ತಾಯಿಗಾಗಿ ದುಬೈನಿಂದ 10 ಕೆಜಿ ಟೊಮೆಟೊ ತಂದ ಮಗಳು, ವರ್ಷದ ಬೆಸ್ಟ್‌ ಡಾಟರ್ ನೀನಮ್ಮ ಎಂದ ನೆಟ್ಟಿಗರು

ದೇಶದೆಲ್ಲೆಡೆ ಟೊಮೇಟೋ ಬೆಲೆ ಗಗನಕ್ಕೇರಿದೆ. ಹೀಗಾಗಿಯೇ ಟೊಮೆಟೋ ಕುರಿತಾದ ಫನ್ನಿ ನ್ಯೂಸ್‌ಗಳು ಸುದ್ದಿಯಾಗ್ತಾನೆ ಇವೆ. ಟೊಮೆಟೋ ಕಾಯಲು ಸೆಕ್ಯುರಿಟಿ ಕಾರ್ಡ್‌, ಅಂಗಡಿಗಳಲ್ಲಿ ಉತ್ಪನ್ನ ಕೊಂಡ್ರೆ ಟೊಮೆಟೋ ಫ್ರೀ ಮೊದಲಾದ ವಿಚಾರ ವೈರಲ್ ಆಗ್ತಿದೆ. ಇವೆಲ್ಲದರ ಮಧ್ಯೆ ಇಲ್ಲೊಬ್ಬ ಮಹಿಳೆ ತನ್ನ ತಾಯಿಯ ಡಿಮ್ಯಾಂಡ್ ಮೇರೆಗೆ ದುಬೈನಿಂದ  10 ಕೆಜಿ ಟೊಮ್ಯಾಟೊ ಹೊತ್ತು ತಂದಿದ್ದಾಳೆ.

Tomato price hike, Dubai based Daughter brings 10 kg Tomatoes to India Vin

ಸದ್ಯ ಎಲ್ಲಿ ನೋಡಿದ್ರೂ ಟೊಮೆಟೋದೆ ಸುದ್ದಿ. ದಿಢೀರ್ ಅಂತ ಟೊಮೆಟೋ ಬೆಲೆಯೇರಿಕೆ ಆಗಿದ್ದೇ ತಡ ಸಾಮಾನ್ಯ ತರಕಾರಿಯಾಗಿದ್ದ ಟೊಮೆಟೋ ಗತ್ತು, ಗಮ್ಮತ್ತೇ ಬೇರೆ ಆಗಿದೆ. ಟೊಮೆಟೋ ಕುರಿತಾದ ಫನ್ನಿ ನ್ಯೂಸ್‌ಗಳು ಸುದ್ದಿಯಾಗ್ತಾನೆ ಇವೆ. ಟೊಮೆಟೋ ಇದ್ದವನೇ ಆಗರ್ಭ ಶ್ರೀಮಂತ ಅಂತ ಜನ್ರು ಮಾತನಾಡಿಕೊಳ್ತಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೆಟೋ ಕಾಯಲು ಸೆಕ್ಯುರಿಟಿ ಕಾರ್ಡ್‌, ಗದ್ದೆಗಳಲ್ಲೂ ಸೆಕ್ಯುರಿಟಿ ಗಾರ್ಡ್‌, ಅಂಗಡಿಗಳಲ್ಲಿ ಉತ್ಪನ್ನ ಕೊಂಡ್ರೆ ಟೊಮೆಟೋ ಫ್ರೀ ಮೊದಲಾದ ವಿಚಾರ ವೈರಲ್ ಆಗ್ತಿದೆ. ಇವೆಲ್ಲದರ ಮಧ್ಯೆ ಇಲ್ಲೊಬ್ಬ ಮಹಿಳೆ ತನ್ನ ತಾಯಿಯ ಡಿಮ್ಯಾಂಡ್ ಮೇರೆಗೆ ದುಬೈನಿಂದ  10 ಕೆಜಿ ಟೊಮ್ಯಾಟೊ ಹೊತ್ತು ತಂದಿರೋ ವಿಚಾರ ವೈರಲ್ ಆಗ್ತಿದೆ. 

