ಸ್ಟೈಲ್ ಅಂದ್ರೆ ರಜನೀಕಾಂತ್‌, ರಜನೀಕಾಂತ್‌ ಅಂದ್ರೆ ಸ್ಟೈಲ್‌. ಅಷ್ಟರಮಟ್ಟಿಗೆ ರಜನೀಕಾಂತ್‌ ಮಾಡೋ ಸ್ಟೈಲ್‌ಗಳು ಫೇಮಸ್ ಆಗುತ್ತವೆ. ಹಾಗೆಯೇ ಸದ್ಯ ಮುಂಬೈನಲ್ಲಿ ಬೀದಿ ಬದಿ ದೋಸೆ ವ್ಯಾಪಾರಿಯೊಬ್ಬನ ಸ್ಟೈಲ್‌ ರಜನೀಕಾಂತ್ ಸ್ಟೈಲ್ ದೋಸೆಗಳು ಅಂತಾನೇ ಫೇಮಸ್ ಆಗ್ತಿದೆ.

ದಕ್ಷಿಣ ಭಾರತದ ಮನೆಗಳಲ್ಲಿ ದೋಸೆಯು ಮುಖ್ಯ ಉಪಾಹಾರವಾಗಿದೆ. ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಎಲ್ಲಾ ಹೊತ್ತಿನಲ್ಲಿಯೂ ಜನರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಲವು ವಿಧದ ದೋಸೆಗಳನ್ನು ಸಹ ತಯಾರಿಸಲು ಸಾಧ್ಯವಾಗುತ್ತದೆ. ಸಾದಾ ದೋಸೆ, ತುಪ್ಪ ದೋಸೆ, ಮಸಾಲಾ ದೋಸೆ, ಓನಿಯನ್ ದೋಸೆ, ಬೆಣ್ಣೆ ದೋಸೆ ಹೀಗೆ ಹಲವು ವಿಧದ ದೋಸೆಗಳು ಹೊಟೇಲ್‌ನಲ್ಲಿ ಲಭ್ಯವಿರುತ್ತದೆ. ಆದರೆ ಇದೆಲ್ಲಕ್ಕಿಂತ ಹೊರತಾಗಿ ರಜನೀಕಾಂತ್ ಸ್ಟೈಲ್ ದೋಸೆ ಬಗ್ಗೆ ನೀವು ಕೇಳಿದ್ದೀರಾ?

ಸ್ಟೈಲ್ ಅಂದ್ರೆ ರಜನೀಕಾಂತ್‌, ರಜನೀಕಾಂತ್‌ ಅಂದ್ರೆ ಸ್ಟೈಲ್‌. ಅಷ್ಟರಮಟ್ಟಿಗೆ ರಜನೀಕಾಂತ್‌ ಮಾಡೋ ಸ್ಟೈಲ್‌ಗಳು ಫೇಮಸ್ ಆಗುತ್ತವೆ. ಸೂಪರ್‌ಸ್ಟಾರ್ ಕುಳಿತುಕೊಳ್ಳೊ ಸ್ಟೈಲ್‌, ಸಿಗರೇಟ್ ಬಾಯಿಗಿಟ್ಟುಕೊಳ್ಳೋ ಸ್ಟೈಲ್, ಕೂಲಿಂಗ್‌ ಗ್ಲಾಸ್ ಇಟ್ಟುಕೊಳ್ಳುವ ಸ್ಟೈಲ್‌ನ್ನು ಅಭಿಮಾನಿಗಳು ಕಾಪಿ ಮಾಡುತ್ತಾರೆ. ಈಗ ಸದ್ಯ ಮುಂಬೈನಲ್ಲಿ ಬೀದಿ ಬದಿ ದೋಸೆ ವ್ಯಾಪಾರಿಯೊಬ್ಬನ ಸ್ಟೈಲ್‌ ರಜನೀಕಾಂತ್ ಸ್ಟೈಲ್ ದೋಸೆಗಳು ಅಂತಾನೇ ಫೇಮಸ್ ಆಗ್ತಿದೆ.

ಅತಿ ಉದ್ದದ ದೋಸೆ ಮಾಡಿ ಗಿನ್ನೆಸ್ ದಾಖಲೆ ಬರೆದ ಎಂಟಿಆರ್!

ಇತ್ತೀಚೆಗೆ, ಬೀದಿಬದಿಯ ವ್ಯಾಪಾರಿಯೊಬ್ಬರ ರಜನಿಕಾಂತ್-ಸ್ಟೈಲ್ ದೋಸೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಮುಂಬೈನ ದಾದರ್‌ನಲ್ಲಿರುವ ಬೀದಿ ಬದಿಯ ಆಹಾರ ಮಳಿಗೆಯಲ್ಲಿ ಈ ವೀಡಿಯೋ ಮಾಡಲಾಗಿದ್ದು ಇನ್‌ಸ್ಟಾಗ್ರಾಂನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಮಾರಾಟಗಾರನು ಏಕಕಾಲದಲ್ಲಿ ನಾಲ್ಕು ದೋಸೆಗಳನ್ನು ತಯಾರಿಸಲು ಹಿಟ್ಟನ್ನು ಬಿಸಿ ಕಾವಲಿಯ ಮೇಲೆ ಎರೆಯುತ್ತಾನೆ. ನಂಬಲಾಗದ ವೇಗದಲ್ಲಿ ಪ್ರತಿ ದೋಸೆಯನ್ನು ತಿರುಗಿಸುತ್ತಾನೆ. ಎಲ್ಲವನ್ನೂ ಸಮ ಪ್ರಮಾಣದಲ್ಲಿ ಬೇಯಿಸಲಾಗುತ್ತದೆ. ಒಮ್ಮೆ ಸಂಪೂರ್ಣವಾಗಿ ಗರಿಗರಿಯಾಗಿ ದೋಸೆ ಬೆಂದ ನಂತರ, ಅವುಗಳನ್ನು ಮಡಚುತ್ತಾನೆ. ಎಲ್ಲಾ ದೋಸೆಗಳನ್ನು ಪ್ಲೇಟ್‌ಗಳಿಗೆ ವರ್ಗಾಯಿಸುತ್ತಾನೆ. ನಂತರ ಅವುಗಳನ್ನು ತನ್ನ ಸಹಾಯಕನಿಗೆ ಹಸ್ತಾಂತರಿಸುತ್ತಾನೆ. ಅಡುಗೆ ಸಹಾಯಕ ದೋಸೆಯನ್ನು ಚಟ್ನಿ ಜೊತೆ ಸರ್ವ್ ಮಾಡುತ್ತಾನೆ. 

ಈ ಸ್ಟಾಲ್‌ನಲ್ಲಿ ಮೋಡಿಮಾಡುವ ವಿಷಯವೆಂದರೆ ವ್ಯಾಪಾರಿಯ ಕೌಶಲ್ಯ ಮತ್ತು ವೇಗ. ವೀಡಿಯೊಗೆ ನೀಡಲಾದ ಶೀರ್ಷಿಕೆಯಲ್ಲಿ, 'ಮುಂಬೈನ ಫೇಮಸ್ ರಜನಿಕಾಂತ್ ಸ್ಟೈಲ್ ದೋಸೆ' ಎಂದು ಬರೆಯಲಾಗಿದೆ. ನೆಟ್ಟಿಗರು ವೈರಲ್ ಆಗಿರುವ ವೀಡಿಯೋಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

World Dosa Day: ಸ್ವಿಗ್ಗಿಯಲ್ಲಿ ಒಂದೇ ವರ್ಷ 29 ಮಿಲಿಯನ್‌ ದೋಸೆ ಡೆಲಿವರಿ, ನಿಮಿಷಕ್ಕೆ 122 ದೋಸೆ ಆರ್ಡರ್‌

ಒಬ್ಬ ಬಳಕೆದಾರರು, 'ಇಷ್ಟು ವೇಗದಲ್ಲಿ ದೋಸೆ ಮಾಡುವ ಅಗತ್ಯವೇನಿದೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ' ಆ ಕ್ಯಾಚರ್‌ ಭಾರತದ ಕ್ರಿಕೆಟ್ ಟೀಮ್‌ನಲ್ಲಿರಬೇಕಿತ್ತು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಆತ ಪ್ರತಿ ಬಾರಿ ಈ ರೀತಿ ಆಹಾರ ಸರ್ವ್‌ ಮಾಡುವಾಗಲೂ ಭಾರೀ ಪ್ರಮಾಣದ ಆಹಾರ ವೇಸ್ಟ್ ಆಗುತ್ತಿದೆ' ಎಂದು ಗಮನಿಸಿಕೊಳ್ಳಬೇಕು' ಎಂದು ಸಲಹೆ ನೀಡಿದ್ದಾರೆ.

View post on Instagram