National Fried Rice Day: ಸುಯಿ ರಾಜವಂಶದಲ್ಲಿ ಶುರುವಾಗಿತ್ತಂತೆ ಫ್ರೈಡ್‌ ರೈಸ್ ತಯಾರಿ

ಸ್ಪೈಸೀಯಾಗಿ ಟೇಸ್ಟಿಯಾಗಿ ಏನಾದ್ರೂ ತಿನ್ಬೇಕು ಅಂತನಿಸಿದಾಗ ಹೆಚ್ಚಿನವರಿಗೆ ತಕ್ಷಣಕ್ಕೆ ನೆನಪಾಗೋದು ಫ್ರೈಡ್ ರೈಸ್‌. ಕೆಲವೇ ಕೆಲವು ವಸ್ತುಗಳಿದ್ದರೂ ಸಾಕು ಇದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಹಲವು ಶತಮಾನಗಳಿಂದ ಬಳಸ್ತಿರೋ ಫ್ರೈಡ್ ರೈಸ್‌ಗೂ ಒಂದು ದಿನವಿದೆ ಅನ್ನೋದು ನಿಮ್ಗೊತ್ತಾ ? ಆ ಬಗ್ಗೆ ಇಲ್ಲಿದೆ ಮಾಹಿತಿ. 

National Fried Rice Day: History And Significance Of Indians Favourite Fried Rice Vin

ಫ್ರೈಡ್‌ ರೈಸ್‌ ಹಲವರ ಅಚ್ಚುಮೆಚ್ಚಿನ ಆಹಾರ. ವೆಜ್‌, ಎಗ್‌, ಚಿಕನ್ ಫ್ರೈಡ್ ರೈಸ್ ಹೀಗೆ ವಿವಿಧ ವೆರೈಟಿಯಲ್ಲಿ ಲಭ್ಯವಿರುತ್ತದೆ. ಮೂಲತಃ ಫ್ರೈಡ್ ರೈಸ್ ಭಾರತದ ಆಹಾರವಲ್ಲ. ವಿದೇಶಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಫ್ರೈಡ್‌ ರೈಸ್‌ನ ಜನಪ್ರಿಯತೆ, ಅದರ ರುಚಿ, ಬೇಡಿಕೆಯನ್ನು ಮನಗಂಡು ಅಮೆರಿಕದಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 20ರಂದು ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನ ಆಚರಿಸಲಾಗುತ್ತದೆ. ಅನ್ನದ ಜತೆಗೆ ತರಕಾರಿ, ಮೊಟ್ಟೆ, ಮಾಂಸ ಇತ್ಯಾದಿಗಳನ್ನು ಸೇರಿಸಿ ಫ್ರೈಡ್‌ ರೈಸ್‌ ತಯಾರಿಸಲಾಗುತ್ತದೆ. ಸ್ಟ್ರೀಟ್‌ ಫುಡ್‌ನಲ್ಲಿ ಫ್ರೈಡ್‌ ರೈಸ್‌ಗೆ ಅಗ್ರಸ್ಥಾನವಿದೆ.

ಫ್ರೈಡ್‌ ರೈಸ್‌ ಎಂದಾಗ ಕೆಲವರ ಬಾಯಲ್ಲಿ ಖಂಡಿತವಾಗಿಯೂ ನೀರೂರುತ್ತದೆ. ವೆಜ್‌ ಅಥವಾ ನಾನ್‌ ವೆಜ್‌ ಫ್ರೈಡ್‌ ರೈಸ್‌ ಈಗ ಜಗತ್ತಿನ ಎಲ್ಲಾ ದೇಶಗಳಲ್ಲಿಯೂ ಪ್ರಚಲಿತದಲ್ಲಿರುವ ಫುಡ್‌. ವಿಶೇಷವಾಗಿ, ಈ ಫ್ರೈಡ್‌ ರೈಸ್‌ಗೆ ಇಂದು ಅಮೆರಿಕದಲ್ಲಿ ರಾಷ್ಟ್ರೀಯ ದಿನದ ಸಂಭ್ರಮ. ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನದ ಕುರಿತು ಕೊಂಚ ಮಾಹಿತಿ ತಿಳಿದುಕೊಂಡು ರುಚಿರುಚಿಯಾದ ಫ್ರೈಡ್‌ ರೈಸ್‌ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ.

Kitchen Tips: ಉಪವಾಸಕ್ಕೆ ಸಾಬೂದಾನ ಖರೀದಿ ಮಾಡ್ತಿದ್ರೆ ಈ ವಿಷ್ಯ ನೆನಪಿಡಿ

ಏನಿದು ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನ ?
ಫ್ರೈಡ್‌ ರೈಸ್‌ನ ಜನಪ್ರಿಯತೆ, ಅದರ ರುಚಿ, ಬೇಡಿಕೆಯನ್ನು ಮನಗಂಡು ಅಮೆರಿಕದಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 20ರಂದು ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನ (National Fried Rice Day) ಆಚರಿಸಲಾಗುತ್ತದೆ. ಮೊದಲ ಬಾರಿಗೆ ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನವನ್ನು ಕ್ಯಾಲಿಫೋರ್ನಿಯಾದಲ್ಲಿ 2009ರಲ್ಲಿ ಆಚರಿಸಲಾಯಿತು. ಈ ಮೂಲಕ ಚೈನೀಸ್‌ ಆಹಾರಕ್ಕೆ (Food) ಉತ್ತೇಜನ ನೀಡಲಾಯಿತು. ಚೀನಾದ ಸುಯಿ ರಾಜವಂಶದ ಆಡಳಿತದ ಕಾಲದಲ್ಲಿ ಮೊದಲ ಬಾರಿಗೆ ಫ್ರೈಡ್‌ ರೈಸ್‌ ಆರಂಭವಾಗಿದೆ. ಫ್ರೈಡ್‌ ರೈಸ್‌ನ ಮಹತ್ವವನ್ನು (Importance) ತಿಳಿಸುವ ಸಲುವಾಗಿ ಮತ್ತು ವಿವಿಧ ರೀತಿಯಲ್ಲಿ, ಫ್ಲೇವರ್‌ಗಳಲ್ಲಿ ಫ್ರೈಡ್‌ ರೈಸ್‌ ತಯಾರಿಸಬಹುದು ಎನ್ನುವುದನ್ನು ಜಗತ್ತಿಗೆ ಸಾದರಪಡಿಸುವ ಸಲುವಾಗಿ ಇದಕ್ಕೊಂದು ದಿನವನ್ನು ಮೀಸಲಿರಿಸಲಾಗಿದೆ ಎಂದು ತಿಳಿದುಬಂದಿದೆ.

ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಫ್ರೈಡ್‌ ರೈಸ್‌ ರಾಷ್ಟ್ರೀಯ ಆಹಾರ.  ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನದ ಆಚರಣೆಯ ಭಾಗವಾಗಿ  ಈ ದಿನ ಹಲವು ದೇಶಗಳಲ್ಲಿ, ಕೆಲವು ರೆಸ್ಟೂರೆಂಟ್‌ಗಳಲ್ಲಿ ಫ್ರೈಡ್‌ ರೈಸ್‌ ಅನ್ನು ಡಿಸ್ಕೌಂಟ್‌ ದರದಲ್ಲಿ ನೀಡಲಾಗುತ್ತದೆ. ಜತೆಗೆ, ಬಹುತೇಕರು ಇಂದು ಮನೆಗಳಲ್ಲಿ ಫ್ರೈಡ್‌ ರೈಸ್‌ ಮಾಡಿ ಸವಿಯುತ್ತಾರೆ.

ಫ್ರೈಡ್‌ ರೈಸ್‌ ತಯಾರಿಸುವುದು ಹೇಗೆ ?
ರಾಷ್ಟ್ರೀಯ ಫ್ರೈಡ್‌ ರೈಸ್‌ ದಿನವಾದ  ಇಂದು ಸಿಂಪಲ್‌ ಆಗಿ ಫ್ರೈಡ್‌ ರೈಸ್‌ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ಇದು ಒಂದೇ ವಿಧಾನವಲ್ಲ. ಬೇರೆ ಹಲವು ರೀತಿಯಲ್ಲಿ ನೀವು ಟ್ರೈ ಮಾಡಬಹುದು.

World Bamboo Day: ಕಳಲೆ ತಿಂದ್ರೆ ಸಾಕು, ಡಯಾಬಿಟಿಸ್ ಭಯ ಬೇಕಿಲ್ಲ

ಫ್ರೈಡ್‌ ರೈಸ್‌ ಮಾಡಲು ಬೇಕಾಗುವ ಸಾಮಗ್ರಿಗಳು
ನಾಲ್ಕು ಕಪ್‌ ಅನ್ನ. ಎರಡು ಚಮಚ ಆಲಿವ್‌ ಎಣ್ಣೆ. ಅರ್ಧ ಕಪ್‌ ಈರುಳ್ಳಿ, ನಾಲ್ಕೈದು ತುಳಸಿ ಎಲೆ, ಅರ್ಧ ಕಪ್‌ ಕತ್ತರಿಸಿದ ಕ್ಯಾಪ್ಸಿಕಂ, ಕೊಂಚ ಬೆಳ್ಳುಳ್ಳಿ ಎಸಳು, ಸ್ವಲ್ಪ ಬೀನ್ಸ್, ಸ್ಪಲ್ಪ ಕ್ಯಾರೆಟ್, ಟೊಮೆಟೋ, ಎರಡು ಚಮಚ ಮೆಣಸಿನ ಪುಡಿ, ಅರ್ಧ ಕಪ್‌ ಟೊಮೆಟೊ, ಅರ್ಧ ಕಪ್‌ ಕ್ಯಾರೆಟ್‌, ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ರುಚಿಗೆ ತಕ್ಕಷ್ಟು ಉಪ್ಪು

ಫ್ರೈಡ್‌ ರೈಸ್‌ ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ. ಕತ್ತರಿಸಿಟ್ಟ ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ. ಬೆಳ್ಳುಳ್ಳಿ ಹಾಕಿ, ಫ್ರೈ ಮಾಡಿ. ಮೆಣಸಿನ ಪುಡಿ, ಟೊಮೆಟೊ, ಕ್ಯಾರೇಟ್‌, ಬೀನ್ಸ್‌ ಉಪ್ಪು ಹಾಕಿ ಮಿಕ್ಸ್‌ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅರ್ಧ ಚಮಚದಷ್ಟು ಸಕ್ಕರೆಯನ್ನೂ ಹಾಕಬಹುದು. ಫ್ರೈ ಆದ ಬಳಿಕ ಇದಕ್ಕೆ ಅನ್ನವನ್ನು ಹಾಕಿ ಸ್ವಲ್ಪ ಫ್ರೈ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಫ್ರೈಡ್‌ ರೈಸ್‌ ಸಿದ್ಧ. ನಾನ್‌ ವೆಜ್‌ ಫ್ರೈಡ್ ರೈಸ್ ಮಾಡುವವರು ತರಕಾರಿಯ (Vegetable) ಬದಲು ಬೇಯಿಸಿದ ಮೊಟ್ಟೆಯನ್ನು ಹುಡಿ ಮಾಡಿ ಅಥವಾ ಚಿಕನ್ ಪೀಸ್ ಸೇರಿಸಿದರಾಯಿತು.

National Fried Rice Day: History And Significance Of Indians Favourite Fried Rice Vin

Latest Videos
Follow Us:
Download App:
  • android
  • ios