ಎಣ್ಣೆ, ಮಸಾಲೆ ತುಂಬಿದ ಆಹಾರ, ವಂದೇ ಭಾರತ್‌ನಲ್ಲಿ ವಿತರಿಸಿದ ಫುಡ್ ಬಗ್ಗೆ ಪ್ರಯಾಣಿಕರ ದೂರು
ಸಾಮಾನ್ಯ ರೈಲಿನಂತೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿತರಿಸುವ ಆಹಾರದ ಬಗ್ಗೆಯೂ ಸಾಕಷ್ಟು ಬಾರಿ ದೂರುಗಳು ಕೇಳಿ ಬಂದಿದೆ. ಹಾಗೆಯೇ ಇತ್ತೀಚಿಗೆ ವಂದೇ ಭಾರತ್ ರೈಲಿನಲ್ಲಿ ತನಗೆ ಬಡಿಸಿದ ಕೆಟ್ಟ ಆಹಾರದ ಚಿತ್ರವನ್ನು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ ದೇಶದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹಾಗೂ ಅತಿ ವೇಗದ ಭಾರತೀಯ ರೈಲುಗಳಲ್ಲಿ ಒಂದಾಗಿದೆ. ಈಗಾಗಲೇ ಹಲವು ವಂದೇ ಭಾರತ್ ರೈಲುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಉದ್ಘಾಟನೆ ಮಾಡಲಾಗಿದ್ದು, ಜನರು ಸುಲಭ ಸಂಚಾರಕ್ಕೆ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಕಷ್ಟು ಸೌಲಭ್ಯಗಳನ್ನು ಸಹ ಹೊಂದಿದೆ. ಆದ್ರೆ ಸಾಮಾನ್ಯ ರೈಲಿನಂತೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿತರಿಸುವ ಆಹಾರದ ಬಗ್ಗೆಯೂ ಸಾಕಷ್ಟು ಬಾರಿ ದೂರುಗಳು ಕೇಳಿ ಬಂದಿದೆ. ಹಾಗೆಯೇ ಇತ್ತೀಚಿಗೆ ವಂದೇ ಭಾರತ್ ರೈಲಿನಲ್ಲಿ ತನಗೆ ಬಡಿಸಿದ ಕೆಟ್ಟ ಆಹಾರದ ಚಿತ್ರವನ್ನು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ವಂದೇ ಭಾರತ್ ರೈಲಿನಲ್ಲಿ ಎಣ್ಣೆ ಮತ್ತು ಮಿರ್ಚ್ ಮಸಾಲಾ ಇಲ್ಲದ ಆರೋಗ್ಯಕರ ಆಹಾರವನ್ನು ಒದಗಿಸಿದ್ದಕ್ಕಾಗಿ ಅಶ್ವಿನಿ ವೈಷ್ಣವ್ ಜೀ ಅವರಿಗೆ ಧನ್ಯವಾದಗಳು' ಎಂದು ಕಪಿಲ್ ಎಂಬ ವ್ಯಕ್ತಿ ವ್ಯಂಗ್ಯವಾಗಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ರೈಲಿನಲ್ಲಿ ಬಡಿಸಿದ ಕಡಲೆ ಕರಿ ಫೋಟೋವನ್ನು ಸಹ ಪೋಸ್ಟ್ ಮಾಡಲಾಗಿದೆ. ಇದು ಸಂಪೂರ್ಣವಾಗಿ ಎಣ್ಣೆ ಹಾಗೂ ಮಸಾಲೆಯಿಂದ ತುಂಬಿರುವುದನ್ನು ನೋಡಬಹುದು.
ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ. 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 800 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ವೈರಲ್ ಆಗಿರುವ ಟ್ವೀಟ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಹಚ್ಚ ಹಸಿರಿನ ನಡುವೆ ಓಡುವ ವಂದೇ ಭಾರತ್: ಡ್ರೋನ್‌ನಲ್ಲಿ ಸೆರೆಯಾದ ಅದ್ಭುತ ವೀಡಿಯೋ ವೈರಲ್
ಎಣ್ಣೆ, ಮಸಾಲೆಯಿಂದ ತುಂಬಿದ ಆಹಾರ, ನೆಟ್ಟಿಗರಿಂದ ಕಾಮೆಂಟ್
ಒಬ್ಬ ಬಳಕೆದಾರರು. 'ಇದು ಹೊಗಳಿಕೆಯೇ ಅಥವಾ ತೆಗಳಿಕೆಯೇ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಸರಿಯಾದ ಪ್ರೋಟೀನ್ ಊಟ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, 'ಇದು ಪಾನಿಪುರಿಯೇ' ಎಂದು ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ. 'ಮೊದಲು, ಇದು ರಸಗುಲ್ಲಾ ಎಂದು ನಾನು ಭಾವಿಸಿದೆ, ಆದರೆ ನಾನು ಅದನ್ನು ಜೂಮ್ ಮಾಡಿದಾಗ, ಅದು ಬೇರೆಯದೇ ಆಹಾರ ಎಂದು ತಿಳಿದುಕೊಂಡೆ' ಎಂದು ಮತ್ತೊಬ್ಬರು ವ್ಯಂಗ್ಯವಾಡಿದರು. 'ಸೂಪ್‌ನಲ್ಲಿಯೂ ಇದಕ್ಕಿಂತ ಉತ್ತಮವಾದ ಮಸಾಲೆ ಇದೆ' ಎಂದು ಇನ್ನೊಬ್ಬರು ಹೇಳಿದರು.
ಮತ್ತೊಬ್ಬರು ಆಹಾರಕ್ಕೆ ಕಾಮೆಂಟ್ ಮಾಡಿ, 'ನೀವು ಹೆಚ್ಚುವರಿ ನೀರನ್ನು ಉಚಿತವಾಗಿ ಪಡೆದುಕೊಂಡಿದ್ದೀರಿ. ಕೃತಜ್ಞರಾಗಿರಿ' ಎಂದು ಟೀಕಿಸಿದ್ದಾರೆ. ಹಲವರು ಟ್ವೀಟ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಕ್ಕಾಗಿ ಟ್ವಿಟರ್ ಬಳಕೆದಾರರನ್ನು ದೂಷಿಸಿದ್ದಾರೆ. 'ರೈಲಿನಲ್ಲಿ ಬಡಿಸುವ ರುಚಿಯಿಲ್ಲದ ಖಾದ್ಯಕ್ಕಾಗಿ ಕೇಂದ್ರ ಸಚಿವರನ್ನು ಟ್ಯಾಗ್ ಮಾಡವ ಅಗತ್ಯವಿರಲ್ಲಿಲ್ಲ' ಎಂದು ಒಬ್ಬರು ಹೇಳಿದರು.
ಬರಲಿದೆ ಅತ್ಯಾಧುನಿಕ ಸೌಲಭ್ಯದ ಟಿಕೆಟ್ ದರ ಕಡಿಮೆ ಇರುವ ವಂದೇ ಸಾಧಾರಣ್ ಎಕ್ಸ್‌ಪ್ರೆಸ್
ಮತ್ತೊಬ್ಬರು 'ಟ್ವೀಟ್‌ನಲ್ಲಿ IRCTC ಅನ್ನು ಸಹ ಟ್ಯಾಗ್ ಮಾಡಬೇಕಿತ್ತು. ಸಚಿವರನ್ನು ಮಾತ್ರ ಟ್ಯಾಗ್ ಮಾಡುವ ಬದಲು, ನೀವು ಆಹಾರದ ದೂರಿಗಾಗಿ @IRCTCofficial ಅನ್ನು PNR ನ ವಿವರಗಳೊಂದಿಗೆ ಟ್ಯಾಗ್ ಮಾಡಬಹುದಾಗಿತ್ತು, ಅದು ಗುತ್ತಿಗೆದಾರರನ್ನು ಛೀಮಾರಿ ಹಾಕಲು ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನೆರವಾಗುತ್ತಿತ್ತು' ಎಂದಿದ್ದಾರೆ.
ಇನ್ನೂ ಅನೇಕರು ವಂದೇ ಭಾರತ್ ರೈಲಿನಲ್ಲಿ ಬಡಿಸುವ ರುಚಿಕರವಾದ ಆಹಾರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ವಂದೇ ಭಾರತ್‌ನಲ್ಲಿ ಈ ಹಿಂದೆಯೂ ಕಳಪೆ ಆಹಾರ ವಿತರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.