ಕಾಕ್‌ಟೇಲ್‌ ಕಲರ್‌ಫುಲ್ ಆಗ್ಲಿ ಅಂತ ತನ್ನ ರಕ್ತವನ್ನೇ ಬೆರೆಸಿದ ಉದ್ಯೋಗಿ, ರುಚಿ ಕೆಟ್ಟಿದೆ ಎಂದ ಗ್ರಾಹಕರು!

ಕಾಕ್‌ಟೇಲ್‌ ನೋಡೋಕೆ ಸಖತ್ ಕಲರ್‌ಫುಲ್ ಆಗಿರುತ್ತೆ. ಕುಡಿಯೋಕೆ ಅಷ್ಟೇ ಟೇಸ್ಟಿ ಕೂಡಾ. ಹಾಗೆಯೇ ಆ ಕೆಫೆಯಲ್ಲೂ ಸರ್ವ್ ಮಾಡಿದ ಕಾಕ್‌ಟೇಲ್‌ ನೋಡಿ ಗ್ರಾಹಕರು ಫುಲ್ ಖುಷಿ ಆಗಿದ್ರು. ಆದ್ರೆ ಟೇಸ್ಟ್ ಮಾಡಿ ನೋಡಿದ್ರೆ ರುಚಿ ಕೆಟ್ಟಿದೆ ಅನಿಸಿತ್ತು. ಈ ಬಗ್ಗೆ ಕೆಫೆಯಲ್ಲಿ ಕೇಳಿದ್ದಾಗ್ಲೇ ಗೊತ್ತಾಗಿದ್ದು ತಲೆ ಸುತ್ತಿ ಬೀಳೋವಂಥಾ ಸತ್ಯ.

Waitress fired for making cocktails using her own blood in Japan Cafe Vin

ಟೋಕಿಯೋ: ಕಾಕ್‌ಟೇಲ್‌, ಮಾಕ್‌ಟೇಲ್‌ಗಳು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿವೆ. ಪಾರ್ಟಿ, ಫಂಕ್ಷನ್, ರೆಸ್ಟೋರೆಂಟ್ ಎಲ್ಲಿ ಬೇಕಾದ್ರಲ್ಲಿ ಸಿಗುತ್ತೆ. ಇತ್ತೀಚಿಗಂತೂ ಬಹುತೇಕರು ಈ ಡ್ರಿಂಕ್ಸ್‌ಗಳನ್ನು ಕುಡಿಯೋಕೆ ಇಷ್ಟಪಡುತ್ತಾರೆ. ಆದ್ರೆ ಜಪಾನ್‌ನಲ್ಲಿ ಕೆಫೆಯೊಂದು ಸರ್ವ್ ಮಾಡಿದ ಕಾಕ್‌ಟೇಲ್ ರುಚಿ ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ. ಅರೆ ಈ ಕಾಕ್‌ಟೇಲ್ ಯಾಕೋ ಡಿಫರೆಂಟ್ ಆಗಿದ್ಯಲ್ಲಾ ಅಂದ್ಕೊಂಡಿದ್ದಾರೆ. ಕಲರ್ ತುಂಬಾ ಚೆನ್ನಾಗಿದೆ ಅಂತ ಟೇಸ್ಟ್ ಮಾಡಿದ್ರೆ ರುಚಿ ಚೆನ್ನಾಗಿಲ್ಲ ಎಂದು ಉಗುಳುವಂತಾಗಿದೆ. ಈ ಬಗ್ಗೆ ಕೆಫೆ ಮಾಲೀಕರಲ್ಲಿ ವಿಚಾರಿಸಿದಾಗ್ಲೇ ಬಯಲಾಗಿದ್ದು ಶಾಕಿಂಗ್ ವಿಚಾರ. ಕೆಫೆ ಮಾಲೀಕರು ತಿಳಿಸಿದ ವಿಚಾರ ನೋಡಿ ಕಾಕ್‌ಟೇಲ್ ಕುಡಿದವರೆಲ್ಲಾ ತಲೆಸುತ್ತಿ ಬೀಳುವಂತಾಗಿದೆ.

ಕಾಕ್‌ಟೇಲ್ ರುಚಿ ಕೆಟ್ಟಿದೆ ಎಂದ ಗ್ರಾಹಕರು, ಅಸಲಿಯತ್ತು ತಿಳಿದು ಶಾಕ್‌
ಪ್ರವಾಸಿ ಕೇಂದ್ರವಾದ ಸಪೋರೊದಲ್ಲಿರುವ ಮೊಂಟಾಜಿ ಕೆಫೆ ಹೆಚ್ಚು ಪ್ರಸಿದ್ಧಿ ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಕಾಕ್‌ಟೇಲ್‌ ಕೂಡಾ ಒಂದಾಗಿದೆ. ಹೀಗಾಗಿಯೇ ಇಲ್ಲಿನ ಕಾಕ್‌ಟೇಲ್ ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು (Customers) ಬರುತ್ತಾರೆ. ಇಲ್ಲಿ ಕಡಿಮೆ ಬೆಲೆಗೆ ರುಚಿಕರ ಮತ್ತು ಕಲರ್‌ಫುಲ್‌ ಆಗಿರುವ ಕಾಕ್‌ಟೇಲ್‌ಗಳು ಇಲ್ಲಿ ಲಭಿಸುತ್ತವೆ. ಹೀಗಾಗಿಯೇ ಈ ಕೆಫೆ ಯಾವಾಗ್ಲೂ ಗ್ರಾಹಕರಿಂದ ತುಂಬಿರುತ್ತೆ. ಇಲ್ಲಿಗೆ ವರೆಗೆ ಜನರು ಕೆಫೆಯ ಕಾಕ್‌ಟೇಲ್‌ನ ರುಚಿಯನ್ನು (Taste) ಹೊಗಳುತ್ತಾರೆ. ಆದ್ರೆ ಆ ದಿನ ಮಾತ್ರ ಎಲ್ಲರೂ ಯಾಕೋ ಕಾಕ್‌ಟೇಲ್‌ ರುಚಿ ವಿಚಿತ್ರವಾಗಿದ್ಯಲ್ಲ ಎಂದೇ ಹೇಳಿದ್ದರು. ನಂತರ ಕೆಫೆ ಮಾಲೀಕರು ಈ ಬಗ್ಗೆ ವಿಚಾರಣೆ ನಡೆಸಿದಾಗ ಕಲರ್‌ಫುಲ್ ಆಗಿದ್ದ ಕಾಕ್‌ಟೇಲ್ ತಯಾರಿಸಲು ಕೆಫೆ ಉದ್ಯೋಗಿ (Employee) ಅದಕ್ಕೆ ತನ್ನ ರಕ್ತವನ್ನು (Blood) ಬೆರೆಸಿದ್ದರು ಅನ್ನೋ ವಿಚಾರ ಬಯಲಾಗಿದೆ. 

ಸುಡುವ ಬಿಸಿಲಿನಲ್ಲಿ ಕೋಲ್ಡ್‌ ವಾಟರ್ ಕುಡಿತೀರಾ? ಹೃದಯ ಬಡಿತ ಸ್ಲೋ ಆಗುತ್ತೆ ಹುಷಾರ್‌!

ಬಣ್ಣದ ಸಿರಪ್‌ಗಳ ಜೊತೆ ರಕ್ತವನ್ನೂ ಬೆರೆಸಿ ಮಿಕ್ಸ್ ಮಾಡಿದ್ಲು
ಉದ್ಯೋಗಿ ತನ್ನ ಸ್ವಂತ ರಕ್ತವನ್ನು ಹಣ್ಣು ಮತ್ತು ಬಣ್ಣದ ಸಿರಪ್‌ಗಳಿಂದ ತಯಾರಿಸಿದ ಕಾಕ್‌ಟೇಲ್‌ಗಳಲ್ಲಿ ಬೆರೆಸಿದಳು ಎಂಬುದನ್ನು ತಿಳಿದು ಸಂಸ್ಥೆ ಅವಳನ್ನು ವಜಾ ಮಾಡಿದೆ. ಕೆಫೆಗೆ ಬಂದಿದ್ದ ಜನರು ಕಾಕ್‌ಟೈಲ್‌ನ ರುಚಿ ವ್ಯತ್ಯಾಸದ ಬಗ್ಗೆ ದೂರು ನೀಡಿದ ನಂತರ ಕೆಫೆ ಮಾಲೀಕರು ಘಟನೆಯನ್ನು ಗಮನಿಸಿದ್ದಾರೆ. ಕಾಕ್‌ಟೇಲ್‌ಗೆ ರಕ್ತವನ್ನು ಬೆರೆಸುತ್ತಿದ್ದ ಉದ್ಯೋಗಿ ಕೂಡ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇದಾದ ಬಳಿಕ ಕೆಫೆ ಮಾಲೀಕರು ಕ್ಷಮೆ ಯಾಚಿಸಿದ ಮಾಹಿತಿ ಹೊರಬಿದ್ದಿದೆ.

ಮಾಲೀಕರು ಗ್ರಾಹಕರಲ್ಲಿ ಕ್ಷಮೆಯಾಚಿಸಿದರು ಮತ್ತು ಕೆಲವು ದಿನಗಳವರೆಗೆ ಕೆಫೆಯನ್ನು ಮುಚ್ಚುತ್ತಿರುವುದಾಗಿ ವಿವರಿಸಿದರು. ಕೆಫೆಯಲ್ಲಿರುವ ಎಲ್ಲಾ ಪಾನೀಯಗಳನ್ನು ಬದಲಾಯಿಸಿ ಮತ್ತು ಗ್ಲಾಸ್‌ಗಳನ್ನು ಸ್ವಚ್ಛಗೊಳಿಸಿದ ನಂತರ ಕೆಫೆಯನ್ನು ಮತ್ತೆ ತೆರೆಯುವುದಾಗಿ ಭರವಸೆ ನೀಡಿದರು. ಏಪ್ರಿಲ್ ಮೊದಲ ವಾರದಲ್ಲಿ ಕೆಫೆ ಮಾಲೀಕರು ಉದ್ಯೋಗಿಯ ತಪ್ಪು ಕೆಲಸವನ್ನು ಗಮನಿಸಿದರು. 

ಬಿಸಿಲ ಧಗೆ ತಡೆಯೋಕೆ ಆಗ್ತಿಲ್ವಾ? ಇಂಥಾ ಪಾನೀಯ ಕುಡಿಯೋದು ಬಿಟ್ಬಿಡಿ

ಈ ಬಗ್ಗೆ ಮಾತನಾಡಿರುವ ಜಪಾನಿನ ವೈದ್ಯರು, 'ಇತರ ಜನರ ರಕ್ತವನ್ನು ಕುಡಿಯುವುದು ಅತ್ಯಂತ ಅಪಾಯಕಾರಿ' ಎಂದು ತಿಳಿಸಿದ್ದಾರೆ. ಮಾತ್ರವಲ್ಲ 'ಇನ್ನೊಬ್ಬ ವ್ಯಕ್ತಿಯ ರಕ್ತವನ್ನು ಕುಡಿಯುವುದರಿಂದ ಜನರು ಸೋಂಕಿಗೆ ಒಳಗಾಗಬಹುದು. ಆದರೆ ಹೆಚ್‌ಐವಿ, ಹೆಪಟೈಟಿಸ್ ಸಿ, ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್ ಸೇರಿದಂತೆ ಪ್ರಮುಖ ಕಾಯಿಲೆಗಳು ರಕ್ತದ ಮೂಲಕ ಹರಡಬಹುದು. ಬಾಯಿಯಲ್ಲಿ ಗಾಯಗಳಾಗಿದ್ದರೆ ರಕ್ತ ವರ್ಗಾವಣೆಯಿಂದ ಸುಲಭವಾಗಿ ಸೋಂಕು ತಗುಲಬಹುದು' ಎಂದು ತಿಳಿಸಿದ್ದಾರೆ.

ಜಪಾನ್ ಕೆಫೆಗಳು ತಮ್ಮ ವಿಶಿಷ್ಟ ಪರಿಕಲ್ಪನೆಯಿಂದಲೇ ಹೆಸರುವಾಸಿಯಾಗಿದೆ. ಜಪಾನ್‌ನ ಟ್ರೇಡ್‌ಮಾರ್ಕ್ ಖಾದ್ಯವಾದ ಸುಶಿಯಿಂದ ಆರಂಭಿಸಿ ಇಲ್ಲಿನ ವಿವಿಧ ಖಾದ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ವಿವಿಧ ಆಹಾರ, ಡ್ರಿಂಕ್ಸ್‌, ಸಾಸ್‌ಗಳನ್ನು ಸವಿಯಲು ವಿದೇಶದಿಂದ ಆಗಮಿಸುವ ಜನರು ಮುಗಿಬೀಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಥಾ ರೆಸ್ಟೊರೆಂಟ್‌ಗಳಲ್ಲಿ ವೀಡಿಯೋ ವೈರಲ್ ಆಗುವಂತೆ ಗ್ರಾಹಕರು ಹರಸಾಹಸ ಪಡುತ್ತಿರುವುದು ಸುದ್ದಿಯಾಗಿತ್ತು. ಸಾಸ್‌ನಲ್ಲಿ ಕಸವನ್ನು ಬೆರೆಸಿದಂತಹ ಘಟನೆಗಳು ವಿವಾದಕ್ಕೆ ಕಾರಣವಾಗಿದ್ದವು.

Latest Videos
Follow Us:
Download App:
  • android
  • ios