ನಿಂಬು ಶರಬತ್ತು ಮಾಡೋ ಕಾಲ ಬಂದಿದೆ.. ಪರ್ಫೆಕ್ಟ್ ಲೆಮನೇಡ್ ಮಾಡೋದು ಹೀಗೆ..

ಲೆಮನೇಡ್ ಬಾಯಾರಿಕೆ ತಣಿಸುವುದಷ್ಟೇ ಅಲ್ಲ, ರಿಫ್ರೆಶಿಂಗ್ ಕೂಡಾ. ಅಷ್ಟೇ ಅಲ್ಲದೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ತರುವ ಪರ್ಫೆಕ್ಟ್ ಲೆಮನೇಡ್ ಮಾಡೋದು ಹೇಗೆ?

Summer drink lemonade this is the perfect formula to make it skr

ನಿಂಬೆ ಪಾನಕವು ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಪಾನೀಯ. ಎಲ್ಲ ಜ್ಯೂಸ್‌ಗಳಿಗಿಂತ ಕಡಿಮೆ ವೆಚ್ಚದಲ್ಲಿ ಎಲ್ಲವುಕ್ಕಿಂತ ಹೆಚ್ಚಿನ ಆರೋಗ್ಯ ಲಾಭಗಳನ್ನು ತರುತ್ತದೆ. ರುಚಿಯಲ್ಲೂ ರಿಫ್ರೆಶಿಂಗ್ ಫೀಲ್ ಕೊಡುವ ಲೆಮನೇಡ್ ದೇಹಕ್ಕೆ ವಿಟಮಿನ್ ಸಿಯನ್ನು ಅಧಿಕ ಪ್ರಮಾಣದಲ್ಲಿ ಪೂರೈಸುತ್ತದೆ. ಈ ಕಾರಣದಿಂದ ಒಂದು ಲೋಟ ನಿಂಬೆ ನೀರು ಕುಡಿದ ತಕ್ಷಣ ದೇಹಕ್ಕೆ ಶಕ್ತಿ ಬಂದಂತೆ ಕಾಣುತ್ತದೆ. ಆದಾಗ್ಯೂ, ಅನೇಕ ಜನರಿಗೆ ಅದನ್ನು ಮಾಡುವ ಸರಿಯಾದ ಮಾರ್ಗ ತಿಳಿದಿಲ್ಲ, ಇದರಿಂದಾಗಿ ಅವರ ಶರಬತ್ತು ಸಪ್ಪೆಯೆನಿಸುತ್ತದೆ. 

ನಿಂಬೆ ಪಾನಕವನ್ನು ತಯಾರಿಸುವ ಪರಿಪೂರ್ಣ ವಿಧಾನ, ಕೆಲವು ಸಲಹೆಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ನಾವು ತಿಳಿದುಕೊಳ್ಳೋಣ.

ನಿಂಬೆ ಶರಬತ್ತಿನ ಆರೋಗ್ಯ ಪ್ರಯೋಜನಗಳು
ನಿಂಬೆ ನೀರು ಬೇಸಿಗೆಯಲ್ಲಿ ಶಾಖದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ನಿಂಬೆ ನೀರು ದೇಹವನ್ನು ಪುನರ್ಜಲೀಕರಣಗೊಳಿಸಲು ಸಹಾಯ ಮಾಡುತ್ತದೆ.
ತಾಲೀಮು ಅಥವಾ ಯಾವುದೇ ದೈಹಿಕ ಚಟುವಟಿಕೆಯ ನಂತರ ದೇಹದಲ್ಲಿ ಉಪ್ಪನ್ನು ಮರುಸ್ಥಾಪಿಸುತ್ತದೆ.
ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ.

