ಬರೀ ದಕ್ಷಿಣ ಭಾರತೀಯರು ಮಾತ್ರವಲ್ಲ, ಇಲ್ಲಿ ಜಪಾನಿಯರೂ ಮಾಡ್ತಾರೆ ದೋಸೆ, ಇಡ್ಲಿ

ವಿದೇಶಕ್ಕೆ ಹೋದಾಗ ಭಾರತದ ಆಹಾರ ಮಿಸ್ ಮಾಡಿಕೊಳ್ಳೋರೆ ಹೆಚ್ಚು. ಭಾರತದಲ್ಲಿ ಮಾಡಿದಂಗೆ ಇಲ್ಲಿ ಮಾಡೋಕೆ ಬರಲ್ಲ ಎನ್ನುತ್ತಿರುತ್ತಾರೆ. ಆದ್ರೆ ಈ ಹೊಟೇಲ್ ಇದಕ್ಕೆ ಅಪವಾದ. ಭಾರತೀಯರೇ ಅಲ್ಲದ ಜನರು ಭಾರತದ ಖಾದ್ಯ ತಯಾರಿಸಿ ಪ್ರಸಿದ್ಧಿಯಾಗಿದ್ದಾರೆ. 
 

Man Visits South Indian Restaurant Run By Two Japanese In Kyoto roo

ಭಾರತದ ಆಹಾರ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ವಿದೇಶಕ್ಕೆ ಹೋಗುವ ಭಾರತೀಯರಿಗೆ ಆಹಾರದ ಸಮಸ್ಯೆ ಕಾಡೋದಿಲ್ಲ. ನಮ್ಮ ದೇಶದ ಜನರೇ ಅನೇಕರು ವಿದೇಶದಲ್ಲಿ ರೆಸ್ಟೋರೆಂಟ್ ಗಳನ್ನು ತೆರೆದಿದ್ದಾರೆ. ಅನೇಕ ಭಾರತೀಯರಿಗೆ ಈ ರೆಸ್ಟೋರೆಂಟ್ ಗಳಲ್ಲಿ ಕೆಲಸ ಸಿಕ್ಕಿದೆ. ದಕ್ಷಿಣ ಭಾರತದ ಸ್ಪೇಷಲ್, ಉತ್ತರ ಭಾರತದ ಸ್ಪೇಷಲ್ ಹೆಸರಿನಲ್ಲಿ ನಡೆಯುವ ಹೊಟೇಲ್ ಗಳಲ್ಲಿ ಪ್ರಸಿದ್ಧ ಖಾದ್ಯಗಳು ಲಭ್ಯವಿದೆ.

ವಿದೇಶ (Abroad) ಕ್ಕೆ ಪ್ರವಾಸ ಹೋಗುವ ಸಂದರ್ಭದಲ್ಲಿ ನಾವು ಬುತ್ತಿ ಕಟ್ಟಿಕೊಂಡು ಹೋಗುವ ಸ್ಥಿತಿ ಈಗಿಲ್ಲ. ವಿದೇಶದಲ್ಲಿರುವ ಕೆಲವೊಂದು ರೆಸ್ಟೋರೆಂಟ್ ಗಳು ಭಾರತೀಯರ ಅಚ್ಚುಮೆಚ್ಚು. ಈಗ ಜಪಾನ್ ನಲ್ಲಿರುವ ರೆಸ್ಟೋರೆಂಟ್ (Restaurant)  ಒಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡ್ತಿದೆ. ಈ ರೆಸ್ಟೋರೆಂಟ್ ಅನೇಕ ವಿಶೇಷತೆಗಳನ್ನು ಹೊಂದಿದೆ. ಜಪಾನ್‌ (Japan) ನ ಕ್ಯೋಟೋದಲ್ಲಿರುವ ರೆಸ್ಟೋರೆಂಟ್ ಯಾಕೆ ಪ್ರಸಿದ್ಧಿಯಾಗಿದೆ ಎಂಬುದನ್ನು ನಾವು ಹೇಳ್ತೇವೆ.

ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು 7 ಸೂಪರ್ ಟ್ರಿಕ್ಸ್

ಜಪಾನಿಗರು ತಮ್ಮ ಕೆಲಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಶ್ರದ್ಧೆಯಿಂದ ಕೆಲಸ ಮಾಡ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಶ್ರಮಜೀವಿ ಜಪಾನಿಗಳು ಬಹಳ ಬುದ್ಧಿವಂತರ ಕೂಡ. ಕ್ಯೋಟೋದಲ್ಲಿರುವ ರೆಸ್ಟೋರೆಂಟ್ ಅದಕ್ಕೆ ಸಾಕ್ಷ್ಯ. ವಿದೇಶಿಗರು ಭಾರತದ ಸಂಪ್ರದಾಯ, ಆಹಾರವನ್ನು ಇಷ್ಟಪಡ್ತಾರೆ ಎಂಬುದಕ್ಕೂ ನೀವು ಈ ಹೊಟೇಲನ್ನು ಉದಾಹರಿಸಬಹುದು.

ಲಕ್ನೋದ ಪ್ರಸಿದ್ಧ ತುಂಡೆ ಕಬಾಬ್ ಪರಿಚಯಿಸಿದ Dr. Bro, ಬಾಲಿವುಡ್ ಸ್ಟಾರ್ಸ್ಗೆ ಇಷ್ಟವಿದು, ಏನಿದರ ಸ್ಪೆಷಲ್?

ಗೋವಾ ಮುಖ್ಯಮಂತ್ರಿಯ ಮಾಜಿ ನೀತಿ ಸಲಹೆಗಾರ ಪ್ರಸನ್ನ ಕಾರ್ತಿಕ್ ಈ ಹೊಟೇಲ್ ಫೋಟೋ ಹಾಗೂ ವಿಶೇಷತೆಯನ್ನು ಜನರ ಮುಂದಿಟ್ಟಿದ್ದಾರೆ. ಎಕ್ಸ್ ಖಾತೆಯಲ್ಲಿ ತಡ್ಕಾ ಹೆಸರಿನ ಹೊಟೇಲ್ ಫೋಟೋ ಹಂಚಿಕೊಂಡಿರುವ  ಅವರು, ನಾನು ಜಪಾನ್‌ನ ಕ್ಯೋಟೋದಲ್ಲಿರುವ ತಡ್ಕಾ ಎಂಬ ಈ  ದಕ್ಷಿಣ ಭಾರತೀಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದೇನೆ. ತಡ್ಕಾ ಜಪಾನಿಯರ ಒಡೆತನದಲ್ಲಿದೆ. ಅದನ್ನು ಅವರೇ ನಡೆಸುತ್ತಿದ್ದಾರೆ. ಅವರು ಪ್ರತಿ 6 ತಿಂಗಳಿಗೊಮ್ಮೆ ಚೆನ್ನೈಗೆ ಭೇಟಿ ನೀಡುತ್ತಾರೆ, ಹೊಸ ಭಕ್ಷ್ಯಗಳನ್ನು ಕಲಿಯುತ್ತಾರೆ, ಅಭ್ಯಾಸ ಮಾಡುತ್ತಾರೆ. ಈ ಖಾದ್ಯ ತಯಾರಿಸಲು ಪರಿಪೂರ್ಣರಾದ್ಮೇಲೆ ಅದನ್ನು ತಮ್ಮ ಮೆನುವಿನಲ್ಲಿ ಸೇರಿಸುತ್ತಾರೆಂದು ಕಾರ್ತಿಕ್ ಬರೆದುಕೊಂಡಿದ್ದಾರೆ.

ಅಲ್ಲದೆ ಕಾರ್ತಿಕ್ ತಡ್ಕಾ ಹೊಟೇಲ್ ನಲ್ಲಿ ಸಿಗುವ ಆಹಾರವನ್ನು ದಕ್ಷಿಣ ಭಾರತದಲ್ಲಿ ಸಿಗವು ಆಹಾರದ ಜೊತೆ ಹೋಲಿಸಿ ನೋಡಿದ್ದಾರೆ. ಚೆನ್ನೈನಲ್ಲಿ ಬೆಳೆದ ಕಾರ್ತಿಕ್  ಜಪಾನ್ ನಲ್ಲಿ ಬಾಣಸಿಗರು ಬಡಿಸಿದ ಆಹಾರಲ್ಲೆ ಸೂಕ್ತ ಅಂಕ ನೀಡಿದ್ದಲ್ಲದೆ ನಾನು ಇದಕ್ಕೆ ನ್ಯಾಯ ಒದಗಿಸಿದ್ದೇನೆ ಎಂದಿದ್ದಾರೆ. ತಡ್ಕಾ ಹೊಟೇಲ್ ನಲ್ಲಿ ತಯಾರಾಗುವ ಇಡ್ಲಿ ಹಾಗೂ ದೋಸೆಯನ್ನು ಕಾರ್ತಿಕ್ ಹೆಚ್ಚು ಮೆಚ್ಚಿಕೊಂಡಿದ್ದು, ನಂಬಲಾಗದಷ್ಟು ರುಚಿಯಾಗಿತ್ತು ಎಂದಿದ್ದಾರೆ.

ಈ ಹೊಟೇಲ್ ನ ಇನ್ನೊಂದು ವಿಶೇಷವನ್ನು ಕಾರ್ತಿಕ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ರೆಸ್ಟೋರೆಂಟ್ ಗಳಿಗೆ ಭಾರತೀಯರು ಬರೋದು ಹೆಚ್ಚು. ಆದ್ರೆ ಈ ರೆಸ್ಟೋರೆಂಟ್ ಸ್ವಲ್ಪ ಭಿನ್ನವಾಗಿದೆ. ಈ ರೆಸ್ಟೋರೆಂಟ್ ಗೆ ಭಾರತೀಯರು ಬರೋದು ಬಹಳ ಅಪರೂಪ. ಇಲ್ಲಿ ನೀವು ಜಪಾನಿ ಗ್ರಾಹಕರನ್ನು ಹೆಚ್ಚು ನೋಡ್ಬಹುದು ಎನ್ನುತ್ತಾರೆ ಕಾರ್ತಿಕ್. ಜಪಾನಿ ಗ್ರಾಹಕರು, ತಡ್ಕಾದಲ್ಲಿ ಸಿಗುವ ದಕ್ಷಿಣ ಭಾರತದ ಆಹಾರವನ್ನು ಹೆಚ್ಚು ಪ್ರೀತಿಸುತ್ತಾರೆಂದು ಕಾರ್ತಿಕ್ ಹೇಳಿದ್ದಾರೆ. ಅಲ್ಲದೆ ಕಾರ್ತಿಕ್ ಹೊಟೇಲ್ ನಲ್ಲಿರುವ ಹಿಂದೂ ದೇವರ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಜಪಾನ್ ಜನರೇ ತಯಾರಿಸುವ ದಕ್ಷಿಣ ಭಾರತದ ಹೊಟೇಲ್ ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕಾರ್ತಿಕ್ ಗೆ ಬಳಕೆದಾರರು ಧನ್ಯವಾದ ಹೇಳಿದ್ದಾರೆ.  ಕೆಲವು ವರ್ಷಗಳ ಹಿಂದೆ, ಜಪಾನಿನ ವ್ಯಕ್ತಿಯೊಬ್ಬರು ಜಪಾನ್‌ನಲ್ಲಿ ಭವಿಷ್ಯದ ವ್ಯಾಪಾರೋದ್ಯಮಕ್ಕಾಗಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಪಾಂಡಿಯ ಅತ್ಯಂತ ಜನಪ್ರಿಯ ಕೋತು ಪರೋಟಾ ಜಾಯಿಂಟ್‌ನಲ್ಲಿ ಅರ್ಧ ವರ್ಷ ಕೆಲಸ ಮಾಡಿದ್ದರು ಎಂದು ಕಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios