Asianet Suvarna News Asianet Suvarna News

ಫೋನ್ ಅಲ್ಲ ಪಾನ್‌... ಇದರ ಬೆಲೆಗೆ ಬರುತ್ತೆ ಹೊಸ ಸ್ಮಾರ್ಟ್‌ ಫೋನ್‌

ಇಲ್ಲೊಂದು ಕಡೆ ಪಾನ್‌ಗೆ ನಿಗದಿಪಡಿಸಿದ ಬೆಲೆ ನೋಡಿದರೆ ಪಾನ್‌ ಬದಲು ಇದೇ ಬೆಲೆಯ ಒಂದು ಸ್ಮಾರ್ಟ್‌ಫೋನ್ (smartphone) ಕೊಳ್ಳೋಣ. ಕನಿಷ್ಟ ಒಂದು ವರ್ಷ ಆದ್ರೂ ಉಜ್ಜಿ ಬಿಸಾಕ್ಬಹುದು ಅಂತ ನೀವು ಅನ್ಕೊಳೋದಂತು ಗ್ಯಾರಂಟಿ.

Meerut Paan shop prepared costliest paan in history, you will buy smart phone in that rate akb
Author
First Published Sep 7, 2022, 3:18 PM IST

ಊಟವಾದ ಮೇಲೆ ಪಾನ್‌ (ಎಲೆ ಅಡಿಕೆ) ತಿನ್ನುವುದು ನಮ್ಮ ಭಾರತೀಯ ಆಹಾರ ಸಂಸ್ಕೃತಿಯ ಒಂದು ಭಾಗ. ಊಟವಾದ ಮೇಲೆ ಒಂದು ಎಲೆ ಅಡಿಕೆ ಹಾಕಿದರೆ ಬಹುತೇಕರಿಗೆ ಅದೇನೋ ಸಮಾಧಾನ. ಅಲ್ಲದೇ ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇವತ್ತು ಎಲೆ ಅಡಿಕೆ ಕಾಲಕ್ಕೆ ತಕ್ಕಂತೆ ವಿವಿಧ ಆಯಾಮಗಳನ್ನು ಪಡೆದಿದೆ. ಉತ್ತರ ಭಾರತದ ಕಡೆಗೆ ಇದನ್ನು ಪಾನ್‌ ಎಂದರೆ ನಮ್ಮ ರಾಜ್ಯದಲ್ಲಿ ಬೀಡಾ ಎಂದು ಕರೆಯುತ್ತಾರೆ. ಅಲ್ಲದೇ ವಿವಿಧ ವೆರೈಟಿ ರೂಪದಲ್ಲಿ ಪಾನ್‌ ಮಸಾಲಾ ಲಭ್ಯವಿದೆ. ಗ್ರಾಹಕರ ಆಸೆ, ಅಭಿರುಚಿಗೆ ತಕ್ಕಂತೆ ಪಾನ್‌ಗಳನ್ನು ವೈವಿಧ್ಯಮಯವಾಗಿ ಮಾಡಲಾಗುತ್ತಿದ್ದು, ಇದಕ್ಕೆ ತಕ್ಕಂತೆ ಬೆಲೆಯೂ ಇರುತ್ತದೆ. ಇಷ್ಟೆಲ್ಲಾ ಪುರಾಣ ಏಕೆ ಅಂತ ಕೇಳ್ತಿದ್ದೀರಾ ಮುಂದೆ ಓದಿ.

ಇಲ್ಲೊಂದು ಕಡೆ ಪಾನ್‌ಗೆ ನಿಗದಿಪಡಿಸಿದ ಬೆಲೆ ನೋಡಿದರೆ ಪಾನ್‌ ಬದಲು ಇದೇ ಬೆಲೆಯ ಒಂದು ಸ್ಮಾರ್ಟ್‌ಫೋನ್ (smartphone) ಕೊಳ್ಳೋಣ. ಕನಿಷ್ಟ ಒಂದು ವರ್ಷ ಆದ್ರೂ ಉಜ್ಜಿ ಬಿಸಾಕ್ಬಹುದು ಅಂತ ನೀವು ಅನ್ಕೊಳೋದಂತು ಗ್ಯಾರಂಟಿ. ಹೌದು ಉತ್ತರಪ್ರದೇಶದ(Uttar Pradesh) ಮೀರತ್‌ನ ಬೇಗಂ ಬ್ರಿಡ್ಜ್ ರಸ್ತೆಯಲ್ಲಿರುವ (Begum Bridge Road) ಅಂಗಡಿಯೊಂದು ಪಾನ್ ಒಂದಕ್ಕೆ 11 ಸಾವಿರ ರೂಪಾಯಿ ದರ ನಿಗದಿಪಡಿಸಿದೆ. ಮೀರತ್‌ನ ನವಾಬ್-ಎ-ಪಾನ್ ಭಂಡಾರ್ ಎಂಬ ಪಾನ್ ಅಂಗಡಿಯಲ್ಲಿ ಒಂದು ವಿಶೇಷ ಪಾನ್‌ ದರ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಮೀರುತ್ತಿದೆ. ಇಲ್ಲಿ ಸುಮಾರು 200 ಬಗೆ ಬಗೆಯ ಪಾನ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರತಿಯೊಂದು ಪಾನ್‌ ಅನ್ನು ವಿಶೇಷವಾಗಿ ತಯಾರಿಸಲಾಗುತ್ತಿದೆ. ಇಲ್ಲೀಗ ನಿರ್ದಿಷ್ಟವಾದ ಹಬ್ಬಕೆಂದು ತಯಾರಿಸಿದ ಪಾನ್‌ ದರ ಮಾತ್ರ ಪಾನ್ ಪ್ರಿಯರನ್ನು ಬೆಚ್ಚಿ ಬೀಳಿಸುತ್ತಿದೆ.

ಮದುವೆ ದಿನ 500 ಬೀದಿ ಪ್ರಾಣಿಗಳಿಗೆ ಔತಣ, ಮಾದರಿಯಾದ ಈ ಜೋಡಿ!

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಪಾನ್‌ಗಳನ್ನು ನೀವು ನೋಡಿರಬಹುದು. ಅವುಗಳ ಬೆಲೆ ಹೆಚ್ಚೆಂದರೆ 1000 ಅಥವಾ  1,100 ರೂಪಾಯಿಗಿಂತ ಹೆಚ್ಚಿರಲು ಸಾಧ್ಯವಿಲ್ಲ. ಆದರೆ  ನವಾಬ್-ಎ-ಪಾನ್ ಭಂಡಾರ್‌ದಲ್ಲಿ ತಯಾರಾಗಿರುವ ವಿಶೇಷ ಪಾನ್‌ಗೆ ಸುಮಾರು 11,000 ರೂಪಾಯಿ ದರವಿದೆ. ಈ ವಿಶೇಷ ಪಾನ್ ಅನ್ನು ನಿಶ್ಚಿತಾರ್ಥ(engagements), ಮದುವೆ ಮುಂತಾದ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಅಲ್ಲದೇ ಜನರ ವಿಶೇಷ ಬೇಡಿಕೆಗೆ ಅನುಗುಣವಾಗಿ ತಯಾರಿಸಲಾಗುತ್ತದೆ. 

ಮಕ್ಕಳಿಗೆ ಚಾಕೊಲೇಟ್ ಪಾನ್

ಒಂದೊಂದು ಆಹಾರಕ್ಕೂ ಒಂದೊಂದು ಸಮ್ಮೇಳನ ಮಾಡುವಂತಹ ಈ ಯುಗದಲ್ಲಿ ಪಾನ್‌ ಏಕೆ ಹಿಂದೆ ಉಳಿಯಬೇಕು ಅಲ್ಲವೇ? ಇದೇ ಕಾರಣಕ್ಕೆ ನವಾಬ್-ಎ-ಪಾನ್ ಭಂಡಾರ್ ಅನೇಕ ಗ್ರಾಹಕರಿಗೆ ಅವರ ಅಭಿರುಚಿಗೆ ತಕ್ಕಂತೆ ಪಾನ್ ತಯಾರಿಸುತ್ತಿದೆ. ವಿಶೇಷವಾಗಿ ಮಕ್ಕಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಂಗಡಿಯು ವಿಶೇಷ ಚಾಕೊಲೇಟ್ ಪಾನ್ ಅನ್ನು ಸಿದ್ಧಪಡಿಸಿದೆ. ಇದು ವಿಭಿನ್ನ ರುಚಿಗಳಲ್ಲಿಯೂ ಲಭ್ಯವಿದೆ.

ರೆಡ್ಡಿ ಮಗಳ ಮದುವೆಗೆ ಪಾನ್ ಬೀಡಾ ನೀಡಲು ಬಂದಿದ್ದ ಚಲುವೆಯವರು ಯಾರು,ಎಲ್ಲಿಯವರು ಗೊತ್ತೆ ?

ನೀವು ನವಾಬ್-ಎ-ಪಾನ್ ಭಂಡಾರ್‌ಗೆ (Nawab-e-Paan Bhandar) ಹೋಗಲು ಬಯಸಿದರೆ, ಬೆಲೆ ನೋಡಿ ಹಿಂದೆ ಸರಿಯಬೇಕಾದ ಅಗತ್ಯವಿಲ್ಲ. ಇಲ್ಲಿ ನಿಮ್ಮ ಜೀಬಿನಲ್ಲಿರುವ ದುಡ್ಡಿಗೆ ತಕ್ಕನಾದ ಪಾನ್ ಸಿಗುವುದು. ಇಲ್ಲಿ ಕನಿಷ್ಠ 25 ರೂಪಾಯಿಯಿಂದ ಗರಿಷ್ಠ 11 ಸಾವಿರ ರೂಪಾಯಿಯವರೆಗೂ ಪಾನ್ ದೊರೆಯುತ್ತದೆ. ಸಾದಾ ಪಾನ್, ಸ್ವೀಟ್ ಪಾನ್ ಚಾಕೊಲೇಟ್ (Sweet Paan Chocolate), ವಿಶೇಷ ಗೋಲ್ಡನ್ ಪಾನ್, ರಾತ್ರಾಣಿ ಚಟ್ನಿ ಪಾನ್, ಪಿಂಕ್ ಚಟ್ನಿ ಪಾನ್, ಮಾವಿನ ಚಟ್ನಿ ಪಾನ್, ಅನಾನಸ್ ಚಟ್ನಿ ಪಾನ್( Pineapple Chutney Paan), ಸ್ಟ್ರಾಬೆರಿ ಚಟ್ನಿ ಪಾನ್, ಚಾಕೊಲೇಟ್ ಚಟ್ನಿ ಪ್ಯಾನ್ (Chocolatey Chutney Pan), ಐಸ್ ಕ್ರೀಮ್ ಪಾನ್, ರಾಸ್ಯಾ ಮಿಲನ್ ಚಟ್ನಿ ಪಾನ್, ಹಸಿ ಮಾವಿನಕಾಯಿ ಚಟ್ನಿ ಪಾನ್ ಹೀಗೆ ನೂರಾರು ಬಗೆಯ ಪಾನ್‌ಗಳು ಲಭ್ಯವಿದೆ. ನವಾಬ್-ಎ-ಪಾನ್‌ನ ಮಾಲೀಕ ಆಯುಷ್ ಜೈನ್ ಅವರು ಹೇಳುವಂತೆ ಅವರ ಈ ಪಾನ್ ಅಂಗಡಿಯು ಬೆಳಗ್ಗೆ 10:00 ರಿಂದ ರಾತ್ರಿ 10:00 ರವರೆಗೆ ತೆರೆದಿರುತ್ತದೆ. 
 

Follow Us:
Download App:
  • android
  • ios