Kitchen Tips : ಅಲ್ಯೂಮಿನಿಯಂ ಪಾತ್ರೆ ಬಳಸೋದೇ ಒಳ್ಳೇಯದಲ್ಲ, ಅದ್ರಲ್ಲೂ ಈ ಫುಡ್ ಮಾಡಲೇ ಬಾರದು!
ನಾನ್ ಸ್ಟಿಕ್, ಕಬ್ಬಿಣ, ಅಲ್ಯೂಮಿನಿಯಂ ಹೀಗೆ ಸಾಕಷ್ಟು ವೆರೈಟಿ ಲೋಹಗಳಿಂದ ಪಾತ್ರೆಗಳನ್ನು ತಯಾರಿಸಲಾಗುತ್ತದೆ. ಹಿಂದೆ ಮಣ್ಣಿನ ಮಡಿಕೆಯಲ್ಲಿ ಆಹಾರ ತಯಾರಿಸ್ತಾ ಇದ್ರು. ಈಗ ಅಗ್ಗದ ಅಲ್ಯೂಮಿನಿಯಂ ಬಳಕೆ ಹೆಚ್ಚಾಗಿದೆ. ಆದ್ರೆ ಈ ಅಲ್ಯೂಮಿನಿಯಂ ಪಾತ್ರೆಯಲ್ಲಿ ಎಲ್ಲ ರೀತಿಯ ಆಹಾರ ತಯಾರಿಸಬಹುದಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪ್ರತಿಯೊಬ್ಬರ ಮನೆಯಲ್ಲೂ ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸ್ತಾರೆ. ಅಲ್ಯೂಮಿನಿಯಂ ಪಾತ್ರೆಗಳು ಅಗ್ಗವಾಗಿರು ಕಾರಣ ಪ್ರತಿ ಮನೆಯಲ್ಲೂ ಅಲ್ಯೂಮಿನಿಯಂ ಬಾಣಲೆ ಅಥವಾ ಪಾತ್ರೆಗಳನ್ನು ಬಳಸ್ತಾರೆ. ಅಲ್ಯೂಮಿನಿಯಂ ಪಾತ್ರೆಗಳಿಲ್ಲದೆ ಅಡುಗೆ ಮನೆ ಅಪೂರ್ಣ ಎಂದ್ರೂ ತಪ್ಪಾಗಲಾರದು. ಭಾರತದಲ್ಲಿ ಮಾತ್ರವಲ್ಲ ಬಹುತೇಕ ಎಲ್ಲ ದೇಶಗಳಲ್ಲೂ ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸಲಾಗುತ್ತದೆ. ಕುಕ್ವೇರ್ ಮ್ಯಾನಿಫೆಕ್ಚರಿಂಗ್ ಅಸೋಸಿಯೇಷನ್ ಪ್ರಕಾರ, ಅಮೆರಿಕಾದಲ್ಲಿ ಕೂಡ ಶೇಕಡಾ 60ರಷ್ಟು ಪಾತ್ರೆಗಳು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿವೆಯಂತೆ.
ಅಲ್ಯೂಮಿನಿಯಂ (Aluminum) ಪಾತ್ರೆಗಳು ಶಾಖ (Heat) ದ ಉತ್ತಮ ವಾಹಕಗಳಾಗಿವೆ. ಹಾಗಾಗಿ ಇದ್ರಲ್ಲಿ ಆಹಾರ (Food )ಬೇಗ ಹಾಗೂ ಸರಿಯಾಗಿ ಬೇಯುತ್ತದೆ. ಹಾಗಾಗಿಯೇ ಬಹುತೇಕರು ಅಲ್ಯೂಮಿನಿಯಂ ಪಾತ್ರೆಯನ್ನು ಹೆಚ್ಚಾಗಿ ಬಳಸ್ತಾರೆ. ಆದ್ರೆ ಇದನ್ನು ಅಡುಗೆಯಲ್ಲಿ ಬಳಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಕಾಡುತ್ತದೆ. ನಾವಿಂದು ಅಲ್ಯೂಮಿನಿಯಂ ಪಾತ್ರೆಯಲ್ಲಿ ಆಹಾರ ತಯಾರಿಸುವುದು ಎಷ್ಟು ಸೂಕ್ತ ಹಾಗೆ ಯಾವ ಆಹಾರ ತಯಾರಿಸಬಾರದು ಎಂಬುದನ್ನು ಹೇಳ್ತೇವೆ.
