Asianet Suvarna News Asianet Suvarna News

ದ್ವಾಪರ ಹಾಡಿಗೆ 'ಕನ್ನಡತಿ' ರಮೋಲಾ ಬೆಲ್ಲಿ ಡಾನ್ಸ್​: ನಾಯಕಿಯಾಗಿ ನೋಡೋದು ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್​

ಕೃಷ್ಣಂ ಪ್ರಣಯ ಸಖಿ ದ್ವಾಪರ ಹಾಡಿಗೆ ನಟಿ ರಮೋಲಾ ಬೆಲ್ಲಿ ಡಾನ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಈಕೆಯನ್ನು ಹಿರಿತೆರೆಯಲ್ಲಿ ನೋಡುವ ಆಸೆ ಅಭಿಮಾನಿಗಳದ್ದು.
 

Ramola Belly danced to Krishnam Pranaya Sakhi Dwapara song netizens reacts suc
Author
First Published Aug 26, 2024, 5:38 PM IST | Last Updated Aug 26, 2024, 5:38 PM IST

  ಕೆಲವು ಸೀರಿಯಲ್​ಗಳಲ್ಲಿ ವಿಲನ್​ ಪಾತ್ರಕ್ಕೆ ಜೀವ ತುಂಬಿರೋ ನಟಿ ರಮೋಲಾ. ಕನ್ನಡತಿ ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ  ಸೈ ಎನಿಸಿಕೊಂಡಿದ್ದ ಇವರು, ಇದೀಗ ಸೀತಾರಾಮ ಸೀರಿಯಲ್​ ಚಾಂದನಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಅವರದ್ದು ವಿಲನ್​ ರೋಲೇ. ಕನ್ನಡತಿ ಧಾರಾವಾಹಿ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. ವಿಲನ್ ಆಗಿ ರಮೋಲಾ ಮಿಂಚಿದ್ದರು. ಬಳಿಕ ಆ ಧಾರಾವಾಹಿಯಿಂದ ರಮೋಲಾ ಹೊರನಡೆದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರು. ಸೀತಾರಾಮ ಸೀರಿಯಲ್​ನಲ್ಲಿಯೂ ಇವರಿಗೆ ಹೇಳಿಕೊಳ್ಳುವಂಥ ಅವಕಾಶಗಳು ಇಲ್ಲ. ಅಮೃತಧಾರೆ, ಅಂತರಪಟ ಸೀರಿಯಲ್​ಗಳಲ್ಲಿಯೂ ಅಲ್ಲಲ್ಲಿ ಕಾಣಿಸಿಕೊಂಡಿರೋದು ಬಿಟ್ಟರೆ ನಟಿಗೆ ಒಳ್ಳೆಯ ಅವಕಾಶಗಳು ಸಿಕ್ಕಿದ್ದು ಕಡಿಮೆಯೇ. ಹಾಗೆಂದು ಇವರು ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಆಗ್ಗಾಗ್ಗೆ ಫೋಟೋಶೂಟ್​  ಮಾಡಿಸಿಕೊಂಡು ಭರ್ಜರಿ ಕಮೆಂಟ್ಸ್​ ಪಡೆಯುತ್ತಾರೆ. ಕೆಲವು ಸಂದರ್ಭದಲ್ಲಿ ಹಾಟ್​ ಫೋಟೋಶೂಟ್​ಗಳಿಂದ ಪಡ್ಡೆ ಹುಡುಗರ ಹೃದಯ ಕದಿಯೋದೂ ಉಂಟು.

