ಸಿಹಿ ತಿಂಡಿ ಪ್ರಿಯರಿಗೆ ಉಂಡೆ ಎಂದರೆ ಸಾಕು, ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಈ ಎಳ್ಳುಂಡೆ ಸೇವಿಸೋದರಿಂದ ಆಗುವ ಪ್ರಯೋಜನ ಕೇಳಿದರೆ ಇನ್ನೂ ಹೆಚ್ಚು ಖುಶಿಯಿಂದ ಎರಡು ಉಂಡೆ ಜಾಸ್ತಿನೇ ತಿಂತಿರೇನೋ! 

ಚಳಿಗಾಲ (Winter) ಎಂದರೆ ಸಾಕು, ಹೊಸ ಹೊಸ ತಿಂಡಿ ಮಾಡಿಕೊಂಡು ತಿನ್ನೋಣ ಅನಿಸುತ್ತದೆ. ನಾಲಿಗೆ ರುಚಿಯ ಜೊತೆಗೆ ಆರೋಗ್ಯದ ಕಾಳಜಿ ಕೂಡ ಮುಖ್ಯ. ನಾಲಿಗೆ ರುಚಿ ಸಿಗುವ ತಿಂಡಿಯಲ್ಲಿಯೇ ಆರೋಗ್ಯ ಕೂಡ ವೃದ್ಧಿಸುತ್ತದೆ ಎಂದರೆ ಯಾರಿಗೆ ಬೇಡ ಹೇಳಿ? ಎಲ್ಲರಿಗೂ ಸಿಹಿ ತಿಂಡಿ ತಿನ್ನಬೇಕು ಅಂಥ ಆಗಾಗ ಅನಿಸುತ್ತದೆ. ಅದರಲ್ಲೂ ಹೆಚ್ಚಿನವರಿಗೆ ಮಧ್ಯಾಹ್ನದ ಊಟದ ಬಳಿಕ ಏನಾದರೂ ಸಿಹಿ ಬೇಕು ಅನಿಸುತ್ತದೆ. ಇಂಥ ಸಂದರ್ಭದಲ್ಲಿ ಎಳ್ಳುಂಡೆ ಮನೆಯಲ್ಲಿದ್ದರೆ ಎರಡೆರಡು ಲಾಭವಿದೆ.

ಬರಿ ರುಚಿಯಾಗಿರುವುದು ಮಾತ್ರವಲ್ಲ, ಆರೋಗ್ಯ ಕೂಡ ಹೆಚ್ಚಿಸುತ್ತದೆ. ಚಳಿಗಾಲಕ್ಕೆ ಹೇಳಿ ಮಾಡಿಸಿದಂತೆ ಈ ಉಂಡೆ ಕೆಲಸ ಮಾಡುತ್ತದೆ. ಈ ಸಮಯದಲ್ಲಿ ಚರ್ಮದ ಸಮಸ್ಯೆಗಳು ಹೆಚ್ಚಿರುತ್ತದೆ. ಅಂದರೆ ಚರ್ಮ ಒಣಗಿರುವುದು (Dryness), ಒಡೆಯುವುದು ಹೀಗೆ ಕೆಲವು ಸಮಸ್ಯೆ ಇರುತ್ತದೆ. ಆದರೆ ಈ ಸಮಸ್ಯೆಗೆ ಲಾಡು ತಿನ್ನುವುದರಿಂದ ಪರಿಹಾರ ಆಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಇನ್ನು ಕೂದಲಿಗೆ (Hair) ಸಂಬಂಧಪಟ್ಟ ಸಮಸ್ಯೆಗಳಿಗೂ ಕೂಡ ಈ ವಿಶೇಷ ಉಂಡೆ ಪರಿಹಾರ ನೀಡಬಲ್ಲದು. ಮುಖ್ಯವಾಗಿ ಇದರ ಸೇವನೆಯಿಂದ ಮೂಳೆಗಳು (Bones) ಸ್ಟ್ರಾಂಗ್‌ ಆಗುತ್ತದೆ. ಆದರೆ ಇದನ್ನು ಹೇಗೆ ಸೇವನೆ ಮಾಡಬೇಕು ಎಂಬುದು ತಿಳಿದಿರಬೇಕು.

  •  ಮಧ್ಯಾಹ್ನದ ಹಾಗೂ ರಾತ್ರಿಯ ಊಟ (Meal) ಅಥವಾ ಬೆಳಗಿನ ತಿಂಡಿಯ ಜೊತೆಗೆ ಸೇವಿಸಬೇಡಿ.
  • ಇದನ್ನೇ ಊಟದ ರೂಪದಲ್ಲಿ ಸೇವಿಸಿ. (Mid meal)
  • ಬಹಳ ಹೆಚ್ಚು ಸೇವನೆ ಕೂಡಾ ಒಳ್ಳೆಯದಲ್ಲ, ಏಕೆಂದರೆ ಇದು ಹೆಚ್ಚು ಕ್ಯಾಲೋರೀಸ್‌ ಹೊಂದಿದೆ. 1 ರಿಂದ 2 ಲಾಡು ಸೇವಿಸುವುದು ಉತ್ತಮ.
  • ನಿಮಗೆ ವಿಟಮಿನ್‌ ಡಿ ಕೊರತೆಯಿದ್ದರೆ , ಅಥವಾ ಬಿ12 ಕೊರತೆಯಿದ್ದರೆ ಅಥವಾ ಕ್ಯಾಲ್ಶಿಯಂ ಕಡಿಮೆ ಇದ್ದರೆ ಲಾಡು ಅದನ್ನು ತುಂಬಿ ಕೊಡುತ್ತದೆ.
  • ಗರ್ಭಿಣಿಯರು, ಮಕ್ಕಳು ಹಾಗೂ ವಯಸ್ಸಾದವರಿಗೆ ಇದು ಉತ್ತಮ ಆಹಾರವಾಗಿದೆ.
  • ಚಳಿಗಾಲದಲ್ಲಿ ಮಾತ್ರ ಸೇವನೆ ಮಾಡಿ ಬೇಸಿಗೆ (Summer) ಕಾಲದಲ್ಲಿ ಸೇವಿಸುವುದು ಅಷ್ಟು ಒಳ್ಳೆಯದಲ್ಲ.
  • ಮನೆಯಲ್ಲಿಯೇ ಇದನ್ನು ತಯಾರಿಸಿದಾಗ ಹೆಚ್ಚಿನ ಫಲಿತಾಂಶ ಸಿಗುತ್ತದೆ.

    Acid Reflux: ಈ ದಿನನಿತ್ಯದ ಅಭ್ಯಾಸಗಳು ನಿಮಗೆ ಅಸಿಡಿಟಿ ತರುತ್ತಿರಬಹುದು..

ಇಷ್ಟೇ ಅಲ್ಲದೆ ಥೈರಾಯ್ಡ್ (Thyroid) ಸಮಸ್ಯೆಯಿರುವವರಿಗೆ ಹಾಗೂ ಹಿಮೋಗ್ಲೋಬಿನ್‌ ಅಂಶ ಕಡಿಮೆ ಇದ್ದರೆ, ಹಾರ್ಮೋನ್‌ ಇಂಬ್ಯಾಲನ್ಸ್ ಇದ್ದವರು ಎಳ್ಳುಂಡೆ ಸೇವನೆ ಮಾಡಿ. ಇಷ್ಟೆಲ್ಲಾ ಉಪಯೋಗ ತಿಳಿದ ಮೇಲೆ ಇದನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳ ಬಗ್ಗೆ ಕೂಡ ತಿಳಿಯುವುದು ಬೇಡವೇ?

ಬೇಕಾಗುವ ಸಾಮಾಗ್ರಿಗಳು

ಮಾಡುವ ವಿಧಾನ ಹೀಗಿದೆ

  • ಬಾಣಲಿಯನ್ನು ಅಥವಾ ಪ್ಯಾನನ್ನು (Pan) ಸ್ಟವ್‌ ಮೇಲಿಟ್ಟು ತುರಿದಿಟ್ಟುಕೊಂಡಿರುವ ತೆಂಗಿನಕಾಯಿಯನ್ನು ಹಾಕಿ ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿದು ಕೆಳಗಿಳಿಸಿಕೊಳ್ಳಿ
  • ಈಗ ಅದೇ ಪ್ಯಾನ್‌ಗೆ ತುಪ್ಪ ಹಾಕಿಕೊಂಡು ಅದಕ್ಕೆ ಪುಡಿ ಮಾಡಿಟ್ಟಿರುವ ಬೆಲ್ಲವನ್ನು ಸೇರಿಸಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಹುರಿಯಿರಿ.
  • ಬೆಲ್ಲವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಳ್ಳಿ. ಇದು ಗೋಲ್ಡನ್‌ ಬ್ರೌನ್‌ ಬಣ್ಣ ಬರುವ ತನಕ ಬೇಯಿಸಿ ಹಾಗೂ ಇದರಲ್ಲಿರುವ ತೇವಾಂಶ ಸಂಪೂರ್ಣವಾಗಿ ಆವಿಯಾಗಬೇಕು.
  • ಈಗ ಇದಕ್ಕೆ ಎಳ್ಳನ್ನು ಸೇರಿಸಿ
  • ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗೆ ತುಪ್ಪ ಸವರಿಕೊಂಡು ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.

ಎಷ್ಟು ಸಿಂಪಲ್‌ ತಿಂಡಿಯಲ್ಲವೇ? ಆದರೆ ಇದರಿಂದ ಆರೋಗ್ಯ ವೃದ್ಧಿಸುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಿ ಮಕ್ಕಳಿಗೆ ನೀಡಿ. ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.