Healthy Food : ಸದ್ಗುರು ಹೇಳಿದ ಈ ಕಾಳು ತಿಂದರೆ 8 ರೋಗ ಮಾಯ

ಯೋಗಿಗಳು ಆರೋಗ್ಯಕರ ಆಹಾರ ಸೇವನೆ ಮಾಡ್ತಾರೆ. ಉಪಹಾರಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಇದರಲ್ಲಿ ಸದಗುರು ಕೂಡ ಸೇರಿದ್ದಾರೆ. ನೀವೂ ಆರೋಗ್ಯ ಕಾಪಾಡಿಕೊಂಡು, ರೋಗದಿಂದ ದೂರ ಇರ್ಬೇಕೆಂದ್ರೆ ಸದ್ಗುರು ಹೇಳಿದ ಈ ಟಿಪ್ಸ್ ಫಾಲೋ ಮಾಡಿ.
 

Sadhguru Shares Benefits of Consuming Sprouted Fenugreek Seeds roo

ನಮ್ಮ ಅಡುಗೆಮನೆಯಲ್ಲೇ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಬೇಳೆ ಕಾಳು ಹಾಗೂ ತರಕಾರಿಗಳನ್ನು ನೋಡಬಹುದು. ಕೆಲವೊಮ್ಮೆ ಅದರಲ್ಲಿರುವ ಔಷಧೀಯ ಗುಣಗಳು ಹಾಗೂ ಅದರ ಬಳಕೆ ಬಗ್ಗೆ ತಿಳಿದಿರುವುದಿಲ್ಲ. ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಅವರು ಅಂತಹುದೇ ಒಂದು ಕಾಳಿನ ಕುರಿತು ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ಮೊಳಕೆ ತರಿಸಿದ ಮೆಂತ್ಯದಕಾಳನ್ನು ತಿನ್ನೋದ್ರಿಂದ ಅನೇಕ ರೋಗಗಳಿಂದ ದೂರವಿರಬಹುದು ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಆರೋಗ್ಯ (Health) ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೀವನಶೈಲಿ, ಆಹಾರಕ್ರಮ ಹಾಗೂ ಪೋಷಣೆಯ ಕೊರತೆಗಳು ಇದಕ್ಕೆ ಕಾರಣವಾಗಿರಬಹುದು. ಇದರಿಂದ ಅಧಿಕ ರಕ್ತದೊತ್ತಡ, ಡಯಾಬಿಟೀಸ್, ನೋವು, ರಕ್ತ ಕೆಡುವುದು ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ. ಸದ್ಗುರು (Sadhguru) ಜಗ್ಗಿ ವಾಸುದೇವ್ ಅವರು ಈ ಎಲ್ಲಾ ರೋಗಗಳನ್ನು ತೊಡೆದುಹಾಕುವಂತ ಅದ್ಭುತವಾದ ಮಾರ್ಗವನ್ನು ಹೇಳಿದ್ದಾರೆ.

HEALTH TIPS: ಡೆಂಗ್ಯೂ ಇರೋರು ಯಾವುದನ್ನ ತಿನ್ಲೇಬಾರ್ದು? ಯಾವುದನ್ನ ತಿನ್ಲೇಬೇಕು?

ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಇನ್ಸ್ಟಾಗ್ರಾಂ (Instagram) ವಿಡಿಯೋ ಒಂದರಲ್ಲಿ ಮೆಂತ್ಯದ ಕಾಳನ್ನು ನೆನೆಸಿ ತಿನ್ನುವುದರ ಲಾಭದ ಬಗ್ಗೆ ಹೇಳಿದ್ದಾರೆ. ಮೊಳಕೆ ಬರಿಸಿದ ಮೆಂತೆಕಾಳನ್ನು ಪ್ರತಿದಿನ ಬೆಳಿಗ್ಗೆ ಸೇವಿಸಬೇಕು. 50 ವರ್ಷ ಮೇಲ್ಪಟ್ಟವರಿಗಂತೂ ಇದು ಬಹಳ ಅವಶ್ಯಕ ಇದರಲ್ಲಿ ಹೆಚ್ಚಿನ ಪೌಷ್ಠಿಕಾಂಶಗಳು ಇರುತ್ತವೆ ಎಂದು ಸದ್ಗುರು ಹೇಳಿದ್ದಾರೆ.

ಮೊಳಕೆಯೊಡೆದ ಮೆಂತ್ಯದ ಬೀಜದಿಂದಾಗುವ ಪ್ರಯೋಜನ : 
ಮೆಂತ್ಯದ ಕಾಳನ್ನು ಮೊಳಕೆ ಬರಿಸಿ ತಿನ್ನುವುದರಿಂದ ರಕ್ತದ ಅವ್ಯವಸ್ಥೆ, ಪ್ರೊಟೀನ್ ಕೊರತೆ, ವಿಟಮಿನ್ ಮತ್ತು ಖನಿಜಾಂಶಗಳ ಕೊರತೆ ಕಡಿಮೆಯಾಗುತ್ತದೆ. ಎದೆ ಹಾಲುಣಿಸುವ ತಾಯಿಯಂದಿರಿಗಿರುವ ಕೆಲವು ತೊಂದರೆಗಳು ಮೊಳಕೆಬಂದ ಮೆಂತೆಕಾಳನ್ನು ತಿನ್ನುವುದರಿಂದ ದೂರವಾಗುತ್ತದೆ. ಮೊಳಕೆಯೊಡೆದ ಮೆಂತೆಕಾಳು ಕೂದಲು ಮತ್ತು ಉಗುರುಗಳ ಬೆಳವಣಿಗೆಗೆ ಒಳ್ಳೆಯ ಔಷಧವಾಗಿದೆ. ಮೊಳಕೆ ಬಂದ ಮೆಂತ್ಯದ ಕಾಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಶುಗರ್ ಸಮಸ್ಯೆ ಹಾಗೂ ಉರಿಯೂತ ಕಡಿಮೆಯಾಗುತ್ತದೆ.

