2 ಮಸಾಲೆ ದೋಸೆ, 2 ಕಾಫಿ ಬೆಲೆ ಎರಡೇ ರೂಪಾಯಿ! 1971ರ ರೆಸ್ಟೋರೆಂಟ್ ಬಿಲ್ ವೈರಲ್
ಇತ್ತೀಚೆಗೆ ಹಳೆಯ ಹೋಟೆಲ್ ಬಿಲ್, ಹಳೆಯ ಮೋಟಾರ್‌ಸೈಕಲ್ ಬಿಲ್, ಹಳೆಯ ದಿನಸಿ ಬಿಲ್ ಮೊದಲಾದವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದೇ ರೀತಿ ಸದ್ಯ 1971ರ ಹೊಟೇಲ್ ಬಿಲ್‌ವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ.
ಮಸಾಲೆ ದೋಸೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆಲೂ ಸ್ಟಫಿಂಗ್ಸ್ ಸೇರಿಸಿದ ದೋಸೆಯನ್ನು ಚಟ್ನಿ ಹಾಗೂ ಸಾಂಬಾರ್‌ನೊಂದಿಗೆ ಬಾಯ್ತುಂಬಾ ಸವಿಯುತ್ತಾರೆ. ದೋಸೆಯ ಬೆಲೆ ಸಾಮಾನ್ಯವಾಗಿ ಐವತ್ತರಿಂದ ನೂರೈವತ್ತು ರೂಪಾಯಿ ವರೆಗೂ ಇರುತ್ತದೆ. ಆದ್ರೆ ಹಲವಾರು ವರ್ಷಗಳ ಹಿಂದೆ ಮಸಾಲೆ ದೋಸೆ ಬೆಲೆ ಕೇವಲ ಒಂದೇ ಒಂದು ರೂಪಾಯಿ ಇತ್ತು ಅಂದ್ರೆ ನೀವ್ ನಂಬ್ತೀರಾ ? ನಂಬೋಕೆ ಕಷ್ಟ ಅನಿಸಿದ್ರೂ ಇದು ನಿಜಾನೇ. ಫೆಬ್ರವರಿ 2017ರಲ್ಲಿ ಟ್ವಿಟರ್‌ನಲ್ಲಿ ಬಿಲ್ ಅನ್ನು ಪೋಸ್ಟ್ ಮಾಡಲಾಗಿದೆ.
ಇಂದು ಸಾಧಾರಣ ಹೋಟೆಲ್ನಲ್ಲಿ ಒಂದು ಮಸಾಲೆ ದೋಸೆ ತಿನ್ನಬೇಕೆಂದರೆ ಏನಿಲ್ಲಾಂದ್ರೂ 60 ರೂ. ಖರ್ಚಾಗುತ್ತದೆ. ಆದರೆ 1971ರಲ್ಲಿ? ಇದೀಗ ವೈರಲ್ ಆಗುತ್ತಿರುವ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನ ಬಿಲ್‌ನಲ್ಲಿ ಮಸಾಲೆ ದೋಸೆ ಹಾಗೂ ಕಾಫಿಯ ಬೆಲೆಯನ್ನು ಕೇವಲ ಎರಡು ರೂಪಾಯಿಯೆಂದು ತಿಳಿಸಲಾಗಿದೆ. ಇದರಲ್ಲಿ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನ 28.06.1971ರಲ್ಲಿ 2 ಮಸಾಲೆ ದೋಸೆ ಮತ್ತು 2 ಕಾಫಿಗೆ ಕೇವಲ ಎರಡು ರೂಪಾಯಿ ಬಿಲ್ ಆಗಿರುವುದಾಗಿ ತಿಳಿಸಲಾಗಿದೆ. ಬಿಲ್ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನದ್ದಾಗಿದ್ದು, 51 ವರ್ಷಗಳಿಗಿಂತಲೂ ಹಿಂದಿನದು.
ಅರೆ, ಇಷ್ಟೊಂದು ಚೀಪಾ..1987ರಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಗೋಧೀನೆ ಸಿಗ್ತಿತಂತೆ !
