ಸಿನಿಮಾ ಸ್ಟೈಲ್‌ನಲ್ಲಿ ಸ್ಕಾರ್ಪಿಯೋ ಕಾರು ಹತ್ತಿಸಿ ಮರ್ಡರ್! ಹತ್ಯೆ ದೃಶ್ಯ ನೋಡಿದ್ರೆ ಮೈ ನಡುಗುತ್ತೆ!
ಕೇಸ್ ವಾಪಸ್ ತೆಗೆದುಕೊಳ್ಳಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಸ್ಕಾರ್ಪಿಯೋ ಕಾರು ಹತ್ತಿಸಿ ಸಿನಿಮಾ ಸ್ಟೈಲ್‌ನಲ್ಲಿ ಕೊಂದು ಪರಾರಿಯಾಗಿದ್ದ ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಅ.31) ಕೇಸ್ ವಾಪಸ್ ತೆಗೆದುಕೊಳ್ಳಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಸ್ಕಾರ್ಪಿಯೋ ಕಾರು ಹತ್ತಿಸಿ ಸಿನಿಮಾ ಸ್ಟೈಲ್‌ನಲ್ಲಿ ಕೊಂದು ಪರಾರಿಯಾಗಿದ್ದ ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ಫ್ರೆಜರ್‌ಟೌನ್ ನಿವಾಸಿ ಸೈಯದ್ ಅಸ್ಗರ್ ಕೊಲೆಯಾದ ವ್ಯಕ್ತಿ. ಮುಜಾಹಿದ್ ಗಾಯಗೊಂಡವ(ಅಸ್ಗರನ ಗೆಳೆಯ) ಜೆಸಿ ನಗರದ ಅಮಿನ್, ನವಾಜ್ ಬಂಧಿತ ಆರೋಪಿಗಳು. ಕಳೆದ ಅ. 18ರ ರಾತ್ರಿ 12.30 ಸುಮಾರಿಗೆ ನಡೆದಿದ್ದ ಘಟನೆ.
ಕೋಲಾರ: ಕಾಂಗ್ರೆಸ್ ಮುಖಂಡನ ಕೊಲೆ ಖಂಡಿಸಿ ಶ್ರೀನಿವಾಸಪುರ ಪಟ್ಟಣ ಬಂದ್
ಏನಿದು ಘಟನೆ?
ಕೊಲೆಯಾಗಿರುವ ಅಸ್ಗರ್ ಗುಜರಿ ವ್ಯಾಪಾರಿಯಾಗಿದ್ದ. ಅವನ ಸ್ನೇಹಿತ ಮುಜಾಹಿದ್ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡುವ ದಂಧೆ ಮಾಡುತ್ತಿದ್ದ. ಈ ಮೊದಲೇ ಪರಿಚಿತನಾಗಿದ್ದ ಆರೋಪಿ ಅಮಿನ್‌ಗೆ ನಾಲ್ಕು ಲಕ್ಷ ರೂ. ಮೌಲ್ಯ ಎರಡು ಕಾರು ಕೊಡಿಸಿದ್ದ ಅಸ್ಕರ್. ಆದರೆ ಕಾರು ಖರೀದಿಸಿ ಎಂಟು ತಿಂಗಳಾದರೂ ಹಣ ವಾಪಸ್ ಮಾಡದ ಅಮಿನ್. ಈ 4 ಲಕ್ಷ ರೂ. ಹಣಕ್ಕೆ ಅಸ್ಕರ್- ಅಮಿನ್ ಮಧ್ಯೆ ಜಗಳ ನಡೆದಿತ್ತು. ಅಮಿನ್ ಮತ್ತು ಸ್ನೇಹಿತ ಸೇರಿಕೊಂಡು ಹಣ ಕೇಳಿದ್ದಕ್ಕೆ ಅಸ್ಗರ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಜೆಸಿ ನಗರ ಠಾಣೆಗೆ ದೂರು ನೀಡಿದ್ದ ಅಸ್ಗರ್. ದೂರಿನ ಹಿನ್ನೆಲೆ ಅಮಿನ್ ಮೇಲೆ 307 ಸೆಕ್ಷನ್ ಕೇಸ್ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದ ಜೆ ಸಿ ನಗರ ಪೊಲೀಸರು. ಈ ವಿಷಯ ಗೊತ್ತಾಗಿ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿದ್ದ ಆರೋಪಿಗಳು. ಅಸ್ಗರ್‌ಗೆ ಕರೆ ಮಾಡಿ ಮಾತಾಡೋಣ ಬಾ ಅಂತಾ ಕರೆಸಿಕೊಂಡಿದ್ದರು.
ಕೇಸ್ ಹಿಂಪಡೆಯಲು ಒಪ್ಪದ ಅಸ್ಗರ್:
ಅಸ್ಗರ್‌ನನ್ನು ಕರೆಸಿಕೊಂಡಿದ್ದ ಆರೋಪಿಗಳು ಕೇಸ್ ಹಿಂಪಡೆಯಲು ಒತ್ತಡ ಹಾಕಿದ್ದರು. ಆದರೆ ಅಸ್ಗರ್ ಕೇಸ್ ಹಿಂಪಡೆಯಲು ಸಾಧ್ಯವಿಲ್ಲ ಎಂದು ಗೆಳೆಯ ಮುಜಾಹಿದ್‌ನೊಂದಿಗೆ ಬೈಕ್ ಹತ್ತಿ ತೆರಳಿದ್ದ ಅಸ್ಗರ್. ಹೊರನಡೆದಿದ್ದ. ಜೊತೆಗಿದ್ದ ಗೆಳೆಯನ ಡ್ರಾಪ್ ಮಾಡಲು ಪಾಟರಿ ರಸ್ತೆಗೆ ಬಂದಿದ್ದ ಅಸ್ಗರ್. ಇತ್ತ ಅಸ್ಗರ್ ಹೊರನಡೆದಾಗಲೇ ಅಂದೇ ಮುಗಿಸಲು ತೀರ್ಮಾನ ಮಾಡಿ ಸ್ಕಾರ್ಪಿಯೋ ಕಾರು ಹತ್ತಿದ್ದ ಆರೋಪಿಗಳು. ಈಗ ಜೀವಂತ ಬಿಟ್ಟರೆ ನಮ್ಮ ಜೀವಕ್ಕೆ ಕುತ್ತು ಅಸ್ಗರ್‌ನ ಬೈಕ್ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು.
35 ವರ್ಷದ ಪ್ರಖ್ಯಾತ ಸೀರಿಯಲ್ ನಟಿ ಹಠಾತ್ ನಿಧನ, ಇಂಡಸ್ಟ್ರೀಗೆ ಶಾಕ್!
ಕೊಲೆ ದೃಶ್ಯ ನೋಡಿದ್ರೆ ಮೈ ನಡುಗುತ್ತೆ!
ಸ್ನೇಹಿತ ಡ್ರಾಪ್ ಮಾಡುವುದಕ್ಕೆ ಪಾಟರಿ ರಸ್ತೆಗೆ ಹೋಗುತ್ತಿರುವುದು ತಿಳಿದು ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದ ಆರೋಪಿಗಳು. ಬೈಕ್‌ನಿಂದ ಇಳಿಸುವ ವೇಳೆ ಹಿಂಬದಿಯಿಂದ ಗುದ್ದಿ ಕೊಲೆ ಮಾಡಲು ಸ್ಕೆಚ್. ಆಕಸ್ಮಿಕ ಆಕ್ಸಿಡೆಂಟ್ ಅಂತಾ ಪ್ರೂವ್ ಮಾಡಿ ತಪ್ಪಿಸಿಕೊಳ್ಳುವ ಪ್ಲಾನ್ ಹಾಕಿದ್ದ ಆರೋಪಿಗಳು.ಹಿಂಬದಿಯಿಂದ ಬೈಕ್‌ಗೆ ಜೋರಾಗಿ ಗುದ್ದಿ ಎಸ್ಕೇಪ್ ಆಗಿದ್ದ ಆರೋಪಿಗಳು. ಬಿಟ್ಟುಬಿಡಿ ಅಂತಾ ಅಂಗಲಾಚಿಇದ್ರೂ ಬಿಡದೇ ಡಿಕ್ಕಿ ಹೊಡೆಸಿ ಕೊಂದ ಆರೋಪಿಗಳು. ಅಸ್ಗರ್ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದ. ಅವನ ಗೆಳೆಯ ಮುಜಾಹಿದ್ ಗಾಯಗೊಂಡಿದ್ದ. ಈ ಘಟನೆ. ಮೊದಲಿಗೆ ಇದೊಂದು ಆಕ್ಸಿಡೆಂಟ್ ಅಂತಲೇ ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರಿ ಪೊಲೀಸರು. ಆದರೆ ಗಾಯಗೊಂಡಿದ್ದ ಗೆಳೆಯ ಮುಜಾಹಿದ್ ಹೇಳಿಕೆ ವೇಳೆ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಸದ್ಯ ಅಮಿನ್, ನವಾಜ್ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವ ಪುಲಿಕೇಶಿನಗರ ಪೊಲೀಸರು.