Food Trend: ವೈರಲ್ ಆಗ್ತಿದೆ ಮೊಮೋಸ್ ಐಸ್‌ಕ್ರೀಂ ರೋಲ್
ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ (Food Bloggers) ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರ ಗಳು ಎಲ್ಲರಿಗೂ ಪರಿಚಯವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಮಸಾಲೆ ದೋಸೆ ಐಸ್ ಕ್ರೀಂ ರೋಲ್ ರೆಸಿಪಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೆ ಸದ್ಯ ವೈರಲ್ (Viral) ಆಗ್ತಿರೋ ಫುಡ್ ಮೊಮೋಸ್ ಐಸ್ ಕ್ರೀಂ ರೋಲ್ (Momos Ice Cream Roll).
ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಆಯಾ ರಾಜ್ಯಕ್ಕೆ ಅಲ್ಲಿಯ ಭಾಷೆ, ಸಂಸ್ಕೃತಿ. ಆಚಾರ-ವಿಚಾರಗಳು ಇರುವ ಹಾಗೆಯೇ ಪ್ರತ್ಯೇಕವಾದ ಆಹಾರಪದ್ಧತಿಯೂ ಇದೆ. ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ.
ಹಾಗೆ ಸದ್ಯ ವೈರಲ್ ಆಗ್ತಿರೋ ಫುಡ್ ಮೊಮೋಸ್ ಐಸ್ ಕ್ರೀಂ ರೋಲ್ (Momos Ice Cream Roll). ಕೆಲವು ದಿನಗಳ ಹಿಂದಷ್ಟೇ ಮಸಾಲೆ ದೋಸೆ ಐಸ್ ಕ್ರೀಂ ರೋಲ್ ರೆಸಿಪಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೆಹಲಿಯ ಅಂಗಡಿಯೊಂದರಲ್ಲಿ ಸಿದ್ಧವಾಗುತ್ತಿದ್ದ ಈ ಮಸಾಲೆ ದೋಸೆ ಐಸ್ ಕ್ರೀಂ ರೋಲ್‍ಗೆ ಫುಡ್ಡೀಗಳು ಫಿದಾ ಆಗಿದ್ದರು.
ಇದನ್ನು ತಯಾರಿಸಲು ಮೊದಲಿಗೆ ದೋಸೆಯನ್ನು ಪುಡಿ ಮಾಡಿಕೊಂಡು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವೆನಿಲ್ಲಾ ಐಸ್ ಕ್ರೀಂ ಸೇರಿಸುತ್ತಾರೆ. ನಂತರ ದೋಸೆ ಮತ್ತು ಐಸ್ ಕ್ರೀಂನ್ನು ಚೆನ್ನಾಗಿ ಮಿಕ್ಸ್ ಮಾಡಿ ಹರಡಿಕೊಳ್ಳುತ್ತಾರೆ. ನಂತರ ಐಸ್ ಕ್ರೀಂನ ರೋಲ್‌ಗಳನ್ನು ಕಟ್ ಮಾಡಿ ತೆಗೆಯುತ್ತಾರೆ. ಬಳಿಕ ಆಲೂಗಡ್ಡೆಯ ಪಲ್ಯ ಮತ್ತು ಚಟ್ನಿಯೊಂದಿಗೆ ಅದನ್ನು ಸರ್ವ್ ಮಾಡುವುದನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು. ಅದೇ ರೀತಿ ಸದ್ಯ ಮೊಮೋಸ್ ಐಸ್ ಕ್ರೀಂ ರೋಲ್ ವೈರಲ್ ಆಗ್ತಿದೆ.
Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್
ಮೊಮೋಸ್ ಎಂದರೇನು..?
ಮೊಮೋ ಎಂಬುದು ಟಿಬೆಟ್ ಹಾಗೂ ನೇಪಾಳದಲ್ಲಿ ಸ್ಥಳೀಯವಾಗಿ ಜನರು ತಿನ್ನುವ ಒಂದು ಬಗೆಯ ಡಂಪ್ಲಿಂಗ್ ಆಹಾರವಾಗಿದೆ. ಅಸ್ಸಾಂ ಮಣಿಪುರದಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ಮೈದಾವನ್ನು ಉಪಯೋಗಿಸಿ ಹೊರ ಮೈ ತಯಾರಿಸಿ ಅದರೊಳಗೆ ತರಕಾರಿ (Vegetables)ಗಳನ್ನು ಸೇರಿಸಿ ಬೇಯಿಸಿ ಮೊಮೋಸ್ ಅನ್ನು ತಯಾರಿಸಲಾಗುತ್ತದೆ. ನಾನ್ ವೆಜ್ ಮೊಮೋಸ್ ತಯಾರಿಸುವಾಗ ಫಿಲ್ಲಿಂಗ್ಸ್‌ನಲ್ಲಿ ಕೋಳಿ ಮಾಂಸವನ್ನು ಸೇರಿಸಲಾಗುತ್ತದೆ. ಮೊಮೋವನ್ನು ಆವಿಯಲ್ಲಿ ಬೇಯಿಸಿ ಅಥವಾ ಎಣ್ಣೆಯಲ್ಲಿ ಫ್ರೈ ಮಾಡಿ ಹೀಗೆ ಎರಡು ರೀತಿಯಲ್ಲೂ ತಯಾರಿಸಲಾಗುತ್ತದೆ.
