ಜಿಟಿ ಜಿಟಿ ಮಳೆಗೆ ಬಿಸಿ ಬಿಸಿ ಏಡಿ ಸಾರು ತಿನ್ನೋಕೆ ಸೂಪರ್ ಆಗಿರುತ್ತೆ
ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗ್ತಿದೆ. ಮನೆಯ ಹೊರಗೆ ನೀರು, ಒಳಗಡೆ ಥಂಡಿ ಥಂಡಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಏನಾದ್ರೂ ತಿನ್ಬೇಕು ಅನ್ಸುತ್ತೆ. ಹಾಗಂತ ಎಷ್ಟೂಂತ ಅದೇ ಕಬಾಬ್, ಬಿರಿಯಾನಿ ತಿನ್ತೀರಾ ? ಈ ಸ್ಪೆಷಲ್ ಏಡಿ ಸಾರನ್ನೊಮ್ಮೆ ಟ್ರೈ ಮಾಡಿ ನೋಡಿ..
ಜೋರು ಮಳೆ ಬಂದಾಗ ಮನೆಯೊಳಗೆ ಕುಳಿತು ಹೊರಗಡೆ ನೋಡೋಕೆ ಚೆನ್ನಾಗಿರುತ್ತೆ. ಆದ್ರೆ ತಿನ್ನೋಕೆ ಮಾತ್ರ ಬಿಸಿಬಿಸಿಯಾಗಿ ಏನಾದ್ರೂ ಬೇಕು ಅನಿಸ್ತಿರುತ್ತೆ. ಅದಕ್ಕೆ ಹೆಚ್ಚಿನವರು ರುಚಿ ರುಚಿಯಾಗಿ ಪಕೋಡ, ಬಜ್ಜಿ ಮಾಡಿ ಸವೀತಾರೆ. ನಾನ್‌ವೆಜ್ ಪ್ರಿಯರು ಬೋಂಡಾ, ಕಬಾಬ್ ಪ್ರಿಪೇರ್ ಮಾಡಿ ತಿನ್ತಾರೆ. ಆದ್ರೆ ಎಷ್ಟೂಂತ ಅದೇ ಬಿರಿಯಾನಿ, ಕಬಾಬ್ ತಿನ್ತೀರಾ. ಬಿಸಿಬಿಸಿಯಾಗಿ ವೆರೈಟಿಯಾಗಿ ಏನಾದ್ರೂ ತಿನ್ಬೇಕು ಅನಿಸುತ್ತಲ್ಲಾ. ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ನಾವು ನಿಮಗೆ ಇಂದು ಸಾಂಪ್ರದಾಯಿಕವಾದ ಹಾಗೂ ಸ್ಪೆಷಲ್ ಆದ ನಾನ್ ವೆಜ್ ಅಡುಗೆ ಬಗ್ಗೆ ಹೇಳಿ ಕೊಡ್ತೀವಿ. ಅದೇ ಏಡಿ ಸಾರು. ಮೈ ನಡುಗಿಸೋ ಮಳೆಯಲ್ಲಿ ಬಿಸಿ ಬಿಸಿ ಏಡಿ ಸಾರು ತಿನ್ನೋ ಮಜಾನೇ ಬೇರೆ
ಭಾರತೀಯ ಏಡಿ (Crab) ಮೇಲೋಗರದ ಈ ಪಾಕವಿಧಾನವು (Recipe) ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಈ ಮೇಲೋಗರವನ್ನು ಸಾದಾ ಬೇಯಿಸಿದ ಅನ್ನ (Rice) ಮತ್ತು ಚಪಾತಿಯೊಂದಿಗೆ ತಿನ್ನಲು ಉತ್ತಮವಾಗಿರುತ್ತದೆ. ಹಾಗಿದ್ರೆ ಟೇಸ್ಟೀ ಏಡಿ ಸಾರು ತಯಾರು ಮಾಡೋದು ಹೇಗೆ ತಿಳ್ಕೊಳ್ಳೋಣ.
ನಾನ್‌ವೆಜ್ ಪ್ರಿಯರ ಬಾಯಲ್ಲೂ ನೀರೂರಿಸೋ ವೆಜ್ ರೆಸಿಪಿಗಳಿವು
ಏಡಿ ಸಾರು ರೆಸಿಪಿ
ಬೇಕಾಗುವ ಪದಾರ್ಥಗಳು
8 ಏಡಿಗಳು
1 ತುಂಡು ಹುಣಸೆಹಣ್ಣು
1/2 ಕಪ್ ಬಿಸಿ ನೀರು
2 ದೊಡ್ಡ ಈರುಳ್ಳಿ
2 ದೊಡ್ಡ ಟೊಮ್ಯಾಟೊ
10 ಒಣಗಿದ ಕೆಂಪು ಮೆಣಸಿನಕಾಯಿಗಳು
2 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಪೇಸ್ಟ್
1 ಚಮಚ ಶುಂಠಿ ಪೇಸ್ಟ್
1 1/2 ಕಪ್ ತುರಿದ ತೆಂಗಿನಕಾಯಿ
2 ಟೇಬಲ್ ಸ್ಪೂನ್ ಕೊತ್ತಂಬರಿ
2 ಟೇಬಲ್ ಸ್ಪೂನ್ ಜೀರಿಗೆ
1/2 ಟೀಚಮಚ ಅರಿಶಿನ
1/2 ಟೀಚಮಚ ಕೆಂಪು ಮೆಣಸಿನ ಪುಡಿ
2 ಹಸಿರು ಮೆಣಸಿನಕಾಯಿಗಳು (ಸೀಳಿಟ್ಟುಕೊಳ್ಳಿ)
2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
ಉಪ್ಪು, ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಏಡಿಯನ್ನು ಚೆನ್ನಾಗಿ ಶುಚಿಗೊಳಿಸಿ, ಬೇಯಿಸಿಟ್ಟುಕೊಳ್ಳಿ. ಇನ್ನೊಂದೆಡೆ ಸಣ್ಣ ಬಟ್ಟಲಿನಲ್ಲಿ ಹುಣಸೆಹಣ್ಣನ್ನು ನೀರಿನಲ್ಲಿ ಬೆರಸಿಡಿ. ನಂತರ ಈರುಳ್ಳಿ, ಟೊಮೆಟೊ, ಒಣಗಿದ ಕೆಂಪು ಮೆಣಸಿನಕಾಯಿಗಳು, ಬೆಳ್ಳುಳ್ಳಿ ಮತ್ತು ಜಜ್ಜಿದ ಶುಂಠಿ, ತೆಂಗಿನಕಾಯಿ, ಎಲ್ಲಾ ಮಸಾಲೆಗಳು-ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ ಮತ್ತು ಕೆಂಪು ಮೆಣಸಿನ ಪುಡಿ-ಮತ್ತು ಹುಣಸೆ ಹಣ್ಣಿನ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿ.
ಐದೇ ನಿಮಿಷದಲ್ಲಿ ಮಾಡಿ ಕ್ರಿಸ್ಪೀ ಎಗ್ ಕಬಾಬ್
ಮಧ್ಯಮ ಶಾಖದ ಮೇಲೆ ಆಳವಾದ, ಭಾರವಾದ ತಳದ ಪ್ಯಾನ್ ಅನ್ನು ಹೊಂದಿಸಿ. ಪ್ಯಾನ್ ಬಿಸಿಯಾದಾಗ, ಅಡುಗೆ ಎಣ್ಣೆಯನ್ನು ಸೇರಿಸಿ ಮತ್ತು ಎಣ್ಣೆಯನ್ನು ಬಿಸಿ ಮಾಡಿ. ಹಸಿರು ಮೆಣಸಿನಕಾಯಿ ಮತ್ತು ಮಸಾಲಾ ಪೇಸ್ಟ್ ಅನ್ನು ಎಣ್ಣೆಗೆ ಸೇರಿಸಿ ಮತ್ತು 5 ನಿಮಿಷಗಳ ಕಾಲ ಹುರಿಯಿರಿ. ನಂತರ ಇದಕ್ಕೆ 3 ಕಪ್ ಬಿಸಿ ನೀರನ್ನು ಸೇರಿಸಿ. ನೀವು ಎಷ್ಟು ಗ್ರೇವಿ ಬಯಸುತ್ತೀರಿ ಎಂಬುದರ ಆಧಾರದ ಮೇಲೆ ಹೆಚ್ಚು ಅಥವಾ ಕಡಿಮೆ ಬಳಸಿ. ನಂತರ ಈ ಗ್ರೇವಿಯನ್ನು ಚೆನ್ನಾಗಿ ಕುದಿಸಿ. ಬೇಕಾದಷ್ಟು ಉಪ್ಪು ಸೇರಿಸಿಕೊಳ್ಳಿ. ನಂತರ ನಿಧಾನವಾಗಿ ಏಡಿ ತುಂಡುಗಳನ್ನು ಗ್ರೇವಿಗೆ ಸೇರಿಸಿ ಮತ್ತು 10 ನಿಮಿಷಗಳ ಕಾಲ ಮುಚ್ಚಳವಿಲ್ಲದೆ ಬೇಯಿಸಿ. ಸರಳವಾದ ಬೇಯಿಸಿದ ಅಕ್ಕಿ ಅಥವಾ ಜೀರಾ ಅನ್ನದೊಂದಿಗೆ ತಕ್ಷಣವೇ ಬಡಿಸಿ, ಸವಿಯಿರಿ.
ಏಡಿ, ಪ್ರೋಟೀನ್ ಸಮೃದ್ಧ ಆಹಾರವೂ ಆಗಿದೆ. ಜೊತೆಗೆ ಹಲವಾರು ಅಮೈನೋ ಆಮ್ಲಗಳಿದ್ದು ಇವು ಪ್ರೋಟೀನ್ ಉತ್ಪಾದನೆಗೆ ನೆರವಾಗುತ್ತವೆ. ವಿಶೇಷವಾಗಿ, ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಕಡಲೇಡಿ ಅತ್ಯುತ್ತಮ ಆಹಾರವಾಗಿದೆ. ಏಕೆಂದರೆ, ಈ ಪ್ರೋಟೀನ್ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೇ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನೂ ಒದಗಿಸುತ್ತದೆ .