Asianet Suvarna News Asianet Suvarna News

ವೆರೈಟಿ ಫುಡ್ ಕಂಡ್ರೆ ಭಯ ! ಭರ್ತಿ 10 ವರ್ಷ ಪಾಸ್ತಾ ಬಿಟ್ಟು ಬೇರೆನೂ ತಿಂದೇ ಇಲ್ಲ ಈಕೆ

ಹೊಸ ಹೊಸ ಆಹಾರಗಳನ್ನು ತಿನ್ನೋಕೆ ಯಾರ್ ತಾನೇ ಇಷ್ಟಪಡಲ್ಲ ಹೇಳಿ. ವೆರೈಟಿ ವೆರೈಟಿ ಫುಡ್‌ನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಇಲ್ಲೊಬ್ಬನ ಕಥೆ ಕೇಳಿ. ಇವ್ನಿಗೆ ಹೊಸ ಫುಡ್ ಟೇಸ್ಟ್ ಮಾಡೋದು ಅಂದ್ರೇನೆ ಭಯ ಅಂತೆ. ಹೀಗಾಗಿ ಬರೋಬ್ಬರಿ 10 ವರ್ಷದಿಂದ ಬರೀ ಪಾಸ್ತಾ ತಿಂದ್ಕೊಂಡೇ ಇದ್ದಾನೆ. 

This Teenager Ate Plain Pasta And Croissants For A Decade Vin
Author
First Published Nov 16, 2022, 1:22 PM IST

ಭಾರತೀಯರು ಸ್ವಭಾತಹಃ ಆಹಾರ ಪ್ರಿಯರು. ವೆರೈಟಿ ವೆರೈಟಿ ಆಹಾರ (Food)ಗಳನ್ನು ಟೇಸ್ಟ್ ಮಾಡೋಕೆ ಇಷ್ಟಪಡ್ತಾರೆ. ಆಹಾರದಲ್ಲಿ ಹಲವು ಆಯ್ಕೆಗಳಿವೆ. ಸಸ್ಯಾಹಾರಿ (Vegetarian), ಮಾಂಸಾಹಾರಿ (Non-vegetarian), ಚಾಟ್ಸ್‌, ಸಲಾಡ್‌, ರೈಸ್, ಸ್ನ್ಯಾಕ್ಸ್ ಹೀಗೆ ಹಲವು. ಫುಡ್ಡೀಗಳನ್ನು ಹೊಸ ಹೊಸ ಲೊಕೇಶನ್‌ಗಳಿಗೆ ಹೋಗಿ ಇವೆಲ್ಲವನ್ನು ಸವಿದು ಬರ್ತಾರೆ. ಇತ್ತೀಚಿಗೆ ಎಲ್ಲಾ ದೇಶದ ಆಹಾರಗಳು ಎಲ್ಲಾ ಕಡೆಯೂ ಲಭ್ಯವಿರುವ ಕಾರಣ ಸುಲಭವಾಗಿ ಎಲ್ಲವನ್ನೂ ಸವಿಯಲು ಸಾಧ್ಯವಾಗುತ್ತದೆ. ಆಹಾರಲ್ಲಿ ಹಲವು ವೆರೈಟಿಯಿದ್ದರೂ ಎಲ್ಲರೂ ಎಲ್ಲವನ್ನೂ ಸವಿಯಲು ಇಷ್ಟಪಡುವುದಿಲ್ಲ. ಕೆಲವೊಬ್ಬರು ಫುಡ್ ಎಕ್ಸ್‌ಪರಿಮೆಂಟ್ ಮಾಡಿದರೆ, ಇನ್ನು ಕೆಲವರು ನಿರ್ಧಿಷ್ಟ ಆಹಾರಗಳಿಗೆ ಒಗ್ಗಿಹೋಗಿದ್ದು ಅದನ್ನು ಮಾತ್ರ ಸವಿಯಲು (Taste) ಇಷ್ಟಪಡುತ್ತಾರೆ.