ಸ್ಲೀಪ್ ಡೈವೋರ್ಸ್ ಎಂದ್ರೇನು ಗೊತ್ತಾ? ಸಂಬಂಧ ಸುಧಾರಣೆ ಮಾಡುತ್ತೆ ನಿದ್ರೆಯ ವಿಚ್ಚೇದನ
 

ನಿಂಬೆ ಪಾನಕ ತಯಾರಿಸಲು ಬೇಕಾಗುವ ಪದಾರ್ಥಗಳು
ನಿಂಬೆಹಣ್ಣು
ಸಕ್ಕರೆ/ಬೆಲ್ಲ
ನೀರು
ಕಪ್ಪು ಉಪ್ಪು

ನಿಂಬೆ ಪಾನಕ ಮಾಡುವುದು ಹೇಗೆ?
ದೊಡ್ಡ ಅಳತೆಯ ಕಪ್ ಮೇಲೆ ಸ್ಟ್ರೈನರ್ ಅನ್ನು ಇರಿಸಿ. ಜರಡಿ ಮೇಲೆ ನಿಂಬೆ ರಸವನ್ನು ಹಿಂಡಿ. ಇದರಿಂದ ಎಲ್ಲಾ ಬೀಜಗಳು ಮತ್ತು ತಿರುಳು ಜರಡಿಯಲ್ಲೇ ಉಳಿಯುತ್ತದೆ
ಬೀಜಗಳು ಮತ್ತು ತಿರುಳನ್ನು ತೆಗೆದುಹಾಕಿ. ನಿಂಬೆ ರಸಕ್ಕೆ ಸಕ್ಕರೆ ಸೇರಿಸಿ.
ಈಗ ಅದಕ್ಕೆ ಕಪ್ಪು ಉಪ್ಪನ್ನು ಸೇರಿಸಿ.
ಅಂತಿಮವಾಗಿ ನೀರು ಸೇರಿಸಿ ಮಿಶ್ರಣ ಮಾಡಿ. ಸಕ್ಕರೆ ಸಂಪೂರ್ಣವಾಗಿ ನೀರಿನಲ್ಲಿ ಕರಗುವ ತನಕ ಬೆರೆಸಿ. ಸರ್ವಿಂಗ್ ಗ್ಲಾಸ್‌ಗಳಲ್ಲಿ ಸುರಿಯಿರಿ (ಬಯಸಿದಲ್ಲಿ ಐಸ್ ಕ್ಯೂಬ್‌ಗಳನ್ನು ಸೇರಿಸಿ).

ಕಾಜೋಲ್‌ನಿಂದ ದೀಪಿಕಾ ಪಡುಕೋಣೆವರೆಗೆ.. ತ್ವಚೆಯ ಬಣ್ಣ ಬದಲಿಸಿಕೊಂಡ ಬಿ ಟೌನ್ ಬೆಡಗಿಯರಿವರು
 

ಪರಿಪೂರ್ಣ ನಿಂಬೆ ಪಾನಕ ಮಾಡಲು ಸಲಹೆಗಳು
ಸಕ್ಕರೆಯ ಪ್ರಕಾರವನ್ನು ಅವಲಂಬಿಸಿ, ನಿಂಬೆ ಪಾನಕದ ಬಣ್ಣವು ಬದಲಾಗಬಹುದು.
ತಣ್ಣನೆಯ ನಿಂಬೆ ಪಾನಕವನ್ನು ತಕ್ಷಣ ಕುಡಿಯಲು, ಯಾವಾಗಲೂ ತಣ್ಣನೆಯ ನೀರನ್ನು ಬಳಸಿ.
ನಿಂಬೆ ಪಾನಕವು ಯಾವಾಗಲೂ ಹುಳಿ, ಉಪ್ಪು ಹಾಗೂ ಸಿಹಿಯ ಮಿಶ್ರ ರುಚಿ ನೀಡಬೇಕು.
ತಾಜಾ ನಿಂಬೆ ರಸವು ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಸದ್ಯಕ್ಕೆ ನಿಮ್ಮ ಬಳಿ ನಿಂಬೆಹಣ್ಣು ಇಲ್ಲದಿದ್ದರೆ, ನೀವು ಅಂಗಡಿಯಲ್ಲಿ ಖರೀದಿಸಿದ ಬಾಟಲ್ ನಿಂಬೆ ರಸವನ್ನು ಸಹ ಬಳಸಬಹುದು. ಆದಾಗ್ಯೂ, ಕೃತಕ ರಸವು ಅದರ ರುಚಿಯಲ್ಲಿ ವ್ಯತ್ಯಾಸವನ್ನು ಉಂಟು ಮಾಡಬಹುದು.
ಹೆಚ್ಚು ನಿಂಬೆ ರಸ ಸೇರಿಸಿದಷ್ಟೂ ರುಚಿ ಹೆಚ್ಚು.

Latest Videos
Follow Us:
Download App:
  • android
  • ios