ಈ ಜ್ಯೂಸ್ ಕುಡಿದ್ರೆ ಬುದ್ಧೀನೂ ಚೆನ್ನಾಗಿರುತ್ತೆ, ಹೃದಯವೂ ಆರೋಗ್ಯವಾಗಿರುತ್ತೆ

ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಚಮಚ ಮೆಂತ್ಯದ ಪುಡಿ ಮತ್ತು ತಿಂಡಿಯ ನಂತರ ಒಂದು ಚಮಚ ಮೆಂತ್ಯವನ್ನು ಸೇವಿಸಿದರೆ ಇದರಿಂದ ನಿಮ್ಮ ವೇಟ್ ಲಾಸ್ ಆಗುತ್ತದೆ. ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಹಾಗೂ ಮಲಬದ್ಧತೆ, ಗ್ಯಾಸ ಮುಂತಾದ ಸಮಸ್ಯೆಗಳಿಗೂ ಮೆಂತ್ಯದ ಕಾಳು ರಾಮಬಾಣವಾಗಿದೆ. ಮೊಳಕೆಯೊಡೆದ ಮೆಂತ್ಯ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯದ ಖಾಯಿಲೆಗಳನ್ನು ಕಡಿಮೆಮಾಡುತ್ತದೆ.

50 ವರ್ಷ ಮೇಲ್ಪಟ್ಟವರು ಮೆಂತೆಕಾಳನ್ನು ಸೇವಿಸಲೇಬೇಕು : ಮೆಂತ್ಯದ ಕಾಳು ಎಲ್ಲ ವಯಸ್ಸಿನವರಿಗೂ ಒಳ್ಳೆಯದು ಅದರಲ್ಲೂ 50 ವರ್ಷ ಮೇಲ್ಪಟ್ಟವರು ಇದನ್ನು ಸೇವಿಸಲೇಬೇಕೆಂದು ಸದ್ಗುರು ಹೇಳುತ್ತಾರೆ. ಇದರ ಸೇವನೆಯಿಂದ ಮೆದುಳಿನ ಶಕ್ತಿ ಹೆಚ್ಚುತ್ತದೆ. ಇದರಿಂದ ವಯೋಸಹಜ ಖಾಯಿಲೆಗಳಾದ ಮರೆವು, ವಿಚಾರ ಶಕ್ತಿಯ ಕೊರತೆ ಮುಂತಾದವು ಉಂಟಾಗುವುದಿಲ್ಲ.

ಹೆಸರುಕಾಳಿನ ಜೊತೆ ಮೊಳಕೆಯೊಡೆದ ಮೆಂತ್ಯದ ಕಾಳನ್ನು ಸೇವಿಸಿ: ಹೆಸರುಕಾಳು ಮತ್ತು ಮೆಂತ್ಯದ ಕಾಳನ್ನು ನೆನೆಸಿ ಅದು ಮೊಳಕೆಯೊಡೆದ ನಂತರ ಎರಡನ್ನೂ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಬೇಕು. ಹೆಸರುಕಾಳು ಮತ್ತು ಮೆಂತ್ಯದ ಕಾಳು ಬುದ್ಧಿಶಕ್ತಿಯನ್ನು ಹೆಚ್ಚು ಚುರುಕಾಗಿಸುತ್ತದೆ. ಇದು ಹೆಚ್ಚು ಪೌಷ್ಠಿಕಾಂಶಗಳನ್ನು ಕೂಡ  ಹೊಂದಿರುತ್ತದೆ.

ಪ್ರೊಟೀನ್‌ಗಳ ಆಗರ : ಮೆಂತ್ಯದ ಕಾಳು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಒಂದು ಚಮಚ ಮೆಂತೆಯಲ್ಲಿ ಪ್ರೊಟೀನ್, ಫೈಬರ್, ಕಾರ್ಬ್ಸ್, ಐರನ್, ಮ್ಯಾಂಗನೀಸ್, ಮೆಗ್ನೀಶಿಯಮ್, ಕಾರ್ಬೋಹೈಡ್ರೇಟ್, ವಿಟಮಿನ್ ಬಿ ಹಾಗೂ ವಿಟಮಿನ್ ಸಿ ಇರುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ಡಯಾಬಿಟೀಸ್ ಗೆ ದಿವ್ಯೌಷಧವಾಗಿದೆ. ಇದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆಯೂ ಹೆಚ್ಚಾಗುತ್ತದೆ.
 

Latest Videos
Follow Us:
Download App:
  • android
  • ios