ಅಡುಗೆ ರುಚಿಗೆ ಮಾತ್ರವಲ್ಲ, ಮನುಷ್ಯನ ದೇಹಕ್ಕೂ ಬೇಕು ಉಪ್ಪು, ಕಡಿಮೆಯಾದ್ರೆ ಕಾಡುತ್ತೆ ರೋಗ
ಅಯೋಡಿನ್ ದೇಹಕ್ಕೆ ಬಹಳ ಮುಖ್ಯ. ದೇಹದಲ್ಲಿ ಅಯೋಡಿನ್ ಪ್ರಮಾಣ ಕಡಿಮೆಯಾದ್ರೆ ಸಾಕಷ್ಟು ಅನಾರೋಗ್ಯವನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಅಯೋಡಿನ್ ಕಡಿಮೆಯಾಗಿದೆ ಎಂಬುದನ್ನು ತಿಳಿಯಲು ನಾನಾ ವಿಧಾನಗಳಿವೆ. ಹಾಗೆ ಅಯೋಡಿನ್ ಹೆಚ್ಚಿಸಲು ಅನೇಕ ಆಹಾರ ನೆರವಿಗೆ ಬರುತ್ತದೆ.
ಆಹಾರಕ್ಕೆ ಉಪ್ಪಿಲ್ಲ ಅಂದ್ರೆ ಹೆಂಗೆ ಅಲ್ವಾ? ಉಪ್ಪಿಗಿಂತ ರುಚಿ ಬೇರೆ ಎಲ್ಲ ಎಂಬ ಗಾದೆನೆ ಇದೆ. ಸಿಹಿ ಪದಾರ್ಥಕ್ಕೆ ಕೂಡ ಚಿಟಕಿ ಉಪ್ಪು ಹಾಕಿದ್ರೆ ರುಚಿ ಹೆಚ್ಚಾಗುತ್ತದೆ. ಈ ಉಪ್ಪು ನಮ್ಮ ದೇಹಕ್ಕೆ ಹೆಚ್ಚಾದ್ರೂ ಕಷ್ಟ, ಕಡಿಮೆಯಾದ್ರೂ ಕಷ್ಟ. ಇದ್ರಲ್ಲಿ ಏರುಪೇರಾದ್ರೆ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಭಾರತದಲ್ಲಿ ಉಪ್ಪಿನ ಪ್ರಮಾಣ ಅಂದ್ರೆ ಅಯೋಡಿನ್ ಕಡಿಮೆಯಾಗಿ ಬಳಲುತ್ತಿರುವವ ಸಂಖ್ಯೆ ಹೆಚ್ಚಿದೆ.
ಜನರಲ್ ಆಫ್ ಫ್ಯಾಮಿಲಿ ಮೆಡಿಸಿನ್ ಮತ್ತು ಪ್ರೈಮರಿ ಕೇರ್ ಪ್ರಕಾರ, ಭಾರತ (India) ದಲ್ಲಿ 200 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಯೋಡಿನ್ (Iodine) ಕೊರತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಐಡಿಡಿ ಅಪಾಯ ಹೆಚ್ಚಿದೆ. 7 ಕೋಟಿಗೂ ಹೆಚ್ಚು ಜನರು ಗಳಗಂಡ ಸೇರಿದಂತೆ ಕೆಲ ರೋಗ (Disease) ದಿಂದ ಬಳಲುತ್ತಿದ್ದಾರಂತೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ವಿಶ್ವದಲ್ಲಿ 2 ಶತಕೋಟಿಗೂ ಹೆಚ್ಚು ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಅಯೋಡಿನ್ ಕೊರತೆಯು ವಿಶೇಷವಾಗಿ ಬಡ ದೇಶಗಳಲ್ಲಿ ಕಂಡುಬರುತ್ತದೆ. ಅಲ್ಲಿನ ಜನರು ಅಪೌಷ್ಟಿಕ ಆಹಾರ ಸೇವನೆ ಮಾಡ್ತಾರೆ. ಮತ್ತೆ ಕೆಲ ಶ್ರೀಮಂತ ದೇಶಗಳಲ್ಲಿ ಈ ಸಮಸ್ಯೆ ಕಾಡಲು ಕಾರಣ ಅವರ ತಪ್ಪಾದ ಆಹಾರ ಪದ್ಧತಿ ಎನ್ನುತ್ತಾರೆ ತಜ್ಞರು. ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಿಂತ ಗರ್ಭಿಣಿ (Pregnant) ಗೆ ಹೆಚ್ಚು ಅಯೋಡಿನ್ ಅಗತ್ಯವಿರುತ್ತದೆ. ಅಯೋಡಿನ್ ಸಮಸ್ಯೆಯಾದ್ರೆ ಗರ್ಭಿಣಿ ಕೆಲ ಸಮಸ್ಯೆ ಎದುರಿಸಬೇಕಾಗುತ್ತದೆ.
ಅಡೋಯಿನ್ ಕಡಿಮೆಯಾದ್ರೆ ಶರೀರದಲ್ಲಿ ಕಾಡುತ್ತೆ ಈ ಸಮಸ್ಯೆ : ನಮ್ಮ ದೇಹದಲ್ಲಿ ಅಯೋಡಿನ್ ಕಡಿಮೆಯಾದ್ರೆ ಕೆಲ ಸಂಕೇತದ ಮೂಲಕ ನಾವು ಪತ್ತೆ ಮಾಡಬಹುದು. ನಿಮ್ಮ ಕೂದಲು ವಿಪರೀತ ಉದರುತ್ತಿದ್ದರೆ ಅಥವಾ ಚರ್ಮ ಶುಷ್ಕಗೊಂಡಿದ್ದರೆ, ತೂಕ ಹೆಚ್ಚಾಗ್ತಿದ್ದರೂ ನಿಶಕ್ತಿ ನಿಮ್ಮನ್ನು ಕಾಡ್ತಿದ್ದರೆ ನಿಮ್ಮ ದೇಹದಲ್ಲಿ ಅಯೋಡಿನ್ ಕಡಿಮೆಯಾಗಿದೆ ಎಂದು ಅರ್ಥೈಸಿಕೊಳ್ಳಿ. ಇದಲ್ಲದೆ ಹೆಚ್ಚು ನಿದ್ರೆ ಬರುವುದು, ಹೃದಯಾಘಾತ, ಹೆಚ್ಚಿದ ಮರೆವು, ಸ್ನಾಯುಗಳಲ್ಲಿ ನೋವು, ಕೊಲೆಸ್ಟ್ರಾಲ್ ಮಟ್ಟದಲ್ಲಿ ಹೆಚ್ಚಳ ಮತ್ತು ಮಲಬದ್ಧತೆ ಸಮಸ್ಯೆ ಕಾಡಿದ್ರೂ ನೀವು ಪರೀಕ್ಷಿಸಿಕೊಳ್ಳಬೇಕು. ವಿಪರೀತ ಚಳಿ, ಹೆಚ್ಚಿನ ದಿನ ಕಾಡುವ ಮುಟ್ಟು ಕೂಡ ಇದ್ರ ಲಕ್ಷಣವಾಗಿದೆ.
ಅಯೋಡಿನ್ ಕೊರತೆಯಿಂದ ಕಾಡುವ ರೋಗಗಳು ಯಾವುವು ? : ಹೃದಯಾಘಾತ : ನಿಮ್ಮ ದೇಹದಲ್ಲಿ ಅಯೋಡಿನ್ ಕಡಿಮೆಯಾದ್ರೆ ಹೃದಯಾಘಾತ ಅಥವಾ ಹೃದಯಕ್ಕೆ ಸಂಬಂಧಿಸಿದ ಖಾಯಿಲೆ ನಿಮ್ಮನ್ನು ಕಾಡುತ್ತದೆ.
ಕಿಡ್ನಿ ಕಸಿ ನಂತ್ರ ಡ್ಯಾಮೇಜ್ ಅದ ಕಿಡ್ನಿಯನ್ನು ಏನು ಮಾಡುತ್ತಾರೆ?
ಮಾನಸಿಕ ಖಾಯಿಲೆ : ಮಹಿಳೆಯರಲ್ಲಿ ಅಯೋಡಿನ್ ಪ್ರಮಾಣ ಕಡಿಮೆಯಾದ್ರೆ ಅವರ ಮಾನಸಿಕ ಆರೋಗ್ಯ (Mental Health) ಹದಗೆಡುತ್ತದೆ. ಖಿನ್ನತೆ (Depression), ಬಂಜೆತನ ಅವರನ್ನು ಕಾಡುವ ಸಾಧ್ಯತೆಯಿರುತ್ತದೆ. ಇದಲ್ಲದೆ ಗರ್ಭಧಾರಣೆ ಮಹಿಳೆಯರಿಗೆ ಕಷ್ಟವಾಗುತ್ತದೆ. ಅಯೋಡಿನ್ ಕೊರತೆ ಹೊಂದಿರುವ ಮಹಿಳೆಯರಲ್ಲಿ ಶೇಕಡಾ 46ರಷ್ಟು ಗರ್ಭಧಾರಣೆ ಕಡಿಮೆಯಾಗುತ್ತದೆ.
ನವಜಾತ ಶಿಶುವಿನ ಮೇಲೆ ಪರಿಣಾಮ : ತಾಯಿಗೆ ಅಯೋಡಿನ್ ಸಮಸ್ಯೆಯಿದ್ರೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ನವಜಾತ ಶಿಶುವಿನಲ್ಲಿ ಕೆಲ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಅಕಾಲಿಕ ಜನನ ಅಥವಾ ಅಕಾಲಿಮ ಮರಣದ ಅಪಾಯವಿರುತ್ತದೆ. ಮಕ್ಕಳಿಗೆ ಕುಬ್ಜತೆ ಸೇರಿದಂತೆ ಕೆಲಸ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ.
ಅಯೋಡಿನ್ ಕೊರತೆ ಹೇಗೆ ಪರೀಕ್ಷಿಸಿ :
ಮೂತ್ರ ಪರೀಕ್ಷೆ (Urine Test) : ಮೂತ್ರ ಪರೀಕ್ಷೆಯ ಮೂಲಕ ಅಯೋಡಿನ್ ಕೊರತೆಯನ್ನು ಪತ್ತೆಹಚ್ಚಬಹುದು. ಆದ್ರೆ ಇತರ ಪರೀಕ್ಷಾ ವಿಧಾನಗಳಿಗೆ ಹೋಲಿಸಿದರೆ ಈ ಫಲಿತಾಂಶವು ನಿಖರವಾದ ಫಲಿತಾಂಶಗಳನ್ನು ನೀಡುವುದಿಲ್ಲ.
ರಕ್ತ ಪರೀಕ್ಷೆ (Blood Test) : ರಕ್ತ ಪರೀಕ್ಷೆ ಮೂಲಕವೂ ದೇಹದಲ್ಲಿ ಅಯೋಡಿನ್ ಕೊರತೆಯನ್ನು ಪತ್ತೆ ಮಾಡಬಹುದು. ಮೂತ್ರ ಪರೀಕ್ಷೆಗೆ ಹೋಲಿಸಿದರೆ ರಕ್ತ ಪರೀಕ್ಷೆಯ ಫಲಿತಾಂಶ ನಿಖರವಾಗಿರುತ್ತದೆ.
ಅಯೋಡಿನ್ ಪ್ಯಾಚ್ ಪರೀಕ್ಷೆ : ಅಯೋಡಿನ್ ಪ್ಯಾಚ್ ಪರೀಕ್ಷೆಯಲ್ಲಿ, ವೈದ್ಯರು ನಿಮ್ಮ ಚರ್ಮದ ಮೇಲೆ ಅಯೋಡಿನ್ ಪ್ಯಾಚ್ ಅನ್ನು ಹಾಕುತ್ತಾರೆ ಮತ್ತು 24 ಗಂಟೆಗಳ ನಂತರ ಅದರಲ್ಲಿ ಬದಲಾವಣೆಗಳನ್ನು ಪರಿಶೀಲಿಸಲಾಗುತ್ತದೆ. ಅಯೋಡಿನ್ ಕೊರತೆಯಿದ್ದಲ್ಲಿ ಅಥವಾ ದೇಹದಲ್ಲಿ ಸಾಕಷ್ಟು ಪ್ರಮಾಣದ ಉಪ್ಪು ಇದ್ದಲ್ಲಿ ಚರ್ಮವು ಚರ್ಮದೊಳಗಿನ ಅಯೋಡಿನ್ ಅನ್ನು 24 ಗಂಟೆಗಳಲ್ಲಿ ಹೀರಿಕೊಳ್ಳುತ್ತದೆ.
ಅಯೋಡಿನ್ ಲೋಡಿಂಗ್ ಪರೀಕ್ಷೆ : 24 ಗಂಟೆಯಲ್ಲಿ ವ್ಯಕ್ತಿ ಮೂತ್ರದ ಮೂಲಕ ಎಷ್ಟು ಅಯೋಡಿನ್ ಹೊರಗೆ ಹಾಕಿದ್ದಾನೆ ಎಂಬುದನ್ನು ಪರೀಕ್ಷಿಸುವ ವಿಧಾನ ಇದಾಗಿದೆ. ಈ ಪರೀಕ್ಷೆ ಇತರ ಪರೀಕ್ಷೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗೆ ವ್ಯಕ್ತಿಗೆ ಸ್ವಲ್ಪ ಸಮಸ್ಯೆಯಾಗುತ್ತದೆ.
ತಲೆನೋವಿನಲ್ಲೂ ಎಷ್ಟೊಂದು ವಿಧ ನೋಡಿ, ಕಾರಣ ತಿಳ್ಕೊಂಡು ಚಿಕಿತ್ಸೆ ಪಡೀರಿ
ಅಯೋಡಿನ್ ಕೊರತೆ ಹೀಗೆ ನೀಗಿಸಿ : ಅಯೋಡಿಕರಿಸಿದ ಉಪ್ಪು, ಆಲೂಗಡ್ಡೆ, ಕಂದು ಅಕ್ಕಿ, ಅಯೋಡಿನ್ ಹೊಂದಿರುವ ವಿಟಮಿನ್, ಬೆಳ್ಳುಳ್ಳಿ, ಮೀನು, ಮೊಟ್ಟೆ ಮತ್ತು ಮೊಸರು ಸೇರಿದಂತೆ ಅಯೋಡಿನ್ ಹೊಂದಿರುವ ಆಹಾರವನ್ನು ನೀವು ಸೇವನೆ ಮಾಡಬೇಕು. ಎಲ್ಲದಕ್ಕಿಂತ ಮೊದಲು ವೈದ್ಯರ ಸಲಹೆ ಪಡೆಯಬೇಕು.