ಅನ್ನಭಾಗ್ಯ ಯೋಜನೆ ಅಕ್ಕಿಯಿಂದ ಹೊಟ್ಟೆ ತುಂಬ್ತಿಲ್ಲ: 10 ಕೆಜಿ ಅಕ್ಕಿ ಕೊಡುವಂತೆ ಸಚಿವರ ಮುಂದೆ ಮಂಡಿಯೂರಿದ ರೈತ
ಸರ್ಕಾರದಿಂದ ನೀಡುತ್ತಿರುವ 5 ಕೆ.ಜಿ. ಅಕ್ಕಿಯಿಂದ ಕುಟುಂಬದ ಹೊಟ್ಟೆ ತುಂಬುತ್ತಿಲ್ಲ. ದಯಮಾಡಿ 10 ಕೆ.ಜಿ. ಅಕ್ಕಿ ಕೊಡುವಂತೆ ಗೃಹ ಸಚಿವ ಪರಮೇಶ್ವರ್ ಮುಂದೆ ರೈತ ಮನವಿ ಮಾಡಿದ್ದಾನೆ.
ತುಮಕೂರು (ಅ.31): ನಮ್ಮ ಮನೆಯ ತುಂಬಾ ಮಕ್ಕಳು ಮರಿ ಅಂತೆಲ್ಲಾ ತುಂಬಾ ಜನರಿದ್ದೇವೆ. ಆದರೆ, ಬರಗಾಲದ ಹಿನ್ನೆಲೆಯಲ್ಲಿ ಕೂಲಿಯೂ ಸಿಗ್ತಿಲ್ಲ. ಸರ್ಕಾರದಿಂದಕೊಡುವ 5 ಕೆ.ಜಿ. ಅಕ್ಕಿಯೂ ಊಟಕ್ಕೆಸಾಲುತ್ತಿಲ್ಲ. ಹೀಗಾಗಿ, ದಯವಿಟ್ಟು ನಮ್ಮ ಕುಟುಂಬಕ್ಕೆ 5 ಕೆಜಿ ಆಹಾರ ಧಾನ್ಯದ ಬದಲಾಗಿ ನೀಡುತ್ತಿರುವ ಹಣದ ಬದಲು ನಮಗೆ ಅಕ್ಕಿಯನ್ನು ಕೊಡಬೇಕು ಎಂದು ತುಮಕೂರಿನಲ್ಲಿ ರೈತನೊಬ್ಬ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರ ಬಳಿ ಮನವಿ ಮಾಡಿಕೊಂಡಿದ್ದಾನೆ.
ತುಮಕೂರು ಜಿಲ್ಲೆಯಲ್ಲಿ ನಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಕಚೇರಿ ಬಳಿ ನಡೆದ ಜನತಾ ದರ್ಶನದಲ್ಲಿ ಭಾಗಿಯಾದ ರೈತನೊಬ್ಬ ಹೊಟ್ಟೆ ತುಂಬಾ ಊಟ ಮಾಡೋಕೆ ಆಗ್ತಿಲ್ಲ ಸ್ವಾಮೀ, ನಮಗೆ ಹಣದ ಬದಲು 10 ಕೆಜಿ ಅಕ್ಕಿ ಕೊಡಿ ಎಂದು ಸಚಿವರ ಎದುರು ಅಳಲು ತೋಡಿಕೊಂಡಿದ್ದಾನೆ. ಸರ್ಕಾರದಿಂದ ಕೇವಲ 3 ಕೆ.ಜಿ. ಅಕ್ಕಿ ಕೊಡ್ತಾರೆ. ಇದರಿಂದಾಗಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬ ಅನ್ನ ಊಟ ಮಾಡೋಕೆ ಆಗ್ತಿಲ್ಲ. ದಯವಿಟ್ಟು ನಮಗೆ ಹಣದ ಬದಲು ಸಂಪೂರ್ಣವಾಗಿ ಅಕ್ಕಿಯನ್ನು ಕೊಡಿ. ಇಲ್ಲದಿದ್ದರೆ ನಾವು ಹೊಟ್ಟೆ ಹಸಿವಿನಿಂದ ಇರಬೇಕಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್
ನಮ್ಮ ಮನೆಯಲ್ಲಿ ಮಕ್ಕಳು ಮರಿ ಎಲ್ಲರೂ ಇದ್ದಾರೆ. ಎಲ್ಲರಿಗೂ 3 ಕೆ.ಜಿ ಅಕ್ಕಿ ಹಾಗೂ ಇತರೆ ಧಾನ್ಯದಿಂದ ಹೊಟ್ಟೆ ತುಂಬಾ ಊಟ ಮಾಡಲು ಆಗುತ್ತಿಲ್ಲ. ಈಗ ಬರಗಾಲವೂ ಆವರಿಸಿದ್ದು ಕೂಲಿ ಕೆಲಸವೂ ಸಿಗುತ್ತಿಲ್ಲ. ಆದ್ದರಿಂದ ಹಸಿವಿನಿಂದ ಬಳಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರದಿಂದ 10 ಕೆ.ಜಿ ಅಕ್ಕಿಯನ್ನು ಕೊಡಲು ಘೋಷಣೆ ಮಾಡಲಾಗಿದೆ. ಆದರೆ, ಅಕ್ಕಿ ಪೂರೈಕೆ ಕಡಿಮೆಯಿದೆ ಎಂದು 5 ಕೆ.ಜಿ ಅಕ್ಕಿಯ ಬದಲು ಹಣ ನೀಡಲಾಗುತ್ತಿದೆ. ಆದರೆ, ನಮಗೆ ಹಣ ಬೇಡ, 10 ಕೆಜಿ ಅಕ್ಕಿ ಕೊಡಿ. ಇದರಿಂದ ನಮ್ಮ ಕುಟುಂಬ ಸದಸ್ಯರೆಲ್ಲರೂ ಹೊಟ್ಟೆ ತುಂಬಾ ಊಟ ಮಾಡ್ತಾರೆ ಎಂದು ರೈತ ಹೇಳಿಕೊಂಡಿದ್ದಾನೆ.
ಸಿದ್ಧತೆಯಿಲ್ಲದೇ ಮೀಟಿಂಗ್‌ಗೆ ಬಂದ ಅಧಿಕಾರಿಗಳಿಗೆ ತರಾಟೆ: ಜನತಾ ದರ್ಶನ ಸಭೆಗೆ ಯಾವುದೇ ಸಿದ್ಧತೆಯನ್ನೂ ಮಾಡಿಕೊಳ್ಳದೇ ಹಾಜರಾಗಿದ್ದ ಕೃಷಿ ಇಲಾಖೆ, ನೀರಾವರಿ ಇಲಾಖೆ ಹಾಗೂ ರೇಷ್ಮೆ ಇಲಾಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತರಾಟೆ ತೆಗೆದುಕೊಂಡರು. ತೀವ್ರ ಬರ ಪರಿಸ್ಥಿತಿ ನಿರ್ವಹಣೆಯ ಮಾಹಿತಿ ಕೇಳಿದಾಗ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮದ ಬಗ್ಗೆಯೂ ಬಾಯಿ ಬಿಡಲಿಲ್ಲ. ಕುಣಿಗಲ್ ತಾಲ್ಲೂಕಿನಲ್ಲಿ 70 ಸಾವಿರ ನೋಂದಾಯಿತ ರೈತರಿದ್ದಾರೆ. ಕೇವಲ 600 ಜನ ರೈತರು ಮಾತ್ರ ಬೆಳೆ ವಿಮೆಗೆ ನೋಂದಣಿ ಮಾಡಿದ್ದಾರೆ. ಕಳೆದ ವರ್ಷ ಎಷ್ಟು ವಿಮೆ ನೀಡಿದ್ದೀರಾ ಎಂದು ಪರಮೇಶ್ವರ್ ಪ್ರಶ್ನಿಸಿದರು. ಆಗಲೂ ಮಾಹಿತಿ ನೀಡಲು ಕೃಷಿ ಅಧಿಕಾರಿಗಳು ತಡಬಡಾಯಿಸಿದರು. ಇದರಿಂದ ಕೋಪಗೊಂಡ ಸಚಿವರು ತರಾಟೆಗೆ ತೆಗೆದುಕೊಂಡರು.
ಸಿನಿಮಾ ಸ್ಟೈಲ್‌ನಲ್ಲಿ ಸ್ಕಾರ್ಪಿಯೋ ಕಾರು ಹತ್ತಿಸಿ ಮರ್ಡರ್! ಹತ್ಯೆ ದೃಶ್ಯ ನೋಡಿದ್ರೆ ಮೈ ನಡುಗುತ್ತೆ!
ನೀವೇನು ಹಾಲಿಡೇ ಬಂದಂತೆ ಬಂದಿದ್ದೀರಾ?: ಇದೇ ವೇಳೆ ಸಭೆಯ ಸಿದ್ಧತೆ ಮಾಡದ ಕುಣಿಗಲ್ ತಹಶೀಲ್ದಾರ್ ಗೂ ಕ್ಲಾಸ್ ತೆಗೆದುಕೊಂಡರು. ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್ ಅವರೇ ನೀವೇನು ಹಾಲಿಡೇ ಬಂದಂತೆ ಬಂದಿದ್ದೀರಾ? ಏನು ಅರೇಜ್ ಮೆಂಟ್ ಮಾಡಿದ್ದೀಯಾ? ಏಯ್ ವಾಟ್ ನಾನ್ಸೆನ್ ಯು ಟಾಕಿಂಗ್ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಬೈಯ್ದರು. ನಂತರ ಎಲ್ಲ ಅಧಿಕಾರಿಗಳಿಗೂ ಜನತಾ ದರ್ಶನ ಕಾರ್ಯಕ್ರಮಕ್ಕೆ ಬರುವಾಗ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಬರಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.