ಮೃದುವಾಗಿ, ಸಾಕಷ್ಟು ಫಿಲ್ಲಿಂಗ್ಸ್ ತುಂಬಿರುವ ಈ ಆಹಾರವನ್ನು ಹಲವರು ಇಷ್ಟಪಟ್ಟು ಸೇವಿಸುತ್ತಾರೆ. ಮೊಮೋಸ್ ಜತೆ ನೀಡುವ ಖಾರದ ಕೆಂಪು ಚಟ್ನಿ ಸ್ವಾದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸದ್ಯ ಇದೇ ಮೊಮೋಸ್ ಅನ್ನು ಸೇರಿಸಿ ಮೊಮೋಸ್ ಐಸ್ ಕ್ರೀಂ ರೋಲ್‌ನ್ನು ಮಾಡಲಾಗುತ್ತಿದೆ. ಯಪ್ಪಾ..ಮೊಮೋಸ್ ಐಸ್ ಕ್ರೀಂ ರೋಲಾ ಅಂತ ಗಾಬರಿಯಾಗ್ಬೇಡಿ. ಇಂಥದ್ದೇ ಅದೆಷ್ಟೋ ವಿಚಿತ್ರ ಫುಡ್ ಕಾಂಬಿನೇಷನ್‌ಗಳು ಈಗಾಗ್ಲೇ ವೈರಲ್ (Viral) ಆಗಿವೆ. ಅದ್ರಲ್ಲಿ ಕೆಲವು ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, ಓರಿಯೋ ಪಕೋಡಾ, ಓಲ್ಡ್ ಮಾಂಕ್ ಗುಲಾಬ್ ಜಾಮೂನ್, ಚಾಕೋಲೇಟ್ ಮ್ಯಾಗಿ ಮೊದಲಾದವು.
Food Trend 2021: ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, 2021ರ ವಿಚಿತ್ರ ಆಹಾರಗಳಿವು
ದೆಹಲಿಯ ಬೀದಿ ಬದಿ ವ್ಯಾಪಾರಿಯೊಬ್ಬರು ಈ ಮೊಮೋಸ್ ಐಸ್‌ಕ್ರೀಂ ರೋಲ್ ತಯಾರಿಸಿದ್ದಾರೆ. ಮೊದಲಿಗೆ ಮೊಮೋಸ್‌ಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ನಂತರ ಇದಕ್ಕೆ ಐಸ್ ಕ್ರೀಂನ್ನು ಸೇರಿಸುತ್ತಾರೆ. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಶೀಟ್‌ನಂತೆ ಹರಡಿಕೊಳ್ಳುತ್ತಾರೆ. ಬಳಿಕ, ಇದನ್ನು ರೋಲ್ ಮಾಡಿ ಸಣ್ಣ ಕಟ್ ಮಾಡಿ ಚಟ್ನಿಯೊಂದಿಗೆ ಸರ್ವ್ ಮಾಡಲಾಗುತ್ತದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ (Instagram) ಪೇಜ್ ದಿ ಗ್ರೇಟ್ ಇಂಡಿಯನ್ ಫುಡಿಯಲ್ಲಿ ಶೇರ್ ಮಾಡಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಸದ್ಯ ಈ ಮೊಮೋಸ್ ಐಸ್ ಕ್ರೀಂ ರೋಲ್ ಮಾಡ್ತಿರೋ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಗೆಟಿವ್ ಕಮೆಂಟ್‌ಗಳೇ ಹೆಚ್ಚಾಗಿ ಬರ್ತಿವೆ. ಆಹಾರದ ಮೇಲೆ ಪ್ರಯೋಗ ಮಾಡುವುದು ಸರಿ ಆದರೆ ಹೊಸತನದ ಹೆಸರಿನಲ್ಲಿ ಅದರ ಸ್ವಾದವನ್ನೇ ಇಲ್ಲವಾಗಿಸುವುದು ಸರಿಯಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಐಸ್ ಕ್ರೀಂ ಹಾಗೂ ಮೊಮೋಸ್ ಹಲವರ ಫೇವರಿಟ್. ಆದ್ರೆ ಈ ರೀತಿಯ ಕಾಂಬಿನೇಷನ್‌ನಿಂದ ಎರಡನ್ನೂ ಫೇವರಿಟ್ ಲಿಸ್ಟ್ ನಿಂದ ತೆಗೆಯುವಂತಾಗಿದೆ ಎಂದು ಟೀಕಿಸಿದ್ದಾರೆ.