ಇರಾನಿ ಚಾಯ್ ಲಭ್ಯವಿದೆ. ಆದರೆ ಎಷ್ಡರ ಮಟ್ಟಿಗೆ ಅಥೆಂಟಿಕ್ ಅನ್ನೋದು ಸ್ಪಷ್ಟವಿಲ್ಲ. ಭಾರತದಲ್ಲಿ ಹಲವು ಚಾಯ್‌ಗಳು ಲಭ್ಯವಿದೆ. ಈ ಪೈಕಿ ಕೆಲ ಚಹಾಗಳು ದುಬಾರಿಯಾಗಿದೆ.
ಭಾರತದಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆ ವರೆಗಿನ ಚಹಾಗಳಿಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿ ಕೇವಲ ಚಹಾ ಮಾರಾಟದಿಂದ ಲಕ್ಷಾಧಿಪತಿಗಳಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ ಭಾರತದಲ್ಲಿ ಚಹಾ ಮಾರಾಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ ಹಲವರಿದ್ದಾರೆ.
