Healthy Food : ಅಮೃತ ಸಮಾನ ಈ ಕಾಳಿನ ನೀರು, ಅಪ್ಪಿತಪ್ಪಿಯೂ ಚೆಲ್ಲಬೇಡಿ
ನಮ್ಮ ಆರೋಗ್ಯ ನಮ್ಮ ಅಡುಗೆ ಮನೆಯಲ್ಲಿದೆ. ನಮಗೆ ಅನೇಕ ಆಹಾರದ ಬಗ್ಗೆ ಸರಿಯಾಗಿ ತಿಳಿದಿ ಇರೋದಿಲ್ಲ. ರೋಗ ಬಂದಾಗ ಮಾತ್ರೆ ನುಂಗುವ ಬದಲು ರೋಗ ಬರದಂತೆ ಕಾಪಾಡಲು ಇಲ್ಲಿದೆ ಸೂಪರ್ ಟಿಪ್ಸ್.
ಪ್ರತಿನಿತ್ಯ ನಾವು ಅಡುಗೆಗೆಂದು ಕಾಳುಬೇಳೆಗಳನ್ನು ಉಪಯೋಗಿಸುತ್ತೇವೆ. ಅವುಗಳನ್ನು ಉಪಯೋಗಿಸುವ ಮುನ್ನ ಸಾಮಾನ್ಯವಾಗಿ ಅದನ್ನು ರಾತ್ರಿಯೇ ನೆನೆಹಾಕುತ್ತೇವೆ. ರಾತ್ರಿ ನೆನೆಹಾಕಿದ ಬೇಳೆಯನ್ನು ಮುಂಜಾನೆ ತೊಳೆದು ನಂತರ ಅದನ್ನು ಬೇಯಿಸಿ ಅಡುಗೆಯಲ್ಲಿ ಬಳಸುತ್ತೇವೆ. ನೆನೆಸಿದ ಬೇಳೆಯನ್ನೇನೋ ಅಡುಗೆಯಲ್ಲಿ ಬಳಸುತ್ತೇವೆ ನಿಜ. ಆದರೆ ನೆನೆಸಿಟ್ಟ ಬೇಳೆಯ ನೀರನ್ನು ಉಪಯೋಗಿಸದೇ ಚೆಲ್ಲುತ್ತೇವೆ. ಹಾಗೆ ನಾವು ಚೆಲ್ಲುವ ಕಾಳುಬೇಳೆಯ ನೀರು ನಮ್ಮ ಶರೀರಕ್ಕೆ ಅನೇಕ ಪ್ರಯೋಜನ ಉಂಟುಮಾಡುತ್ತದೆ.
ಕಡಲೆ ಕಾಳನ್ನು (Gram) ನಾವು ಅನೇಕ ರೀತಿಯ ಅಡುಗೆ (Cooking) ಯಲ್ಲಿ ಬಳಸುತ್ತೇವೆ. ಕಡಲೆಬೇಳೆಯಿಂದ ಮಾಡುವ ಚನಾ ಮಸಾಲಾವನ್ನು ಇಷ್ಟಪಡದವರೇ ಇಲ್ಲ. ಕಡಲೆಕಾಳಿನಿಂದ ಸಾಂಬಾರ್ (Sambar) , ಪಲ್ಯ ಮುಂತಾದವನ್ನು ಕೂಡ ತಯಾರಿಸುತ್ತಾರೆ. ಕಡಲೆಕಾಳಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಸಿಯಂ ಮುಂತಾದ ಪೋಷಕಾಂಶಗಳು ಅಡಗಿವೆ. ಇಷ್ಟೆಲ್ಲ ಪೋಷಕಾಂಶಗಳನ್ನು ಹೊಂದಿರುವ ಕಡಲೆಕಾಳಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ನೆನೆಸಿಟ್ಟ ಕಡಲೆಕಾಳಿನ ನೀರು ಕೂಡ ದೇಹಕ್ಕೆ ಅಗಾಧವಾದ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ಶರೀರಕ್ಕೆ ಅನೇಕ ರೀತಿಯ ಲಾಭಗಳಿವೆ.
HEALTH TIPS: ಟೋಮ್ಯಾಟೋ ತಿನ್ನೋದ್ರಿಂದ ಕಿಡ್ನಿ ಸ್ಟೋನ್ ಹೆಚ್ಚುತ್ತಾ?
ನೆನೆಸಿಟ್ಟ ಕಡೆಲೆಯ ನೀರಿನಲ್ಲಿದೆ ಹಲವು ಪ್ರಯೋಜನ :
ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುತ್ತೆ : ನೆನೆಸಿಟ್ಟ ಕಡಲೆಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಕಡಲೆಯಲ್ಲಿರುವ ಪೋಷಕಾಂಶಗಳು ನಮ್ಮ ಶರೀರವನ್ನು ಸದೃಢಗೊಳಿಸುತ್ತದೆ. ಕಡಲೆಕಾಳನ್ನು ನೆನೆಸಿದಾಗ ಅದರಲ್ಲಿರುವ ಪ್ರೋಟೀನ್, ಫೈಬರ್, ಕ್ಯಾಲ್ಸಿಯಮ್, ಪೊಟ್ಯಾಶಿಯಮ್ ಮತ್ತು ವಿಟಮಿನ್ ಗಳು ನೀರಿನಲ್ಲಿ ಸೇರಿಕೊಳ್ಳುತ್ತದೆ. ಹಾಗಾಗಿ ಕಡಲೆಕಾಳನ್ನು ನೆನೆಸಿಟ್ಟ ನೀರನ್ನು ಕುಡಿಯೋದ್ರಿಂದ ಶರೀರಕ್ಕೆ ಅನೇಕ ರೀತಿಯ ಪೋಷಕಾಂಶಗಳು ದೊರಕುತ್ತದೆ.
