ಹೊಟೇಲ್‌ಗಳಲ್ಲಿ ಹೆಚ್ಚುವರಿ ಸೇವಾ ಶುಲ್ಕ ವಸೂಲಿ: ಬೆಂಗಳೂರಿನಿಂದ 15 ದೂರು ದಾಖಲು

ನವದೆಹಲಿ: ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವೂ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸೇವಾ ಶುಲ್ಕ ತೆರಿಗೆಗೆ ಸಂಬಂಧಿಸಿದಂತೆ ನಿಯಮಗಳನ್ನು ತಕ್ಷಣಕ್ಕೆ ಕಾರ್ಯ ರೂಪಕ್ಕೆ ತರುವಂತೆ ಹಾಗೂ ಹೊಟೇಲ್‌ಗಳು ರೆಸ್ಟೋರೆಂಟ್‌ಗಳು ಸೇವಾ ತೆರಿಗೆ ಎಂದು ಹೆಚ್ಚುವರಿ ವಸೂಲಿ ಮಾಡುವುದನ್ನು ನಿಷೇಧ ಮಾಡುವಂತೆ ತಿಳಿಸಿದೆ.

The central consumer protection authority says Ensure service charge is not added to food bills akb

ನವದೆಹಲಿ: ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವೂ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸೇವಾ ಶುಲ್ಕ ತೆರಿಗೆಗೆ ಸಂಬಂಧಿಸಿದಂತೆ ನಿಯಮಗಳನ್ನು ತಕ್ಷಣಕ್ಕೆ ಕಾರ್ಯ ರೂಪಕ್ಕೆ ತರುವಂತೆ ಹಾಗೂ ಹೊಟೇಲ್‌ಗಳು ರೆಸ್ಟೋರೆಂಟ್‌ಗಳು ಸೇವಾ ತೆರಿಗೆ ಎಂದು ಹೆಚ್ಚುವರಿ ವಸೂಲಿ ಮಾಡುವುದನ್ನು ನಿಷೇಧ ಮಾಡುವಂತೆ ತಿಳಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ 85 ದೂರುಗಳು ಬಂದಿದ್ದು, ಇವೆಲ್ಲವೂ ಪ್ರಮುಖ ನಗರಗಳಿಂದ ಬಂದ ದೂರುಗಳಾಗಿವೆ. ಅದರಲ್ಲೂ ಜೂನ್ 24 ರ ಹೊಸ ನಿಯಾಮಾವಳಿ ಜಾರಿಗೆ ಬಂದ ನಂತರ ಬಂದಿರುವಂತಹ ದೂರುಗಳಾಗಿವೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (central consumer protection authority) ತಿಳಿಸಿದೆ. 

ಪ್ರಮುಖ ಐದು ಮಹಾನಗರಗಳಿಂದ ದೂರುಗಳು ಬಂದಿವೆ. ಈ ವಿಚಾರವಾಗಿ ದೆಹಲಿಯಲ್ಲಿ 18 ದೂರು ಬಂದಿದ್ದರೆ, ಬೆಂಗಳೂರು (Banglore) 15, ಮುಂಬೈ (Mumbai) 11, ಪುಣೆ (Pune) 4 ಹಾಗೂ ಗಾಜಿಯಾಬಾದ್‌ನಲ್ಲಿ (Gaziabad) ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತೆ ನಿಧಿ ಖರೆ (Nidhi Khare) ಹೇಳಿದ್ದಾರೆ. ನೂತನವಾಗಿ ಜಾರಿಯಾದ ಗೈಡ್‌ಲೈನ್‌ ಅಥವಾ ನಿಯಮಾವಳಿಗಳು ಕೇವಲ ಮಾಮೂಲಿ ಸಲಹೆಗಳಲ್ಲ, ಅವು ಶಿಸ್ತುಬದ್ಧವಾಗಿ ಜಾರಿಯಾಗಲೇಬೇಕಾದ ಕಾನೂನುಗಳು. ಗ್ರಾಹಕ ರಕ್ಷಣಾ ಕಾಯ್ದೆಯ ಅಡಿ ಈ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಈ ಕಾಯಿದೆಯೂ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ನ್ಯಾಯೋಚಿತವಲ್ಲದ ಅಸಮರ್ಪಕವಾದ ವ್ಯಾಪಾರ ವಹಿವಾಟುಗಳನ್ನು ತಡೆಗಟ್ಟಿ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತದೆ. 

Service Charge: ಹೋಟೆಲ್ ನಲ್ಲಿ ಸರ್ವಿಸ್ ಚಾರ್ಜ್ ಕೇಳಿದ್ರೆ ದೂರು ನೀಡಿ; ಹೊಸ ಮಾರ್ಗಸೂಚಿ ಹೊರಡಿಸಿದ ಸಿಸಿಪಿಎ

ಆದಾಗ್ಯೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (National Consumer Helpline) ಬಂದ ದೂರುಗಳು ಕಡಿಮೆ, ಇವು ಮುಖ್ಯವಾಗಿ ಪ್ರಮುಖ ನಗರಗಳಲ್ಲಿ ಹೊಟೇಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ಈಗಲೂ ಹಳೆ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿವೆ ಎಂಬುದನ್ನು ಸೂಚಿಸುತ್ತಿವೆ. ಇವುಗಳ ಬಗ್ಗೆ ಗ್ರಾಹಕರು ನೀಡುವ ದೂರುಗಳು ಕೂಡ ಜನರು ತಮ್ಮ ಹಕ್ಕುಗಳ ಬಗ್ಗೆ ಹಾಗೂ ನ್ಯಾಯೋಚಿತವಲ್ಲದ ವಹಿವಾಟುಗಳ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. 

ಇಂತಹ ನ್ಯಾಯಸಮ್ಮತವಲ್ಲದ ವಹಿವಾಟುಗಳ ತಡೆಗೆ ಈ ಕಾನೂನು ಜಾರಿಯ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ತಿಳುವಳಿಕೆ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವೂ, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಗ್ರಾಹಕರು ನೀಡಿರುವಂತಹ ಈ ದೂರುಗಳ ಬಗ್ಗೆ ತನಿಖೆ ನಡೆಸಿ, 15  ದಿನಗಳ ಒಳಗಾಗಿ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ. 

Service Charge ಗ್ರಾಹಕರಲ್ಲಿ ಸರ್ವೀಸ್ ಚಾರ್ಜ್ ಪಾವತಿಗೆ ಒತ್ತಾಯಿಸುವಂತಿಲ್ಲ, ರೆಸ್ಟೋರೆಂಟ್ಸ್‌ಗೆ ಸರ್ಕಾರದ ಎಚ್ಚರಿಕೆ!

ಗ್ರಾಹಕ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಹೊಸ ನಿಯಮಾವಳಿಗಳು ಹಾಗೂ ಹಳೆ ನಿಯಮಾವಳಿಗಳಲ್ಲಿ ವ್ಯತ್ಯಾಸವಿದೆ. 1986ರ ಗ್ರಾಹಕ ರಕ್ಷಣಾ ಕಾಯ್ದೆಯ ಬದಲಾಗಿ ಗ್ರಾಹಕ ರಕ್ಷಣಾ ಕಾಯ್ದೆ 2019 ನ್ನು ಜಾರಿಗೆ ತರಲಾಯಿತು. 2020ರ ಜುಲೈನಿಂದ ಇದು ಕಾರ್ಯರೂಪಕ್ಕೆ ಬಂತು. ಇದು ಹೊಸ ಶಾಸನಬದ್ಧ ಹಕ್ಕನ್ನು ಹೊಂದಿದ್ದು, ಸಂಸತ್ತಿನಿಂದ ಅಧಿಕಾರ ಪಡೆದಿದೆ.  

ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಕಾನೂನುಬಾಹಿರ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ  ಆ ಕುರಿತು ಗ್ರಾಹಕರು ದೂರು ನೀಡಲು ವ್ಯವಸ್ಥೆಯೊಂದನ್ನು ಇತ್ತೀಚೆಗಷ್ಟೇ ಜಾರಿಗೊಳಿಸಿತ್ತು.

Latest Videos
Follow Us:
Download App:
  • android
  • ios