Asianet Suvarna News Asianet Suvarna News

ಒಸಾಮಾ ಬಿನ್ ಲ್ಯಾಗರ್ ಬಿಯರ್ ಲಾಂಚ್, ಭಾರಿ ಬೇಡಿಕೆಯಿಂದ ಒಂದೇ ವಾರಕ್ಕೆ ಕ್ಲೋಸ್!

ಅಮೆರಿಕದ ಮೇಲೆ ಕಂಡು ಕೇಳರಿಯದ ಭಯೋತ್ಪಾದಕ ದಾಳಿ ನಡೆಸಿದ ಉಗ್ರ ಒಸಾಮಾ ಬಿಲ್ ಲಾಡೆನ್ ಹೆಸರಲ್ಲಿ ಬಿಯರ್ ಬಿಡುಗಡೆ ಮಾಡಲಾಗಿದೆ. ಆದರೆ ಭಾರಿ ಬೇಡಿಕೆಯಿಂದ ಒಂದೇ ವಾರಕ್ಕೆ ಕ್ಲೋಸ್ ಮಾಡಿರುವ ಘಟನೆ ನಡೆದಿದೆ.

UK shuts Osama bin lager beer after massive demand from people says Company ckm
Author
First Published May 24, 2024, 7:07 PM IST

ಲಂಡನ್(ಮೇ.24) ಉಗ್ರ ಒಸಾಮಾ ಬಿನ್ ಲಾಡೆನ್ ಭಯೋತ್ಪಾದ ಕೃತ್ಯಗಳನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಮೆರಿದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ವಿಮಾನ ಅಪಹರಿಸಿ ದಾಳಿ ನಡೆಸಿದ ಘಟನೆ ಜಗತ್ತು ಮರೆತಿಲ್ಲ. ಹಲವು ಪ್ರಮುಖ ಉಗ್ರ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ ಇದೀಗ ಲಂಡನ್ ಜನರಿಗೆ ರೋಲ್ ಮಾಡೆಲ್ ಆಗಿದ್ದಾನೆ. ಇದೇ ಉಗ್ರ ಲಾಡನ್ ಹೆಸರಲ್ಲಿ ಬಿಯರ್ ಲಾಂಚ್ ಮಾಡಲಾಗಿದೆ. ಆದರೆ ಈ ಒಸಾಮಾ ಬಿನ್ ಲ್ಯಾಗರ್ ಬಿಯರ್ ಲಾಂಚ್ ಮಾಡಿದ್ದೇ ತಡ, ಜನ ಕ್ಕಿಕ್ಕಿರಿದು ಸೇರಿದ್ದಾರೆ. ಬೇಡಿಕೆ ಪೂರೈಸಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಈ ಬಿಯರ್ ಕುಡಿಯಲು ಜನರು ಕ್ಯೂನಲ್ಲಿ ನಿಂತರೂ ಸಿಗದ ಪರಿಸ್ಥಿತಿ ಎದುರಾದ ಕಾರಣ ಇದೀಗ ಒಂದೇ ವಾರಕ್ಕೆ ಕ್ಲೋಸ್ ಮಾಡಲಾಗಿದೆ.

ಮಿಚೆಲ್ ಬ್ರೆವರಿಂಗ್ ಕಂಪನಿ ಈ ನೂತನ ಬಿಯರ್ ಲಾಂಚ್ ಮಾಡಿದೆ. ಉಗ್ರ ಒಸಾಮಾ ಬಿನ್ ಲಾಡೆನ್ ಹೆಸರಿನಲ್ಲಿ ಒಸಾಮಾ ಬಿನ್ ಲ್ಯಾಗರ್ ಎಂದು ಬಿಯರ್ ಬಿಡುಗಡೆ ಮಾಡಿದೆ. ವೆಬ್‌ಸೈಟ್, ಆ್ಯಪ್ ಮೂಲಕ ಜಾಹೀರಾತು ನೀಡಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಬೇಡಿಕೆ ವ್ಯಕ್ತವಾಗತೊಡಗಿತು. 