ದೆಹಲಿಯು ಹಲವಾರು ವರ್ಷಗಳಿಂದ ಆಹಾರಪ್ರಿಯರ ಕೇಂದ್ರವಾಗಿದೆ. ದಕ್ಷಿಣ ಭಾರತದ ಪಾಕಪದ್ಧತಿಯಿಂದ ಹಿಡಿದು ಸ್ಥಳೀಯ ಚೋಲೆ ಭಟೂರೆ ವರೆಗೆ ಎಲ್ಲವೂ ಇಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿದೆ. ಹಾಗೆಯೇ ಹಲವಾರು ವರ್ಷಗಳ ಹಿಂದೆಯೂ ರಾಷ್ಟ್ರ ರಾಜಧಾನಿ ಆಹಾರಪ್ರಿಯರ ಸ್ವರ್ಗವಾಗಿತ್ತು ಎಂಬುದು ಸಾಬೀತಾಗಿದೆ. 1971 ರ ಬಿಲ್‌ನಲ್ಲಿ 2 ಮಸಾಲೆ ದೋಸೆಗಳು ಮತ್ತು ಎರಡು ಕಪ್ ಕಾಫಿ ಒಟ್ಟಿಗೆ ಕೇವಲ 2 ರೂ.ಯೆಂದು ನಮೂದಿಸಲಾಗಿದೆ.
'ವಿಷ್ಣು ಶರ್ಮಾ ಜೊತೆ ಭಾರತೀಯ ಇತಿಹಾಸ' ಎಂಬ ಹೆಸರಿನ ಖಾತೆಯಿಂದ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ಖಾತೆಯು ನಮ್ಮ ರಾಷ್ಟ್ರದ ಐತಿಹಾಸಿಕ ಅಂಶಗಳನ್ನು ಪೋಸ್ಟ್ ಮಾಡಲು ಹೆಸರುವಾಸಿಯಾಗಿದೆ. ತೀರಾ ಇತ್ತೀಚಿನ ಟ್ವೀಟ್ ಸೋಮಪುರ ಮಹಾವಿಹಾರದ ಅವಶೇಷಗಳ ಬಗ್ಗೆ ತಿಳಿಸುತ್ತದೆ. ಈ ಪೋಸ್ಟ್‌ನ್ನು ಜನವರಿ 4ರಂದು ಪೋಸ್ಟ್ ಮಾಡಲಾಗಿತ್ತು. 'ಒಂದು ಕಾಲದಲ್ಲಿ ಭಾರತೀಯ ಉಪಖಂಡದ ಅತಿದೊಡ್ಡ ಮಠ ಮತ್ತು ಈಗ ಬಾಂಗ್ಲಾದೇಶದಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಸೋಮಪುರ ಮಹಾವಿಹಾರದ ಅವಶೇಷಗಳು' ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿತ್ತು.
63 ವರ್ಷದ ಹಿಂದೆ ಹುಟ್ಟಿದ್ರೆ ಮೂಟೆಗಟ್ಟಲೆ ಬಂಗಾರ ಕೊಳ್ಬೋದಿತ್ತು, 10 ಗ್ರಾಂಗೆ ಇದ್ದಿದ್ದು 99 ರೂ. !
ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಇದು ಅದ್ಭುತ ಎಂದು ಹೇಳಿದರೆ, ಇನ್ನು ಕೆಲವರು ಪಂಜಾಬಿ ರೆಸ್ಟೋರೆಂಟ್ 1971ರಲ್ಲಿ ಎರಡು ರೂಪಾಯಿಗೆ ಇಷ್ಟೆಲ್ಲ ತಿಂಡಿ ಸರ್ವ್ ಮಾಡುತ್ತಿತ್ತೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇನೆ ಇರ್ಲಿ, 51 ವರ್ಷಗಳ ಹಿಂದೆ ಎರಡು ಮಸಾಲೆ ದೋಸೆ ಮತ್ತು ಎರಡು ಕಾಫಿ ಬೆಲೆ ಕೇವಲ 2.16 ರೂ. ಎಂದು ತಿಳಿದು ನೆಟ್ಟಿಗರಂತೂ ಅದೇ ಕಾಲ ಮತ್ತೆ ವಾಪಸ್ ಮರಳಬಾರದೆ ಎಂದು ಅಂದುಕೊಳ್ಳುತ್ತಿರುವುದು ಸುಳ್ಳಲ್ಲ.