Asianet Suvarna News Asianet Suvarna News

ಅರೆರೆ ದಾಳಿಂಬೆ, ನಿನ್ನ ಮಹಿಮೆ ಅಪಾರ! ತಜ್ಞರು ಕಂಡ ಸತ್ಯವಿದು

ಅಮೆರಿಕದಂಥ ದೇಶಗಳಲ್ಲಿ ದಾಳಿಂಬೆ ಬಗ್ಗೆ ಹೆಚ್ಚಿಗೆ ಏನೂ ಗೊತ್ತೇ ಇಲ್ಲ. ನಮ್ಮಲ್ಲಿ ಬೆಳೆಯುತ್ತಾರೆ. ಆದರೆ, ಸಿಕ್ಕಾಪಟ್ಟೆ ಕೆಮಿಕಲ್ಸ್ ಬಳಸುತ್ತಾರೆಂದೂ ಹೇಳಲಾಗುತ್ತದೆ. ಆದರೆ, ಕೆಮಿಕಲ್ ಮುಕ್ತ ದಾಳಿಂಬೆ ಕ್ಯಾನ್ಸರ್‌ ತಡೆಯಲೂ ದಿವ್ಯಾಹಾರ!

Pomegranate best medicine for Arthritis canCer and skin health
Author
First Published Sep 4, 2022, 12:22 PM IST

ಹಣ್ಣಿನ ರೂಪದಲ್ಲಿ ಇರುವ ಔಷಧೀಯ ಖಜಾನೆ ದಾಳಿಂಬೆ. ಈ ಕೆಂಪು ಕಾಳಿನಲ್ಲಿ ವಿಪರೀತ ಪೋಷಕಾಂಶಗಳು, ಜೀವಸತ್ವಗಳು ಹಾಗೂ ಆರೋಗ್ಯಕ್ಕೆ ಅಗತ್ಯ ಅಂಶಗಳಿವೆ. ಸದಾ ಸಿಗೋ ಈ ಹಣ್ಣು ನಮ್ಮ ಆಹಾರದ ಅವಿಭಾಜ್ಯ ಅಂಗವಾಗುವಂತೆ ನೋಡಿಕೊಳ್ಳಬೇಕು. 

ಕ್ಯಾನ್ಸರ್‌ಗೆ ಮದ್ದು 
ಈ ದಾಳಿಂಬೆ ಬಗ್ಗೆ ಈಗಾಗಲೇ ಅನೇಕ ಸಂಶೋಧನಗಳು ನಡೆದಿವೆ. ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಇದು ಪರಿಣಾಮಕಾರಿ ಎಂಬುವುದು ಸಾಬೀತಾಗಿದೆ. ಈ ಹಣ್ಣಿನಲ್ಲಿರುವ ಉರಿಯೂತ ಶಮನಕಾರಿ ಗುಣ ಮತ್ತು ಪಾಲಿಫೆನಾಲ್‌ ಅಂಶ ಡಿಎನ್ಎ (DNA) ಬದಲಾಗದಂತೆ ರಕ್ಷಿಸಬಲ್ಲದು. ಕ್ಯಾನ್ಸರ್ ಗಡ್ಡೆ ಬೆಳೆಯದಂತೆ ನೋಡಿಕೊಳ್ಳುತ್ತದೆ. ಕ್ಯಾನ್ಸರ್ ಹರಡದಂತೆಯೂ ತಡೆಯುತ್ತದೆ. ಈ ಬಗ್ಗೆ ಮತ್ತಷ್ಟು ಅಧ್ಯಯನಗಳು ನಡೆಯುತ್ತಲೇ ಇವೆ. ಆದರೆ ದಾಳಿಂಬೆಯಿಂದ ಪ್ರಾಸ್ಟ್ರೇಟ್, ಸ್ತನ (Breast), ಶ್ವಾಸಕೋಶದ ಕ್ಯಾನ್ಸರ್ (Lungs Cancer) ಮತ್ತು  ಕರುಳು (Intestine) ಕ್ಯಾನಸ್ರ್ ತಡೆಯಲೂ ಸಾಧ್ಯ ಎಂಬುವುದು ಸಾಬೀತಾಗಿದೆ..

Memory Powerಗೆ ಮದ್ದು.
ಪಾಲಿಫೆನಾಲ್ ಎನ್ನುವ ಅಂಶ ಈ ಹಣ್ಣಿನಲ್ಲಿ ಅಧಿಕವಾಗಿದ್ದು, ನೆನಪಿನ ಶಕ್ತಿಯನ್ನು (Memory Power) ವೃದ್ಧಿಸುತ್ತದೆ. ತಾಜಾ ಹಣ್ಣು ಹೆಚ್ಚು ಪರಿಣಾಮಕಾರಿ.  ಇದರ ಜ್ಯೂಸ್ (Juice) ಸಹ ಮೆಮೋರಿ ಪವರ್ ಹೆಚ್ಚಿಸಬಲ್ಲದು. ನಿತ್ಯವೂ ನಿಮ್ಮ ಪಥ್ಯಾಹಾರದ ಭಾಗವಾಗಬೇಕು ಈ ಹಣ್ಣು. ಅದರಲ್ಲಿಯೂ  ಬೆಳಗ್ಗಿನ ತಿಂಡಿ (Breakfast) ಜೊತೆ ದಾಳಿಂಬೆ ಜ್ಯೂಸ್ ಕುಡಿದರಂತೂ ಮತ್ತಷ್ಟು ಪರಿಣಾಮಕಾರಿ. 

ಸೆಕ್ಸ್ ಹಾರ್ಮೋನ್ ಬಿಡುಗಡೆಗೆ ಸಹಾಯ ಮಾಡುತ್ತೆ ದಾಳಿಂಬೆ ಹಣ್ಣಿನ ರಸ..!


ರಕ್ತದೊತ್ತಡ ತಗ್ಗಿಸುವುದು
ಅಧಿಕ ರಕ್ತದೊತ್ತಡದ (Blood Pressure) ಸಮಸ್ಯೆ ಆಧುನಿಕ ಜೀವನಶೈಲಿಯ ಕೊಡುಗೆ. ದಾಳಿಂಬೆ ಜ್ಯೂಸ್‌ನ ನಿತ್ಯ ಸೇವನೆ ಕೊಲೆಸ್ಟ್ರಾಲ್ (cholesterol) ಮಟ್ಟವನ್ನು ಸುಧಾರಿಸುತ್ತದೆ. ರಕ್ತನಾಳದ ಪದರಗಳನ್ನು ತೆಗೆದುಹಾಕುತ್ತದೆ. ಸಹಜವಾಗಿಯೇ ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. 

ತ್ವಚೆಗೆ ತೇವಾಂಶ (Skin Glowing)
ಒಣ ಹಾಗೂ ನಿಸ್ತೇಜ ಚರ್ಮಕ್ಕೆ ದಾಳಿಂಬೆ ಒಳ್ಳೆಯದು. ವಿಟಮಿನ್ ಸಿಯೂ ಅಧಿಕವಾಗಿದೆ. ಚರ್ಮಕ್ಕೆ ಹಚ್ಚಿಕೊಂಡರೆ ಕಾಂತಿ ಹೆಚ್ಚುತ್ತದೆ. ಒಣ ಹಾಗೂ ನಿಸ್ತೇಜ ಚರ್ಮವನ್ನು ಸುಧಾರಿಸುತ್ತದೆ. ದಾಳಿಂಬೆ ಸ್ಕ್ರಬ್ ಅಂತೂ ಬಹಳ ಉಪಕಾರಿ. ಮೂರು ಚಮಚ ದಾಳಿಂಬೆ ರಸದೊಂದಿಗೆ ಒಂದು ಕಪ್ ಬೇಯಿಸಿದ ಓಟ್ ಮೀಲ್, 2 ಚಮಚ ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಮತ್ತು ಒಂದು ಚಮಚ ಜೇನುತುಪ್ಪ ಬಳಸಬೇಕು. ಇದನ್ನು ಫೇಸ್ ಪ್ಯಾಕ್ ಮಾಡಿಕೊಂಡು 10 ನಿಮಿಷ ಕಾಲ ಬಿಡಿ. ನಂತರ ಉಗರು ಬೆಚ್ಚಗಿನ (Warm Water) ನೀರಿನಿಂದ ತೊಳೆಯಿರಿ.

ಕೂದಲಿನ ಬೆಳವಣಿಗೆ  (Hair Growth)
ಆಂಟಿಆಕ್ಸಿಡೆಂಟ್ ಗುಣ ದಾಳಿಂಬೆಯಲ್ಲಿ ಅಧಿಕವಾಗಿದ್ದು, ಕೂದಲಿನ ಸೆಲ್‌ಗಳನ್ನು ಬಲಪಡಿಸುತ್ತದೆ. ರಕ್ತ ಸಂಚಾರವನ್ನು ಸುಧಾರಿಸುವುದರಿಂದ ಕೂದಲಿನ ಬೆಳವಣಿಗೆಗೆ ಇದು ಸಹಕಾರಿ. 

ಸಂಧಿವಾತಕ್ಕೂ (Arthritis) ಬೆಸ್ಟ್
ಗಂಟು ನೋವಿನ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತದೆ ಈಗ. ದಾಳಿಂಬೆ ಜ್ಯೂಸ್ ಈ ಸಮಸ್ಯೆಗೆ ಬೆಸ್ಟ್ ಮದ್ದು. ಈ ಹಣ್ಣಿನ ಕಾಳಿನಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಗಂಟಿನ ಊತ, ನೋವು ಮತ್ತು ಮೆತ್ತಗಾಗುವುದನ್ನು ತಡೆಯುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ದಾಳಿಂಬೆಯು  ಸಂಧಿವಾತವನ್ನು ಹೆಚ್ಚಿಸುವ ಕಿಣ್ವದ ಉತ್ಪತ್ತಿಯನ್ನೂ ತಡೆಯುತ್ತದೆ.

ದಾಳಿಂಬೆ ಜೀವ ರಕ್ಷಕ, ಅಂತದ್ದೇನಿದೆ ವಿಶೇಷ ಈ ಕಾಳಿನ ಹಣ್ಣಿನಲ್ಲಿ?

ಮೂಳೆಗಳ ಆರೋಗ್ಯ (Bone Health)
ಅಸ್ಥಿರಂಧ್ರ ಸಮಸ್ಯೆ ಇರುವವರ ಮೇಲೆ ದಾಳಿಂಬೆ ಪ್ರಯೋಗ ಮಾಡಿದಾಗ ಅತ್ಯುತ್ತಮ ಫಲಿತಾಂಶ ಹೊರ ಬಿದ್ದಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಮೂಳೆಯನ್ನು ಬಲಪಡಿಸುತ್ತದೆ. ಸಲಾಡ್ (Salad) ರೂಪದಲ್ಲಿ ಅಥವಾ ಮೊಸರಿಗೆ (Curd) ಹಾಕಿಕೊಂಡು ತಿಂದರೆ ದಾಳಿಂಬೆ ಮತ್ತಷ್ಟು ಪರಿಣಾಮಕಾರಿ.

ಮೊಡವೆಗೂ ಮದ್ದು 
ಮೊಡವೆಗೆ ಕಾರಣವಾಗುವ ಉರಿಯೂತವನ್ನು ದಾಳಿಂಬೆಯಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್ಸ್ ಕಡಿಮೆ ಮಾಡಬಲ್ಲದು. ತ್ವಚಾ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ ಈ ಹಣ್ಣು. ಸಂಜೆ ಏನೋನೋ ಹಾಳು ಮೂಳು ಸ್ನ್ಯಾಕ್ಸ್ ತಿನ್ನೋ ಬದಲು ಇದನ್ನು ತಿಂದರೆ ಸಾಕಷ್ಟು ಪ್ರಯೋಜನಗಳಿವೆ. ಆಗ ಈ ಹಣ್ಣಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗುತ್ತದೆ. ಜಂಕ್ ಫುಡ್‌ನಿಂದಾಗುವ ಮೂಡುವ ಮೊಡವೆಗೂ ಮದ್ದಾಗುತ್ತದೆ. 

 

Pomegranate best medicine for Arthritis canCer and skin health

 

Follow Us:
Download App:
  • android
  • ios