ನಮ್ಮ ದೇಹ (Body) ಕ್ಕೆ ಒಂದು ಪ್ರಮಾಣದಲ್ಲಿ ಅಲ್ಯೂಮಿನಿಯಂ (Aluminium) ಬೇಕಾಗುತ್ತದೆ. ಆದ್ರೆ ಅಲ್ಯೂಮಿನಿಯಂ ಪ್ರಮಾಣ ದೇಹದಲ್ಲಿ ಹೆಚ್ಚಾದ್ರೆ ಹಾನಿಯಾಗುತ್ತದೆ. ಅಲ್ಯೂಮಿನಿಯಂ ಪಾತ್ರೆಗಳು ಆಮ್ಲೀಯ (acidic ) ಆಹಾರಗಳೊಂದಿಗೆ ಪ್ರತಿಕ್ರಿಯಿಸುತ್ತವೆ ಮತ್ತು ಈ ಲೋಹದ ಕಣಗಳು ಆಹಾರದಲ್ಲಿ ಮಿಶ್ರಣಗೊಳ್ಳುತ್ತವೆ. ಆದ್ದರಿಂದ ದೇಹದಲ್ಲಿ ಅಲ್ಯೂಮಿನಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ ಯಾವ ಸಮಸ್ಯೆ ತರುತ್ತದೆ ಎಂಬುದು ನಮ್ಮ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಯಾವುದೇ ಅನಾರೋಗ್ಯ (illness) ಸಮಸ್ಯೆಯಿದ್ದರೆ, ಅಲ್ಯೂಮಿನಿಯಂ ಪಾತ್ರೆ ಬಳಸುವ ಮುನ್ನ ವೈದ್ಯರಿಂದ ಮಾಹಿತಿ ಪಡೆಯುವುದು ಒಳ್ಳೆಯದು.
ಈ ಸಿನಿ ಸ್ಟಾರ್ಸ್ ಚೆನ್ನಾಗಿ ಕಾಣಲು ಬಳಸೋದು ವೀರ್ಯದ ಫೇಷಿಯಲ್!
ಅಲ್ಯೂಮಿನಿಯಂ ಪಾತ್ರೆಯಲ್ಲಿ ಈ ಆಹಾರ ತಯಾರಿಸಬೇಡಿ :
ಟೊಮೊಟೊ ಸಾಸ್ (Tomato Sauce) ಮತ್ತು ಗ್ರೇವಿ (Gravy): ಎಲ್ಲರಿಗೂ ತಿಳಿದಂತೆ ಟೊಮೆಟೊ ಆಮ್ಲೀಯ ಗುಣವನ್ನು ಹೊಂದಿದೆ. ಟೊಮೊಟೊವನ್ನು ಅಲ್ಯೂಮಿನಿಯಂನಲ್ಲಿ ತುಂಬಾ ಸಮಯ ಬೇಯಿಸಿದರೆ ಅದರ ರುಚಿಯಲ್ಲಿ ಬದಲಾವಣೆಯಾಗುತ್ತದೆ. ಟೊಮೊಟೊ ಆಮ್ಲೀಯವಾಗಿರುವುದರಿಂದ ಇದು ಅಲ್ಯೂಮಿನಿಯಂನೊಂದಿಗೆ ಪ್ರತಿಕ್ರಿಯಿಸುತ್ತದೆ. ಅಲ್ಯೂಮಿನಿಯಂ ಅಂಶಗಳು ಟೊಮೊಟೊ ಗ್ರೇವಿ ಅಥವಾ ಸಾಸ್ ಜೊತೆ ನಮ್ಮ ಹೊಟ್ಟೆ ಸೇರುತ್ತವೆ.
ವಿನೆಗರ್ (Vinegar) ಅಥವಾ ಅದಕ್ಕೆ ಸಂಬಂಧಿಸಿದ ಆಹಾರ : ಕುಕ್ಸಿಲ್ಲಸ್ಟ್ರೇಟೆಡ್ ಈ ಬಗ್ಗೆ ಸಂಶೋಧನೆಯೊಂದನ್ನು ನಡೆಸಿದೆ. ಅದ್ರ ಪ್ರಕಾರ, ವಿನೆಗರ್, ಅಲ್ಯೂಮಿನಿಯಂ ಜೊತೆ ಪ್ರತಿಕ್ರಿಯಿಸುತ್ತದೆ. ವಿನೆಗರ್ ಇರುವ ಯಾವುದೇ ಆಹಾರವನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಾಡಬಾರದು. ಉಪ್ಪಿನಕಾಯಿಯನ್ನು ಕೂಡ ಎಂದೂ ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಾಕ್ಬಾರದು. ಉಪ್ಪಿನ ಕಾಯಿಗೆ ಗ್ಲಾಸಿನ ಪಾತ್ರೆ ಒಳ್ಳೆಯದು.
ನಿಂಬೆ ಹಣ್ಣಿನ ಆಹಾರ (Lemon Rice) : ನಿಂಬೆ ಹಣ್ಣಿನ ಜ್ಯೂಸ್ ಸೇರಿದಂತೆ ಲೆಮನ್ ರೈಸ್ ವರೆಗೆ ನಿಂಬೆ ಹಣ್ಣು ಬಳಸುವ ಯಾವುದೇ ಆಹಾರವನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಾಡಬಾರದು. ಸಿಟ್ರಸ್ ಆಹಾರಗಳು ಆಮ್ಲೀಯವಾಗಿರುತ್ತವೆ. ಅವು ಅಲ್ಯೂಮಿನಿಯಂನೊಂದಿಗೆ ಪ್ರತಿಕ್ರಿಯಿಸುತ್ತವೆ. ಇದ್ರಿಂದ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಆದ್ರೆ ತುಂಬಾ ಅಪಾಯಕಾರಿಯಲ್ಲವೆಂದು ಸಂಶೋಧನೆಗಳು ಹೇಳಿದ್ರೂ, ಬಳಕೆ ಉತ್ತಮವೆಂದು ಎಲ್ಲೂ ಉಲ್ಲೇಖವಿಲ್ಲ.
Cervical Cancer Vaccine: ಸ್ವದೇಶಿ ನಿರ್ಮಿತ ಗರ್ಭಕಂಠ ಕ್ಯಾನ್ಸರ್ ಲಸಿಕೆ ಬಿಡುಗಡೆ,ಕೇವಲ 200-400 ರೂ.ಗೆ ಲಭ್ಯ
ಅಲ್ಯೂಮಿನಿಯಂ ಬಳಕೆ ಹೀಗಿರಲಿ : ಅಲ್ಯೂಮಿನಿಯಂ ಪಾತ್ರೆ ಬಳಕೆ ಈಗ ಅನಿವಾರ್ಯವಾಗಿದೆ. ಹಾಗಾಗಿ ಅದರ ಬಳಕೆ ತಪ್ಪಿಸಲು ಸಾಧ್ಯವಿಲ್ಲ. ಅದನ್ನು ಎಚ್ಚರಿಕೆಯಿಂದ ಬಳಸಬೇಕು. ಅಲ್ಯೂಮಿನಿಯಂ ಪಾತ್ರೆಯಲ್ಲಿ ಯಾವುದೇ ಆಹಾರ ತಯಾರಿಸಿದ್ರೂ ಆಹಾರವನ್ನು ತುಂಬಾ ಸಮಯ ಅದ್ರಲ್ಲಿಯೇ ಇಡಬೇಡಿ. ಬೇರೆ ಪಾತ್ರೆಗೆ ಆಹಾರವನ್ನು ವರ್ಗಾಯಿಸಿ. ಹಾಗೆಯೇ ಹಳೆಯ ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ಕಡಿಮೆ ಮಾಡಿ. ಮೈಕ್ರೋವೇವ್ ನಲ್ಲಿ ಅಲ್ಯೂಮಿನಿಯಂ ಪಾತ್ರೆಗಳನ್ನು ಇಡಬೇಡಿ. ಹಾಗೆಯೇ ನಿಕಲ್ (nickel) ಲೇಪಿತ ಪಾತ್ರೆಗಳನ್ನು ಬಳಸುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳಿ. ಕೆಲವರಿಗೆ ನಿಕಲ್ ಅಲರ್ಜಿಯನ್ನುಂಟು ಮಾಡುತ್ತದೆ.