Delicious Dishes : ಹಾಲು ಒಡೆದರೆ ಏ ಕೆ ಚಿಂತೆ? ಸ್ವೀಟ್ ಮಾಡ್ಬಹುದು ನೋಡಿ

ಅಯ್ಯೋ..ಬೆಳಿಗ್ಗೆ ತಂದ ಹಾಲು ಸಂಜೆ ಆಗೋದ್ರಲ್ಲಿ ಒಡೆದು ಹೋಯ್ತು. ಬೇಸಿಗೆ ಶುರುವಾದ್ರೆ ಇದೇ ಗೋಳು. ದುಡ್ಡು ದಂಡ ಅಂತಾ ಬೈದುಕೊಳ್ಳುವ ಮಹಿಳೆಯರು ಒಡೆದ ಹಾಲಿನಲ್ಲಿ ಏನೇನು ಮಾಡ್ಬಹುದು ಅಂತಾ ತಿಳಿದ್ಕೊಳ್ಳಿ. 
 

Spoiled mil recipes that would be delicious and tasty easy to make

ಬೇಸಿಗೆ (Summer) ಕಾಲ ಶುರುವಾಗ್ತಿದ್ದಂತೆ ಆಹಾರ (Food), ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅನೇಕ ಬಾರಿ ಅಡುಗೆ ಮನೆ (Kitchen) ಯಲ್ಲಿ ಇಟ್ಟಿರುವ ಆಹಾರ ಪದಾರ್ಥಗಳು ಕೆಡುತ್ತವೆ. ಫ್ರಿಜ್ (Fridge) ಇಲ್ಲದ ಮನೆಯಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚು. ಅನೇಕರು ಫ್ರಿಜ್ ನಲ್ಲಿ ಆಹಾರವನ್ನಿಡುವುದಿಲ್ಲ. ಹಾಗಾಗಿ ಆಹಾರ ಬಹಳ ಬೇಗ ಹಾಳಾಗುತ್ತದೆ. ಅದ್ರಲ್ಲೂ ಹಾಲು ಇದ್ರಲ್ಲಿ ಎತ್ತಿದ ಕೈ. ಹಾಲನ್ನು ಸರಿಯಾದ ಸಮಯಕ್ಕೆ ಕಾಯಿಸದೆ ಹೋದ್ರೆ ಅಥವಾ ಹಾಲನ್ನು ಫ್ರಿಜ್ ನಲ್ಲಿ ಇಡದೆ ಹೋದ್ರೆ ಸಂಜೆಯೊಳಗೆ ಹಾಲು ಹಾಳಾಗುತ್ತದೆ. ಒಲೆ ಮೇಲೆ ಹಾಲಿನ ಪಾತ್ರೆ ಇಡ್ತಿದ್ದಂತೆ ಹಾಲು ಒಡೆಯಲು ಶುರುವಾಗುತ್ತದೆ. ಈ ಹಾಲನ್ನು ಬಹುತೇಕರು ಬಳಸುವುದಿಲ್ಲ. ಹಾಲು ಹಾಳಾಗಿದೆ ಎನ್ನುತ್ತ ಅದನ್ನು ಎಸೆಯುತ್ತಾರೆ.  ಹಾಲು ಹಾಳಾದ್ರೆ ಅದನ್ನು ಎಸೆಯಬೇಡಿ. ಹಾಳಾದ ಹಾಲಿನಲ್ಲೂ ಅನೇಕ ಖಾದ್ಯಗಳನ್ನು ತಯಾರಿಸಬಹುದು. ಹಾಗಾಗಿ ನಿಮ್ಮ ಮನೆಯಲ್ಲೂ ಒಡೆದ ಹಾಲಿದ್ದರೆ ಅದನ್ನು ಚೆಲ್ಲುವ ಮೊದಲು ಇದನ್ನೋದಿ. ಇಂದು ನಾವು ಒಡೆದ ಹಾಲನ್ನು ಹೇಗೆಲ್ಲ ಬಳಸ್ಬಹುದು ಎಂಬುದನ್ನು ಹೇಳ್ತೇವೆ.  

ಒಡೆದ ಹಾಲನ್ನು ಹೀಗೆ ಬಳಸಿ : ಬೇಸಿಗೆಯಲ್ಲಿ ಮಾತ್ರವಲ್ಲ ಮನೆಯಲ್ಲಿ ಯಾವಾಗ ಹಾಲು ಒಡೆದ್ರೂ ನೀವು ಅದಕ್ಕೆ ಪನ್ನೀರಿನ ರೂಪ ನೀಡ್ಬಹುದು. ಮೊದಲು ಹಾಲನ್ನು ಸರಿಯಾಗಿ ಒಡೆಯಲು ಬಿಡಿ. ನಂತ್ರ ಅದರ ನೀರನ್ನು ತೆಗೆಯಿರಿ. ಒಂದು ಹತ್ತಿ ಬಟ್ಟೆಯೊಳಗೆ ಇದನ್ನು ಹಾಕಿ, ಸರಿಯಾಗಿ ಕಟ್ಟಿ ಅದ್ರ ಮೇಲೆ ಭಾರವಾದ ವಸ್ತುವನ್ನು ಇಡಿ. ಹಾಗ ಹಾಲಿನಲ್ಲಿರುವ ದ್ರವ ಕಡಿಮೆಯಾಗಿ ಅದು ಪನ್ನೀರ್ ರೂಪ ಪಡೆಯುತ್ತದೆ. 

ಸೂಪ್ : ಸೂಪ್ ಇಷ್ಟಪಡುವವರು ನೀವಾಗಿದ್ದರೆ ಹಾಳಾದ ಹಾಲನ್ನು ಸೂಪ್ ಗೆ ಹಾಕಬಹುದು. ಇದು ಸೂಪ್ ಸ್ವಾದವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಒಡೆದ ಹಾಲಿಗೆ ಮೊಸರನ್ನು ಸೇರಿಸಿ ನೀವು ಮೊಸರು ಮಾಡ್ಬಹುದು. ನಂತ್ರ ಅದನ್ನು ಮಿಕ್ಸಿ ಮಾಡಿ, ಮಜ್ಜಿಗೆ ತಯಾರಿಸಿ ಅದಕ್ಕೆ ಜೀರಿಗೆ ಪುಡಿ ಹಾಕಿ ಕುಡಿದ್ರೆ ಒಳ್ಳೆಯದು. ಬೇಸಿಗೆಯಲ್ಲಿ ಮಜ್ಜಿಗೆ ದೇಹವನ್ನು ತಂಪುಗೊಳಿಸುತ್ತದೆ. ನೀವು ಮೊಸರಾಗಿಯೂ ಇದನ್ನು ಬಳಸಬಹುದು. ಈ ಮೊಸರನ್ನು ತರಕಾರಿ ಗ್ರೇವಿ ಅಥವಾ ಕರಿಗೆ ಬಳಸಬಹುದು. 

ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿಂದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ

ಕೇಕ್ : ಒಡೆದ ಹಾಲನ್ನು ಕೇಕ್ ತಯಾರಿಸಲು ನೀವು ಬಳಸಬಹುದು. ಹಾಲು ಒಡೆದಿದೆ ಎಂದು ಚಿಂತಿಸುವ ಬದಲು, ಅದನ್ನು ಕೇಕ್ ಹಿಟ್ಟಿಗೆ ಸೇರಿಸಿ ಬೇಯಿಸಬೇಕು. ಕೇಕ್ ಗೆ ಒಡೆದ ಹಾಲನ್ನು ಹಾಕಿದ್ರೆ ಅದು ಕೇಕ್ ರುಚಿಯನ್ನು ಹೆಚ್ಚಿಸುತ್ತದೆ. ಒಡೆದ ಹಾಲು ಕೇಕ್‌ನಲ್ಲಿ ಅಡಿಗೆ ಸೋಡಾದಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಕೇಕ್ ಹಾಳಾಗುವುದನ್ನು ತಡೆಯುತ್ತದೆ. ಹರಿದ ಹಾಲಿನಿಂದ ಮೊಸರು ತುಂಬಾ ಟೇಸ್ಟಿ ಆಗುತ್ತದೆ. ನೀವು ಈ ಮೊಸರನ್ನು ತರಕಾರಿ ಗ್ರೇವಿ ಅಥವಾ ಕರಿಯಲ್ಲಿ ಬಳಸಬಹುದು.

ಐಸ್ ಕ್ರೀಂ : ಬೇಸಿಗೆಯಲ್ಲಿ ಎಲ್ಲರೂ ಇಷ್ಟಪಡುವ ಆಹಾರದಲ್ಲಿ ಐಸ್ ಕ್ರೀಂ ಕೂಡ ಒಂದು. ಅನೇಕರು ಪ್ರತಿ ದಿನ ಐಸ್ ಕ್ರೀಂ ಸೇವನೆ ಮಾಡ್ತಾರೆ. ಮನೆಯಲ್ಲಿಯೇ ಐಸ್ ಕ್ರೀಂ ತಯಾರಿಸುವ ಪ್ಲಾನ್ ಇದ್ರೆ  ನೀವು ಒಡೆದ ಹಾಲನ್ನು ಬಳಸಬಹುದು. ಒಡೆದ ಹಾಲನ್ನು ಸ್ಮೂಥಿಗೂ ಬಳಸಬಹುದು. ಸ್ಮೂಥಿಗೆ ಐಸ್ ಕ್ರೀಂ ಬದಲು ಒಡೆದ ಹಾಲನ್ನು ಹಾಕ್ಬಹುದು.  ಇದು ಸ್ಮೂಥಿಯನ್ನು ಇನ್ನಷ್ಟು ಮೃದು ಹಾಗೂ ಟೇಸ್ಟಿಯಾಗಿಸುತ್ತದೆ. 

ಎಳ್ಳಿನ ಬಿಸ್ಕೆಟ್‌ ಎಂದು ಗಬಗಬನೇ ತಿಂದ ಮಹಿಳೆ, ಅಲ್ಲಿದ್ದಿದ್ದು ಇರುವೆಯ ರಾಶಿ..! ಮುಂದೆ ಆಗಿದ್ದೇನು ?

ರಸಗುಲ್ಲ : ಸಿಹಿ ಇಷ್ಟ ಎನ್ನುವವರು ಒಡೆದ ಹಾಲನ್ನು ಬಳಸಿಕೊಂಡು ರಸಗುಲ್ಲ ಮಾಡ್ಬಹುದು. ಇದನ್ನು ಮಾಡುವುದು ಸುಲಭ. ಹಾಗಾಗಿ ಒಡೆದ ಹಾಲನ್ನು ಎಸೆಯುವ ಮುನ್ನ ಇದ್ರಲ್ಲಿ ಯಾವ ರೆಸಪಿ ನಿಮಗೆ ಬೆಸ್ಟ್ ಎಂದು ಆಲೋಚನೆ ಮಾಡಿ ನಂತ್ರ ಟ್ರೈ ಮಾಡಿ.

Latest Videos
Follow Us:
Download App:
  • android
  • ios