ಈ ಜ್ಯೂಸ್ ಕುಡಿದ್ರೆ ಬುದ್ಧೀನೂ ಚೆನ್ನಾಗಿರುತ್ತೆ, ಹೃದಯವೂ ಆರೋಗ್ಯವಾಗಿರುತ್ತೆ
ಜ್ಯೂಸ್ ಕುಡಿಯುವುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಅಲ್ಲದೇ, ದೇಹದ ಪ್ರತಿಯೊಂದು ಭಾಗವೂ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತೆ. ದೇಹದ ಯಾವ ಭಾಗಕ್ಕೆ ಯಾವ ರೀತಿಯ ಜ್ಯೂಸ್ ಕುಡಿಯುವುದು ಉತ್ತಮವಾಗಿದೆ ನೋಡೋಣ.
ನಿಮ್ಮ ಒಟ್ಟಾರೆ ಆರೋಗ್ಯ ಹೆಚ್ಚಿಸಲು ನೀವು ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದೀರಾ? ಜ್ಯೂಸ್ ನಿಮ್ಮ ಕೂದಲು, ಚರ್ಮ, ಮೆದುಳು, ಶ್ವಾಸಕೋಶ (Lungs), ಹೃದಯ (Heart) ಮತ್ತು ಕರುಳು ಸೇರಿ ದೇಹದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವನ್ನು ನೀಡುತ್ತದೆ. ಜ್ಯೂಸ್ ಮೂಲಕ ತಾಜಾ ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ, ನೀವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಬಹುದು, ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಉರಿಯೂತವನ್ನು ಸಹ ಕಡಿಮೆ ಮಾಡಬಹುದು.
ಮೆದುಳು (brain)
ನಿಮ್ಮ ಮೆದುಳು ಆರೋಗ್ಯದಿಂದ ಇರಬೇಕು ಅಂದ್ರೆ ನೀವು ಬ್ಲೂ ಬೆರ್ರಿ, ನಿಂಬೆ, ದಾಳಿಂಬೆ ಮತ್ತು ಬೀಟ್ ರೂಟ್ ಜ್ಯೂಸ್ ಜೊತೆಯಾಗಿ ಸೇರಿಸಿ ಕುಡಿಯೋದರಿಂದ ಮೆದುಳು ಶಾರ್ಪ್ ಆಗಿರುತ್ತೆ.
ಕೂದಲು (hair care)
ಕೂದಲಿನ ಆರೈಕೆ ಮಾಡಿಕೊಳ್ಳೋದು ತುಂಬಾ ಮುಖ್ಯ. ಇದಕ್ಕಾಗಿ ಕೂದಲಿಗೆ ಬೇಕಾದ ಶಾಂಪೂ ಹಾಕೋದು ಮಾತ್ರ ಅಲ್ಲ, ಆರೋಗ್ಯಯುತ ಜ್ಯೂಸ್ ಕುಡಿಯೋದು ಮುಖ್ಯ. ಅದಕ್ಕಾಗಿ ಕ್ಯಾರೆಟ್, ಶುಂಠಿ, ಗೆಣಸಿನ ಜ್ಯೂಸ್ ಮಾಡಿ ಸೇವಿಸಬೇಕು.
ಶ್ವಾಸಕೋಶ (lungs health)
ಶ್ವಾಸಕೋಶದ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ದೇಹಕ್ಕೆ ಬೇಕಾದ ಆಮ್ಲಜನಕ ಸರಿಯಾಗಿ ಸಿಗುತ್ತೆ. ಉತ್ತಮ ಶ್ವಾಸಕೋಶದ ಆರೋಗ್ಯಕ್ಕಾಗಿ ಕಿತ್ತಳೆ, ನಿಂಬೆ, ಮೂಲಂಗಿ, ಕ್ಯಾರೆಟ್ ಬೆರೆಸಿ ಮಾಡಿದಂತಹ ಜ್ಯೂಸ್ ಕುಡಿಯೋದು ಉತ್ತಮ.
ಕಣ್ಣುಗಳು (eye care)
ಕ್ಯಾರೆಟ್, ಕಿತ್ತಳೆ ಮತ್ತು ಗ್ರೇಪ್ ಫ್ರುಟ್ ಜ್ಯೂಸ್ ನಿಯಮಿತವಾಗಿ ಕುಡಿಯುವುದರಿಂದ ಕಣ್ಣುಗಳು ಆರೋಗ್ಯಯುತವಾಗಿರುತ್ತೆ. ಅಷ್ಟೇ ಅಲ್ಲ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತೆ. ಹಾಗಾಗಿ ಈ ಜ್ಯೂಸ್ ಸೇವಿಸಿ.
ಕರುಳಿನ ಆರೋಗ್ಯ (gut health)
ಕರುಳಿನ ಆರೋಗ್ಯ ಉತ್ತಮವಾಗಿದ್ರೆ ಮಾತ್ರ ನೀವು ಸಂಪೂರ್ಣವಾಗಿ ಆರೋಗ್ಯವಾಗಿರಲು ಸಹಾಯ ಮಾಡುತ್ತೆ. ಸೌತೆಕಾಯಿ, ನಿಂಬೆ, ಸೇಬು ಮತ್ತು ಶುಂಠಿಯನ್ನು ಜೊತೆಯಾಗಿ ಸೇರಿಸಿ ಜ್ಯೂಸ್ ಕುಡಿಯೋದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತೆ.
ತ್ವಚೆ (skin care)
ಉತ್ತಮವಾದ ತ್ವಚೆ ಪಡೆಯಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತೆ. ಆದರೆ ಅದಕ್ಕಾಗಿ ಕ್ರೀಂ, ಲೋಶನ್ ಬಳಕೆ ಬದಲಾಗಿ ಒಳಗಿನಿಂದಲೇ ಉತ್ತಮ ತ್ವಚೆಗೆ ಸಹಾಯ ಮಾಡುವ ಸೆಲರಿ, ಖೇಲ್, ನಿಂಬೆ, ಸೇಬು, ಸೌತೆಕಾಯಿ ಜ್ಯೂಸ್ ಸೇವಿಸಿ.
ಹೃದಯದ ಆರೋಗ್ಯ (healthy heart)
ನಿಂಬೆ, ಶುಂಠಿ, ದಾಳಿಂಬೆ, ಬೀಟ್ ರೂಟ್ ಜ್ಯೂಸ್ ಸೇವಿಸೋದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತೆ. ಹೃದಯ ಆರೋಗ್ಯ ಉತ್ತಮವಾಗಿದ್ರೆ ನೀವು ಸಹ ಸಂಪೂರ್ಣವಾಗಿ ಆರೋಗ್ಯದಿಂದಿರಲು ಸಹಾಯ ಮಾಡುತ್ತೆ.