#JackFruitDay ತ್ವಚೆಗೂ ಮದ್ದು, ಲೈಂಗಿಕ ಸಮಸ್ಯೆಗೂ ರಾಮಬಾಣ!
ಹಲಸಿನ ಹಣ್ಣು ತಿನ್ನೋ ಮಜಾನೇ ಬೇರೆ. ಪಕ್ಕದಲ್ಲಿ ಸ್ವಲ್ಪ ಜೇನುತುಪ್ಪ ಇದ್ದರಂತೂ ಮನುಷ್ಯ ಕರಡಿ ಆಗಿಬಿಡುತ್ತಾನೆ. ಒಂದೇ ಒಂದು ಸೊಳೆ ಅಂತ ಹೇಳ್ಕೊಂಡು ಇಡೀ ಅರ್ಧ ಹಣ್ಣನ್ನೇ ತಿಂದು ಮುಗಿಸಿರುತ್ತೇವೆ. ಅದರಲ್ಲಿಯೂ ಮಲೆನಾಡಲ್ಲಂತೂ ಈ ಹಲಿಸನ ಸೀಸನ್‌ನಲ್ಲಿ ಹಣ್ಣು ತಿನ್ನೋದು, ಅದರ ವಿಧ ವಿಧ ಭಕ್ಷ್ಯ ಮಾಡೋದು ಒಂದು ಸಂಸ್ಕೃತಿ. 'ಹಸಿದ ಹೊಟ್ಟೆಗೆ ಹಲಸು, ಉಂಡ ಹೊಟ್ಟೆಗೆ ಮಾವು' ಎಂಬ ಗಾದೆಯೇ ಇದೆ. ಹಸಿದಾಗ ಹಲಸು ತಿಂದ್ರೆ ಆಗೋ ಲಾಭವೂ ಅಷ್ಟಿಷ್ಟಲ್ಲ. ಈ ಹಳದಿ ಸುವಾಸನೆಯುಕ್ತ ಹಣ್ಣಿಗೂ ದಿನವೊಂದಿದೆ. ಈ ಫಲದಿಂದ ಆಗೋ ಆರೋಗ್ಯ ಲಾಭಗಳೇನು?

ಲೆಕ್ಕವಿಲ್ಲದಷ್ಟು ಪ್ರೊಟೀನ್ ಅಂಶ ಹೊಂದಿರುವ ಹಲಸಿನ ಹಣ್ಣಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜುಲೈ 4ರಂದು Jackfruit Day ಎಂದು ಆಚರಿಸಲಾಗುತ್ತದೆ.

ಒಂದು ಹಲಸಿನ ಮರದಲ್ಲಿ ಸುಮಾರು 250 ಹಣ್ಣುಗಳು ಬಿಡುತ್ತವೆ.

ಒಂದು ಹಣ್ಣಿನಲ್ಲಿ ಸುಮಾರು 500 ತೊಳೆಗಳಿರುತ್ತದೆ.

ಅಚ್ಚರಿ ಅಂದರೆ ಹಲಸು ವೇಸ್ಟ್ ಆಗುವುದಿಲ್ಲ. ಹಣ್ಣು ಮನುಷ್ಯ ತಿಂದರೆ ಸಿಪ್ಪೆಯನ್ನು ಪ್ರಾಣಿಗಳು ತಿನ್ನುತ್ತವೆ. ಬೀಜವನ್ನು ಸಂಗ್ರಹಿಸಿಟ್ಟುಕೊಂಡರೆ ವರ್ಷಪೂರ್ತಿ ಸಾಂಬರ್, ಪಲ್ಯ, ಹುಸ್ಲಿ, ಹಲ್ವಾ ಇತ್ಯಾದಿಗಳನ್ನು ಮಾಡಿಕೊಳ್ಳಬಹುದು.

ಹಲಸಿನ ಬೀಜದಲ್ಲಿ ಅಧಿಕ ಪೋಷಕಾಂಶಗಳಿದ್ದು, ಸ್ನಾಯುಗಳನ್ನು ಬಲಿಷ್ಠಗೊಳ್ಳಿಸುತ್ತದೆ.

ಅಷ್ಟೇ ಅಲ್ಲ ಹಿಂದಿನ ಕಾಲದಲ್ಲಿ ಲೈಂಗಿಕ ಸಮಸ್ಯೆಗಳಿಗೂ ಪರಿಹಾರವಾಗಿ ಹಲಸಿನ ಬೀಜವನ್ನೇ ಬಳಸುತ್ತಿದ್ದರು. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದೆ.

ಹಲಸಿನ ಹಣ್ಣಿನ ಕಡುಬು, ಹಲ್ವಾ ಮತ್ತು ಅನೇಕ ವಿಧದ ರುಚಿಕರ ರೆಸಿಪಿಗಳನ್ನು ಟ್ರೈ ಮಾಡಬಹುದು.

ಕೂದಲು ಬೆಳವಣಿಗೆಗೂ ಈ ಹಣ್ಣು ಸಹಕಾರಿ.

ಕೂದಲು ಬೆಳವಣಿಗೆಗೂ ಈ ಹಣ್ಣು ಸಹಕಾರಿ.

ಹಲಸಿನ ಬೀಜವನ್ನು ಜೇನುತುಪ್ಪದ ಜೊತೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಂಡು ತ್ವಚೆಗೆ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸಿ, ರಕ್ತಹೀನತೆಯನ್ನು ದೂರ ಮಾಡಬಲ್ಲದು ಈ ಹಣ್ಣು.