ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಮಹಿಳೆ: ಫೋಟೋ ವೈರಲ್
ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಮಹಿಳೆಯ ಫೋಟೋ ವೈರಲ್ ಆಗಿದೆ. ಮಂಗಳೂರಿನ ವೈದ್ಯರೊಬ್ಬರು ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯ ಗಳ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಭಕ್ತರೊಬ್ಬರು ಶ್ರೀಕೃಷ್ಣನಿಗೆ 88 ಬಗೆಯ ಖಾದ್ಯ ಸಿದ್ಧಪಡಿಸಿದ್ದು ಇದರ ಪೊಟೋವನ್ನು ಮಂಗಳೂರಿನ ವೈದ್ಯರೊಬ್ಬರು ತಮ್ಮ ಎಕ್ಸ್ (ಟ್ವಿಟರ್)ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ.ಪದ್ಮನಾಭ್ ಕಾಮತ್ ಅವರು ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯ ಗಳ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಅಲಂಕಾರಗೊಂಡ ದೇವರ ಮಂಟಪ, ಕೃಷ್ಣನ ಮುಂದೆ ಅಚ್ಚುಕಟ್ಟಾಗಿ ಇರಿಸಿದ 88 ಬಗೆಯ ತಿನಿಸುಗಳು, ಮಧ್ಯೆ ಭಕ್ತೆ ಕುಳಿತಿರುವ ಫೆäಟೋಗಳನ್ನು ಹಂಚಿಕೊಂಡಿರುವ ಜೊತೆಗೆ ‘ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು. ಅವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆಯಲ್ಲಿ ಅವರು ಬುಧವಾರ ರಾತ್ರಿ 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಟ್ವೀಟ್ ವೈರಲ್ ಆಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಗವಂತನ ಆಶೀರ್ವಾದ ಹೀಗೆ ಪಡೆಯಿರಿ
ರಾಶಿ ಪ್ರಕಾರ ಕೃಷ್ಣನಿಗೆ ಮಾಡಿ ನೈವೇದ್ಯ, ಬಯಸಿದ್ದು ಪಡೆಯಿರಿ..
ಶ್ರೀ ಕೃಷ್ಣ ವಿನೋದ ಪ್ರಿಯ. ನವನೀತ ಚೋರ. ಅವನಿಗೆ ಇರೋ ಹೆಸರೂ ಒಂದೆರಡಲ್ಲ. ಒಬ್ಬ ಅತ್ಯುತ್ತಮ ಗೈಡ್. ಸರ್ವಕಾಲಕ್ಕೂ ಸಲ್ಲುವಂಥ ಭಗವದ್ಗೀತೆ ಭೋದಿಸಿದವನು. ತಿಂಡಿಯೂ ಇವನಿಗೆ ಇಷ್ಟವೇ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸಾಮಾನ್ಯವಾಗಿ ಜನರು ವಿಧ ವಿಧವಾದ ಉಂಡೆ, ಕೋಸಂಬರಿ, ಗೊಜ್ಜು ಅವಲಕ್ಕಿ, ಪಾಯಿಸ ಮಾಡಿ, ಕೃಷ್ಣನಿಗೆ ನೇವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹೇಳಿ ಕೇಳಿ ಬೆಣ್ಣೆ ಕದ್ದು ತಿಂದೋನಿಗೆ ಸಹಜವಾಗಿ ಬೆಣ್ಣೆ ಇಷ್ಟ.ಜೊತೆಗೆ ಹಾಲಿನಿಂದ ಮಾಡಿದ ಇತರೆ ಖಾದ್ಯಗಳನ್ನೂ ಭಕ್ತರು ಪ್ರೀತಿಯಿಂದ ಅರ್ಪಿಸುತ್ತಾರೆ. ಅಂದ ಹಾಗೆ ಯಾವ ರಾಶಿಯವರು, ಯಾವ ರೀತಿ ಖಾದ್ಯ ಅರ್ಪಿಸಿದರೆ ಕೃಷ್ಣಿಗೆ ಪ್ರಿಯ ಇಲ್ಲಿದೆ ನೋಡಿ.
ಮೇಷ ರಾಶಿ(Aries): ಬೆಣ್ಣೆ ಮಿಶ್ರಿತ ಆಹಾರ ಖಾದ್ಯ.
ವೃಷಭ ರಾಶಿ(Taurus): ಈ ರಾಶಿಯವರು ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಬೆಣ್ಣೆಯನ್ನು ಅರ್ಪಿಸಬೇಕು. ಇದರಿಂದ ದೇವರು ಅವರ ಎಲ್ಲ ತೊಂದರೆಗಳನ್ನು ನಿವಾರಿಸುತ್ತಾನೆ.
ಮಿಥುನ ರಾಶಿ(Gemini): ಮಿಥುನ ರಾಶಿಯ ಜನರು ಶ್ರೀಕೃಷ್ಣನ ತಿಲಕವನ್ನು ಶ್ರೀಗಂಧದಿಂದ ಮಾಡಬೇಕು ಮತ್ತು ಅವರು ಮೊಸರನ್ನು ಅರ್ಪಿಸಬೇಕು. ಇದರೊಂದಿಗೆ ಅವರ ಎಲ್ಲಾ ಆಸೆಗಳು ಈಡೇರುತ್ತವೆ.
ಕರ್ಕಾಟಕ ರಾಶಿ(Cancer): ಹಾಲು ಮತ್ತು ಕುಂಕುಮವನ್ನು ಅರ್ಪಿಸಬೇಕು.
ಸಿಂಹ ರಾಶಿ(Leo): ಜನ್ಮಾಷ್ಟಮಿಯ ದಿನದಂದು ಸಿಂಹ ರಾಶಿಯವರು ಅಷ್ಟಗಂಧದ ತಿಲಕವನ್ನಿಟ್ಟು, ಮಖನ್-ಮಿಶ್ರಿಯನ್ನು ಅರ್ಪಿಸಬೇಕು.
ಕನ್ಯಾ ರಾಶಿ(Libra): ಮಾವಾ ಸಿಹಿ ಖಾದ್ಯ ಅರ್ಪಿಸಬೇಕು. ಇದಾಗದಿದ್ದಲ್ಲಿ ಪಂಚಾಮೃತ ಅರ್ಪಿಸಬಹುದು.
ತುಲಾ ರಾಶಿ(Libra): ಕನ್ಹಾಗೆ ತುಪ್ಪವನ್ನು ಅರ್ಪಿಸಬೇಕು.
ವೃಶ್ಚಿಕ ರಾಶಿ(Scorpio): ಅವನಿಗೆ ಬೆಣ್ಣೆ ಅಥವಾ ಮೊಸರು ನೀಡಿ.