ಹೊಸ ಆಹಾರದ ಭಯದಿಂದ 10 ವರ್ಷ ಪಾಸ್ತಾವನ್ನೇ ತಿಂದ್ಲು
ಹಾಗೆಯೇ, ಸಿಯಾರಾ ಫ್ರಾಂಕೋ ಎಂದು ಗುರುತಿಸಲಾದ 13 ವರ್ಷದ ಹುಡುಗಿ ಸುಮಾರು ಒಂದು ದಶಕದಿಂದ ಪ್ಲೈನ್ ಪಾಸ್ತಾ ತಿನ್ನುತ್ತಿದ್ದಾಳಂತೆ. ಆಕೆ ಬೇರೆ ಆಹಾರ ಟೇಸ್ಟ್ ಮಾಡದಿರಲು ಕಾರಣ ಹೊಸ ಆಹಾರದ ಭಯವಂತೆ. ಫ್ರಾಂಕೋ ಅವರ ವಿಚಿತ್ರವಾದ ಆಹಾರ ಅಭ್ಯಾಸಗಳು (Habit) ಅವಳು ಅಂಬೆಗಾಲಿಡುವವನಾಗಿದ್ದಾಗ ಪ್ರಾರಂಭವಾಯಿತು. ಅವಳು ಒಮ್ಮೆ ಊಟ ಸೇವಿಸಿದಾಗ ಉಸಿರುಗಟ್ಟಿದಂತಾಯಿತು ಮತ್ತು ಅಂದಿನಿಂದ ಬೇರೆ ಯಾವುದೇ ಆಹಾರವನ್ನು ಸೇವಿಸಲು ನಿರಾಕರಿಸಿದಳು. ಅವಳು ಊಟಕ್ಕೆ ಪಾಸ್ತಾವನ್ನಷ್ಟೇ ಸೇವಿಸಲು ಆರಂಭಿಸಿದಳು. ತನ್ನ ಮಗಳ ಆಹಾರದ ಆಯ್ಕೆಗಳ ಬಗ್ಗೆ ಮಾತನಾಡುತ್ತಾ ಫ್ರಾಂಕೋ ಅವರ ತಾಯಿ ಏಂಜೆಲಾ ಈ ಮಾಹಿತಿ ನೀಡಿದ್ದಾರೆ. ಮಗಳು ಸಾಂದರ್ಭಿಕವಾಗಿ ಕಾರ್ನ್‌ಫ್ಲೇಕ್‌ಗಳನ್ನು ತಿನ್ನುತ್ತಾರೆ. ಆದರೆ ಅದು ತುಂಬಾ ವಿರಳ ಎಂದಿದ್ದಾರೆ.

ಅಡುಗೆ ರುಚಿಗೆ ಮಾತ್ರವಲ್ಲ, ಮನುಷ್ಯನ ದೇಹಕ್ಕೂ ಬೇಕು ಉಪ್ಪು, ಕಡಿಮೆಯಾದ್ರೆ ಕಾಡುತ್ತೆ ರೋಗ

ಮಗಳ ಅಚಲ ಮನಃಸ್ಥಿತಿಯ ನಡುವೆಯೂ ಆಕೆಯ ತಾಯಿ ವಿವಿಧ ಆಹಾರಗಳನ್ನು ಪರಿಚಯಿಸಲು ಪ್ರಯತ್ನಿಸಿದರು. ಆದರೂ ಫ್ರಾಂಕೋ ಯಾವುದೇ ಆಹಾರವನ್ನು ತಿನ್ನಲು ಇಷ್ಟಪಡಲ್ಲಿಲ್ಲ. ನಂತರ, ಅವರು ಡೇವಿಡ್ ಕಿಲ್ಮುರಿ ಎಂಬ ಸಂಮೋಹನ ಚಿಕಿತ್ಸಕರನ್ನು ಸಂಪರ್ಕಿಸಿದರು. ಮಗಳ ಫುಡ್ ಫೋಬಿಯಾದ ಕುರಿತು ಅವರೊಂದಿಗೆ ಚರ್ಚಿಸಿದರು.

ಸಂಮೋಹನ ಚಿಕಿತ್ಸಕನೊಂದಿಗಿನ (Hypnosis Treatment)  ಒಂದೆರಡು ಅವಧಿಗಳು ಫ್ರಾಂಕೋ ಅವರ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದವು. ಆಕೆಯ ಹಿಪ್ನೋಥೆರಪಿಯಿಂದ ಅವಳು ಹಲವಾರು ಹೊಸ ಆಹಾರಗಳನ್ನು ಪ್ರಯತ್ನಿಸಿದ್ದಾಳೆ. ಚೈನೀಸ್ ಟೇಕ್‌ಅವೇ ಮತ್ತು ಅನಾನಸ್‌ನಂತಹ ಹಣ್ಣುಗಳಂತಹ ವಿವಿಧ ಹೊಸ ಆಹಾರಗಳನ್ನು ಪ್ರಯತ್ನಿಸಲು ಆಕೆಗೆ ಸಾಧ್ಯವಾಯಿತು ಎಂದು ಫ್ರಾಂಕೋ  ತಾಯಿ ತಿಳಿಸಿದರು.

Food Trend: ಜಿಲೇಬಿ ಸವಿಯೋಕೆ ಆಲೂಗಡ್ಡೆ ಸಾರು, ಇದೆಂಥಾ ಅಸಹ್ಯ ಎಂದ ನೆಟ್ಟಿಗರು

ಏಂಜೆಲಾ ಮಗಳು ಹೊಸ ರುಚಿ (Taste)ಗಳನ್ನು ಟೇಸ್ಟ್ ಮಾಡಿದ್ದಕ್ಕೆ ಭಾವುಕರಾಗಿದ್ದಾರೆ. ಹತ್ತು ವರ್ಷಗಳಿಂದ ಬರೀ ಪಾಸ್ತಾಗಳನ್ನೇ ತಿನ್ನುತ್ತಿದ್ದ ಮಗಳ ಆಹಾರ ಲಿಸ್ಟ್‌ನಲ್ಲೀಗ ಸಿಹಿ ಮತ್ತು ಹುಳಿ ಚಿಕನ್, ಮಸಾಲೆಯೊಂದಿಗೆ ಹುರಿದ ಆಲೂಗಡ್ಡೆ (Potato) ಮತ್ತು ಅನಾನಸ್ ಕೂಡ ಸೇರಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios