ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣಾಗಿಸಲು ಮಹಿಳೆಯ ಸೂಪರ್ ಐಡಿಯಾ, ವೀಡಿಯೋ ವೈರಲ್
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವೊಮ್ಮೆ ಮನೆಯಲ್ಲಿ ಬಾಳೆಗೊನೆ ಇದ್ದರೂ ಹಣ್ಣಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಯಾವಾಗ ಹಣ್ಣಾಗುತ್ತದೋ ಎಂದು ಕಾತುರದಿಂದ ಕಾಯುವಂತಾಗುತ್ತದೆ. ಆದ್ರೆ ಈ ಟ್ರಿಕ್ಸ್ ಉಪಯೋಗಿಸಿದ್ರೆ ಬಾಳೆಕಾಯಿ ಥಟ್ಟಂತ ಹಣ್ಣಾಗುತ್ತೆ.
ಬಾಳೆಹಣ್ಣುಗಳು ಪೋಷಕಾಂಶಗಳಿಂದ ತುಂಬಿರುವ ಆರೋಗ್ಯಕರ ಹಣ್ಣು. ಹೀಗಾಗಿ ಹೆಚ್ಚಿನವರು ಇದನ್ನು ತಮ್ಮ ಪ್ರತಿದಿನದ ಆಹಾರದಲ್ಲಿ ಸೇರಿಸುತ್ತಾರೆ. ಮಾರುಕಟ್ಟೆಯಲ್ಲಿಯೂ ವಿವಿಧ ರೀತಿಯ ಬಾಳೆಹಣ್ಣು ಹಲವು ಬೆಲೆಯಲ್ಲಿ ಲಭ್ಯವಿರುತ್ತದೆ. ಆದರೆ ಕೆಲವೊಬ್ಬರು ಇದನ್ನು ರಾಸಾಯನಿಕವಾಗಿ ಹಣ್ಣಾಗಿಸಿರಬಹುದು ಎಂಬ ಭಯದಿಂದ ಖರೀದಿಸಲು ಹಿಂಜರಿಯುತ್ತಾರೆ. ಮತ್ತೆ ಕೆಲವರು ಮನೆಯಲ್ಲಿ ಬಾಳೆಗೊನೆ ಇದ್ದರೂ ಹಣ್ಣಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಯಾವಾಗ ಹಣ್ಣಾಗುತ್ತದೋ ಎಂದು ಕಾತುರದಿಂದ ಕಾಯುತ್ತಿರುತ್ತಾರೆ.
ಬಾಳೆಹಣ್ಣುಗಳು ಮರದ ಮೇಲೆ ಹಣ್ಣಾಗಲು ಸಮಯ ತೆಗೆದುಕೊಳ್ಳುತ್ತದೆ. ಬಾಳೆಗಿಡ ಚಿಗುರೊಡೆಯುವ ಸಮಯದಿಂದ ಸಂಪೂರ್ಣವಾಗಿ ಹಣ್ಣಾಗುವವರೆಗೆ ಮತ್ತು ಕಟಾವು ಮಾಡುವವರೆಗೆ 100-120 ದಿನಗಳು ಬೇಕಾಗುತ್ತದೆ. ಮಾತ್ರವಲ್ಲ, ಮಾಗಿದ ಬಾಳೆಹಣ್ಣುಗಳು ದೀರ್ಘಕಾಲ ಇರುವುದಿಲ್ಲ ಹಸಿ ಬಾಳೆ ಹಣ್ಣಾದರೆ ವಾರಗಳ ವರೆಗೆ ಇಡಬಹುದು. ಆದರೆ ಬಾಳೆಕಾಯಿ ಸುಲಭವಾಗಲು ಕೆಲವೊಂದು ಟ್ರಿಕ್ಸ್ ಸಹ ಇದೆ. ಅಂಥಾ ಒಂದು ಟ್ರಿಕ್ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೀವು ಪ್ರತಿದಿನ ಬಾಳೆಹಣ್ಣು ತಿನ್ನಲೇಬೇಕೆಂಬುದಕ್ಕೆ 10 ಕಾರಣಗಳು..
ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ವಯಸ್ಸಾದ ಮಹಿಳೆಯೊಬ್ಬರು ಕೇವಲ ಎರಡು ದಿನಗಳಲ್ಲಿ ಹಸಿ ಬಾಳೆಹಣ್ಣುಗಳನ್ನು ಹೇಗೆ ಚೆನ್ನಾಗಿ ಹಣ್ಣಾಗಿಸಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ರುಚಿ ಸಂಪೂರ್ಣವಾಗಿ ನೈಸರ್ಗಿಕವಾಗಿರುತ್ತದೆ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ ಬಾಳೆಹಣ್ಣನ್ನು ಚೆನ್ನಾಗಿ ಮಾಗಿಸಬಹುದು ಎಂದು ತಿಳಿಸಿಕೊಡಲಾಗಿದೆ.
ದಕ್ಷಿಣ ಭಾರತದ ಹಿರಿಯ ಮಹಿಳೆಯೊಬ್ಬರು, ಮೊದಲಿಗೆ ತಮ್ಮ ಪತಿಯ ಸಹಾಯದಿಂದ ಹೊಂಡವೊಂದನ್ನು ತೋಡುತ್ತಾರೆ. ಒಳಗೆ ಬಾಳೆಗೊನೆಯಿಟ್ಟು ಹೊಂಡದ ಸುತ್ತಲೂ ಕೆಲವು ಒಣ ಬಾಳೆ ಎಲೆಗಳನ್ನು ಇಡುತ್ತಾರೆ. ನಂತರ ಹೊಗೆ ಉತ್ಪತ್ತಿಯಾದ, ಕೆಲವು ಕಲ್ಲಿದ್ದಲುಗಳನ್ನು ಒಳಗೆ ಇರಿಸುತ್ತಾರೆ. ಉಳಿದ ಭಾಗವನ್ನು ಮೇಲ್ಭಾಗದಿಂದ ಮುಚ್ಚುತ್ತಾರೆ. ಅದರ ಮೇಲೆ ಮಣ್ಣು ಹಾಕಿ ಎರಡು ದಿನಗಳ ಕಾಲ ಹಾಗೆಯೇ ಬಿಡುತ್ತಾರೆ.
ಬಾಳೆ ಹಣ್ಣಲ್ಲ ಹೂ ತಿಂದ್ನೋಡಿ.. ರುಚಿ ಜೊತೆ ಆರೋಗ್ಯಕ್ಕೂ ಒಳ್ಳೇದು! ಶುಗರ್‌ಗೆ ರಾಮಬಾಣ
ಎರಡು ದಿನಗಳ ನಂತರ ನೋಡಿದಾಗ ಬಾಳೆಹಣ್ಣುಗಳು ಸಂಪೂರ್ಣವಾಗಿ ಬಲಿತಿರುವುದನ್ನು ನೋಡಬಹುದು. ಸಾಮಾನ್ಯವಾಗಿ ಮಾಗಿದ ಬಾಳೆಹಣ್ಣುಗಳನ್ನು ಇರುವ ರೀತಿಯಲ್ಲೇ ಇದು ಬದಲಾಗಿರುವುದನ್ನು ನೋಡಬಹುದು. ವಯಸ್ಸಾದ ಮಹಿಳೆಯೊಬ್ಬರು ಈ ಬಾಳೆಹಣ್ಣುಗಳನ್ನು ತಿನ್ನುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಬಾಳೆಹಣ್ಣನ್ನು ಮಾಗಿಸುವ ಈ ವಿಧಾನವನ್ನು ವಾಣಿಜ್ಯಿಕವಾಗಿಯೂ ಬಳಸಬಹುದು.