Cooking Tips: ಅಡುಗೆ ಮನೆ ಕೆಲ್ಸ ಈಝಿಯಾಗಲು ಅಜ್ಜಿ ಹೇಳಿ ಕೊಟ್ಟಿರೋ ಗುಟ್ಟುಗಳಿವು
ಪ್ಲೇಟ್‌ಗೆ ಹಾಕಿಕೊಟ್ರೆ ತಿನ್ನೋದು ಸುಲಭ. ಆದ್ರೆ ಅಡುಗೆ (Cooking) ಮಾಡೋದು ಎಷ್ಟೊಂದು ಕಷ್ಟ ಅನ್ನೋರ ಪೈಕಿ ನೀವು ಕೂಡಾ ಒಬ್ರಾ. ಹಾಗಿದ್ರೆ ಇಲ್ಲಿದೆ ಅಡುಗೆ ಮನೆ (Kitchen) ಕೆಲ್ಸ ಈಝಿಯಾಗಲು ಅಜ್ಜಿ ಹೇಳಿಕೊಟ್ಟಿರೋ ಕೆಲವೊಂದು ಟಿಪ್ಸ್. ಮತ್ತೆ ಇವು ಇವತ್ತಿನ ನಿನ್ನೆಯ ಐಡಿಯಾಗಳಲ್ಲ. 100 ವರ್ಷಕ್ಕೂ ಹಿಂದಿನ ಕಾಲದಲ್ಲಿ ಅನುಸರಿಸುತ್ತಿದ್ದ ಅಡುಗೆ ಸೂತ್ರಗಳು.
ಅಡುಗೆ (Cooking) ಮಾಡುವುದು ಒಂದು ಕಲೆ. ಪ್ರತಿಯೊಬ್ಬರಿಗೂ ಕುಕ್ಕಿಂಗ್ ಬಗ್ಗೆ ಆಸಕ್ತಿಯಿರುವುದಿಲ್ಲ. ಅಡುಗೆ ಮನೆ, ಅಡುಗೆ, ಕಿಚನ್ ಹ್ಯಾಕ್ ಬಗ್ಗೆ ಆಸಕ್ತಿಯಿರುವವರು ಇದರ ಬಗ್ಗೆ ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ನಮ್ಮ ಹೆಚ್ಚಿನ ಆರಂಭಿಕ ಅಡುಗೆ ಪಾಠಗಳು ಕುಟುಂಬದ ಹಿರಿಯರಿಂದ ಬಂದಂಥವು. ಮತ್ತು ನಾವು ಈ ಅಡುಗೆ ಸಲಹೆಗಳನ್ನು ಜೀವನದುದ್ದಕ್ಕೂ ಅನುಸರಿಸುತ್ತಿದ್ದೇವೆ. ಹಲವಾರು ಪಾಕಶಾಲೆಯ ಸಲಹೆಗಳು ಮತ್ತು ತಂತ್ರಗಳು ತಲೆಮಾರುಗಳಿಂದ ರವಾನಿಸಲ್ಪಟ್ಟಿವೆ. ಹಾಗೆಯೇ ವಿಚಿತ್ರವಾಗಿವೆ. ಆದರೆ ಈ ಎಲ್ಲಾ ಅಡುಗೆ ಸಲಹೆಗಳನ್ನು ನಂಬಲು ಯೋಗ್ಯವಾಗಿದೆಯೇ. 100 ವರ್ಷಗಳಿಂದ ಅಸ್ತಿತ್ವದಲ್ಲಿರುವ ಕೆಲವು ಹಳೆಯ ಕಿಚನ್ ಹ್ಯಾಕ್ (Kitchen Hack) ಬಗ್ಗೆ ನಾವು ನಿಮ್ಗೆ ತಿಳಿಸ್ತೀವಿ.