ತಾಯಿಯ ಕೋರಿಕೆಯ ಮೇರೆಗೆ ಮಹಿಳೆ ದುಬೈನಿಂದ ಭಾರತಕ್ಕೆ 10 ಕೆಜಿ ಟೊಮೆಟೋವನ್ನು ಹೊತ್ತು ತಂದಿದ್ದಾರೆ ಎಂದು ಮಾಡಿರೋ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರು ಭಾರತದಲ್ಲಿ ತಮ್ಮ ತಾಯಿಗೆ (Mother) ದುಬೈ ಮೂಲದ ಸಹೋದರಿ ನೀಡಿರುವ ಕಾಸ್ಟ್ಲೀ ಉಡುಗೊರೆ (Costly gift) ಬಗ್ಗೆ ಹೇಳಿದ್ದಾರೆ. 

ಅನುಮತಿ ಇಲ್ಲದೆ ಅಡುಗೆಗೆ 2 ಟೊಮೆಟೊ ಬಳಸಿದ ಪತಿ, ರಂಪಾಟ ಮಾಡಿ ಮನೆಬಿಟ್ಟು ಹೊರಟ ಪತ್ನಿ!

ದುಬೈನಿಂದ ಭಾರತಕ್ಕೆ 10 ಕೆಜಿ ಟೊಮೆಟೋ ತಂದ ಮಹಿಳೆ
ಕಳೆದ ಕೆಲವು ವಾರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ (Tomato price hike). ದೇಶದ ಕೆಲವು ಭಾಗಗಳಲ್ಲಿ ಟೊಮೆಟೋ ಕೆಜಿಗೆ 250 ರೂ. ಆಗಿರುವುದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ. ಅದರಲ್ಲೂ ಭಾರತೀಯ ಪಾಕಪದ್ಧತಿಯಲ್ಲಿ ಟೊಮೆಟೋ ಅತೀ ಅಗತ್ಯವಾದ ತರಕಾರಿಯಾಗಿರುವ ಕಾರಣ ಗೃಹಿಣಿಯರು ಕಂಗಾಲಾಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಜನರು ತಮ್ಮ NRI ಸಂಬಂಧಿಕರಿಗೆ ಉಡುಗೊರೆಗಳ ಬದಲಿಗೆ ಟೊಮೆಟೊಗಳನ್ನು ತೆಗೆದುಕೊಂಡು ಬರಲು ಕೇಳಿಕೊಳ್ಳುತ್ತಿದ್ದಾರೆ.  ಇಂಥಾ ಒಂದು ಘಟನೆಯ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ದುಬೈ ಮೂಲದ ಮಗಳು (Daughter) ಭಾರತದಲ್ಲಿನ ತನ್ನ ತಾಯಿಗೆ ಐಷಾರಾಮಿ ಶಾಪಿಂಗ್‌ಗೆ ಹೆಸರುವಾಸಿಯಾದ ಯುಎಇ ನಗರದಿಂದ ಏನು ತರಬೇಕು ಎಂದು ಕೇಳಿದಳು. ಈ ಸಂದರ್ಭದಲ್ಲಿ ತಾಯಿ 10 ಕಿಲೋಗ್ರಾಂಗಳಷ್ಟು ಟೊಮೆಟೊ ತರಲು ಹೇಳಿದರು.'ರೆವ್ಸ್' ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. 'ನನ್ನ ತಂಗಿ ಮಕ್ಕಳ ಬೇಸಿಗೆ ರಜೆಯ ನಿಮಿತ್ತ ದುಬೈನಿಂದ ಭಾರತಕ್ಕೆ ಬರುತ್ತಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಪ್ರತಿ ಬಾರಿಯಂತೆ ದುಬೈನಿಂದ ಏನಾದರೂ ತರಬೇಕೆ ಎಂದು ನನ್ನ ಅಮ್ಮನನ್ನು ಕೇಳಿದಳು. ಅಚ್ಚರಿಯೆಂಬಂತೆ ನನ್ನ ತಾಯಿ 10 ಕಿಲೋ ಟೊಮೆಟೊ ತರುವಂತೆ ಹೇಳಿದರು. ಹಾಗಾಗಿ ಈಗ ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮೆಟೋ ಪ್ಯಾಕ್ ಮಾಡಿ ಕಳುಹಿಸಿದ್ದಾಳೆ' ಎಂದು ಟ್ವೀಟ್ ಮಾಡಿದ್ದಾರೆ.

