ಮೆಕ್‌ಡೋನಾಲ್ಡ್‌ನಲ್ಲಿ ಆಹಾರ ಸೇವಿಸುತ್ತಿದ್ದ ಬಾಲಕನಿಗೆ ಕಚ್ಚಿದ ಹೆಗ್ಗಣ, ದಾಖಲಾಯ್ತು ದೂರು!
ಬಹುತೇಕ ಮಕ್ಕಳಿಗೆ ಮೆಕ್‌ಡೋನಾಲ್ಡ್ ಆಹಾರ ಇಷ್ಟ. ಹೀಗೆ ಮೆಕ್‌ಡೋನಾಲ್ಡ್ ಕೇಂದ್ರಕ್ಕೆ ತೆರಳಿ ತನ್ನಿಷ್ಟದ ಆಹಾರ ಸವಿಯುತ್ತಾ ಆನಂದದಲ್ಲಿದ್ದ 8 ವರ್ಷದ ಬಾಲಕನಿಗೆ ಕಾಲಿಗೆ ಹೆಗ್ಗಣವೊಂದು ಕಚ್ಚಿದೆ. ಪರಿಣಾಮ ಬಾಲಕ ಆಸ್ಪತ್ರೆ ಸೇರಿದರೆ, ಬಾಲನಕ ತಂದೆ ಮೆಕ್‌ಡೋನಾಲ್ಡ್ ವಿರುದ್ಧ ದೂರು ದಾಖಿಲಿಸಿದ್ದಾರೆ.
ತೆಲಂಗಾಣ(ಮಾ.11): ಪ್ರತಿಷ್ಠಿತ ಏರಿಯಾದಲ್ಲಿರುವ ಮೆಕ್‌ಡೋನಾಲ್ಡ್ ಔಟ್‌ಲೆಟ್‌ನಲ್ಲಿ ಆಹಾರ ಸವಿಯಲು ಹೋದ ಸೇನೆಯ ಮೇಜರ್ ಕುಟುಂಬಕ್ಕೆ ಆಘಾತವಾಗಿದೆ. ಆಹಾರ ಸವಿಯುತ್ತಿದ್ದಂತೆ ಭಾರಿ ಗಾತ್ರದ ಹೆಗ್ಗಣ ಮೇಜರ್ ಪುತ್ರನ ಕಾಲಿಗೆ ಕಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. 8 ವರ್ಷದ ಬಾಲಕನನ್ನು ಆಸ್ಪತ್ರೆ ದಾಖಲಿಸಿದ್ದರೆ, ಇತ್ತ ಮೆಕ್‌ಡೋನಾಲ್ಡ್ ಔಟ್‌ಲೆಟ್ ವಿರುದ್ಧ ದೂರು ದಾಖಲಾಗಿದೆ.
ತೆಲಂಗಾಣ ಕೊಪಾಲಿಯ ಎಸ್‌ಪಿಜಿ ಹೊಟೆಲ್ ಗ್ರ್ಯಾಂಡ್ ಬಳಿ ಇರುವ ಮೆಕ್‌ಡೋನಾಲ್ಡ್ ಕೇಂದಕ್ಕೆ ಸೇನೆಯ ಮೇಜರ್ ಸ್ಯಾವಿಯೋ ಹೆನ್ರಿಕೆಸ್ ಕುಟುಂಬ ತೆರಳಿದೆ. ಒಂದಷ್ಟು ತಿನಿಸುಗಳನ್ನು ಆರ್ಡರ್ ಮಾಡಿದ್ದಾರೆ. ತಾವು ಆರ್ಡರ್ ಮಾಡಿದ ತಿನಿಸು ಬಂದು ಖುಷಿಯಲ್ಲಿ ಮೇಜರ್ ಪುತ್ರ 8 ವರ್ಷದ ಬಾಲಕ ಆಹಾರ ಸವಿಯಲು ಆರಂಭಿಸಿದ್ದಾನೆ. ಇದೇ ವೇಳೆ ದೊಡ್ಡ ಗಾತ್ರದ ಹೆಗ್ಗಣವೊಂದು ಬಾಲಕನ ಕಾಲಿನ ಮೂಲಕ ಮೇಲಕ್ಕೆ ಹತ್ತುವ ಪ್ರಯತ್ನ ಮಾಡಿದೆ. ಇದೇ ವೇಳೆ ಕಾಲು ಕೊಡವಿದೆ ಬಾಲಕನಿಗೆ ಹೆಗ್ಗಣ ಕಚ್ಚಿದೆ.
ರೈಲಿನಲ್ಲಿ ಕಳಪೆ ಆಹಾರ, ಮನೆಯವ್ರಿಗೂ ಇಂಥಾ ಫುಡ್ ಕೊಡ್ತೀರಾ..ಅಧಿಕಾರಿಗಳಿಗೆ ಮಹಿಳೆಯ ಕ್ಲಾಸ್
ಬಾಲಕ ಭಯದಿಂದ ಕಿರುಚಾಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಮೇಜರ್ ಸ್ಯಾವಿಯೋ ಹೆನ್ರಿಕೆಸ್, ಹೆಗ್ಗಣವನ್ನು ಪಕ್ಕಕ್ಕೆ ಎಳೆದು ಎಸೆದಿದ್ದಾರೆ.ಘಟನೆ ಒಂದು ಕ್ಷಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಮೆಕ್‌ಡೋನಾಲ್ಡ್ ಕೇಂದ್ರದಲ್ಲಿ ಆಹಾರ ಸವಿಯುತ್ತಿದ್ದ ಇತರ ಗ್ರಾಹಕರು, ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದರು. ಸಿಬ್ಬಂದಿಗಳು ಸೇರಿದಂತೆ ಹಲವರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.
ಹೆಗ್ಗಣದ ಕಡಿತಕ್ಕೆ ಮೇಜರ್ ಪುತ್ರನ ಕಾಲಿಗೆ ಗಾಯವಾಗಿದೆ. ತಕ್ಷಣವೇ ಸ್ಯಾವಿಯೋ ಹೆನ್ರಿಕೆಸ್ ಪುತ್ರನನ್ನ ಮಿಲಿಟರಿ ಆಸ್ಪತ್ಪೆಗೆ ದಾಖಲಿಸಿದ್ದಾರೆ. ಭಾರಿ ಗಾತ್ರದ ಇಲಿ ಕಡಿತದಿಂದ ಆಗಿರುವ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ. ಇದೇ ವೇಳೆ ರೇಬಿಸ್ ಲಸಿಕೆಯನ್ನು ನೀಡಲಾಗಿದೆ. ಸದ್ಯ ಬಾಲಕ ಚೇತರಿಸಿಕೊಂಡಿದ್ದಾರೆ. ಆದರೆ ಈ ಘಟನೆಯನ್ನು ಇಷ್ಟಕ್ಕೆ ಬಿಡಲು ಸ್ಯಾವಿ ಹೆನ್ರಿಕೆಸ್ ಸಿದ್ದರಿರಲಿಲ್ಲ.
ಪುತ್ರ ಮನೆ ಸೇರಿದ ಬೆನ್ನಲ್ಲೇ ಅಂದರೆ ಮರುದಿನ, ಸ್ಯಾವಿಯೋ ಹೆನ್ರಿಕೆಸ್ ಮಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ತರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಘಟನೆ ಸಂಬಂಧ ಮೆಕ್‌ಡೋನಾಲ್ಡ್ ಕೇಂದ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಗ್ರಾಹಕರ ಭದ್ರತೆ ಮೆಕ್‌ಡೋನಾಲ್ಡ್ ಆದ್ಯತೆ ನೀಡಬೇಕು. ಅದರಲ್ಲೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು. ಹೆಗ್ಗಣ ನಮ್ಮ ಕಾಲಡಿಯಲ್ಲಿ ಓಡಾಡುತ್ತಿದೆ. ಎಲ್ಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ಈ ಘಟನೆ ನಡೆದಿದೆ. ಸುರಕ್ಷತೆ, ಆಹಾರ ಸುರಕ್ಷತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಸಿಯೂಟದಲ್ಲಿ ಹಾವು: 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು; ಪೋಷಕರಿಂದ ತೀವ್ರ ಆಕ್ರೋಶ
ಹೆಗ್ಗಣ ಘಟನೆಯಿಂದ ಇದೀಗ ಮೆಕ್‌ಡೋನಾಲ್ಡ್‌ಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಹಲವು ಭಯಗೊಂಡಿದ್ದಾರೆ. ಇಷ್ಟೇ ಅಲ್ಲ ಮೆಕ್‌ಡೋನಾಲ್ಡ್ ಆಹಾರ ತಯಾರಿ ವೇಳೆ ಇದೇ ಹೆಗ್ಗಣಗಳು ಆಹಾರ ಕಚ್ಚಿರುವ ಸಾಧ್ಯತೆ ಇದೆ. ಕಚ್ಚಾವಸ್ತುಗಳನ್ನು ತಿಂದಿರುವ ಸಾಧ್ಯತೆ ಇದೆ. ಇಲಿ ಹೆಗ್ಗಣಗಳು ಹೆಚ್ಚಾಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಅನ್ನೋ ಆತಂಕ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರು ಮೆಕ್‌ಡೋನಾಲ್ಡ್ ಕೇಂದ್ರದಿಂದ ದೂರ ಉಳಿಯುತ್ತಿದ್ದಾರೆ. ಪಾರ್ಸೆಲ್, ಆನ್‌ಲೈನ್ ಆರ್ಡರ್ ಕೂಡ ಕಡಿಮೆಯಾಗಿದೆ.