ಉಪ್ಪು ವೇಗವಾಗಿ ಅಡುಗೆ ಮಾಡಲು ಸಹಾಯ ಮಾಡುತ್ತದೆ
ಭಾರತದಲ್ಲಿ, ಕುದಿಯುವ ನೀರಿಗೆ ಉಪ್ಪನ್ನು ಸೇರಿಸುವುದು ಬೇಗನೇ ಅಡುಗೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಈ ಕಿಚನ್ ಹ್ಯಾಕ್ ಬಳಸಲು ನಿರ್ಧಿಷ್ಟ ಕಾರಣ ಸಹ ಇದೆ. ಉಪ್ಪಿನ ಕುದಿಯುವ ಬಿಂದು ನೀರಿಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಇದು ಅಡುಗೆ ಬೇಗ ತಯಾರಾಗಲು ನೆರವಾಗುತ್ತದೆ.
ಮಸಾಲೆಗಳನ್ನು ಯಾವಾಗ ಸೇರಿಸಬೇಕು
ಬೆಳ್ಳುಳ್ಳಿಯನ್ನು ಮೊದಲು ಹುರಿಯಬೇಕು ಅಥವಾ ಸಾಸಿವೆ ಹಾಕುವ ಮೊದಲು ಜೀರಿಗೆ ಹಾಕಬೇಕು ಎಂದು ನೀವು ಕೇಳಿರಬಹುದು. ಭಾರತೀಯ ಅಡುಗೆಯಲ್ಲಿ ಮಸಾಲೆ (Spice)ಗಳು, ಗಿಡಮೂಲಿಕೆಗಳನ್ನು ಯಾವಾಗ ಹಾಕಬೇಕೆಂದು ನಿರ್ಧಿಷ್ಟ ಮಾನದಂಡಗಳಿವೆ. ಮಸಾಲೆಗಳು ಮತ್ತು ಗಿಡಮೂಲಿಕೆಗಳು ವಿಶಿಷ್ಟ ಪರಿಮಳವನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಹೀಗಾಗಿ ಇದನ್ನು ಸಮರ್ಪಕ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಬಳಸುವುದರಿಂದ ಮಾತ್ರ ಇದು ಖಾದ್ಯಕ್ಕೆ ಹೆಚ್ಚಿನ ರುಚಿಯನ್ನು ಕೊಡುತ್ತದೆ.
Kitchen Hacks: ತರಕಾರಿ, ಹಣ್ಣು ಕಟ್ ಮಾಡೋದು ಅಂದ್ರೆ ತಲೆನೋವಾ ? ಇಲ್ಲಿದೆ ಸೂಪರ್ ಐಡಿಯಾ
ಹಣ್ಣು, ತರಕಾರಿ ಕತ್ತರಿಸಲು ಎರಡು ಚಾಕು ಬಳಕೆ
ಒಂದು ಹಣ್ಣನ್ನು ಕತ್ತರಿಸಲು ಎರಡು ಚಾಕು (Knife)ಗಳನ್ನು ಬಳಸುವುದು ಅತ್ಯಂತ ವಿಚಿತ್ರವಾದ ವಿಷಯವೆಂದು ತೋರುತ್ತದೆ. ಆದರೆ 1920ರ ದಶಕದಲ್ಲಿ ಇದು ಸಾರ್ವಕಾಲಿಕ ಮತ್ತು ಅತ್ಯಂತ ಸಾಮಾನ್ಯ ಅಡಿಗೆ ಹ್ಯಾಕ್ ಆಗಿತ್ತು. ಉದಾಹರಣೆಗೆ ಅನಾನಸ್ ಕತ್ತರಿಸುವಾಗ, ಒಂದು ಚಾಕುವನ್ನು ಅನಾನಸ್‌ನ ಹೊರಭಾಗವನ್ನು ಕತ್ತರಿಸಲು ಮತ್ತು ಇನ್ನೊಂದು ಚಾಕುವನ್ನು ಹಣ್ಣನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಹಣ್ಣಿನ ಆಮ್ಲೀಯ ಸ್ವಭಾವ ಹರಡುವ ಕಾರಣ ಹಣ್ಣುಗಳನ್ನು ಕತ್ತರಿಸಲು ಅದೇ ಚಾಕುಗಳನ್ನು ಎಂದಿಗೂ ಬಳಸಲಾಗುವುದಿಲ್ಲ.
