Asianet Suvarna News Asianet Suvarna News

ವೈರಲ್ ಹುಳುಗಳ ಬರ್ಗರ್; 'ಮೊದಲು ನೀವದನ್ನು ತಿನ್ನಿ ನಂತರ ಅವು ನಿಮ್ಮನ್ನು ತಿನ್ನುತ್ತವೆ!'

ಬರ್ಗರ್‌ನ ಮಧ್ಯೆ ಪ್ಯಾಟೀಸ್‌ನಲ್ಲಿ ಮಿಜಿಮಿಜಿಗುಡುವ ಹುಳುಗಳನ್ನಿಟ್ಟು ಕಟುಂ ಎನ್ನಿಸಿದರೆ ಹೇಗಿರುತ್ತದೆ? ಬಾಯೊಳಗೆ ಕುಲುಕುಲು ಕಚಗುಳಿ ಜೊತೆಗೆ ಅಗೆದಾಗ ಕರುಂಕುರಂ ಸದ್ದು..

This Bugs Burger from China has left the internet in disgust skr
Author
First Published Jun 12, 2024, 12:27 PM IST

ಬರ್ಗರ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಧ್ಯೆ ಪ್ಯಾಟೀಸ್ ಆಗಿ ಆಲೂ, ಚೀಸ್, ಮೀಟ್- ಏನೇ ಇಟ್ಟರೂ ನಾಲಿಗೆಯಲ್ಲಿ ನೀರೂರಿಸುತ್ತದೆ ಬರ್ಗರ್. ಆದರೆ, ಮಧ್ಯೆ ಪ್ಯಾಟೀಸ್‌ನಲ್ಲಿ ಈ ಎಲ್ಲದರ ಬದಲಿಗೆ ಮಿಜಿಮಿಜಿಗುಡುವ ಹುಳುಗಳನ್ನಿಟ್ಟು ಕಟುಂ ಎನ್ನಿಸಿದರೆ ಹೇಗಿರುತ್ತದೆ? ಬಾಯೊಳಗೆ ಕುಲುಕುಲು ಕಚಗುಳಿ ಜೊತೆಗೆ ಅಗೆದಾಗ ಕರುಂಕುರಂ ಸದ್ದು.. ಥೂ ಏನಪ್ಪಾ, ಎಂಥಾ ವರ್ಣನೆ ಎಂದು ಅಸಹ್ಯವಾಗುತ್ತಿದೆಯೇ? ಆದರೆ ಇದನ್ನೇ ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ ಚೀನಾದ ಚಿಣಿಮಿಣಿಗಳು.

ಹೌದು, ಇಂಥದ್ದೆಲ್ಲ ಚೀನೀಯರಿಗೆ ಮಾತ್ರ ಸಾಧ್ಯವೇನೋ? ಅವರು ಈ ಬಗ್ಸ್ ಬರ್ಗರ್‌ನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಇದೀಗ ಈ ಚೈನೀಸ್ ಬರ್ಗರ್ ನೆಟಿಜನ್‌ಗಳ ಗಮನ ಸೆಳೆದಿದೆ. ಈ ವಿಲಕ್ಷಣ ಸಂಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ಮನಸ್ಸಿಗೆ ಮುದ ನೀಡೋ ಪ್ರೇಮಕತೆ ಈ ತಮಿಳು ಚಿತ್ರಗಳು; ಒಟಿಟಿಯಲ್ಲಿ ಮಿಸ್ ಮಾಡ್ದೇ ನೋಡಿ
 

ವೈರಲ್ ಬರ್ಗರ್
ಸಾಮಾಜಿಕ ಮಾಧ್ಯಮವು ಪಾಕಶಾಲೆಯ ಆಟದ ಮೈದಾನವಾಗಿಬಿಟ್ಟಿದೆ. ಸಾವಿರಾರು ಚಿತ್ರವಿಚಿತ್ರ ಪಾಕವಿಧಾನಗಳು ಮತ್ತು ಆಲೋಚನೆಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಜನರು ಏನನ್ನಾದರೂ ಮತ್ತು ಎಲ್ಲವನ್ನೂ ಪ್ರಯತ್ನಿಸುತ್ತಿದ್ದಾರೆ. ಇಂಥ ವಿಚಿತ್ರ ಪಾಕಶಾಲೆಯ ಸಮ್ಮಿಲನವೆಂದರೆ ಚೈನೀಸ್ ಬಗ್ಸ್ ಬರ್ಗರ್, ಇದು ತನ್ನ ತೆವಳುವ ನೋಟದಿಂದ ಇಂಟರ್ನೆಟ್ ಅನ್ನು ಕಲಕಿದೆ.

ವಿಚಿತ್ರ ವಿಡಿಯೋ
'ಈಟರ್ಸ್ ಸಿಎನ್' ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಚಿತ್ರ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಚೀನಾದ ವ್ಯಕ್ತಿಯೊಬ್ಬ ಕೀಟಗಳಿಂದ ತುಂಬಿದ ಬರ್ಗರ್ ಅನ್ನು ಸವಿಯುತ್ತಿರುವುದನ್ನು ನೋಡಬಹುದು. ಇದು ನೆಟಿಜನ್‌ಗಳನ್ನು ಅಸಹ್ಯಕ್ಕೀಡು ಮಾಡಿದೆ. ವೈರಲ್ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ಎರಡು ಸರಳ ಬನ್‌ಗಳು ಮತ್ತು ಮೇಜಿನ ಮೇಲೆ ಸುಟ್ಟ ಬಗ್‌ಗಳಂತೆ ಕಾಣುವ ಬೌಲ್ ತುಂಬಿರುವುದನ್ನು ತೋರಿಸುತ್ತದೆ. 

ಸೋನಾಕ್ಷಿ ಮಾತ್ರವಲ್ಲ, ಈ ಬಾಲಿವುಡ್ ನಟಿಯರು ಕೂಡಾ ಮುಸ್ಲಿಂ ವ್ಯಕ್ತಿಯನ್ನೇ ವಿವಾಹವಾಗಿದ್ದಾರೆ!
 

ಇದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ..
ಬನ್‌ಗಳೊಳಗೆ ಅನೇಕ ತೆವಳುವ ಹುಳುಗಳನ್ನು ಹಾಕಿಕೊಳ್ಳುವ ಆ ವ್ಯಕ್ತಿಯು ಊಟದಿಂದ ಸಂತೃಪ್ತನಾಗಿ ಮತ್ತು ಸಂತೋಷವಾಗಿರುವುದನ್ನು ಕಾಣಬಹುದು. ಕ್ಲಿಪ್‌ನಲ್ಲಿ 'ಚೀನೀ ಆಹಾರ' ಎಂದು ಶೀರ್ಷಿಕೆ ನೀಡಲಾಗಿದೆ. 

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು 'ಬಹಳ ಬೇಗ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಬ್ರೋ ಇದು ತುಂಬಾ ಅಸಹ್ಯಕರವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Eaters Cn (@eaters.cn)

ನೀವು ಈ ರೀತಿಯದನ್ನು ಪ್ರಯತ್ನಿಸಲು ಬಯಸುವಿರಾ?

Latest Videos
Follow Us:
Download App:
  • android
  • ios