ಶುಭಾ ಪೂಂಜಾ ಮಾಡಿರೋ ಫಿಶ್ ಫ್ರೈ ಟೇಸ್ಟ್ ಮಾಡಿ ನೋಡಿ
ನಟಿ ಶುಭಾ ಪೂಂಜಾ ಮುದ್ದು ಮುದ್ದಾದ ಮಾತು ಅಭಿಮಾನಿಗಳಿಗೆ ಇಷ್ಟ. ಯುಟ್ಯೂಬ್ ಚಾನೆಲ್ ಹೊಂದಿರುವ ಶುಭಾ, ಅಭಿಮಾನಿಗಳ ಜೊತೆ ಅನೇಕ ವಿಷ್ಯಗಳನ್ನು ಹಂಚಿಕೊಳ್ತಿರುತ್ತಾರೆ. ಈಕ ಫಿಶ್ ಫ್ರೈ ಮಾಡುವ ವಿಧಾನ ತಿಳಿಸಿದ್ದಾರೆ.
ಫಿಶ್ ಫ್ರೈ.. ಮಧ್ಯರಾತ್ರಿ ಎಬ್ಬಿಸಿ ಕೊಟ್ರೂ ಗಬಗಬ ಅಂತ ತಿನ್ನೋರಿದ್ದಾರೆ. ಫ್ರಿಶ್ ಫ್ರೈ ರುಚಿಯೇ ಅಂತಹದ್ದು. ಸಮುದ್ರಾಹಾರ ಪ್ರೇಮಿಗಳನ್ನು ಇದು ಸೆಳೆಯುತ್ತೆ. ಕರಾವಳಿ ಪ್ರದೇಶಗಳಲ್ಲಿ ಫಿಶ್ ಫ್ರೈ ಫೇಮಸ್. ಅಲ್ಲಿಗೆ ಹೋದ್ರೆ ಫಿಶ್ ಫ್ರೈ ತಿನ್ನದೇ ಬರೋರಿಲ್ಲ. ಅನೇಕರಿಗೆ ಮಂಗಳೂರು ಸ್ಟೈಲ್ ಫಿಶ್ ಫ್ರೈ ಮಾಡೋಕೇ ಬರಲ್ಲ. ನಮ್ಮ ಕರಾವಳಿ ಬೆಡಗಿ ಶುಭಾ ಪೂಂಜಾ ಫಿಶ್ ಫ್ರೈ ಮಾಡೋದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ.
ಬಾಯ್ ಫ್ರೆಂಡ್ (Boy Friend) ಮನೆಗೆ ಬಂದಾಗ ಏನ್ ಮಾಡ್ಬೇಡಿ ಅಂದ್ರು ಶುಭಾ ಪೂಂಜಾ (Shubha Poonja)? : ಅರೇ, ಫಿಶ್ ಫ್ರೈ (Fish Fry) ಮಾಡೋದು ಹೇಳಿ ಕೊಡ್ತೇನೆ ಅಂತ ಬಾಯ್ ಫ್ರೆಂಡ್ ಬಗ್ಗೆ ಬರೆಯುತ್ತಿದ್ದಾರಲ್ಲ ಅಂದುಕೊಳ್ಳಬೇಡಿ. ಫಿಶ್ ಫ್ರೈ ಮಾಡೋ ಮುನ್ನ ಶುಭಾ ಪೂಂಜಾ, ಹೇಗೆ ಅಡುಗೆ ಮಾಡ್ಬೇಕು ಎಂಬುದನ್ನು ಹೇಳಿದ್ದಾರೆ. ಮನೆಗೆ ಬಾಯ್ ಫ್ರೆಂಡ್ ಕರೆದು ಸ್ಟೈಲ್ ಆಗಿ ಅಡುಗೆ ಮಾಡೋಕೆ ಹೋಗಿ ಯಡವಟ್ಟು ಮಾಡಿಕೊಳ್ಳಬೇಡಿ, ಮೊದಲು ನಿಮ್ಮ ಕೂದಲನ್ನು ನೀಟಾಗಿ ಮೇಲೆ ಕಟ್ಟಿಕೊಳ್ಳಿ ಎನ್ನುತ್ತಾರೆ ಶುಭ. ಅದಕ್ಕೂ ಕಾರಣವಿದೆ. ಶುಭಾ ತಮ್ಮ ಭಾವಿ ಪತಿ ಮನೆಗೆ ಬಂದಾಗ, ಸ್ಟೈಲ್ ಆಗಿ ಕೂದಲು ಬಿಟ್ಟುಕೊಂಡು ಅಡುಗೆ ಮಾಡೋಕೆ ಹೋಗಿದ್ರಂತೆ. ಆದ್ರೆ ಅಡುಗೆ ತುಂಬಾ ಕೂದಲೇ ಇತ್ತಂತೆ. ಹಾಗಾಗಿ ಕೂದಲು ಕಟ್ಟಿಕೊಂಡು ಅಡುಗೆ ಮಾಡ್ರಮ್ಮ ಎನ್ನುತ್ತಾರೆ ಶುಭ.
ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಮಹಿಳೆ: ಫೋಟೋ ವೈರಲ್
ಶುಭಾಪೂಂಜಾ ಸ್ಟೈಲ್ ನಲ್ಲಿ ಮಂಗಳೂರು ಫಿಶ್ ಫ್ರೈ : ಫಿಶ್ ಫ್ರೈ ಮಾಡೋಕೆ ಶುಭಾ ತೆಗೆದುಕೊಂಡಿದ್ದು ಮತ್ತಿ ಫಿಶ್. ಮೀನನ್ನು ಚೆನ್ನಾಗಿ ಕ್ಲೀನ್ ಮಾಡಿ, ಅದಕ್ಕೆ ಅರಿಶಿನ ಮತ್ತು ಉಪ್ಪನ್ನು ಹಾಕಿ ಒಂದು ಅರ್ಧ ಗಂಟೆ ಹಾಗೆ ಬಿಡಬೇಕು. ನಂತ್ರ ಒಂದು ಬಾಣೆಲೆಗೆ ಅಕ್ಕಿ ಹಿಟ್ಟು, ನೆನಸಿದ ಹುಣಸೆ ಹಣ್ಣಿನ ರಸ, ಸ್ವಲ್ಪ ಮೆಣಸಿನ ಪುಡಿ, ಪೆಪ್ಪರ್ ಪುಡಿ, ಫಿಶ್ ಫ್ರೈ ಪೌಡರ್ ಹಾಕಿ. ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗಾಗಲೇ ಮೀನಿಗೆ ಉಪ್ಪು ಹಾಕಿರುವ ಕಾರಣ ಹಾಗೂ ಫಿಶ್ ಫ್ರೈ ಪೌಡರ್ ಗೆ ಉಪ್ಪು ಹಾಕಿರುವ ಕಾರಣ ಮತ್ತೆ ಇದಕ್ಕೆ ಉಪ್ಪು ಸೇರಿಸಬೇಡಿ ಎನ್ನುತ್ತಾರೆ ಶುಭ.
ಈ ಮಿಶ್ರಣದಲ್ಲಿ ಮೀನನ್ನು ಮ್ಯಾಗ್ನೆಟ್ ಮಾಡಿ. ಅದನ್ನು ಇನ್ನೊಂದು ಅರ್ಧ ಗಂಟೆ ಹಾಗೆ ಬಿಡಿಬೇಕು. ನಂತ್ರ ಒಂದು ಪ್ಲೇಟ್ ಗೆ ರವಾ ಹಾಕಿಕೊಂಡು, ಮ್ಯಾಗ್ನೆಟ್ ಮಾಡಿದ ಮೀನನ್ನು ರವಾದಲ್ಲಿ ಚೆನ್ನಾಗಿ ಅದ್ದಿ. ನಂತ್ರ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ನಂತ್ರ ರವಾದಲ್ಲಿ ಅದ್ದಿಟ್ಟಿರುವ ಮೀನುಗಳನ್ನು ಎಣ್ಣೆಗೆ ಹಾಕಿ ಫ್ರೈ ಮಾಡ್ಬೇಕು. ನಂತ್ರ ಒಂದು ಪ್ಲೇಟ್ ಗೆ ಫ್ರೈ ಮಾಡಿದ ಮೀನನ್ನು ಹಾಕಿ, ಅದ್ರ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ನಂತ್ರ ಅದ್ರ ಮೇಲೆ ನಿಂಬೆ ರಸವನ್ನು ಹಾಕಿ ಸರ್ವ್ ಮಾಡಿದ್ರೆ ಫಿಶ್ ಫ್ರೈ ರೆಡಿ.
ಅನ್ನ ಜಾಸ್ತಿ ಬೆಂದು ಹೋದ್ರೆ ಎಸಿಬೇಕಾಗಿಲ್ಲ, ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ
ಶುಭಾ ಪೂಂಜಾ ಫೆವರೆಟ್ ಅಡುಗೆಯಲ್ಲಿ ಫಿಶ್ ಫ್ರೈ ಮೊದಲ ಸ್ಥಾನದಲ್ಲಿದೆ. ಶೂಟಿಂಗ್ ಗೆ ಹೋದ್ರೂ ಶುಭಾ ಇದನ್ನು ತಿನ್ನಲು ಇಷ್ಟಪಡ್ತಾರೆ. ತೆಂಗಿನ ಎಣ್ಣೆಯಲ್ಲೇ ಇದನ್ನು ಫ್ರೈ ಮಾಡೋದು ನನಗೆ ಇಷ್ಟ ಎನ್ನುವ ಶುಭಾಗೆ ಅಡುಗೆ ಮಧ್ಯೆ ಜ್ಯೂಸ್ ಕುಡಿಯೋದು ಇಷ್ಟ. ನಿಮ್ಮ ಆರೋಗ್ಯ ಮುಖ್ಯ. ಹಾಗಾಗಿ ಅಡುಗೆ ಮಾಡ್ತಾ ಜ್ಯೂಸ್ ಕುಡಿತಾ ಇರಿ ಎಂದು ಸಲಹೆ ನೀಡುವ ಶುಭಾ, ಅಡುಗೆ ಟೇಸ್ಟ್ ಮಾಡದೆ ಸರ್ವ್ ಮಾಡ್ಬೇಡಿ ಎಂದಿದ್ದಾರೆ.