Asianet Suvarna News Asianet Suvarna News

Onion Hacks: ಬರೀ ರುಚಿ ಮಾತ್ರವಲ್ಲ, ಅಡುಗೆ ಮನೆ ಕ್ಲೀನ್ ಮಾಡುತ್ತೆ ಈರುಳ್ಳಿ!

ಅಡುಗೆ ಕೋಣೆ (Kitchen) ಅಂದ್ಮೇಲೆ ಅಲ್ಲಿ ಈರುಳ್ಳಿ (Onion), ಬೆಳ್ಳುಳ್ಳಿ, ಶುಂಠಿ, ಲವಂಗ ಮೊದಲಾದ ಪದಾರ್ಥಗಳು ಇರುತ್ತವೆ. ಈರುಳ್ಳಿಯನ್ನು ಆಹಾರ (Food) ತಯಾರಿಸುವಾಗ ಬಳಸೋದು ನಿಮಗೆ ಗೊತ್ತು. ಆದರೆ, ಅದಲ್ಲದೆಯೂ ಅಡುಗೆ ಮನೆಯಲ್ಲಿ ಬೇರೆ ಹಲವು ರೀತಿಯಲ್ಲಿ ಈರುಳ್ಳಿಯನ್ನು ಬಳಸ್ಬೋದು ಅನ್ನೋದು ಗೊತ್ತಾ ?
 

Onion Hacks That Will Make Your Life Easier In Kitchen
Author
Bengaluru, First Published Jan 18, 2022, 10:34 AM IST

ಅಡುಗೆಮನೆಯಲ್ಲಿ ಏನಿಲ್ಲಾಂದ್ರೂ ಈರುಳ್ಳಿ (Onion) ಅಂತೂ ಇದ್ದೇ ಇರುತ್ತೆ. ಸಾಮಾನ್ಯವಾಗಿ ಎಲ್ಲಾ ಸಾರು, ಸಾಂಬಾರು, ಪಲ್ಯ ಮಾಡುವಾಗಲೂ ಈರುಳ್ಳಿಯನ್ನು ಬಳಸುತ್ತಾರೆ. ಈರುಳ್ಳಿಯ ವಾಸನೆ ಹಿಡಿಸದವರು ಮಾತ್ರ ಇದರಿಂದ ದೂರವಿರುತ್ತಾರೆ. ಈರುಳ್ಳಿಯಿಲ್ಲದೆ ಅಡುಗೆಗೆ ರುಚಿಯಿಲ್ಲ ಅನ್ನೋ ಅಭಿಪ್ರಾಯ ಹಲವು ಗೃಹಿಣಿಯರದ್ದು. ಈರುಳ್ಳಿ ಅಡುಗೆಗೆ ಬಳಸುವ ಮೊದಲ ಪದಾರ್ಥಗಳಲ್ಲಿ ಒಂದಾಗಿದೆ. ಇದು ಕೇವಲ ನಮ್ಮ ಆಹಾರ (Food)ಗಳಿಗೆ ಸಾಂದ್ರತೆ, ಬಣ್ಣ ಮತ್ತು ಪರಿಮಳವನ್ನು ಮಾತ್ರ ತರುವುದಿಲ್ಲ. ಈರುಳ್ಳಿ ಸೇವನೆ ವಿವಿಧ ಆರೋಗ್ಯ (Health) ಪ್ರಯೋಜನಕಾರಿ ಗುಣಗಳನ್ನು ನೀಡುತ್ತದೆ. 

ಆದರೆ, ಇವಿಷ್ಟೇ ಅಲ್ಲ ಈರುಳ್ಳಿಯನ್ನು ಅಡುಗೆಮನೆಯಲ್ಲಿ ಇತರ ಕೆಲವು ಉಪಯೋಗಗಳಿಗೂ ಬಳಸಬಹುದು ಎಂಬುದು ನಿಮಗೆ ಗೊತ್ತಾ. ತರಕಾರಿ ಬುಟ್ಟಿಯಲ್ಲಿ ಕುಳಿತಿರುವ ಈರುಳ್ಳಿ ಗ್ಯಾಸ್ ಒಲೆ ಕ್ಲೀನಿಂಗ್, ಅಡುಗೆ ಮನೆಯಲ್ಲಿರುವ ಪರಿಕರಗಳು ತುಕ್ಕು ಹಿಡಿಯುವುದು ತಪ್ಪಿಸುವುದು ಸೇರಿದಂತೆ ಹಲವು ಕೆಲಸಗಳಿಗೆ ನೆರವಾಗುತ್ತದೆ.

Pain Killers: ಅಡುಗೆಮನೆಯ 8 ಪೈನ್ ಕಿಲ್ಲರ್ಸ್, ನಿಮಿಷಗಳಲ್ಲಿ ನೋವು ಮಾಯ

ಗ್ಯಾಸ್ ಒಲೆಯನ್ನು ಸಲೀಸಾಗಿ ಸ್ವಚ್ಛಗೊಳಿಸುತ್ತದೆ
ಈರುಳ್ಳಿಯಂತಹ ಸರಳವಾದ ವಸ್ತುವಿನಿಂದ ನಿಮ್ಮ ಗ್ಯಾಸ್ ಒಲೆ ಮತ್ತು ಗ್ರಿಲ್‌ನ್ನು ಸ್ವಚ್ಛಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಈರುಳ್ಳಿಯ ಹೆಚ್ಚಿನ ಬ್ಯಾಕ್ಟೀರಿಯಾ (Bacteria) ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಇಲ್ಲಿ ಕಾರ್ಯನಿರ್ವಹಿಸುತ್ತವೆ. ಸಿಪ್ಪೆ ಸುಲಿದ ಈರುಳ್ಳಿಯನ್ನು ಒಂದು ಸುತ್ತಿನ ಸ್ಲೈಸ್ ಆಗಿ ಕತ್ತರಿಸಿ. ಗಿಲ್ ಮತ್ತು ಓವನ್‌ನ ರಾಡ್‌ಗಳನ್ನು ಒರೆಸಲು ಇದನ್ನು ಬಳಸಿ. ಇದರಿಂದ ಒಲೆ, ಗ್ರಿಲ್ ಸ್ವಚ್ಚವಾಗುವುದು ಮಾತ್ರವಲ್ಲದೆ, ಬ್ಯಾಕ್ಟಿರೀಯಾಗಳು ಸಹ ಇಲ್ಲವಾಗುತ್ತವೆ.

ಆಹಾರಗಳ ಬ್ರೌನಿಂಗ್  ತಡೆಯುತ್ತದೆ
ಈರುಳ್ಳಿಯಲ್ಲಿರುವ ನೈಸರ್ಗಿಕ ತೇವಾಂಶ ಮತ್ತು ಸಲ್ಫರ್ ಅಂಶವು ಅವುಗಳ ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆವಕಾಡೊಗಳಂತಹ ಆಹಾರಗಳಲ್ಲಿ ಆಕ್ಸಿಡೀಕರಣ ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಹೀಗಾಗಿ ಆವಕಾಡೊಗಳನ್ನು ಶೇಖರಿಸುವ ಕಂಟೇನರ್‌ನಲ್ಲಿ ಈರುಳ್ಳಿಯ ತುಂಡನ್ನು ಕತ್ತರಿಸಿ ಇಟ್ಟರೆ ಇದು ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ.

Kitchen Tips : ಸಿಂಪಲ್ ಟ್ರಿಕ್ಸ್ ಮೂಲಕ ಈರುಳ್ಳಿ, ಬೆಳ್ಳುಳ್ಳಿ , ಶುಂಠಿ ಸಿಪ್ಪೆ ಸುಲಿಯಿರಿ

ಕೆಟ್ಟ ವಾಸನೆಯನ್ನು ನಿವಾರಿಸುತ್ತದೆ
ಸುಟ್ಟ ಅಕ್ಕಿ, ಅತಿಯಾಗಿ ಬಿಸಿ ಮಾಡಿದ ಹಾಲು (Milk), ಅಥವಾ ಬಿಸಿ ಮಾಡಿದ ಬೇಳೆ, ಇವೆಲ್ಲವೂ ಅಡುಗೆಮನೆಯಲ್ಲಿ ಅಸಹನೀಯ ವಾಸನೆಗೆ ಕಾರಣವಾಬಹುದು. ಅದನ್ನು ತೊಡೆದುಹಾಕಲು, ನೀವು ಮಾಡಬೇಕಾಗಿರುವುದು ಇಷ್ಟೇ. ಈರುಳ್ಳಿಯ ಚೂರುಗಳನ್ನು ಒಲೆಯ ಹತ್ತಿರ ಇರಿಸಿ.  ಅದು ಯಾವುದೇ ಸಮಯದಲ್ಲಿ ಎಲ್ಲಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.

ಪರ್ಫೆಕ್ಟ್ ರೌಂಡ್ ಆಮ್ಲೆಟ್ ಸಿದ್ಧಪಡಿಸಬಹುದು
ಮೊಟ್ಟೆ (Egg)ಯನ್ನು ಒಡೆದು ರೌಂಡ್ ಶೇಪ್‌ನಲ್ಲಿ ಪ್ಯಾನ್‌ನಲ್ಲಿ ಹಾಕುವುದು ಹಲವರಿಗೆ ದೊಡ್ಡ ಟಾಸ್ಕ್. ಯಾಕೆಂದರೆ ಇದನ್ನು ಎಲ್ಲರಿಂದಲೂ ಸುಲಭವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಮೊಟ್ಟೆ ಒಡೆದ ಕೂಡಲೇ ಸುತ್ತಲೂ ಹರಡಿಬಿಡುತ್ತದೆ. ಹೀಗಾಗಿ ಮೊಟ್ಟೆಯನ್ನು ಒಡೆದು ಅಟ್ರ್ಯಾಕ್ಟಿವ್ ಆಗಿ ಕಾಣುವಂತೆ ರೌಂಡ್ ಆಗಿ ಹಾಕಲು ನೀವು ಈರುಳ್ಳಿಯನ್ನು ಬಳಸಿಕೊಳ್ಳಬಹುದು. ಇದಕ್ಕೆ ಮೊದಲು, ಪ್ಯಾನ್ ಅಥವಾ ಬಾಣಲೆಯಲ್ಲಿ ದೊಡ್ಡ ಈರುಳ್ಳಿ ರಿಂಗ್‌ನ್ನು ಹಾಕಿ. ನಂತರ ಮೊಟ್ಟೆಯನ್ನು ಒಡೆದು ಇದರೊಳಗೆ ಹಾಕಿ. ಇದರಿಂದ ಪರ್ಫೆಕ್ಟ್ ರೀತಿಯಲ್ಲಿ ರೌಂಡ್ ಆಮ್ಲೆಟ್ ಸಿದ್ಧಗೊಳ್ಳುತ್ತದೆ.

ತುಕ್ಕು ಹಿಡಿಯುವುದನ್ನು ತಪ್ಪಿಸುತ್ತದೆ
ಅಡುಗೆಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಹಾಗೆಯೇ ಇಟ್ಟು ತುಂಬಾ ಕಾಲ ಬಳಸದಿದ್ದಾಗ ಅದು ತುಕ್ಕು (Rust) ಹಿಡಿಯಲು ಆರಂಭವಾಗುತ್ತದೆ. ಚಾಕುಗಳು, ಚಮಚಗಳನ್ನು ಹಾಗೆಯೇ ಇಟ್ಟರೆ ತುಕ್ಕು ಹಿಡಿಯುತ್ತದೆ. ಅದನ್ನು ಸಾಬೂನಿನಿಂದ ತಿಕ್ಕಿ ತಿಕ್ಕಿ ತೊಳೆದರೂ ಅದು ಹೋಗುವುದಿಲ್ಲ. ಅಂಥಹಾ ಸಂದರ್ಭಗಳಲ್ಲಿ ಈರುಳ್ಳಿಯನ್ನು ಬಳಸಿಕೊಳ್ಳಬಹುದು. ತೆಗೆದಿಡುವ ಚಾಕುವಿನಿಂದ ಈರುಳ್ಳಿಯನ್ನು ಸರಿಯಾಗಿ ಅರ್ಧ ಭಾಗದ ವರೆಗೆ ಕತ್ತರಿಸಿ ಸ್ಪಲ್ಪ ಸಮಯ ಹಾಗೆಯೇ ಇಡಿ. ನಂತರ ಈರುಳ್ಳಿಯಿಂದ ಚಾಕುವನ್ನು ತೆಗೆದು ಎತ್ತಿಡಿ. ಈ ರೀತಿ ಮಾಡಿದರೆ ಉಪಯೋಗಿಸದೇ ಇದ್ದರೂ ಚಾಕು ತುಕ್ಕು ಹಿಡಿಯುವುದಿಲ್ಲ.

Follow Us:
Download App:
  • android
  • ios