ಬೇಸಿಗೆಯಲ್ಲೂ ಡ್ರೈ ಫ್ರೂಟ್ಸ್ ತಿನ್ನಬಹುದು, ಆದ್ರೆ ತಿನ್ನೋ ರೀತಿ ಗೊತ್ತಿರಬೇಕು. ನೆನೆಸಿ ತಿಂದ್ರೆ ಅಥವಾ ತಣ್ಣಗಿನ ಹಾಲಿನ ಜೊತೆ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತೆ, ಬಿಸಿಲಿನಿಂದಾನೂ ರಿಲೀಫ್ ಸಿಗುತ್ತೆ.

ಬೇಸಿಗೆಯಲ್ಲಿ ಶರೀರವನ್ನು ಹಗುರ ಮತ್ತು ತಂಪಾಗಿಟ್ಕೊಬೇಕು. ಅಂದ್ರೆ ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನೋದು ಬಿಡಬೇಕು ಅಂತಲ್ಲ. ಆದರೆ ಸರಿಯಾದ ರೀತಿಲಿ ಡ್ರೈ ಫ್ರೂಟ್ಸ್ ತಿಂದ್ರೆ, ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಬಿಸಿ ಇರೋದ್ರಿಂದ ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನೋಕೆ ಜನ ಹಿಂಜರಿಯೋದುಂಟು, ಆದ್ರೆ ಡ್ರೈ ಫ್ರೂಟ್ಸ್ ಸರಿಯಾಗಿ ತಿಂದ್ರೆ ದೇಹಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ನೆನೆಸಿರೋ ಡ್ರೈ ಫ್ರೂಟ್ಸ್ ಅಥವಾ ತಣ್ಣಗಿನ ಹಾಲಿನ ಜೊತೆ ತಿಂದ್ರೆ ದೇಹಕ್ಕೆ ತಂಪು ಸಿಗುತ್ತೆ ಮತ್ತೆ ಬೇಕಾದ ಪೋಷಕಾಂಶಾನೂ ಸಿಗುತ್ತೆ. ಇವತ್ತಿಂದಾನೇ ಒಂದು ಹಿಡಿ ಡ್ರೈ ಫ್ರೂಟ್ಸ್ ತಿನ್ನೋಕೆ ಶುರು ಮಾಡಿ ಬಿಸಲಿನಿಂದಾಗುವ ಆಯಾಸಕ್ಕೆ ಗುಡ್‌ಬೈ ಹೇಳಿ

ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನೋ ಸರಿಯಾದ ರೀತಿ ಮತ್ತೆ ಅದರ ಲಾಭಗಳು

ಡ್ರೈ ಫ್ರೂಟ್ಸ್ನ ನೆನೆಸಿ ತಿನ್ನಿ:

  • ನೆನೆಸಿರೋ ಡ್ರೈ ಫ್ರೂಟ್ಸ್ ದೇಹಕ್ಕೆ ತಂಪು ಕೊಡುತ್ತೆ ಮತ್ತೆ ಬೇಸಿಗೆಯಲ್ಲಿ ಬೇಗ ಜೀರ್ಣ ಆಗುತ್ತೆ.
  • ಬಾದಾಮಿ, ವಾಲ್ನಟ್ ಮತ್ತೆ ಒಣ ದ್ರಾಕ್ಷಿನ ರಾತ್ರಿ ನೆನೆಸಿ ಬೆಳಗ್ಗೆ ತಿನ್ನಿ.
  • ಇದರಿಂದ ಅದ್ರಲ್ಲಿರೋ ಆಂಟಿ ಆಕ್ಸಿಡೆಂಟ್ ಮತ್ತೆ ಪೋಷಕಾಂಶಗಳ ಪ್ರಮಾಣ ಜಾಸ್ತಿ ಆಗುತ್ತೆ.

ಸರಿಯಾದ ಪ್ರಮಾಣದಲ್ಲಿ ತಿನ್ನಿ (Portion Control)

  • ಬೇಸಿಗೆಯಲ್ಲಿ ಜಾಸ್ತಿ ಡ್ರೈ ಫ್ರೂಟ್ಸ್ ತಿಂದ್ರೆ ದೇಹದಲ್ಲಿ ಬಿಸಿ ಜಾಸ್ತಿ ಆಗಬಹುದು.
  • ಒಂದು ದಿನಕ್ಕೆ 10-12 ನೆನೆಸಿರೋ ಬಾದಾಮಿ, 1-2 ವಾಲ್ನಟ್, 1 ಅಂಜೂರ ಮತ್ತೆ 8-10 ದ್ರಾಕ್ಷಿ ಹಣ್ಣು ಸಾಕಾಗುತ್ತೆ.
  • ಗೋಡಂಬಿ ಮತ್ತೆ ಪಿಸ್ತಾ ಕಮ್ಮಿ ತಿನ್ನಿ ಯಾಕಂದ್ರೆ ಅದ್ರಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುತ್ತ

ಡ್ರೈ ಫ್ರೂಟ್ಸ್ನ ತಣ್ಣಗಿನ ಹಾಲು ಅಥವಾ ಮೊಸರಿನ ಜೊತೆ ತಿನ್ನಿ 

  • ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ನ ತಣ್ಣಗಿನ ಹಾಲು ಅಥವಾ ಮೊಸರಿನ ಜೊತೆ ತಿಂದ್ರೆ ದೇಹಕ್ಕೆ ತಂಪು ಸಿಗುತ್ತೆ.
  • ಶೇಂಗಾ ಮತ್ತೆ ಖರ್ಜೂರನ ಲಸ್ಸಿ ಅಥವಾ ಮಜ್ಜಿಗೆಯಲ್ಲಿ ಮಿಕ್ಸ್ ಮಾಡಿ ಕುಡಿಯಬಹುದು.
  • ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ ಮತ್ತೆ ಎನರ್ಜಿ ಲೆವೆಲ್ ಕೂಡ ಮೇಂಟೇನ್ ಆಗುತ್ತೆ.

ಡ್ರೈ ಫ್ರೂಟ್ಸ್ ಪೌಡರ್ ಮಾಡಿ ಯೂಸ್ ಮಾಡಿ

  • ನೀವು ಬಾದಾಮಿ, ಪಿಸ್ತಾ ಮತ್ತೆ ಗೋಡಂಬಿನ ಪೌಡರ್ ಮಾಡಿ ತಣ್ಣಗಿನ ಶೇಕ್, ಸ್ಮೂಥಿ ಅಥವಾ ಮಿಲ್ಕ್ ಶೇಕ್ನಲ್ಲಿ ಮಿಕ್ಸ್ ಮಾಡ್ಕೋಬಹುದು.
  • ಇದು ಹೀಟ್ ಸ್ಟ್ರೋಕ್ ಇಂದ ಕಾಪಾಡುತ್ತೆ ಮತ್ತೆ ಇಮ್ಯೂನಿಟಿನು ಸ್ಟ್ರಾಂಗ್ ಮಾಡುತ್ತೆ.

ನಟ್ಸ್ ತಣ್ಣಗಿನ ಪೇಯದಲ್ಲಿ ಮಿಕ್ಸ್ ಮಾಡಿ ತಿನ್ನಿ

  • ಚಿಕ್ಕ ಮಕ್ಕಳಿಗೆ ಮತ್ತೆ ವಯಸ್ಸಾದವರಿಗೆ ಡ್ರೈ ಫ್ರೂಟ್ಸ್ನ ತಣ್ಣಗಿನ ಹಾಲಿನಲ್ಲಿ ಮಿಕ್ಸ್ ಮಾಡಿ ಕೊಡೋದು ಒಳ್ಳೇದು.
  • ಇದನ್ನ ಪ್ರತಿದಿನ ಶೇಕ್, ಸ್ಮೂಥಿ ಅಥವಾ ತಣ್ಣಗಿನ ಪಾನೀಯದಲ್ಲಿ ಮಿಕ್ಸ್ ಮಾಡಿ ಕುಡಿಯಬಹುದು.

ಬೇಸಿಗೆಯಲ್ಲಿ ಡ್ರೈ ಫ್ರೂಟ್ಸ್ ತಿನ್ನೋದ್ರಿಂದ ಆಗೋ ಲಾಭಗಳು

ದೇಹಕ್ಕೆ ಎನರ್ಜಿ ಸಿಗುತ್ತೆ – ಡ್ರೈ ಫ್ರೂಟ್ಸ್ ನ್ಯಾಚುರಲ್ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುತ್ತೆ.

ಡೈಜೆಶನ್ ಸರಿ ಹೋಗುತ್ತೆ – ನೆನೆಸಿರೋ ಬಾದಾಮಿ ಮತ್ತೆ ದ್ರಾಕ್ಷಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ.

ಸ್ಕಿನ್ ಗ್ಲೋ ಆಗುತ್ತೆ – ಡ್ರೈ ಫ್ರೂಟ್ಸ್ನಲ್ಲಿ ವಿಟಮಿನ್ E ಇರುತ್ತೆ, ಅದು ಚರ್ಮಕ್ಕೆ ಆರೋಗ್ಯಕರವಾಗಿ ಇಡುತ್ತೆ.

ಹೀಟ್ ಸ್ಟ್ರೋಕ್ ಇಂದ ರಕ್ಷಣೆ – ನೆನೆಸಿರೋ ಡ್ರೈ ಫ್ರೂಟ್ಸ್ ದೇಹಕ್ಕೆ ತಂಪು ಕೊಡುತ್ತೆ ಮತ್ತೆ ಡಿಹೈಡ್ರೇಶನ್ ಇಂದ ಕಾಪಾಡುತ್ತೆ.

ಮೂಳೆಗಳು ಸ್ಟ್ರಾಂಗ್ ಆಗುತ್ತೆ – ವಾಲ್ನಟ್ ಮತ್ತೆ ಬಾದಾಮಿಯಲ್ಲಿ ಕ್ಯಾಲ್ಸಿಯಂ ಮತ್ತೆ ಮೆಗ್ನೀಷಿಯಂ ಇರುತ್ತೆ.