ಲ್ಯಾಬ್‌ನಲ್ಲಿ ತಯಾರಾಯ್ತು ವೆಜಿಟೇರಿಯನ್‌ ಮೊಟ್ಟೆ!

ವಿಶ್ವಸಂಸ್ಥೆಯಿಂದ ಮೊಟ್ಟೆಗೆ ಮೊದಲ ಬಹುಮಾನ | ದೆಹಲಿ ಐಐಟಿಯಿಂದ ಸಸ್ಯಗಳ ಪ್ರೋಟಿನ್‌ ಬಳಸಿ ತಯಾರಿ

Mock Meat Eggs from IITs Lab Wins International Accolades dpl

ನವದೆಹಲಿ(ಡಿ.26): ಮೊಟ್ಟೆಸಸ್ಯಾಹಾರವೋ? ಮಾಂಸಾಹಾರವೋ? ಎಂಬ ಗೊಂದಲದ ಕಾರಣಕ್ಕೆ ಹಲವರು ಮೊಟ್ಟೆಸೇವಿಸಲು ಹಿಂಜರಿಯುತ್ತಾರೆ. ಆದರೆ ಇದೀಗ ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಅಭಿವೃದ್ಧಿಪಡಿಸಿರುವ ‘ಮೊಟ್ಟೆ’ಯನ್ನು ಯಾರು ಬೇಕಾದರೂ ಸೇವಿಸಬಹುದು. ಏಕೆಂದರೆ ಇದು ಕೋಳಿ ಇಟ್ಟಮೊಟ್ಟೆಯಲ್ಲ. ಸಸ್ಯಗಳ ಪ್ರೊಟೀನ್‌ ಬಳಸಿ ಲ್ಯಾಬ್‌ನಲ್ಲಿ ತಯಾರಿಸಿದ್ದು.

ಹೌದು. ಡಯಟ್‌ ಮಾಡುವವರು, ಆರೋಗ್ಯದ ಕುರಿತು ಕಾಳಜಿ ವಹಿಸುವವರು ಹಾಗೂ ಸಸ್ಯಾಹಾರಿಗಳಲ್ಲಿ ಉಂಟಾಗುವ ಪ್ರೊಟೀನ್‌ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸಸ್ಯ ಮೂಲಗಳನ್ನು ಬಳಸಿ ಐಐಟಿ ದೆಹಲಿಯ ಗ್ರಾಮೀಣ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಕೇಂದ್ರದ ಪ್ರಾಧ್ಯಾಪಕಿ ಕಾವ್ಯಾ ದಶೋರಾ ಅವರು ಈ ಮೊಟ್ಟೆಗಳನ್ನು ಲ್ಯಾಬ್‌ನಲ್ಲಿ ತಯಾರಿಸಿದ್ದಾರೆ. ಯುಎನ್‌ಡಿಪಿ (ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ) ಆಯೋಜಿಸಿದ್ದ ನಾವೀನ್ಯತೆ ಖಾದ್ಯ ತಯಾರಿಕೆ ಸ್ಪರ್ಧೆಯಲ್ಲಿ ಈ ಮೊಟ್ಟೆಗಳಿಗೆ ಮೊದಲ ಬಹುಮಾನ ಲಭ್ಯವಾಗಿದೆ.

ನಿಂತರೆ ನೋವು, ಓಡಾಡಿದ್ರೆ ಸುಸ್ತು...ಏನೇ ಇರಲಿ ಪರಿಹಾರ ಈ ಆಹಾರದಲ್ಲಿದೆ

ಸಸ್ಯಗಳಲ್ಲಿ ಇರುವ ಪ್ರೊಟೀನ್‌ ಅಂಶಗಳನ್ನು ಬಳಸಿಕೊಂಡು ಅತ್ಯಂತ ಸುಲಭ ವಿಧಾನದ ಮೂಲಕ ಕೃತಕ ಮೊಟ್ಟೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವು ಅಸಲಿ ಕೋಳಿ ಮೊಟ್ಟೆಗಳಂತೆ ಕಾಣುವುದರ ಜೊತೆಗೆ ರುಚಿಯಲ್ಲೂ ಅದೇ ರೀತಿ ಇರುತ್ತವೆ. ಕೋಳಿಮೊಟ್ಟೆಗಳಲ್ಲಿ ಇರುವ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿವೆ. ಇದರಿಂದ ಜನರ ಪ್ರೋಟಿನ್‌ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಪ್ರೊಫೆಸರ್‌ ಕಾವ್ಯಾ ದಶೋರಾ ಹೇಳಿದ್ದಾರೆ.

ಇವು ಅಸಲಿ ಕೋಳಿ ಮೊಟ್ಟೆಗಳಂತೆ ಕಾಣುತ್ತದೆ. ಕೋಳಿಮೊಟ್ಟೆರೀತಿಯ ರುಚಿ ಇದೆ. ಕೋಳಿಮೊಟ್ಟೆಗಳಲ್ಲಿ ಇರುವ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿದೆ ಎಂದು ಐಐಟಿ ಪ್ರಾಧ್ಯಾಪಕಿ ಕಾವ್ಯ ದಶೋರಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios