Asianet Suvarna News Asianet Suvarna News

ಗಂಟೆಗಟ್ಟಲೆ ಅಡುಗೆ ಮಾಡೋಕೆ ಬೇಜಾರಾ ? ಐದೇ ನಿಮಿಷದಲ್ಲಿ ಮಾಡಿ ಪಾಪಡ್ ದೋಸೆ

ಕಾಲೇಜು, ಆಫೀಸಿಗೆ ಲೇಟಾಯ್ತು ಅಂದಾಗ ಗಂಟೆಗಟ್ಟಲೆ ಅಡುಗೆ ಮಾಡ್ತಾ ಕೂರೋಕಾಗಲ್ಲ. ಫಟಾಫಟ್‌ ರೆಡಿಯಾಗೋ ಏನನ್ನಾದ್ರೂ ಪ್ರಿಪೇರ್ ಮಾಡ್ಬೇಕು. ಕೆಲವೇ ನಿಮಿಷಗಳಲ್ಲಿ ರೆಡಿಯಾಗೋ ಇಂಥಾ ರೆಸಿಪಿಗಳಲ್ಲೊಂದು ಪಾಪಡ್ ದೋಸೆ ಅದನ್ನು ರೆಡಿ ಮಾಡೋದು ಹೇಗೆ ನಾವ್‌ ಹೇಳ್ತೀವಿ.

Try Papad Dosa When You Dont Have Time For Cooking Vin
Author
First Published Aug 27, 2022, 12:24 PM IST

ಬೆಳಗ್ಗೆ ಎದ್ದಿದ್ದೇ ಲೇಟಾಯ್ತು. ಹಾಗಂತ ಬ್ರೇಕ್‌ಫಾಸ್ಟ್‌ ಮಿಸ್ ಮಾಡೋಕಾಗುತ್ತಾ ? ಏನಾದ್ರೂ ತಿಂಡಿ ಮಾಡಿ ತಿನ್ಲೇಬೇಕು. ಆದ್ರೆ ಕಾಲೇಜಿಗೆ, ಆಫೀಗೆ ಲೇಟಾಗ್ತಿರುವಾಗ ಗಂಟೆಗಟ್ಟಲೆ ತರಕಾರಿ ಹೆಚ್ತಾ ಅಡುಗೆ ಮಾಡೋಕು ಟೈಮಿಲ್ಲ. ಭಾನುವಾರದ ದಿನಗಳಲ್ಲಿ ಹೆಚ್ಚಾಗಿ ಹೀಗೆ ಆಗುತ್ತದೆ. ಲೇಟಾಗಿ ಎದ್ದು ಇಡೀ ರಜಾದಿನವನ್ನು ಅಡುಗೆಯಲ್ಲಿ ಕಳೆಯೋಕಾಗಿಲ್ಲ. ಫಟಾಫಟ್ ಅಂತ ರೆಡಿಯಾಗುವ, ರುಚಿಕರವಾದ ಏನನ್ನಾದರೂ ಸಿದ್ಧಪಡಿಸಬೇಕು. ಅಂಥಾ ಸಿಂಪಲ್ ಆಹಾರಗಳಲ್ಲೊಂದು ಪಾಪಡ್ ದೋಸೆ. ಬಾಣಸಿಗ ಕುನಾಲ್ ಕಪೂರ್ ಈ ವಿಶಿಷ್ಟವಾದ ಪಾಕವಿಧಾನವನ್ನು ಪರಿಚಯಿಸಿದ್ದಾರೆ. 

ದೋಸೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ಲೈನ್ ದೋಸೆಯಾದರೂ ಸರಿ, ಸೆಟ್ ದೋಸೆಯಾದರೂ ಸರಿ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಡಿಫರೆಂಟ್ ಆಗಿರೋ ರವೆ ದೋಸೆ, ಕಾಳಿನ ದೋಸೆ ಸಹ ಚೆನ್ನಾಗಿರುತ್ತದೆ. ಅದೇ ರೀತಿ ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ದೋಸೆಯೆಂದರೆ ಪಾಪಡ್ ದೋಸೆ. ವಾರಾಂತ್ಯದಲ್ಲಿ ಯಾರೂ ಅಡುಗೆಮನೆಯಲ್ಲಿ ಅವ್ಯವಸ್ಥೆ ಮಾಡಲು ಬಯಸುವುದಿಲ್ಲ. ವಾರಾಂತ್ಯದಲ್ಲಿ ಸುಲಭವಾದ ಅಡುಗೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳೋಣ ಎಂದ ಅಂದುಕೊಳ್ಳುತ್ತಾರೆ. ಇಂಥವರು ಸುಲಭವಾಗಿ ಪಾಪಡ್ ದೋಸೆಯನ್ನು ಮಾಡಬಹುದು. ಜನರು ಈಗಾಗಲೇ ಕೆಲವು ಪದಾರ್ಥಗಳನ್ನು ಬದಲಿಸುವ ಮೂಲಕ ಸಾಂಪ್ರದಾಯಿಕ ದೋಸೆಯನ್ನು ತ್ವರಿತವಾಗಿ ಮಾಡುವ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ಇಂದು ನಾವು ಬೇಸನ್ ದೋಸೆ, ಲೌಕಿ ದೋಸೆ, ಸೂಜಿ ದೋಸೆ ಮತ್ತು ಹೆಚ್ಚಿನದನ್ನು ಸವಿಯಲು ಸಾಧ್ಯವಾಗುತ್ತದೆ. ಈ ಪಟ್ಟಿಗೆ ಪಾಪಡ್ ದೋಸೆಯೂ ಸೇರುತ್ತದೆ. 

ಇಲ್ಲಿ ಹೃದಯ, ಹೂವು ಚಿಟ್ಟೆಯ ಆಕಾರದಲ್ಲೂ ಸಿಗುತ್ತೆ ದೋಸೆ: viral video

ಪಾಪಡ್ ದೋಸೆಯ ಸೃಜನಾತ್ಮಕ ಪಾಕವಿಧಾನವನ್ನು ಚೆಫ್ ಕುನಾಲ್ ಕಪೂರ್ ಅವರ ಪರಿಚಯಿಸಿದ್ದಾರೆ. ಈ ಪಾಕವಿಧಾನವು 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಿದ್ಧವಾಗುತ್ತದೆ. ಅದನ್ನು ತಯಾರಿಸುವ ವಿಧಾನ ಹೇಗೆಂದು ತಿಳಿದುಕೊಳ್ಳೋಣ.

 
 
 
 
 
 
 
 
 
 
 
 
 
 
 

A post shared by Kunal Kapur (@chefkunal)

 

ಬೇಕಾದ ಪದಾರ್ಥಗಳು
ಪಾಪಡ್‌ ಒಂದು ಪ್ಯಾಕೆಟ್‌
ಹಸಿಮೆಣಸಿನಕಾಯಿ ಎರಡು
ಈರುಳ್ಳಿ ಒಂದು
ಕ್ಯಾರೆಟ್ ಒಂದು
ಸ್ಪಲ್ಪ ನೀರು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಹಪ್ಪಳವನ್ನು ಕತ್ತರಿಸಿ ಒಂದು ಬೌಲ್‌ಗೆ ಹಾಕಿ ನೀರು ಹಾಕಿ ನೆನೆಸಿಕೊಳ್ಳಿ. ಹತ್ತು ನಿಮಿಷದ ಬಳಿಕ ಇದನ್ನು ನೀರಿನಿಂದ ತೆಗೆದು ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ತಯಾರಿಸಿಕೊಳ್ಳಬಹುದು. ಗರಿಗರಿಯಾದ ಪಾಪಡ್ ದೋಸೆ ಸವಿಯಲು ಸಿದ್ಧವಾಗುತ್ತದೆ. ಹೆಚ್ಚು ಬಿಡುವಿದ್ದರೆ ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್‌ ಮತ್ತು ಹಸಿಮೆಣಸಿನಕಾಯಿಯನ್ನು ಸಹ ಸೇರಿಸಿಕೊಳ್ಳಬಹುದು.  ಬಿಸಿ ಬಿಸಿಯಾದ ಈ ಪಾಪಡ್ ದೋಸೆಯನ್ನು ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ಸವಿಯಬಹುದು. ಬೆಳಗಿನ ಉಪಾಹಾರಕ್ಕಾಗಿ ಈ ಪಾಕವಿಧಾನ ಉತ್ತಮವಾಗಿದೆ. 

