Asianet Suvarna News Asianet Suvarna News

ಬೀದಿಬದಿಯಲ್ಲಿ ಚಿಕನ್‌ ಶವರ್ಮಾ ತಿಂದು 12 ಮಂದಿ ಆಸ್ಪತ್ರೆಗೆ ದಾಖಲು!

12 ಮಂದಿಯ ಪೈಕಿ 9 ಮಂದಿ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರೆ, ಇನ್ನೂ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ.

Mumbai 12 Hospitalised After Eating Chicken Shawarma san
Author
First Published Apr 29, 2024, 11:31 AM IST

ಮುಂಬೈ (ಏ.29):  ಇಲ್ಲಿನ ಗೋರೆಗಾಂವ್ ಪ್ರದೇಶದಲ್ಲಿ ಬೀದಿ ಬದಿಯಲ್ಲಿ ಮಾಂಸಾಹಾರವನ್ನು ಸೇವಿಸಿದ ನಂತರ ಕಳೆದ ಎರಡು ದಿನಗಳಲ್ಲಿ ಕನಿಷ್ಠ 12 ಜನರನ್ನು ಫುಡ್‌ ಪಾಯ್ಸನ್‌ ಸಲುವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 12 ಮಂದಿಯ ಪೈಕಿ 9 ಮಂದಿಯನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದ್ದರೆ, ಇನ್ನೂ ಮೂವರು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಗೋರೆಗಾಂವ್ (ಪೂರ್ವ) ದ ಸಂತೋಷ್ ನಗರ ಪ್ರದೇಶದ ಸ್ಯಾಟಲೈಟ್ ಟವರ್‌ನಲ್ಲಿ ಶುಕ್ರವಾರ ಚಿಕನ್ ಷಾವರ್ಮಾ ತಿಂದ ನಂತರ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. "ಶುಕ್ರವಾರ ಮತ್ತು ಶನಿವಾರದಂದು ಹನ್ನೆರಡು ಜನರು ವಿಷಾಹಾರದ ಬಗ್ಗೆ ದೂರು ನೀಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಬತ್ತು ಜನರು ಡಿಸ್ಚಾರ್ಜ್ ಆಗಿದ್ದರೆ, ಇತರ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅದೇ ಹೋಟೆಲ್‌ ಅಥವಾ ಬೀದಿ ಬದಿಯ ಅಂಗಡಿಯಿಂದ ಮಾಂಸಾಹಾರ ತಿಂದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಎನ್ನುವ ಬಗ್ಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.
 

Latest Videos
Follow Us:
Download App:
  • android
  • ios