ಸೆಲೆಬ್ರಿಟಿಗಳನ್ನು ಸ್ಕ್ರೀನ್ ಮೇಲೆ ನೋಡಿ ಖುಷಿ ಪಡ್ತೀವಿ, ಅವರ ಹಾಕೋ ಥರದ್ದೇ ಡ್ರೆಸ್ ಹಾಕ್ಕೊಂಡು ನಾವೂ ಅವರ ಹಾಗೆ ಕಾಣ್ಬೇಕು ಅಂತ ಕನವರಿಸ್ತೀವಿ, ಆದರೆ ಅವರ ಫೇವರೆಟ್ ಫುಡ್ ಯಾವುದು ಅನ್ನೋ ಬಗ್ಗೆ ಕುತೂಹಲ ಇದ್ದೇ ಇರುತ್ತೆ. ಇಲ್ಲಿ ಒಂದಿಷ್ಟು ಜನ ಹೀರೋಗಳ ಫುಡ್ ಖಯಾಲಿ ಹೇಗಿರುತ್ತೆ ಅಂತ ಹೇಳ್ತೀವಿ, ಅದರಲ್ಲಿ ನಿಮ್ಮ ಫೇವರೆಟ್ ಹೀರೋ ರೆಸಿಪಿ ಏನು ಅಂತ ನೋಡ್ಕೊಳ್ಳಿ. ಎಲ್ಲೋ ಲೈಫ್ ನಲ್ಲೊಮ್ಮೆ ಅವರನ್ನು ಭೇಟಿ ಆಗೋ ಅವಕಾಶ ಸಿಕ್ಕಿದ್ರೆ ನೀವು ಅವರಿಗೆ ಈ ರೆಸಿಪಿ ರೆಡಿ ಮಾಡ್ಕೊಟ್ಟು ಸರ್ಪೈಸ್ ಕೊಡಬಹುದು.

ಡಿ ಬಾಸ್ ಊಟದ ಸ್ಟೈಲೇ ಬೇರೆ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೀಗ ಉತ್ತರಾಖಾಂಡ್ ನ ಕಾಡುಗಳಲ್ಲಿ ಕಳೆದುಹೋಗಿದ್ದಾರೆ. ಪ್ರಾಣಿ, ಪಕ್ಷಿಗಳನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸೋ ದಚ್ಚು ಅವುಗಳ ವೀಕ್ಷಣೆ ಮಾಡುತ್ತಾ, ಫೋಟೋಗಳನ್ನು ಕ್ಲಿಕ್ಕಿಸೋದ್ರಲ್ಲಿ ನಿರತರಾಗಿದ್ದಾರೆ. ಆದರೆ ಅವರು ಅಲ್ಲಿ ರೋಡ್ ಸೈಡ್ ಚಾಟ್ಸ್‌ಗೂ ಫಿದಾ ಆಗಿದ್ದಾರೆ ಅನ್ನೋ ಸುದ್ದಿ ಬಂದಿದೆ. ದರ್ಶನ್ ಸ್ಟ್ರೀಟ್ ನಲ್ಲಿ ಮಾರಾಟಕ್ಕಿಟ್ಟ ಕುರುಕಲು ತಿಂಡಿಗಳನ್ನು ಖುಷಿಯಿಂದ ತಿಂತಿರೋ ವೀಡಿಯೋ ಅವರ ಅಭಿಮಾನಿಗಳ ವಾಲ್ ನಲ್ಲಿ ಓಡಾಡ್ತಿದೆ. ದರ್ಶನ್ ಗೆ ಮೊದಲಿನಿಂದಲೂ ಹೊಸ ಟೇಸ್ಟ್ ಟ್ರೈ ಮಾಡೋ ಅಭ್ಯಾಸ ಇದೆ. ಇದರ ಜೊತೆಗೆ ದೇಸಿ ಫುಡ್ ಅಂದರೆ ಪಂಚಪ್ರಾಣ. ಅದಕ್ಕೇ ಇವತ್ತಿಗೂ ದರ್ಶನ್ ಫೇವರೆಟ್ ಊಟ ಅವರೂರಿನ ಮುದ್ದೆ, ನಾಟಿ ಕೋಳಿ ಸಾರು. ಎಂಥಾ ಡಯೆಟ್ ನಲ್ಲಿದ್ದರೂ ಊರಿಗೆ ಹೋದಾಗ ಮುದ್ದೆ ನಾಟಿಕೋಳಿ ಸಾರು ಮಿಸ್ ಮಾಡೋದೇ ಇಲ್ಲ. ಇವರ ಅಭಿಮಾನಿಗಳೂ ಇವರಿಗೋಸ್ಕರ ಆಗಾಗ ಈ ಅಡುಗೆ ರೆಡಿ ಮಾಡಿ ತಂದುಕೊಡೋದೂ ಇದೆ. ದರ್ಶನ್ ಇವುಗಳನ್ನು ಪ್ರೀತಿಯಿಂದ ಸ್ವೀಕರಿಸಿ ಆಸ್ವಾದಿಸುತ್ತಾರೆ.

 

ಟೇಸ್ಟಿ ಆ್ಯಂಡ್ ಸ್ಪೈಸಿ ಚಿಕನ್ ಗೀ ರೋಸ್ಟ್ ರೆಸಿಪಿ!

 

ಅಡುಗೆಪ್ರಿಯ ಕಿಚ್ಚಂಗೆ ಏನಿಷ್ಟ?

ಕಿಚ್ಚ ಸುದೀಪ್ ಗೆ ಅಡುಗೆ ಮಾಡೋದು ಅಂದರೆ ಬಹಳ ಇಷ್ಟ. ಎಷ್ಟೋ ಜನ ಸೆಲೆಬ್ರಿಟಿಗಳಿಗೆ, ಸ್ನೇಹಿತರಿಗೆ ಸುದೀಪ್ ತಾವೇ ಸ್ವತಃ ಅಡುಗೆ ಮಾಡಿ ಬಡಿಸಿದ್ದಾರೆ. ಬಿಗ್ ಬಾಸ್ ನಲ್ಲಂತೂ ಸಾಕಷ್ಟು ಸಲ ಕಿಚನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹೊಸ ರೆಸಿಪಿಗಳನ್ನು ಟ್ರೈ ಮಾಡುವ, ಇನ್ನೊಬ್ಬರಿಗೆ ಬಡಿಸಿ ಅವರು ತಿನ್ನೋದನ್ನು ಕಂಡು ಖುಷಿ ಪಡುವ ಕಿಚ್ಚ ತಮಗೆ ಅಂತ ಯಾವ ಅಡುಗೆಯನ್ನೂ ಮಾಡ್ಕೊಳ್ಳಲ್ವಾ ಅಂತ ಕೇಳಿದ್ರೆ ಉತ್ತರ ನೋ ಅಂತಲೇ ಬರುತ್ತೆ. ತಾವು ಮಾಡೋ ರೆಸಿಪಿಯನ್ನು ಸ್ವಲ್ಪ ಟೇಸ್ಟ್ ಅಷ್ಟೇ ಮಾಡ್ತಾರೆ ವಿನಃ ಎಂದೂ ತಮಗೋಸ್ಕರ ತಾವೇ ಅಡುಗೆ ಮಾಡ್ಕೊಂಡದ್ದಿಲ್ಲ. ನಿಮ್ಮ ಫೇವರೆಟ್ ರೆಸಿಪಿ ಯಾವ್ದು ಅಂತ ಕೇಳಿದ್ರೂ ಅದಕ್ಕೆ ಸ್ಪಷ್ಟ ಉತ್ತರ ಕೊಡಲ್ಲ ಸುದೀಪ್. ಬದಲಿಗೆ ನಾನು ಅಂಥಾ ಫುಡಿ ಅಲ್ಲ. ಆದರೆ ರುಚಿಯಾಗಿರುವುದನ್ನು ಇಷ್ಟಪಟ್ಟು ತಿಂತೀನಿ. ನನಗೋಸ್ಕರ ನಾನು ಅಡುಗೆ ಮಾಡಿ ತಿನ್ನೋದಕ್ಕಿಂತ ಇನ್ನೊಬ್ಬರಿಗೆ ಅಡುಗೆ ಮಾಡಿ ಬಡಿಸೋದರಲ್ಲೇ ಹೆಚ್ಚು ಖುಷಿ ಅನ್ನೋದು ಕಿಚ್ಚ ಮನದಾಳದ ಮಾತು.

 

ಮ್ಯೂಸಿಯಂ ಥರಾ ಇದೆ ಸುದೀಪ್‌ ಅವರ ಕಿಚನ್‌!

 

ಉಡುಪಿಯಿಂದ ಬಂದ ರಕ್ಷಿತ್ ಯಾವ ತಿಂಡಿ ಇಷ್ಟ ಪಡ್ತಾರೆ?

ರಕ್ಷಿತ್ ಶೆಟ್ಟಿ ಫುಡೀ ಹೌದಾ ಅಂತ ಕೇಳಿದರೆ ಇಲ್ಲ ಅಂತೇನೋ ಹೇಳಲ್ಲ. ಉಡುಪಿ ಮೂಲದಿಂದ ಬಂದಿರೋ ಅವರ ಫೇವರೆಟ್ ಫುಡ್ ಯಾವುದು ಅನ್ನೋದನ್ನು ಕೇಳಿದ್ರೆ ನೀವೇ ದಂಗಾಗುತ್ತೀರಿ. ಇತ್ತೀಚೆಗೆ ರಕ್ಷಿತ್ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ರಿಲೀಸ್ ಬಳಿಕ ನಿರೂಪಕಿ ಅನುಶ್ರೀ ಜೊತೆಗೆ ಮಾತನಾಡಿದ ರಕ್ಷಿತ್ ಒಂದು ಕುತೂಹಲಕಾರಿ ಸಂಗತಿ ಬಿಚ್ಚಿಟ್ಟರು. ಅವರು ಮಂಗಳೂರಿನವೇ ಆದರೂ ಅವರಿಗೆ ಬಹಳ ಇಷ್ಟ ಆಗೋದು ರಾಗಿ ಮುದ್ದೆ ಅಂತ. ಉಡುಪಿಯಂಥಾ ಪಕ್ಕಾ ಕುಚ್ಚಿಲಕ್ಕಿ ಊಟ ಮಾಡೋ ಊರಿಂದ ಬಂದ ರಕ್ಷಿತ್ ಗೆ ಬೆಂಗಳೂರಿಗೆ ಬಂದ ಮೇಲೆ ಪರಿಚಯ ಆಗಿದ್ದು ರಾಗಿ ಮುದ್ದೆ. ಆರಂಭದಲ್ಲಿ ಅಷ್ಟಿಷ್ಟ ಆಗದೇ ಇದ್ದರೂ ಆಮೇಲೆ ಎಷ್ಟು ಇಷ್ಟ ಆಯ್ತು ಅಂದರೆ ಈಗ ವಾರಕ್ಕೊಮ್ಮೆ ಆದರೂ ಮುದ್ದೆ ಊಟ ಮಾಡದಿದ್ರೆ ಸಮಾಧಾನವೇ ಆಗಲ್ವಂತೆ.
 

ಪೇಪರ್‌ನಷ್ಟು ತೆಳ್ಳಗಿರೋ ರುಚಿರುಚಿ ನೀರುದೋಸೆ ಮಾಡೋದು ಹೇಗೆ?