Health Tips: ಪಾಲಕ್ ಪನೀರ್ ನೀವಂದುಕೊಂಡಷ್ಟು ಹೆಲ್ದೀಯೇನಲ್ಲ
ಪಾಲಕ್ ಪನೀರ್ ಆರೋಗ್ಯಕ್ಕೆ ತುಂಬಾ ಒಳ್ಳೇದು ಅಂತ ಹೆಚ್ಚಿನವರು ಹೇಳ್ತಾರೆ. ಹೀಗಾಗಿಯೇ ರೆಸ್ಟೋರೆಂಟ್‌ಗಳಲ್ಲಿಯೂ ಪಾಲಕ್ ಪನೀರ್‌ಗೆ ಹೆಚ್ಚಿನ ಬೆಲೆ ನಿಗದಿ ಮಾಡಿರಲಾಗುತ್ತೆ. ಆದ್ರೆ ಪಾಲಕ್ ಪನೀರ್ ಆರೋಗ್ಯಕ್ಕೆ ನೀವಂದುಕೊಂಡಷ್ಟು ಒಳ್ಳೆಯದೇನಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಹೆಚ್ಚಿನ ಸಸ್ಯಾಹಾರಿಗಳು ರೆಸ್ಟೋರೆಂಟ್‌ಗೆ ಹೋದಾಗ, ಪನೀರ್ ಅಥವಾ ಕಾಟೇಜ್ ಚೀಸ್ ನೊಂದಿಗೆ ಖಾದ್ಯವನ್ನು ಸೇವಿಸಲು ಇಷ್ಟಪಡುತ್ತಾರೆ. ನೀವು ಸಸ್ಯಾಹಾರಿ (Vegetarian)ಯಾಗಿದ್ದರೆ ಕಾಟೇಜ್ ಚೀಸ್ ನಿಮ್ಮ ನೆಚ್ಚಿನದಾಗಿರಬೇಕು ಎಂದು ಹಲವರು ಊಹಿಸುತ್ತಾರೆ. ಆದ್ದರಿಂದ, ಪಾಲಕ್ ಪನೀರ್ ಭಾರತೀಯರಲ್ಲಿ ಜನಪ್ರಿಯ ಭಕ್ಷ್ಯವಾಗಿದೆ. ಆದರೆ ಇದು ಕೇವಲ ಸಸ್ಯಾಹಾರಿಗಳು ಮಾತ್ರವಲ್ಲ, ಮಾಂಸ ಪ್ರಿಯರಿಗೆ ಕೂಡಾ ಪ್ರಿಯವಾಗಿವೆ. ಇದು ಪ್ಯೂರೀಡ್ ಪಾಲಕ್‌ನಿಂದ ಮಾಡಿದ ದಪ್ಪ ಪೇಸ್ಟ್‌ನಲ್ಲಿ ಪನೀರ್ ತುಂಡುಗಳನ್ನು ಒಳಗೊಂಡಿರುತ್ತದೆ. ಪಾಲಕ್ ಮತ್ತು ಪನೀರ್ ಈ ಖಾದ್ಯದಲ್ಲಿ ಹೆಚ್ಚಿ ನ ಪ್ರಮಾಣದಲ್ಲಿ ಇರುವುದರಿಂದ ಇದು ನಿಮ್ಮ ದೇಹಕ್ಕೆ (Body) ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳಿಂದ ತುಂಬಿದೆ ಎಂದು ನೀವು ಭಾವಿಸಬಹುದು. ಆದರೆ ಪಾಲಕ್ ಪನೀರ್ ನೀವಂದುಕೊಂಡಷ್ಟು ಆರೋಗ್ಯಕ್ಕೆ (Health) ಒಳ್ಳೆಯದೇನಲ್ಲ ನೋಡಿ.
ರಿಸರ್ಚ್‌ಗೇಟ್ ಪ್ರಕಾರ, ಪಾಲಕ್ ಕಬ್ಬಿಣ, ತಾಮ್ರ, ರಂಜಕ, ಸತು ಮತ್ತು ಸೆಲೆನಿಯಮ್‌ನಂತಹ ಖನಿಜಗಳ ಉತ್ತಮ ಮೂಲವಾಗಿದೆ, ಜೊತೆಗೆ ವಿಟಮಿನ್ ಬಿ ಕಾಂಪ್ಲೆಕ್ಸ್, ಆಸ್ಕೋರ್ಬಿಕ್ ಆಮ್ಲ, ಒಮೆಗಾ -3-ಕೊಬ್ಬಿನ ಆಮ್ಲಗಳು ಮತ್ತು ಹೆಚ್ಚಿನವನ್ನು ಒಳಗೊಂಡಿದೆ. ಪಾಲಕ್‌ನ್ನು ಹಲವಾರು ಚಿಕಿತ್ಸಕ ಪರಿಣಾಮಗಳಿಗೆ ಸಾಂಪ್ರದಾಯಿಕ ಔಷಧದಲ್ಲಿ (Medicine) ಬಳಸಲಾಗುತ್ತದೆ. ಮಧುಮೇಹ, ಕುಷ್ಠರೋಗ, ಆಸ್ತಮಾ, ಶ್ವಾಸಕೋಶದ ಉರಿಯೂತ, ಕೀಲು ನೋವು, ನೋಯುತ್ತಿರುವ ಗಂಟಲು, ಶೀತ, ಸೀನುವಿಕೆ ಮತ್ತು ಜ್ವರ (Fever)ದಂತಹ ಕಾಯಿಲೆಗಳು ಅಥವಾ ಆರೋಗ್ಯ (Health) ಪರಿಸ್ಥಿತಿಗಳಿಗೆ ಚಿಕಿತ್ಸೆ (Treatment) ನೀಡಲು ಪಾಲಕ್ ತುಂಬಾ ಒಳ್ಳೆಯದು.
ಈ ಆಹಾರದಿಂದಲೂ ತಲೆನೋವು ಬರಬಹುದು: ತಿನ್ನೋ ಮುನ್ನ ಎಚ್ಚರ!
ಕಾಟೇಜ್ ಚೀಸ್‌ಗೆ ಸಂಬಂಧಿಸಿದಂತೆ, ಪೌಷ್ಠಿಕಾಂಶದಲ್ಲಿ ಇದು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಎಂದು ಡಾ ಲಾರಾ ವೈನೆಸ್ ಗಮನಸೆಳೆದರು. ಕಾಟೇಜ್ ಚೀಸ್ ರಂಜಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಕ್ಯಾಲ್ಸಿಯಂನೊಂದಿಗೆ ಸಂಯೋಜಿಸಿದಾಗ, ಬಲವಾದ ಮೂಳೆ (Bone)ಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಮುರಿತಗಳು ಅಥವಾ ಆಸ್ಟಿಯೊಪೊರೋಸಿಸ್ ವಿರುದ್ಧ ಸಮರ್ಥವಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ. ಕೇವಲ ಒಂದು ಕಪ್ ಕಾಟೇಜ್ ಚೀಸ್ ಸುಮಾರು 138 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಆದ್ದರಿಂದ ಇದು ಮೂಳೆ ನಿರ್ಮಾಣಕ್ಕೆ ಪರಿಪೂರ್ಣ ಆಯ್ಕೆಯಾಗಿದೆ.
ಪನೀರ್ ಸೇವನೆಯ ಪ್ರಯೋಜನಗಳು
ಮೂಳೆ ನಿರ್ಮಾಣಕ್ಕೆ ಪನೀರ್ ಸೂಕ್ತವಾಗಿದೆ. ಹೀಗಿರುವಾಗ ಪಾಲಕ್ ಪನೀರ್ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಎಂದು ನೀವು ಆಶ್ಚರ್ಯ ಪಡಬೇಕು. ಕಾಟೇಜ್ ಚೀಸ್‌ನೊಂದಿಗೆ ಪಾಲಕ್‌ನ್ನು ಬೆರೆಸುವುದು ಯಾಕೆ ಒಳ್ಳೆಯದಲ್ಲ ಎಂಬುದನ್ನು ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
ಸರಿಯಾದ ಆಹಾರ ಸಂಯೋಜನೆ ಮುಖ್ಯ: ಬೇರೆ ಬೇರೆ ಆಹಾರಗಳ ಸೇವನೆ ಮನಸ್ಸನ್ನು ತೃಪ್ತಿ ಪಡಿಸುತ್ತದೆಯಾದರೂ, ಕೆಲವೊಂದು ಆಹಾರಗಳ ಸಂಯೋಜನೆ (Food combination) ಆರೋಗ್ಯಕ್ಕೆ ಹಾನಿಕರವಾಗಿ ಪರಿಣಮಿಸಬಹುದು. ಆರೋಗ್ಯಕರ ಆಹಾರವು ಸರಿಯಾದ ಆಹಾರ ಪದಾರ್ಥಗಳನ್ನು ತಿನ್ನುವುದು ಮಾತ್ರವಲ್ಲ, ಸರಿಯಾದ ಆಹಾರ ಪದಾರ್ಥಗಳನ್ನು ಸರಿಯಾದ ಸಂಯೋಜನೆಯಲ್ಲಿ ತಿನ್ನುವುದಾಗಿದೆ.
Weight Loss Tips: ಬೇಗ ತೂಕ ಇಳಿಸ್ಕೋಬೇಕಾ, ಚಪಾತಿಗೆ ತುಪ್ಪ ಹಚ್ಕೊಂಡು ತಿನ್ನಿ ಸಾಕು
ಪಾಲಕ್ ಮತ್ತು ಪನೀರ್ ಹೇಗೆ ಆರೋಗ್ಯಕರ ಸಂಯೋಜನೆಯಲ್ಲ
ಪಾಲಕ್ ಹಾಗೂ ಪನೀರ್ ಎರಡೂ ಸಹ ಅತ್ಯುತ್ತಮ ರುಚಿ (Taste)ಯನ್ನು ಹೊಂದಿವೆ. ಮಾತ್ರವಲ್ಲ ಪೌಷ್ಟಿಕಾಂಶದಲ್ಲೂ ಹೇರಳವಾಗಿವೆ. ಆದರೆ ಇವೆರಡನ್ನೂ ಒಟ್ಟಿಗೆ ತಿನ್ನುವಾಗ ಇದು ಪರಸ್ಪರ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಅಂತಹ ಒಂದು ಸಂಯೋಜನೆಯು ಕಬ್ಬಿಣ ಮತ್ತು ಕ್ಯಾಲ್ಸಿಯಂ ಆಗಿದೆ. ಕಾಟೇಜ್ ಚೀಸ್ ಕ್ಯಾಲ್ಸಿಯಂನಲ್ಲಿ, ಪಾಲಕ ಕಬ್ಬಿಣ (Iron)ದಲ್ಲಿ ಸಮೃದ್ಧವಾಗಿದೆ. ಆದರೆ ಕ್ಯಾಲ್ಸಿಯಂ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಪಾಲಕ್ ಪನೀರ್‌ಗೆ ಪರ್ಯಾಯವೇನು ?
ಪಾಲಕ್ ಪನೀರ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತೇನಿಲ್ಲ. ಆದರೆ ನೀವಿದಕ್ಕೆ ಪರ್ಯಾಯವಾಗಿ (Alternative) ಇನ್ನೇನಾದರೂ ತಿನ್ನಲು ಬಯಸುವುದಾದರೆ, ಪಾಲಕ್ ಆಲೂ ಅಥವಾ ಪಾಲಕ್ ಕಾರ್ನ್ ಅನ್ನು ಸೇವಿಸಬಹುದು. ಸರಿಯಾದ ಆಹಾರ ಪದಾರ್ಥಗಳನ್ನು ಸರಿಯಾದ ಸಂಯೋಜನೆಯಲ್ಲಿ ತಿನ್ನುವುದು ಅತ್ಯಗತ್ಯ ಎಂದು ನಿಮಗೆ ಈಗ ತಿಳಿದಿದೆ. ಹೀಗಾಗಿ ಇನ್ಮುಂದೆ ಹೆಲ್ದೀ ಫುಡ್ ಅಂತ ಪಾಲಕ್ ಪನೀರ್‌ನ್ನು ಬೇಕಾಬಿಟ್ಟಿ ತಿನ್ನೋಕೆ ಹೋಗ್ಬೇಡಿ.