ಸಸ್ಯಾಹಾರವೇ ಆರೋಗ್ಯಕ್ಕೆ ಬೆಸ್ಟ್, ಭಾರತವನ್ನೇ ಫಾಲೋ ಮಾಡ್ತಿವೇ ವಿದೇಶಗಳು!

ವಿದೇಶಕ್ಕೆ ಹೋದ್ರೆ ಸಸ್ಯಾಹಾರ ಸಿಗಲ್ಲ, ಇಲ್ಲಿಂದ್ಲೇ ಪ್ಯಾಕ್ ಮಾಡ್ಕೊಂಡು ಹೋಗಿ ಎನ್ನುವ ಮಾತುಗಳನ್ನು ನೀವು ಕೇಳ್ತಿರುತ್ತೀರ. ಆದ್ರೆ ಇದು ಎಲ್ಲ ದೇಶದಲ್ಲೂ ನಿಜವಲ್ಲ. ನಮ್ಮಂತೆ ಸಸ್ಯಹಾರಿಗಳ ಸಂಖ್ಯೆ ಹೆಚ್ಚಿರುವ ಅನೇಕ ದೇಶಗಳಿವೆ. 
 

Top Six Vegetarian Countries In The World indias position roo

ಒಬ್ಬೊಬ್ಬರು ಒಂದೊಂದು ರೀತಿಯ ಆಹಾರಗಳನ್ನು ಇಷ್ಟಪಡುತ್ತಾರೆ. ಅವರವರ ಆಹಾರ ಕ್ರಮಕ್ಕೆ ತಕ್ಕಂತೆ ಅವರನ್ನು ವೆಜಿಟೇರಿಯನ್ ನಾನ್ ವೆಜಿಟೇರಿಯನ್ ಎಂದು ವಿಂಗಡಿಸಬಹುದು. ಖಾರ ಮತ್ತು ಹೆಚ್ಚು ಮಸಾಲೆಗಳನ್ನು ಒಳಗೊಂಡಿರುವ ಮಾಂಸಾಹಾರ ತಿನ್ನುವವರಿಗೆ ಶಾಖಾಹಾರಿ ಊಟ ತೀರ ಸಪ್ಪೆ ಎನಿಸಬಹುದು. ಹಾಗೆಯೇ ಅನೇಕ ಮಂದಿ ಶಾಖಾಹಾರಿಗಳು ನಾನ್ ವೆಜ್ ತಿನ್ನಲು ಇಷ್ಟಪಡೋದಿಲ್ಲ. ಇನ್ಕೆಲವರು ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಯಾವುದೇ ಆಹಾರವನ್ನಾದರೂ ಮಿತವಾಗಿಯೇ ಸೇವಿಸುತ್ತಾರೆ.

ಆಹಾರ (Food) ಕ್ರಮಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಕೆಲವು ಕಡೆ ಸಸ್ಯಾಹಾರಿ (Vegetarian) ಗಳೇ ಹೆಚ್ಚಾಗಿದ್ದರೆ ಕೆಲವು ಕಡೆ ಮಾಂಸ ಪ್ರಿಯರೇ ಹೆಚ್ಚಿರುತ್ತಾರೆ. ಆದರೆ ಆರೋಗ್ಯ (Health)ದ ದೃಷ್ಟಿಯಿಂದ ಸಸ್ಯಾಹಾರ ಸೇವನೆ ಒಳ್ಳೆಯದು ಎನ್ನಲಾಗುತ್ತಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ವರದಿಯು, ಮಾಂಸಾಹಾರ ಸೇವಿಸುವವರಿಗಿಂತ ಸಸ್ಯಾಹಾರಿ ಆಹಾರ ಸೇವಿಸುವವರಲ್ಲಿ ಹೃದಯಾಘಾತ ಸೇರಿದಂತೆ ಅನೇಕ ರೋಗಗಳು ಕಡಿಮೆ ಎಂದು ಹೇಳಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ ವಿಶ್ವದಲ್ಲಿ ಅತಿ ಹೆಚ್ಚು ಸಸ್ಯಾಹಾರ ಸೇವಿಸುವ 6 ಅಗ್ರ ದೇಶಗಳನ್ನು ಪಟ್ಟಿ ಮಾಡಿದೆ.

ಈ ಜೈಲು ಕ್ಯಾಂಟೀನ್‌ಗಳಲ್ಲಿ ಸಿಗುತ್ತೆ ಐಸ್‌ಕ್ರೀಂ, ಪಾನಿಪುರಿ: ಅರೋಪಿಗಳಿಗೆ ಬರ್ಮುಡಾ ಚಡ್ಡಿ, ಟಿ ಶರ್ಟ್‌!

ಸಸ್ಯಾಹಾರ ಸೇವಿಸುವವರಲ್ಲಿ ಭಾರತಕ್ಕೆ ಮೊದಲ ಸ್ಥಾನ  : ಭಾರತದ ಅನೇಕ ಕಡೆಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿಗಳೇ ಆಗಿದ್ದಾರೆ. ಇಲ್ಲಿ ಪ್ರತಿಶತ 38 ರಷ್ಟು ಮಂದಿ ಸಸ್ಯಾಹಾರಿ ಆಹಾರವನ್ನೇ ತಿನ್ನುತ್ತಾರೆ. ಹರಿಯಾಣ ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಅತಿ ಹೆಚ್ಚು ಮಂದಿ ಶಾಖಾಹಾರಿಗಳೇ ಇದ್ದಾರೆ. ಆದ್ದರಿಂದ ಸಸ್ಯಾಹಾರ ಸೇವನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಸಸ್ಯಾಹಾರಿಗಳ ಪೈಕಿ ಎರಡನೇ ಸ್ಥಾನವನ್ನು ಇಸ್ರೇಲ್ ಪಡೆದುಕೊಂಡಿದೆ. ಇಸ್ರೇಲ್ ನಲ್ಲಿ ವಾಸಿಸುವ ಪ್ರತಿಶತ 13 ರಷ್ಟು ಮಂದಿ ಸಸ್ಯಾಹಾರವನ್ನೇ ಸೇವಿಸುತ್ತಾರೆ. ನಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರಾಣಿಗನ್ನು ಹತ್ಯೆ ಮಾಡುವುದು ಸರಿಯಲ್ಲ ಎನ್ನುವುದು ಅಲ್ಲಿನ ಜನರ ನಂಬಿಕೆಯಾಗಿದೆ. ಶಾಖಾಹಾರವನ್ನು ಹೆಚ್ಚು ಸೇವಿಸುವ ದೇಶಗಳ ಪೈಕಿ ಥೈವಾನ್ ಮೂರನೇ ಸ್ಥಾನದಲ್ಲಿದೆ. ಥೈವಾನ್ ನಲ್ಲಿ ಪ್ರತಿಶತ 12 ಕ್ಕಿಂತ ಹೆಚ್ಚಿನ ಜನರು ತರಕಾರಿಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಇಲ್ಲಿ ಅನೇಕ ಸಸ್ಯಾಹಾರಿ ರೆಸ್ಟೋರೆಂಟ್ ಗಳು ಕೂಡ ಇವೆ. ಸಾಮಾನ್ಯವಾಗಿ ಇಲ್ಲಿ ಎಡಮುಖದ ಸ್ವಸ್ತಿಕದಿಂದ ಆಹಾರ ಪದಾರ್ಥಗಳನ್ನು ಗುರುತಿಸಲಾಗುತ್ತದೆ.

ಇಲ್ಲಿ ನಡೆಯುತ್ತೆ ಭೂತದ ಮದುವೆ, ಹೆಣ್ಣು ಶವಕ್ಕಿರುತ್ತೆ ಭಾರೀ ಬೇಡಿಕೆ, ಮಗಳ ಕಳೇಬರವನ್ನೇ ಮಾರಿದ ಅಪ್ಪ!

ವಿದೇಶಗಳಲ್ಲಿಯೂ ಶಾಖಾಹಾರಿಗಳೇ ಹೆಚ್ಚು :  ಶಾಖಾಹಾರ ಸೇವನೆ ಮಾಡುವವರಲ್ಲಿ ನಾಲ್ಕನೇ ಸ್ಥಾನವನ್ನು ಇಟಲಿ ಪಡೆದಿದೆ. ಇಟಲಿಯಲ್ಲಿ ಪ್ರತಿಶತ 10 ರಷ್ಟು ಮಂದಿ ವೆಜ್ ಆಹಾರಗಳನ್ನು ಸೇವಿಸುತ್ತಾರೆ. ಇಟಲಿ ನಾನ್ ವೆಜ್ ಆಹಾರಕ್ಕೆ ಪ್ರಖ್ಯಾತವಾಗಿದ್ದರೂ ಕೂಡ ಅಲ್ಲಿ ಈಗ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಪಿಯು ಸಂಶೋಧನೆಯ ವರದಿಯ ಕೂಡ ಇಟಲಿಯಲ್ಲಿ ವೆಜ್ ತಿನ್ನುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಹೇಳಿದೆ. ಸಸ್ಯಾಹಾರಗಳನ್ನು ಹೆಚ್ಚು ಸೇವಿಸುವವರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಐದನೇ ಸ್ಥಾನದಲ್ಲಿದೆ. ಇಲ್ಲಿನ ಶೇಕಡಾ 9ರಷ್ಟು ಮಂದಿ ಜನರು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇಲ್ಲಿನ ಆಹಾರವು ಹೆಚ್ಚು ಸಿಹಿಯಾಗಿರುತ್ತದೆ ಮತ್ತು ಅನೇಕ ಬಗೆಯ ಪದಾರ್ಥಗಳನ್ನು ಒಳಗೊಂಡಿರುತ್ತದೆ.

ವಿದೇಶಗಳಲ್ಲಿ ಹೆಚ್ಚು ಮಾಂಸಾಹಾರವನ್ನೇ ಸೇವಿಸುತ್ತಾರೆ ಎನ್ನುವ ಭಾವನೆ ಅನೇಕರಿಗಿರುತ್ತದೆ. ಆದರೆ ಈಗೀಗ ಹೆಚ್ಚಿನ ಮಂದಿ ಆರೋಗ್ಯದ ಹಿತದೃಷ್ಟಿಯಿಂದ ಮಾಂಸಾಹಾರವನ್ನು ತ್ಯಜಿಸುತ್ತಿದ್ದಾರೆ. ಮಾಂಸಾಹಾರಗಳಲ್ಲಿರುವ ಕೊಬ್ಬು ಹಾಗೂ ಅದರಿಂದ ಆರೋಗ್ಯಕ್ಕಾಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಮಂದಿ ಮಾಂಸಾಹಾರ ತಿನ್ನೋದಿಲ್ಲ. ಜರ್ಮನಿಯಲ್ಲಿ ಕೂಡ ಅನೇಕ ಮಂದಿ ಮಾಂಸಾಹಾರಗಳನ್ನು ಇಷ್ಟಪಡುತ್ತಾರೆ. ಆದರೆ ಅಲ್ಲಿನ ಪ್ರತಿಶತ 9 ರಷ್ಟು ಮಂದಿ ಇಂದಿಗೂ ಶಾಖಾಹಾರಿ ಆಹಾರವನ್ನೇ ಅವಲಂಬಿಸಿಕೊಂಡಿದ್ದಾರೆ. ಇದರಿಂದ ಜರ್ಮನಿ ಹೆಚ್ಚು ಸಸ್ಯಾಹಾರ ಸೇವಿಸುವ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
 

Latest Videos
Follow Us:
Download App:
  • android
  • ios