ಇದೀಗ ನಟಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡಿಂಗ್​ನಲ್ಲಿರೋ ದ್ವಾಪರದ ಜೇನ ದನಿಯೋಳೆ... ಮೀನ ಕಣ್ಣೋಳೆ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಹಾಡಿಗೆ ಇದಾಗಲೇ ಅದೆಷ್ಟು ಸೆಲೆಬ್ರಿಟಿಗಳು ರೀಲ್ಸ್​ ಮಾಡಿದ್ದಾರೋ ಲೆಕ್ಕವೇ ಇಲ್ಲ. ಆದರೆ ರಮೋಲಾ ಅವರ ಸ್ಟೆಪ್​  ಮಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿದೆ. ಇದಕ್ಕೆ  ಕಾರಣ, ಅವರು ಈ ಹಾಡಿಗೆ ಬೆಲ್ಲಿ ಡಾನ್ಸ್​ ಮಾಡಿದ್ದಾರೆ! ಈ ಬೆಲ್ಲಿ ಡಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ನಿಮಗೆ ವಿಲನ್​ ರೋಲ್​ ಬೇಡ, ಸೀರಿಯಲ್​ನಲ್ಲಿ ಅವಕಾಶ ಸಿಗದಿದ್ರೆ ಸಿನಿಮಾದಲ್ಲಿ ನಾಯಕಿಯಾಗಿ ಮೇಡಂ ಪ್ಲೀಸ್​ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ ರಮೋಲಾ ಸಿನಿಮಾ ಕ್ಷೇತ್ರದಲ್ಲೂ ಕಾಣಿಸಿಕೊಂಡಿರುವ ರಮೋಲಾ ಅವರು ರಿಚ್ಚಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಂದು ಸಿನಿಮಾದಲ್ಲಿಯೂ ಆಫರ್​ ಬಂದಿರುವುದಾಗಿ ಅವರೇ ಖುದ್ದು ಹೇಳಿಕೊಂಡಿದ್ದರು.  ಯಾವ ಸಿನಿಮಾ, ಪಾತ್ರವೇನು ಎಂಬುದನ್ನು ಗುಟ್ಟು ಮಾಡಿದ್ದಾರೆ.  

ಬ್ಯಾಚುಲರ್​ ಚಿತ್ರಾನ್ನ ಮಾಡಿದ ಚಂದನ್ ಶೆಟ್ಟಿ: ಬೇಗ್​ ಮದ್ವೆಯಾಗಿ ಗುರೂ ಅಂತಿರೋ ಫ್ಯಾನ್ಸ್​
  
ಇನ್ನು ಇವರ ಕನ್ನಡತಿ ಸೀರಿಯಲ್​ ಕುರಿತು ಹೇಳುವುದಾದರೆ, ಇದರಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಆದರೆ ಕಿರುತೆರೆಯನ್ನು ತೊರೆದು ವರ್ಷ ಕಳೆದ ಬಳಿಕ ರೀ ಎಂಟ್ರಿ ಕೊಟ್ಟರು. ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು.  

ಅಂದಹಾಗೆ ರಮೋಲಾ ಅವರು,  ಬೆಲ್ಲಿ ಡ್ಯಾನ್ಸ್ ಎಕ್ಸ್​ಪರ್ಟ್​. ಅದನ್ನು ಈ ವಿಡಿಯೋ ನೋಡಿದರೆ ತಿಳಿಯಬಹುದುಲ    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.  ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು. 2017 ರಿಲಾಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ರಮೋಲಾ,  ಫ್ಯಾಷನ್ ಡಿಸೈನಿಂಗ್ ಓದುವ ಸಲುವಾಗಿ ಕನ್ನಡತಿಯಿಂದ ಹೊರ ಬಂದಿದ್ದರು ಎನ್ನಲಾಗಿದೆ. ಆದರೆ ಅವರು ಸಂದರ್ಶನದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದರು. 

ಕರೀನಾ ಜೊತೆನೂ ಸೈಫ್​ಗೆ ಬೋರ್​ ಆಗೋಕೆ ಶುರುವಾಯ್ತಾ? ಸಂದರ್ಶನದಲ್ಲಿ ಗಂಡನ ಮಾತಿಗೆ ಕಸಿವಿಸಿಗೊಂಡ ನಟಿ
 

Latest Videos
Follow Us:
Download App:
  • android
  • ios