ಅಬ್ಬಬ್ಬಾ.. 1.3 ಕೋಟಿ ರೂ. ಬಿಲ್‌ ನೀಡಿದ ಅಬು ಧಾಬಿ ರೆಸ್ಟೋರೆಂಟ್‌: ನೆಟ್ಟಿಗರ ಆಕ್ರೋಶ..!

ಗ್ರಾಹಕರೊಬ್ಬರಿಗೆ ಅಬು ಧಾಬಿಯ ಅಲ್‌ ಮೇರಿಯಾ ದ್ವೀಪದ ದಿ ಗ್ಯಾಲೇರಿಯಾದಲ್ಲಿರುವ ರೆಸ್ಟೋರೆಂಟ್‌ವೊಂದು ನೀಡಿರುವ ಬಿಲ್‌ ಹಲವರ ಟೀಕೆಗೆ ಗುರಿಯಾಗಿದೆ. ಈ ಬಿಲ್‌ ಅನ್ನು ಟರ್ಕಿ ಮೂಲದ ಚೆಫ್‌ ನುಸ್ರೆಟ್‌ ಗೋಕ್ಸೆ ಇತ್ತೀಚೆಗೆ ಹಂಚಿಕೊಂಡಿದ್ದರು.

salt baes restaurant hands rs 1 3 crore bill to customer says quality never expensive ash

ಸಾಲ್ಟ್‌ ಬೇ (Salt Bae) ಎಂದು ಖ್ಯಾತರಾಗಿರುವ ಟರ್ಕಿ (Turkey) ಮೂಲದ ಬಾಣಸಿಗ (Chef) ನುಸ್ರೆಟ್‌ ಗೋಕ್ಸೆ (Nusr - Et Gokce) ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿರುವ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಲ್ಲದೆ, ಈ ಪೋಸ್ಟ್‌ಗೆ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಹಲವರು ಚೆಫ್‌ ಅನ್ನು ಇನ್ಸ್ಟಾಗ್ರಾಮ್‌ನಿಂದ (Instagram) ಅನ್‌ಫಾಲೋ ಮಾಡಿದ್ದಾರೆ. ವಿವಾದಗಳಿಂದಲೇ ಆಗಾಗ್ಗೆ ಸದ್ದು ಮಾಡುವ ನುಸ್ರೆಟ್‌ ಗೋಕ್ಸೆ ಈಗ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ. ಲಂಡನ್‌ ಮೂಲದ ಅವರ ರೆಸ್ಟೋರೆಂಟ್‌ ಸಿಕ್ಕಾಪಟ್ಟೆ ದುಬಾರಿ ಎನ್ನುವ ಕಾರಣಕ್ಕೆ ಕಳೆದ ವರ್ಷ ಹಲವರ ಹುಬ್ಬೇರಿತ್ತು. ಈಗ, ಯುಎಇಯ ಅಬು ಧಾಬಿಯ (Abu Dhabi) ನುಸ್ರ್ - ಎಟ್‌ ಈಟರಿ (Nusr - Et eatery) ತನ್ನ ಬೆಲೆಗಳ ಕಾರಣದಿಂದ ಚರ್ಚೆಗೆ ಗ್ರಾಸವಾಗುತ್ತಿದೆ. 

ಗ್ರಾಹಕರೊಬ್ಬರಿಗೆ ಅಬು ಧಾಬಿಯ ಅಲ್‌ ಮೇರಿಯಾ ದ್ವೀಪದ ದಿ ಗ್ಯಾಲೇರಿಯಾದಲ್ಲಿರುವ ರೆಸ್ಟೋರೆಂಟ್‌ವೊಂದು ನೀಡಿರುವ ಬಿಲ್‌ ಹಲವರ ಟೀಕೆಗೆ ಗುರಿಯಾಗಿದೆ. ಈ ಬಿಲ್‌ ಅನ್ನು ಟರ್ಕಿ ಮೂಲದ ಚೆಫ್‌ ನುಸ್ರೆಟ್‌ ಗೋಕ್ಸೆ ಇತ್ತೀಚೆಗೆ ಹಂಚಿಕೊಂಡಿದ್ದರು. ಆ ಬಿಲ್‌ ಮೊತ್ತ ಎಷ್ಟು ಗೊತ್ತಾ AED 615,065 ಅಂದರೆ ನಮ್ಮ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 1.3 ಕೋಟಿ ರೂ..! ಆ ಗ್ರಾಹಕರು ಅಂತದ್ದೇನು ತಿಂದಿದ್ರು ಅಂತೀರಾ..?