ಟೊಮೆಟೋ ಹಣ್ಣಿನ ರಾಶಿ ಮಧ್ಯದಲ್ಲಿ ಸರ್ಪರಾಜ: ಮುಟ್ಟಲು ಹೋದವರನ್ನೇ ಕಚ್ಚಲು ಬಂದ ಹಾವು..!

ವರ್ಷದ ಬೆಸ್ಟ್ ಡಾಟರ್‌ ಅವಾರ್ಡ್‌ ಇವರಿಗೇ ಸಿಗಬೇಕು ಎಂದು ನೆಟ್ಟಿಗರ ಕಾಮೆಂಟ್
ಸೋಷಿಯಲ್ ಮೀಡಿಯಾದಲ್ಲಿ ಟೊಮೆಟೋ ಕುರಿತಾಗಿರುವ ಈ ಪೋಸ್ಟ್ ಸಖತ್ ವೈರಲ್ ಆಗಿದೆ. 700ಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. 52 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್‌ನ್ನು ವೀಕ್ಷಿಸಿದ್ದಾರೆ. ಟೊಮೆಟೋ ಬೆಲೆಯೇರಿಕೆಯ ಸಮಯದಲ್ಲಿ ದುಬೈನಲ್ಲಿರುವ ಮಕ್ಕಳ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಪೋಸ್ಟ್‌ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, ;ಇಷ್ಟೆಲ್ಲಾ ಟೊಮೆಟೋವನ್ನು ನೀವು ಹೇಗೆ ಬಳಕೆ ಮಾಡಿದಿರಿ, ಹಾಳಾಗಲಿಲ್ಲವೇ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಟೊಮೆಟೋವನ್ನು ಚಟ್ನಿ, ಉಪ್ಪಿನಕಾಯಿ (Pickle) ಮಾಡಿ ಸ್ಟೋರ್ ಮಾಡಿಡಬಹುದು' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ವರ್ಷದ ಬೆಸ್ಟ್ ಡಾಟರ್‌ ಅವಾರ್ಡ್‌ ಇವರಿಗೇ ಸಿಗಬೇಕು' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, 'ಇಷ್ಟು ಬೆಲೆಬಾಳುವ ವಸ್ತುವನ್ನು ತಂದಿದ್ದಾಗಿ ನಿಮ್ಮ ತಂಗಿಯನ್ನು ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿಲ್ಲ ತಾನೇ' ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. 

ಇನ್ನೊಬ್ಬ ಬಳಕೆದಾರರು, 'ಆ ತಾಯಿ ಭಾರತದಲ್ಲಿ ಟೊಮೆಟೋ ಬೆಲೆ ಕಡಿಮೆಯಾಗುವ ವರೆಗೂ ದುಬೈನಲ್ಲಿ ವಾಸಿಸಬಹುದಲ್ಲವೇ' ಎಂದಿದ್ದಾರೆ. ಮತ್ತೊಬ್ಬರು, 'ಭಾರತದ ಮಂದಿ ರಫ್ತು-ಆಮದು ಎಂಬ ಲಿಂಕ್‌ನ್ನು ಹೇಗೆ ತೊಂದರೆಗೆ ಒಳಪಡಿಸುತ್ತಿದ್ದಾರೆ ನೋಡಿ' ಎಂದು ಟೀಕಿಸಿದ್ದಾರೆ. ಒಟ್ನಲ್ಲಿ ವೈರಲ್ ಆಗಿರೋ ಈ ಟ್ವೀಟ್ ಎಲ್ಲರ ಗಮನಸೆಳೆದಿರೋದಂತೂ ನಿಜ. 

Latest Videos
Follow Us:
Download App:
  • android
  • ios