ಚಿಕನ್ ದೋಸೆ ರೆಸಿಪಿ

ಪಾಪಡ್‌ ದೋಸೆಯಂತೆಯೇ ಇನ್ನೊಂದು ರುಚಿಕರವಾದ ಆಹಾರವೆಂದರೆ ಚಿಕನ್ ದೋಸೆ. ಅದನ್ನು ತಯಾರಿಸೋದು ಹೇಗೆ ತಿಳ್ಕೊಳ್ಕೋಣ.

ಬೇಕಾದ ಪದಾರ್ಥಗಳು
400 ಗ್ರಾಂ ಕೊಚ್ಚಿದ ಕೋಳಿ ಮಾಂಸ
2 ಮಧ್ಯಮ ಈರುಳ್ಳಿ
1 ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀ ಚಮಚ ಕರಿಮೆಣಸು
1 ಟೀ ಚಮಚ ಜೀರಿಗೆ ಬೀಜಗಳು
1 ಟೀ ಚಮಚ ಶುಂಠಿ ಪೇಸ್ಟ್
2 ಟೇಬಲ್ ಸ್ಪೂನ್ ಎಣ್ಣೆ
ಅಗತ್ಯವಿರುವಷ್ಟು ದೋಸೆ ಹಿಟ್ಟು
ಕರಿಬೇವಿನ ಎಲೆಗಳು
1/2 ಕಪ್ ಟೊಮೆಟೊ 
1/2 ಟೀಚಮಚ ಅರಿಶಿನ
1/2 ಟೀ ಚಮಚ ಗರಂ ಮಸಾಲಾ ಪುಡಿ
1 ಟೀ ಚಮಚ ಬೆಳ್ಳುಳ್ಳಿ ಪೇಸ್ಟ್
ಸ್ಪಲ್ಪಕೊತ್ತಂಬರಿ ಸೊಪ್ಪು
ಅಗತ್ಯವಿರುವಷ್ಟು ಉಪ್ಪು
3/4 ಕಪ್ ನೀರು

ಅಮೇರಿಕಾದಲ್ಲಿ ಸಾದಾ ದೋಸೆ ಹೆಸ್ರು ನೇಕೆಡ್ ಕ್ರೇಪ್ಸ್, ಬೆಲೆ ಭರ್ತಿ 1400 ರೂ.!

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಜೀರಿಗೆ, ಕರಿಬೇವಿನ ಸೊಪ್ಪು, ಶುಂಠಿ ಪೇಸ್ಟ್ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಒಂದು ನಿಮಿಷ ಹುರಿಯಿರಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಇನ್ನೊಂದು ಎರಡು ನಿಮಿಷಗಳ ಕಾಲ ಹುರಿಯಿರಿ. ಈಗ ಟೊಮೆಟೊ ರಸ, ಕೆಂಪು ಮೆಣಸಿನ ಪುಡಿ, ಅರಿಶಿನ, ಕರಿಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ. ಮಸಾಲಾವನ್ನು 3-4 ನಿಮಿಷ ಬೇಯಿಸಲು ಬಿಡಿ. ಈಗ ಕೊಚ್ಚಿದ ಚಿಕನ್ ಅನ್ನು ಕುಕ್ಕರ್‌ಗೆ ಸೇರಿಸಿ ಮತ್ತು ಮಸಾಲಾದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. 3/4 ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ ಮತ್ತು ಮುಚ್ಚಳವನ್ನು ಮುಚ್ಚಿ. 8-10 ನಿಮಿಷ ಬೇಯಿಸಿ.

ಅದರ ನಂತರ, ಇನ್ನೂ ಯಾವುದೇ ನೀರು ಉಳಿದಿದ್ದರೆ, ನೀರನ್ನು ಹೊರಹಾಕಲು 2 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ಇದಕ್ಕೆ ಸಣ್ಣ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ದೋಸೆ ಹಿಟ್ಟನ್ನು ತವಾ ಮೇಲೆ ಹರಡಿ ಮತ್ತು ಎರಡೂ ಬದಿಗಳಿಂದ ಬೇಯಿಸಿ. ಪ್ರತಿ ದೋಸೆಯಲ್ಲಿ 2-3 ಚಮಚ ಮಸಾಲೆಯನ್ನು ತುಂಬಿಸಿ ಮತ್ತು ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸಿ. ಆನಂದಿಸಿ.

Follow Us:
Download App:
  • android
  • ios