ಇದನ್ನು ಓದಿ: ಇಲ್ಲಿ ₹10 ರಲ್ಲಿ 3 ಇಡ್ಲಿ, 1 ವಡಾ : 12 ವರ್ಷದಿಂದ ಒಂದು ಪೈಸೆ ಬೆಲೆ ಏರಿಸಿಲ್ಲ!

 
 
 
 
 
 
 
 
 
 
 
 
 
 
 

A post shared by Nusr_et#Saltbae (@nusr_et)

ನವೆಂಬರ್ 17, 2022 ರಂದು ಈ ಬಿಲ್‌ ನೀಡಲಾಗಿದೆ ಎಂದು ತಿಳಿದುಬಂದಿದ್ದು, ಗ್ರಾಹಕರು ಪೆಟ್ರಸ್‌ನ 5 ಬಾಟಲ್‌ ಹಾಗೂ ಪೆಟ್ರಸ್‌ 2009ನ 2 ಬಾಟಲ್‌ ತೆಗೆದುಕೊಂಡಿದ್ದಾರೆ. ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಮೊತ್ತದ ವೈನ್‌ಗಳಲ್ಲಿ ಒಂದಾಗಿದೆ. ಈ ವೈನ್‌ನಿಂದಲೇ 1 ಕೋಟಿ ರೂ. ಗೂ ಹೆಚ್ಚು ಬಿಲ್‌ ಬಂದಿದೆ ಎಂದು ತಿಳಿದುಬಂದಿದ್ದು, ಜತೆಗೆ 6.5 ಲಕ್ಷ ರೂ. ಗೂ ಅಧಿಕ ಮೊತ್ತದ ವ್ಯಾಟ್‌ ಅನ್ನೂ ಅವರು ಕಟ್ಟಿದ್ದಾರೆ. 

ಚೆಫ್‌ ಸಾಲ್ಟ್‌ ಬೇ ಈ 1.3 ಕೋಟಿ ರೂ. ಮೊತ್ತದ ದುಬಾರಿ ಬಿಲ್‌ ಅನ್ನು ಹಂಚಿಕೊಂಡಿದ್ದು, ಇದಕ್ಕೆ ಗುಣಮಟ್ಟ ಎಂದಿಗೂ ದುಬಾರಿಯಲ್ಲ (“Quality never expensive”) ಎಂಬ ಕ್ಯಾಪ್ಷನ್‌ ಅನ್ನೂ ಹಂಚಿಕೊಂಡಿದ್ದಾರೆ. ಆದರೆ, ನೆಟ್ಟಟಿಗರು ಈ ಪೋಸ್ಟ್‌ಗೆ ಹೆಚ್ಚು ಟೀಕೆ ಮಾಡಿದ್ದಾರೆ. ಫ್ರೆಂಚ್‌ ಫ್ರೈಸ್‌ಗೆ 45 ಡಾಲರ್‌ ವೆಚ್ಚ..? ಆಲೂಗಡ್ಡೆ ಏನು ಚಂದ್ರನಲ್ಲಿ ಬೆಳೆಯುತ್ತದೆಯೇ..? ಒಂದು ಹೈನೆಕೆನ್‌ಗೆ 55 ಡಾಲರ್‌..? 12 ರ ಪ್ಯಾಕ್‌ ತಗೊಂಡಿದ್ದಾರಾ ಹಹ್ಹಹ್ಹ..? ಎಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಬರೆದಿದ್ದಾರೆ. 

ಇದನ್ನು ಓದಿ: Travel Tips : ಹೊಟೇಲ್ ರೂಮ್ ಚೆಕ್ ಔಟ್ ಮಾಡುವಾಗ ಇವೆಲ್ಲಾ ನೆನಪಲ್ಲಿರಲಿ!

ಈ ಮಧ್ಯೆ, ಗುಣಮಟ್ಟದ ಬಗ್ಗೆ ಕ್ಯಾಪ್ಷನ್‌ ಹಂಚಿಕೊಂಡಿರುವ ಚೆಫ್‌ ವಿರುದ್ಧ ಟೀಕಿಸಿದ ನೆಟ್ಟಿಗರು, ಈ ಬಿಲ್‌ನಲ್ಲಿ ಹೆಚ್ಚು ಐಟಂ ಆಲ್ಕೋಹಾಲ್‌ (ಮದ್ಯಪಾನ) ಇದೆ. ಇದರಲ್ಲಿ ರೆಸ್ಟೋರೆಂಟ್‌ ಆಹಾರದ ಗುಣಮಟ್ಟವೇನು ಎಂದೂ ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆ ಸಾಲ್ಟ್‌ ಬೇ ವಿರುದ್ದ ಹಲವರು ಟೀಕೆ ಮಾಡಿದ್ದು, ಈ ಪೋಸ್ಟ್‌ ಸಲುವಾಗಿ ಇನ್ಸ್ಟಾಗ್ರಾಮ್‌ನಲ್ಲಿ ಹಲವರು ಅನ್‌ಫಾಲೋ ಮಾಡಿದ್ದಾರೆ. 
 
ನೀವು ಯುವಕರಿಗೆ ಉತ್ತಮ ಉದಾಹರಣೆಯಾಗುತ್ತೀರಿ ಎಂದು ನಾನು ನಿಮ್ಮನ್ನು ಫಾಲೋ ಮಾಡಿದ್ದೆ. ಮೊದಲು ಬಡವರಾಗಿದ್ದವರು, ಈಗ ನೀವು ಇತರರಿಗೆ ಸ್ಫೂರ್ತಿಯಾಗಿದ್ದೀರಿ ಎಂದು ಅಂದುಕೊಂಡಿದ್ದೆ. ಆದರೆ, ಇದು ನಿಮ್ಮ ಮಧ್ಯಮ ಗುಣಮಟ್ಟದ ಬರ್ಗರ್ ನುಸ್ರೆಟ್‌ನ ಬೆಲೆ ಅಲ್ಲ. ಇದು ನಿಮ್ಮ ಸವಲತ್ತುಗಳ ಪ್ರದರ್ಶನದ ವೆಚ್ಚ ಮತ್ತು ಅದನ್ನು ನಿಭಾಯಿಸಬಲ್ಲವರ ಅತಿರಂಜಿತ ಜೀವನಶೈಲಿ.. ಮತ್ತು ಊಹಿಸಿ? ನೀವು ತುಂಬಾ ಚೀಪ್ ಆಗಿದ್ದೀರಿ ಎಂದೂ ಟೀಕಿಸಿದ್ದಾರೆ. 

ಇದನ್ನು ಓದಿ: ಗ್ಯಾಸ್ ಬೆಲೆ ಏರಿಕೆ: ಮತ್ತೆ ಹೋಟೆಲ್ ತಿನಿಸು ದುಬಾರಿ?
 
2017 ರಲ್ಲಿ ಈ ಬಾಣಸಿಗನು ಉಪ್ಪನ್ನು ವಿಚಿತ್ರವಾಗಿ ಚಿಮುಕಿಸುತ್ತಿರುವುದನ್ನು ತೋರಿಸುತ್ತದೆ. ಈ ವೈರಲ್‌ ವಿಡಿಯೋ ಕಾರಣದಿಂದ ಇವರಿಗೆ ಸಾಲ್ಟ್‌ ಬೇ ಎಂಬ ಹೆಸರಿನಿಂದ ಹಲವರು ಕರೆಯುತ್ತಾರೆ. 

Latest Videos
Follow Us:
Download App:
  • android
  • ios