ಕರಾವಳಿಯಲ್ಲಿ ‘ಮದ್ಯ’ದ ಜಾಗ ಆಕ್ರಮಿಸಿದ ತಣ್ಣನೆ ಬಿಯರ್‌!

ಕ್ಷಣಾರ್ಧದಲ್ಲಿ ಸಾವಿರಕ್ಕೂ ಹೆಚ್ಚು ನೋಟಿಫಿಕೇಶನ್ ಬಂದಿದೆ. ವೆಬ್‌ಸೈಟ್, ಆ್ಯಪ್ ಬುಕಿಂಗ್ ಪುಲ್ ಆಗಿದೆ. ಜನರು ಬೇಡಿಕೆ ತೀವ್ರಗೊಂಡ ಪರಿಣಾಮ ಒಂದೇ ವಾರದಲ್ಲಿ ಒಸಾಮಾ ಬಿನ್ ಲ್ಯಾಗರ್ ಬಿಯರ್ ಮುಚ್ಚಬೇಕಾಯಿತು ಎಂದು ಮಿಚೆಲ್ ಬ್ರೆವರಿಂಗ್ ಕಂಪನಿ ಸಹ ಸಂಸ್ಥಾಪಕ ಮಿಚೆಲ್ ಹೇಳಿದ್ದಾರೆ. ಅತೀಯಾದ ಬೇಡಿಕೆ ಕಾರಣ ಪೂರೈಕೆ ಸಾಧ್ಯವಾಗಲಿಲ್ಲ.ನಮ್ಮ ಜಾಹೀರಾತು ಭಾರಿ ವೈರಲ್ ಆಗಿತ್ತು. ಜನರು ಒಸಾಮಾ ಬಿನ್ ಲ್ಯಾಗರ್ ಬಿಯರ್ ಖರೀದಿಗೆ ಮುಗಿಬಿದ್ದ ಕಾರಣ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

 

 

ಇಷ್ಟೇ ಅಲ್ಲ ಉಗ್ರನ ಹೆಸರಿಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಒಸಾಮಾ ಬಿನ್ ಲಾಡೆನ್ ಜಾಗತಿಕ ಭಯೋತ್ಪಾದಕ, ಆದರೂ ಈ ಹೆಸರು ಇಟ್ಟಿದ್ದೇಕೆ ಅನ್ನೋ ಪಶ್ನೆಗೆ ಯಾರೂ ಅಪರಾಧಿಯಲ್ಲ ಎಂದು ಉತ್ತರಿಸುವ ಮೂಲಕ ಲಾಡನ್ ಒರ್ವ ಹಿರೋ ಎಂದು ಬಿಂಬಿಸಿದ್ದಾರೆ. ಇದೇ ಮಿಚೆಲ್ ಕಂಪನಿ ಈಗಾಗಲೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೆಸರಿನ ಬಿಯರ್ ಕೂಡ ಲಾಂಚ್ ಮಾಡಿ ಭಾರಿ ಯಶಸ್ಸು ಕಂಡಿದೆ.  ಕಿಮ್ ಜಾಂಗ್ ಆ್ಯಲೆ ಹೆಸರಲ್ಲಿ ಬಿಯರ್ ನೀಡುತ್ತಿದೆ. 

ಕರ್ನಾಟಕದಲ್ಲಿ ಬಿಯರ್‌ ಮಾರಾಟ ಸಾರ್ವಕಾಲಿಕ ದಾಖಲೆ

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೆಸರಲ್ಲೂ ಬಿಯರ್ ಲಾಂಚ್ ಮಾಡಿದೆ. ಪುಟಿನ್ ಪೊರ್ಟರ್ ಅನ್ನೋ ಹೆಸರಿನಲ್ಲಿ ಈ ಬಿಯರ್ ಲಭ್ಯವಿದೆ. ಆದರೆ ಈ ಎರಡೂ ಬಿಯರ್‌ಗಿಂತ ಒಸಾಮ ಬಿನ್ ಲ್ಯಾಗರ್ ಬಿಯರ್‌ಗೆ ದುಪ್ಪಟ್ಟು ಬೇಡಿಕೆ ವ್ಯಕ್ತವಾಗಿತ್ತು

Latest Videos
Follow Us:
Download App:
  • android
  • ios