ಹರಟೆ ಹೊಡೆಯುವಾಗ ಬಂದ ಐಡಿಯಾ.. 80 ರೂ.ನಲ್ಲಿ ಶುರುವಾದ ಬ್ಯುಸಿನೆಸ್ ಈಗ ವಿಶ್ವವ್ಯಾಪಿ

ಮಹಿಳೆ ಸ್ವಾವಲಂಭಿಯಾಗುವುದು ಬಹಳ ಮುಖ್ಯ. ಮನೆಯಲ್ಲೇ ಸಣ್ಣಪುಟ್ಟದಾಗಿ ಶುರು ಮಾಡುವ ವ್ಯವಹಾರ ನೀವು ಊಹಿಸಲು ಸಾಧ್ಯವಾಗದ ಹಂತಕ್ಕೆ ಹೋಗಿ ನಿಲ್ಲಬಹುದು. ಇದಕ್ಕೆ ಗುಜರಾತಿನ 7 ಮಹಿಳೆಯರು ಉತ್ತಮ ನಿದರ್ಶನ.
 

Inspiring Success Story Of Seven Women Lijjat Papad roo

ಲಿಜ್ಜತ್ ಪಾಪಡ್, ಬರೀ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಮಲ್ಟಿಮಿಲಿಯನ್ ಡಾಲರ್ ವ್ಯವಹಾರವನ್ನು ಇದು ಈಗ ನಡೆಸ್ತಿದೆ. 2019ರಲ್ಲಿ 1600 ಕೋಟಿ ವ್ಯವಹಾರವನ್ನು ಇದು ನಡೆಸಿತ್ತು. 2021ರ ಮಾಹಿತಿ ಪ್ರಕಾರ, ಲಿಜ್ಜತ್ ಪಾಪಡ್ ಭಾರತದ ಸುಮಾರು 45 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಿದೆ. ಪ್ರತಿ ದಿನ 48 ಲಕ್ಷ ಹಪ್ಪಳವನ್ನು ಈ ಕಂಪನಿ ತಯಾರಿಸುತ್ತದೆ. ಆದ್ರೆ ಇಷ್ಟು ದೊಡ್ಡ ಕಂಪನಿಯಾಗಿ ಎದ್ದು ನಿಂತಿರುವ ಲಿಜ್ಜತ್ ಪಾಪಡ್ ಆರಂಭ ತುಂಬಾ ಆಸಕ್ತಿದಾಯಕವಾಗಿದೆ. ಏಳು ಮಹಿಳೆಯರು ಸೇರಿ ಶುರು ಮಾಡಿದ್ದ ಬ್ಯುಸಿನೆಸ್ ಇದು. ಮೊದಲ ದಿನ ಇವರು ತಯಾರಿಸಿದ್ದು ಕೇವಲ 4 ಪ್ಯಾಕೆಟ್ ಹಪ್ಪಳ ಮಾತ್ರ. 

ಲಿಜ್ಜತ್ ಪಾಪಡ್ (Lijjat Papad) ಕಂಪನಿ ಶುರುವಾಗಿದ್ದು ಹೇಗೆ? : ಮಾರ್ಚ್ 15, 1959ರಲ್ಲಿ ಈ ಕಂಪನಿ ಶುರುವಾಗಿದ್ದು. ಮುಂಬೈನ ಗೋರೆಗಾಂವ್ ನಲ್ಲಿ 7 ಗುಜರಾತಿ (Gujarat)ನ ಗೃಹಿಣಿಯರು ಈ ವ್ಯಾಪಾರಕ್ಕೆ ಕಾಲಿಟ್ಟಿದ್ದರು. ಜಸ್ವಂತಿಬೆನ್ ತನ್ನ 6 ಸ್ನೇಹಿತೆಯರಾದ ಪಾರ್ವತಿಬೆನ್, ಉಜಂಬೆನ್, ಬಾನುಬೆನ್, ಲಗುಬೆನ್, ಜಯಾಬೆನ್ ಮತ್ತು ಅಮಿಶ್ ಗಾವಡೆಮ್ ಜೊತೆ ಗೋರೆಗಾಂವ್ ನಲ್ಲಿರುವ ಮನೆಯಲ್ಲಿ ಹರಟೆ ಹೊಡೆಯುತ್ತ ಕುಳಿತಿದ್ದರು. ಮಾತಿನ ಮಧ್ಯೆ ಹಪ್ಪಳ ಶುರು ಮಾಡುವ ಆಲೋಚನೆ ಬಂತು. ಆದ್ರೆ ವ್ಯಾಪಾರಕ್ಕೆ ಬಂಡವಾಳವಿರಲಿಲ್ಲ. ಹಾಗಾಗಿ ಈ ಮಹಿಳೆಯರು ಆ ಪ್ರದೇಶದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಛಗನ್‌ಲಾಲ್ ಕರಮ್ಶಿ ಪರೇಖ್ ಅವರನ್ನು ಭೇಟಿಯಾದ್ರು. ತಮ್ಮ ಆಲೋಚನೆಯನ್ನು ಅವರ ಮುಂದಿಟ್ಟರು. ಪರೇಖ್, ಈ ಮಹಿಳೆಯರಿಗೆ 80 ರೂಪಾಯಿಯನ್ನು ಸಾಲವಾಗಿ ನೀಡಿದ್ದರು. ಕೇವಲ 80 ರೂಪಾಯಿಯಲ್ಲಿ ಈ ಮಹಿಳೆಯರು ಹಪ್ಪಳದ ವ್ಯಾಪಾರ ಶುರು ಮಾಡಿದ್ದರು. 

Personal Finance : ಶೇ. 7.5ರಷ್ಟು ಬಡ್ಡಿ ಬೇಕಾ? ಈ ಸೇವಿಂಗ್ಸ್ ಟಿಪ್ಸ್ ಟ್ರೈ ಮಾಡಿ

ಮಾರ್ಚ್ 15ರಂದು ಮನೆ (Home) ಯ ಮಹಡಿ ಮೇಲೆ ಸಿಕ್ಕ ಮಹಿಳೆಯರು ಹಪ್ಪಳ ಶುರು ಮಾಡಿದ್ದರು. ಮೊದಲ ದಿನ ಅವರು ಹಪ್ಪಳದ ನಾಲ್ಕು ಪ್ಯಾಕೆಟ್ ಸಿದ್ಧಪಡಿಸಿದ್ದರು. ಒಂದೇ ಒಂದು ವರ್ಷದಲ್ಲಿ ಅವರು 6 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಹಪ್ಪಳವನ್ನು ಮಾರಾಟ ಮಾಡಿದ್ದರು. 1962ರಲ್ಲಿ ಕ್ಯಾಶ್ ಪ್ರೈಜ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ ಅವರು ಹಪ್ಪಳಕ್ಕೆ ಲಿಜ್ಜತ್ ಪಾಪಡ್ ಎಂದು ಹೆಸರಿಟ್ಟರು. ನಿಧಾನವಾಗಿ ಹಪ್ಪಳ ತಯಾರಿಕೆ ಕೈಜೋಡಿಸಿದ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಾ ಹೋಯ್ತು. ಗುಜರಾತಿನ ಒಂದು ಮನೆಯಲ್ಲಿ ಶುರುವಾದ ಈ ಹಪ್ಪಳ ಈಗ ದೇಶದ 82 ಕಡೆ ಬ್ರ್ಯಾಂಚ್ ಹೊಂದಿದೆ. ಅಮೆರಿಕಾ, ಸಿಂಗಾಪುರ ದೇಶಗಳಲ್ಲೂ ಲಜ್ಜಿತ್ ಪಾಪಡ್ ಗೆ ಬೇಡಿಕೆ ಹೆಚ್ಚಿದೆ. 

ಹಪ್ಪಳದ ಜೊತೆ ಸೇರಿದೆ ಈ ವಸ್ತು : ಈಗ ಇವರು ಹಪ್ಪಳದ ಜೊತೆ ಖಾಖ್ರಾ, ಬೇಕರಿ ಪ್ರಾಡೆಕ್ಟ್ ಹಾಗೂ ಕೆಲ ಪ್ರಕಾರದ ಮಸಾಲೆ ವಸ್ತು, ಬಟ್ಟೆ ತೊಳೆಯುವ ಪೌಡರ್ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹಪ್ಪಳ ತಯಾರಿಸ್ತಾರೆ. ಅದರಂತೆ ಹಣ ಸಂಪಾದನೆ ಮಾಡ್ತಾರೆ. ಲಿಜ್ಜತ್ ಪಾಪಡ್ ನಲ್ಲಿ ಕೆಲಸ ಮಾಡುವ ಕೆಲ ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಸಂಪಾದನೆ ಮಾಡ್ತಾರಂತೆ. ಡ್ರೈವರ್, ಅಂಗಡಿ ಸಹಾಯಕರ ಹುದ್ದೆಗೆ ಮಾತ್ರ ಪುರುಷರನ್ನು ನೇಮಿಸಿಕೊಳ್ತಾರೆ. 

Free Sewing Machine Scheme : ಮಹಿಳೆಯರು ಸ್ವಾವಲಂಬಿಯಾಗಲು ಇದೇ ಬೆಸ್ಟ್ ವೇ!

ರಾಷ್ಟ್ರಪತಿಯಿಂದ ಸಿಕ್ಕಿದೆ ಪದ್ಮಶ್ರೀ ಪ್ರಶಸ್ತಿ : ನವೆಂಬರ್ 2021ರಲ್ಲಿ ಲಿಜ್ಜತ್ ಪಾಪಡ್ ನ ಸಹ ಸಂಸ್ಥಾಪಕಿ 90 ವರ್ಷದ ಜಸವಂತಿ ಬೇನ್ ಜಮನಾದಾಸ್ ಅವರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. 2005ರಲ್ಲಿ ಕಂಪನಿಗೆ ಬ್ರ್ಯಾಂಡ್ ಇಕ್ವಿಟಿ ಸನ್ಮಾನ ಸಿಕ್ಕಿದೆ. ಇದಲ್ಲದೆ ಕಂಪನಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.  ಲಿಜ್ಜತ್ ಪಾಪಡ್, ಸ್ವಾವಲಂಭಿ ಹಾಗೂ ಮಹಿಳಾ ಶಕ್ತಿಕರಣದ ಕಥೆಯಾಗಿದೆ. ಅನೇಕ ಮಹಿಳೆಯರಿಗೆ ಲಿಜ್ಜತ್ ಪಾಪಡ್ ಸ್ಫೂರ್ತಿಯಾಗಿದೆ.  
 

Latest Videos
Follow Us:
Download App:
  • android
  • ios