ಕೊಬ್ಬನ್ನು ಕಳೆದುಕೊಳ್ಳಲು ದ್ರಾಕ್ಷಿಹಣ್ಣು
ಪ್ರತಿ ಊಟಕ್ಕೂ ಮೊದಲು ದ್ರಾಕ್ಷಿಹಣ್ಣಿನ ಒಂದು ಭಾಗವನ್ನು ತಿನ್ನುವುದು ತೂಕ ನಷ್ಟ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿತ್ತು. ಈ ಆಹಾರವು 1930ರ ದಶಕದಲ್ಲಿ ಪ್ರಸಿದ್ಧ ವ್ಯಕ್ತಿಗಳು ಮತ್ತು ಆರೋಗ್ಯ ಉತ್ಸಾಹಿಗಳಲ್ಲಿ ಒಂದು ಫ್ಯಾಶನ್ ಆಯಿತು.
Kitchen Tips: ಮನೇಲಿ ಫ್ರಿಡ್ಜ್ ಇಲ್ವಾ ? ಪರ್ವಾಗಿಲ್ಲ ಹೀಗಿಟ್ರೂ ಹಣ್ಣು, ತರಕಾರಿ ಫ್ರೆಶ್ ಆಗಿರುತ್ತೆ
ಅಳತೆ ಮಾಡಲು ಸರಿಯಾದ ಮಾಪನ
1900ರಲ್ಲಿ, ಪದಾರ್ಥಗಳನ್ನು ಪಿಂಚ್ ಅಥವಾ ಕೈಬೆರಳೆಣಿಕೆಯ ಪರಿಭಾಷೆಯಲ್ಲಿ ಮಾತ್ರ ಅಳೆಯಲಾಗುತ್ತಿತ್ತು. ಇದು ವಿಲಕ್ಷಣವಾಗಿ ಅನಿಸಿದರೂ ಈ ಸಂದರ್ಭದಲ್ಲಿ ಬೇರೆ ಯಾವುದೇ ವಿಧಾನವಿರಲ್ಲಿಲ್ಲ. ಫ್ಯಾನಿ ಫಾರ್ಮರ್ ಪದಾರ್ಥಗಳನ್ನು ಅಳೆಯುವ ಸರಳ ಮತ್ತು ನಿಖರವಾದ ವಿಧಾನವನ್ನು ಪರಿಚಯಿಸುವ ಮೊದಲು ಇದೇ ಪದ್ಧತಿ ಮುಂದುವರಿದಿತ್ತು.
ಆಹಾರ ಸುಡುವುದನ್ನು ತಪ್ಪಿಸಲು ನೀರಿನ ಬಳಕೆ
1920ರ ದಶಕದಲ್ಲಿ ಇದು ಸಾಮಾನ್ಯವಾದ ಅಡುಗೆ ಮತ್ತು ಬೇಕಿಂಗ್ ಹ್ಯಾಕ್ ಆಗಿದ್ದು, ಕೇಕ್ ಅಥವಾ ಬ್ರೆಡ್ ಬೇಯಿಸುವಾಗ, ಸ್ವಲ್ಪ ಪ್ರಮಾಣದ ನೀರಿನೊಂದಿಗೆ ಬೌಲ್ ಅನ್ನು ಇಡುವುದರಿಂದ ಆಹಾರ (Food) ಸುಡುವುದನ್ನು ತಡೆಯುತ್ತದೆ ಎಂದು ನಂಬಲಾಗಿತ್ತು.
ಹಾಲಿನೊಂದಿಗೆ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ
1920ರ ದಶಕದಲ್ಲಿ ಹುಳಿ ಹಾಲಿನೊಂದಿಗೆ ಬೇಕಿಂಗ್ ಸೋಡಾ (Baking Soda)ವನ್ನು ಬೆರೆಸುವುದು ಸಿಹಿಗೊಳಿಸಲು ಮತ್ತು ಹಾಲನ್ನು ಕುಡಿಯಲು ಜನಪ್ರಿಯ ವಿಧಾನವಾಗಿತ್ತು. ತಾಜಾ ಹಾಲಿನ ಆಮ್ಲೀಕರಣವನ್ನು ಕಡಿಮೆ ಮಾಡಲು ಇದನ್ನು ಮುಖ್ಯವಾಗಿ ಸೇರಿಸಲಾಗುತ್ತಿತ್ತು.