Asianet Suvarna News Asianet Suvarna News

ಭಯಂಕರ ಚಳಿಗೆ ಕೋಲಿನಂತಾದ ನೂಡಲ್ಸ್ : ವೈರಲ್ ವಿಡಿಯೋ

ಯುವಕನೋರ್ವ ತರಗುಟ್ಟುವ ಚಳಿಯ ಮಧ್ಯೆಯೇ ನೂಡಲ್ಸ್ ತಿನ್ನುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

 Terrible Cold makes Noodles like sticks video goes viral akb
Author
First Published Jan 8, 2023, 1:36 PM IST

ಅಮೆರಿಕಾ ಹಾಗೂ ಕೆನಡಾ ಈ ಬಾರಿ ಕಂಡು ಕೇಳರಿಯದ ಹಿಮಪಾತವನ್ನು ಕಾಣುತ್ತಿದ್ದು, ಇದರಿಂದ ಮನುಷ್ಯರು ಸೇರಿದಂತೆ ಜೀವಜಂತುಗಳ ಜೀವನ ಅಸ್ತವ್ಯಸ್ತವಾಗಿದೆ.  ಈ ಮಧ್ಯೆ ಯುವಕನೋರ್ವ ತರಗುಟ್ಟುವ ಚಳಿಯ ಮಧ್ಯೆಯೇ ನೂಡಲ್ಸ್ ತಿನ್ನುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.  voicesofjake ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, 41.2 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು,  ಒಂದು ಮಿಲಿಯನ್‌ಗೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಹಿಮ ಮಳೆಯ ಮಧ್ಯೆಯೇ ಈತ ಬೌಲ್‌ವೊಂದರಲ್ಲಿ ನೂಡಲ್ಸ್ (Noodles) ಅನ್ನು ಹಾಕಿಕೊಂಡು ಮನೆಯಿಂದ ಹೊರ ಬಂದಿದ್ದಾನೆ. ಅಷ್ಟರಲ್ಲೇ ನೂಡಲ್ಸ್ ಸಂಪೂರ್ಣವಾಗಿ ಕೋಲಿನಂತಾಗಿದೆ.  ಈತ ನೂಡಲ್ಸ್ ಅನ್ನು ಚಮಚದಲ್ಲಿ ಮೇಲೆತ್ತಿ ಬಾಯಿಗೆ ಹಾಕಿಕೊಳ್ಳುವ ಮೊದಲು ಕೆಲ ಸೆಕೆಂಡ್‌ಗಳ ಕಾಲ ಹಾಗೆಯೇ ಹಿಡಿದುಕೊಂಡು ನಿಂತಿದ್ದಾನೆ. ಅಷ್ಟರಲ್ಲಿ ಅದು ಸಂಪೂರ್ಣ ಗಟ್ಟಿಯಾಗಿ ಕೋಲಿನಂತಾಗಿದ್ದು,  ಅದರ ಮಧ್ಯೆ ಸಿಲುಕಿಕೊಂಡ ಚಮಚ (Spoon) ಈತ ಕೈ ಬಿಟ್ಟರು ಹಾಗೆಯೇ  ಸ್ಟ್ರೈಟ್ ಆಗಿ ನಿಲ್ಲುತ್ತದೆ.  ನೂಡಲ್ಸ್‌ನಲ್ಲಿದ್ದ ನೀರು ಕೂಡ ಗಟ್ಟಿಯಾಗಿದ್ದು, ಸಂಪೂರ್ಣ ನೂಡಲ್ಸ್ ಕಲ್ಲಿನಂತೆ ಗಟ್ಟಿಯಾಗಿದೆ.   ಅತ್ತ  ಆತ ತಲೆಗೆ ಟೋಪಿ ಧರಿಸಿದ್ದು, ಟೋಪಿ ಮೇಲೆಲ್ಲಾ ಮಂಜು ಬಿದ್ದಿದ್ದು, ಈತನ ಕಣ್ಣಿನ ರೆಪ್ಪೆಗಳ ಮೀಸೆಯ ಮೇಲೂ ಮಂಜು ಆವರಿಸಿದೆ. 

ಅಮೆರಿಕಾದಲ್ಲಿ ಹಿಮಪಾತಕ್ಕೆ ತತ್ತರಿಸಿದ ಪ್ರಾಣಿಗಳು: ವಿಡಿಯೋ ವೈರಲ್

ಈ ವಿಡಿಯೋವನ್ನು ಡಿಸೆಂಬರ್ 28 ರಂದು ಪೋಸ್ಟ್ ಮಾಡಲಾಗಿದೆ.  ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ಮೆಚ್ಚಿದ್ದಾರೆ. ಸ್ಥಳೀಯವಾಗಿ  ರಮೆನ್ ಎಂದು ಕರೆಯಲ್ಪಡುವ ಈ ನೂಡಲ್ಸ್, ಜಪಾನೀಸ್ ಆಹಾರವಾಗಿದ್ದು,  ಅನೇಕರು ಕುತೂಹಲದಿಂದ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದನ್ನು ಮತ್ತೆ ಬಿಸಿ ಮಾಡುವಾಗ ಹೇಗಾಗುತ್ತದೆ ಎಂದು ನಾನು ನೋಡಬೇಕಿದೆ ಎಂದು ಒಬ್ಬರು ಕುತೂಹಲದಿಂದ ಕಾಮೆಂಟ್ ಮಾಡಿದ್ದಾರೆ.  ಒಮ್ಮೆ ಇದು ಬಿಸಿಯಾಗಲು ಶುರುವಾದಾಗ ಮಂಜು ತೊಟ್ಟಿಕ್ಕಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬ್ರದರ್ ನೀನು ಐಸ್ ಮ್ಯಾನ್ ರೀತಿ ಕಾಣಿಸುತ್ತಿದ್ದಿಯಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ರೊಜೋನ್ 5 ಶೂಟ್ ಲೀಕ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಅಪರೂಪದ ವಿಡಿಯೋ ಅನೇಕರಿಗೆ ಹಲವು ಕುತೂಹಲಗಳನ್ನು ಮೂಡಿಸಿದೆ.

ಇತ್ತೀಚೆಗೆ, ಫ್ರೆಂಚ್ ಖಗೋಳ ವಿಜ್ಞಾನಿ (French astrobiologist) ಸಿಪ್ರಿಯನ್ ವರ್ಸೆಕ್ಸ್ (Cyprien Verseux) ಅಂಟಾರ್ಕ್ಟಿಕಾದಲ್ಲಿ ತಾಪಮಾನವು -60 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದಾಗ  ಸಂಶೋಧನೆ ನಡೆಸಿದ್ದರು. ಅಂತಹ ಸಂದರ್ಭಗಳಲ್ಲಿ, ನಾವು ಪ್ರತಿದಿನ ಸೇವಿಸುವ ಆಹಾರವು ಹೇಗಿರುತ್ತದೆ ಎಂಬುದನ್ನು ಶೋಧಿಸಲು ಅವರು ನಿರ್ಧರಿಸಿದ್ದರು.  ವರ್ಸೆಕ್ಸ್ ಅಂಟಾರ್ಕ್ಟಿಕಾದ ಶೀತ, ಕಠಿಣ ವಾತಾವರಣದಲ್ಲಿ ಆಹಾರಕ್ಕೆ ಏನಾಗುತ್ತದೆ ಎಂಬುದನ್ನು ತೋರಿಸುವ ಹಲವು ಫೋಟೋಗಳ ಸರಣಿಯನ್ನು  Instagram ನಲ್ಲಿ ಈಗಾಗಲೇ ಹಲವು ಬಾರಿ ಪೋಸ್ಟ್ ಮಾಡಿದ್ದಾರೆ.  -60 ಡಿಗ್ರಿ ಸೆಲ್ಸಿಯಸ್ ತಾಪಮಾನವೂ ಹೊರಾಂಗಣದಲ್ಲಿ ಅಡುಗೆಗೆ ಅವಕಾಶ ನೀಡುತ್ತದೆಯೇ ಎಂಬುದನ್ನು  ಅವರು  ಅಧ್ಯಯನ ಮಾಡಿದರು.  ಆದರೆ ಅವರ ಈ ಪ್ರಯೋಗವು ಒಳ್ಳೆಯದಲ್ಲ ಎಂದು ಅವರಿಗೆ ಅನಿಸಿತು.

ಮಂಜುಗಡ್ಡೆಯಾಗಿ ಬದಲಾದ ನಯಾಗಾರ ಫಾಲ್ಸ್: ಫೋಟೋಸ್ ವೈರಲ್

ಅಮೆರಿಕಾ ಹಿಂದೆಂದೂ ಕಂಡು ಕೇಳರಿಯದ ಬಾಂಬ್ ಹಿಮಪಾತದಿಂದ ಈ ಬಾರಿ ನಲುಗಿದ್ದು, ಡಿಸೆಂಬರ್ 25 ರ ಕ್ರಿಸ್‌ಮಸ್ ದಿನದಂದು ದೇಶವನ್ನಪ್ಪಳಿಸಿದ ಹಿಮಪಾತಕ್ಕೆ ಸಿಲುಕಿ ಅಮೆರಿಕಾದಲ್ಲಿ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಮಪಾತದ ಕರಾಳತೆಗೆ ಸಿಲುಕಿ ವಿಶ್ವ ವಿಖ್ಯಾತ ನಯಾಗಾರ ಜಾಲಪಾತವೂ ನಲುಗಿದ್ದು, ಹಿಮಪಾತದಿಂದ ಹಿಮದಂತೆ ಗಟ್ಟಿಯಾದ ನಯಾಗಾರ ಪಾಲ್ಸ್‌ನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಿಮಪಾತದಿಂದಾಗಿ ಜಲಾಶಯವೂ ಈಗ ಚಳಿಗಾಲದ ವಂಡರ್‌ಲ್ಯಾಂಡ್‌ನಂತೆ ಕಾಣಿಸುತ್ತಿದೆ. ಮೈನಸ್‌ ಶೂನ್ಯ ತಾಪಮಾನದಿಂದಾಗಿ ನಯಾಗರಾ ಜಲಪಾತವು ಭಾಗಶಃ ಹೆಪ್ಪುಗಟ್ಟಿದ್ದು, ಚಳಿಗಾಲದ ಅದ್ಭುತ ಲೋಕದಂತೆ ಕಾಣಿಸುತ್ತಿದೆ. 

 
 
 
 
 
 
 
 
 
 
 
 
 
 
 

A post shared by Jake Fischer (@voicesofjake)

 

Follow Us:
Download App:
  • android
  • ios