ದೇಹ ಹೆಚ್ಚು ಎನರ್ಜೆಟಿಕ್ ಆಗಿರುತ್ತದೆ: ನೆನೆಸಿಟ್ಟ ಕಡಲೆಯ ನೀರನ್ನು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಶಕ್ತಿ ಸಿಗುತ್ತದೆ. ಕಡಲೆಯ ನೀರು ಶರೀರದಲ್ಲಿ ನೈಸರ್ಗಿಕ ಎನರ್ಜಿ ಡ್ರಿಂಕ್ ನಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಶರೀರ ಹೆಚ್ಚು ಹೈಡ್ರೇಟ್ ಆಗಿರುತ್ತದೆ. ಶರೀರದಲ್ಲಿ ಜಲಸಂಚಯನವನ್ನೂ ಹೆಚ್ಚಿಸುತ್ತದೆ.
ಮಳೆಗಾಲದಲ್ಲಿ ಹಾಲು ಕುಡಿಯೋದು ಆರೋಗ್ಯಕ್ಕೆ ವಿಷ!
ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ (Good for Digestion): ಕಡಲೆಕಾಳಿನಲ್ಲಿ ಫೈಬರ್ ಅಂಶವಿರುತ್ತದೆ. ನಾವು ಇದನ್ನು ನೀರಿನಲ್ಲಿ ನೆನೆಸಿದಾಗ ನೀರಿನಲ್ಲಿಯೂ ಅದರ ಗುಣಗಳು ಬರುತ್ತವೆ. ಕಡಲೆಯ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಕರುಳು ಕೂಡ ಇದರಿಂದ ಸ್ವಚ್ಛವಾಗುತ್ತದೆ ಹಾಗೂ ಚಯಾಪಚಯ ಕ್ರಿಯೆಯೂ ಹೆಚ್ಚಾಗುತ್ತದೆ.
ಮಲಬದ್ಧತೆಯ (Constipation) ಸಮಸ್ಯೆಗೆ ಉತ್ತಮ ಔಷಧ : ಮಲಬದ್ಧತೆಯ ಸಮಸ್ಯೆಯಲ್ಲಿ ಕಡಲೆಯ ನೀರು ಅದ್ಭುತ ಪರಿಣಾಮ ನೀಡುತ್ತದೆ. ಇದು ಒಣಗಿದ ಮಲದಿಂದ ಮಲಬದ್ಧತೆಯ ಸಮಸ್ಯೆ ಉಂಟಾಗಿದ್ದಲ್ಲಿ ಕಡಲೆಯ ನೀರಿನಿಂದ ಆ ಸಮಸ್ಯೆ ದೂರವಾಗುತ್ತದೆ. ಹೊಟ್ಟೆಯುಬ್ಬರ ದೂರವಾಗುತ್ತದೆ ಮತ್ತು ಕಡಲೆ ನೀರಿನಿಂದ ಕರುಳಿನ ಚಲನೆಯ ಪ್ರಕ್ರಿಯೆ ಸುಲಭವಾಗುತ್ತದೆ.
ಸ್ನಾಯುಗಳಿಗೆ ಬಲ ನೀಡುತ್ತದೆ: ಕಡಲೆಯಲ್ಲಿ ಕಬ್ಬಿಣ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶ ಇರುವುದರಿಂದ ಇದರ ನೀರು ಮೂಳೆಗಳನ್ನು ಬಲಪಡಿಸುತ್ತದೆ. ಇದರಿಂದ ಸ್ನಾಯುಗಳಲ್ಲಿನ ನೋವು, ಬಿಗಿತ ಮುಂತಾದ ಸಮಸ್ಯೆಗಳು ದೂರವಾಗುತ್ತದೆ.
ತೂಕ ಇಳಿಕೆ: ನೀವು ನಿಮ್ಮ ಆಹಾರದಲ್ಲಿ ಕಡಲೆಯ ನೀರನ್ನು ಸೇರಿಸಿಕೊಂಡರೆ ನಿಮ್ಮ ತೂಕ ಬೇಗ ಇಳಿಯುತ್ತದೆ. ಕಡಲೆಯಲ್ಲಿ ಫೈಬರ್ ಅಂಶ ಇರುವುದರಿಂದ ಇದು ಹಸಿವನ್ನು ನಿಗ್ರಹಿಸುತ್ತದೆ. ಅದರಿಂದ ನೀವು ಕಡಿಮೆ ಆಹಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.
ಸಕ್ಕರೆ ಮಟ್ಟ ನಿಯಂತ್ರಣ: ಕಡಲೆಯ ನೀರನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಕಪ್ಪು ಕಡಲೆಯಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆಹಾರ ನಿಧಾನವಾಗಿ ಜೀರ್ಣವಾಗುತ್ತದೆ. ಕರಗುವ ಫೈಬರ್ ಶರೀರ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಯಂತ್ರಿಸುತ್ತದೆ.
ಹೃದಯದ ಆರೋಗ್ಯಕ್ಕೆ ಕಡಲೆ ನೀರು : ಕಡಲೆಯ ನೀರಿನಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹತೋಟಿಯಲ್ಲಿರುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾದರೆ ಹೃದಯದ ತೊಂದರೆಗಳು ದೂರವಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ.