Asianet Suvarna News Asianet Suvarna News

Chat GPT corner: ಚಾಟ್ಸ್ ಸ್ಟಾಲ್ ಫೋಟೋ ಆನಂದ್ ಮಹೀಂದ್ರಾ ಶೇರ್ ಮಾಡಿದ್ಯಾಕೆ ?

ಈಗಂತೂ ಎಲ್ಲೆಡೆ Chat GPT cornerನದ್ದೇ ಸುದ್ದಿ. ಕೃತಕ ಬುದ್ಧಿಮತ್ತೆಯಾಗಿರುವ ಚಾಟ್‌ ಜಿಪಿಟಿ ತಂತ್ರಜ್ಞಾನ ಜನರ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋವೊಂದನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.

Anand Mahindra shares pic of Indias own Chat GPT corner, photos vial Vin
Author
First Published Feb 8, 2023, 11:00 AM IST

ಮಹೀಂದ್ರಾ ಗ್ರೂಪ್ ಅಧ್ಯಕ್ಷ, ಆನಂದ್ ಮಹೀಂದ್ರಾ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಆಗಾಗ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಕೈಗಾರಿಕೋದ್ಯಮಿ ಸಾಮಾನ್ಯವಾಗಿ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂಥಾ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ಜನ ಮೆಚ್ಚುಗೆ ಪಡೆಯುತ್ತವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಈ ಬಿಲಿಯನೇರ್ ಚಾಟ್ ಜಿಪಿಟಿ ಎಂಬ ಫೋಟೋವನ್ನು ಹಂಚಿಕೊಡಿದ್ದು, ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಚಾಟ್ ಜಿಪಿಟಿ ಕಾರ್ನರ್,ಫೋಟೋ ವೈರಲ್
ಯಾವುದೇ ಸಮಯದಲ್ಲಿ ವೈರಲ್ ಆಗುವ ಸೂಪರ್ ಆಸಕ್ತಿದಾಯಕ ವಿಷಯವನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವಂತದ್ದು ಚಾಟ್ ಜಿಪಿಟಿ ಎಂಬ ಫೋಟೋ. ಗೋಲ್‌ಗಪ್ಪಾ ಸ್ಟಾಲ್‌ನ ಈ ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ಇಲ್ಲಿ ಆಲೂಟಿಕ್ಕಿಯನ್ನು ಚಾಟ್ ಎಂದು ಕರೆಯಲಾಗಿದೆ. 'ಚಿತ್ರವು ಫೋಟೋಶಾಪ್ ಆಗಿರಬಹುದು. ಆದರೆ ಇದು ತುಂಬಾ ಅದ್ಭುತವಾಗಿದೆ. ಯಾವುದನ್ನೇ ಆದರೂ ಇಂಡಿಯನೈಸ್ ಮಾಡುವುದು ಹೇಗೆಂದು ಭಾರತೀಯರಿಗೆ ತಿಳಿದಿದೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

 Viral Video: ನೃತ್ಯ ಮಾಡಿದ ಬಾಲಕಿಯ ತಲೆ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿದ ಆನೆ

OpenAI ನಿಂದ ಅಭಿವೃದ್ಧಿಪಡಿಸಲಾದ AI ಚಾಟ್‌ಬಾಟ್
ಯಾವುದನ್ನೇ ಆದರೂ ಕಾಪಿ ಮಾಡುವುದರಲ್ಲಿ ಭಾರತೀಯರದು ಎತ್ತಿದ ಕೈ. ಯಾವುದೇ ಬ್ರ್ಯಾಂಡ್ ಬಟ್ಟೆ, ಶೂಸ್ ಅಥವಾ ಇತರ ಯಾವುದೇ ವಸ್ತುಗಳಾಗಿರಲಿ ಕೆಲವು ಸ್ಪೆಲ್ಲಿಂಗ್ ವ್ಯತ್ಯಾಸಗಳೊಂದಿಗೆ ಫೇಕ್ ಆಗಿ ಮಾರಾಟ (Sale)ವಾಗುವುದನ್ನು ನಾವು ಗಮನಿಸಿರಬಹುದು. ಹಾಗೆಯೇ ದೊಡ್ಡ ದೊಡ್ಡ ಬ್ರ್ಯಾಂಡ್ ಹೆಸರುಗಳನ್ನು ಬಳಸಿಕೊಂಡು ಜನರು ಜನರನ್ನು ಸೆಳೆಯಲು ಯತ್ನಿಸುತ್ತಾರೆ. ಹಾಗೆಯೇ ಚಾಟ್‌ಬಾಟ್ ಹೆಸರನ್ನು ಚಾಟ್ ಸೆಂಟರ್‌ವೊಂದರಕ್ಕೆ ಇಟ್ಟಿರುವ ಫೋಟೋ ವೈರಲ್ ಆಗಿದೆ. ಚಾಟ್ GPT ಎನ್ನುವುದು OpenAI ನಿಂದ ಅಭಿವೃದ್ಧಿಪಡಿಸಲಾದ AI ಚಾಟ್‌ಬಾಟ್ ಆಗಿದೆ

ಆಲೂ ಟಿಕ್ಕಿಯನ್ನು ಚಾಟ್ ವಿಭಾಗದಲ್ಲಿ ಸೇರಿಸಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ಬೆಸ್ಟ್ ಜುಗಾಡ್ ಎಂದಿದ್ದಾರೆ. ಮತ್ತೆ ಕೆಲವರು ಭಾರತೀಯರು ಎಲ್ಲವನ್ನೂ ಇಂಡಿಯನೈಸ್ ಮಾಡುವುದರಲ್ಲಿ ಎಕ್ಸ್‌ಪರ್ಟ್‌, ನೆಕ್ಸ್ಟ್‌ ಯಾವುದನ್ನು ಇಂಡಿಯನೈಸ್ ಮಾಡುತ್ತಾರೆ ಎಂಬ ಬಗ್ಗೆ ಕುತೂಹಲವಿದೆ ಎಂದು ಹೇಳಿದ್ದಾರೆ. 

ವಾವ್ಹ್..ಅಲಕನಂದಾ ಮತ್ತು ಭಾಗೀರಥಿ ನದಿ ಸಂಗಮದ ಅದ್ಭುತ ಫೋಟೋ ವೈರಲ್

ಚಾಟ್ GPT ಎನ್ನುವುದು OpenAI ನಿಂದ ಅಭಿವೃದ್ಧಿಪಡಿಸಲಾದ AI ಚಾಟ್‌ಬಾಟ್ ಆಗಿದೆ ಮತ್ತು ಇದನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಚಾಟ್‌ಬಾಟ್ ಅನ್ನು ಯಾವುದೇ ಬಳಕೆದಾರರ ಪ್ರಶ್ನೆಗಳಿಗೆ ವಿವರವಾದ ಮತ್ತು ಸಂಪೂರ್ಣವಾದ ಪ್ರತಿಕ್ರಿಯೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಅದೇನೆ ಇರ್ಲಿ ಸದ್ಯ ಇಂಡಿಯನ್ ಚಾಟ್ ಜಿಪಿಟಿ ಕಾರ್ನರ್ ಎಲ್ಲರನ್ನೂ ಬೆರಗುಗೊಳಿಸುತ್ತಿರೋದಂತೂ ನಿಜ.

Follow Us:
Download App:
  • android
  • ios