ಹಾಳು ಮೂಳು ತಿನ್ನೋದನ್ನು ಬಿಟ್ಬಿಡಿ, ಮನೆಯಲ್ಲೇ ವೆಜಿಟೇಬಲ್ ಹೆಲ್ದೀ ಚಿಪ್ಸ್ ಟ್ರೈ ಮಾಡಿ
ಚಿಪ್ಸ್ (Chips) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಸಿವಾದಾಗ, ಬೋರಾದಾಗ, ಊಟದ (Food) ಜೊತೆ ನೆಂಚಿಕೊಳ್ಳೋಕೆ ಹೀಗೆ ಎಲ್ಲಾ ರೀತಿಯಲ್ಲಿ ಯೂಸ್‌ಫುಲ್ ಆಗಿರುತ್ತೆ. ಆದ್ರೆ ಯಾವಾಗ್ಲೂ ಕರಿದ ಚಿಪ್ಸ್ ತಿನ್ನೋದು ಆರೋಗ್ಯಕ್ಕೆ (Health) ಒಳ್ಳೇದಲ್ಲ. ಆದ್ರೆ ಇಲ್ಲಿ ಕೆಲವೊಂದು ವೆರೈಟಿ ಚಿಪ್ಸ್ ಇದೆ. ಇದ್ರಲ್ಲಿ ಹಲವಾರು ಪೌಷ್ಠಿಕಾಂಶಗಳು ಅಡಕವಾಗಿರುವ ಕಾರಣ ಇದು ಆರೋಗ್ಯಕ್ಕೂ ಒಳ್ಳೇದು.
ಪ್ರತಿ ಆರೋಗ್ಯಕರ ಆಹಾರದ (Food) ಪ್ರಮುಖ ಭಾಗವಾಗಿ ತಿಂಡಿಯನ್ನು ಪರಿಗಣಿಸಲಾಗುತ್ತದೆ. ಅತಿಯಾಗಿ ತಿನ್ನುವ ಅಭ್ಯಾಸ (Habit)ವನ್ನು ಕಡಿಮೆ ಮಾಡಲು, ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡಲು ಇಂಥಾ ಕುರುಕುರು ತಿಂಡಿಗಳು ನೆರವಾಗುತ್ತವೆ. ಹೀಗೆ ಜನ್ರು ಇಷ್ಟಪಟ್ಟು ಸೇವಿಸುವ ತಿಂಡಿಗಳಲ್ಲೊಂದು ಚಿಪ್ಸ್ (Chips). ಎಲ್ಲಾ ವಯಸ್ಸಿನವರೂ ಚಿಪ್ಸ್‌ನ್ನು ಇಷ್ಟಪಟ್ಟು ತಿನ್ನುತ್ತಾರೆ. ಕರಿದ ತಿಂಡಿ ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ ಎಂದು ತಿಳಿದಿದ್ರೂ ಕ್ರಿಸ್ಪೀಯಾಗಿರುವ ಚಿಪ್ಸ್ ರುಚಿಗೆ ಇದನ್ನು ಹೆಚ್ಚೆಚ್ಚು ತಿನ್ಬೇಕು ಅನಿಸುತ್ತೆ. ಆದರೆ ರುಚಿಕರತೆಯನ್ನು ಬದಿಗಿಟ್ಟು, ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ವಾಣಿಜ್ಯಿಕವಾಗಿ ತಯಾರಿಸಿದ ಚಿಪ್ಸ್‌ಗಳು ಅನಾರೋಗ್ಯಕರವಾಗಬಹುದು.
ಹೀಗಾಗಿ ರೆಡಿ ಪ್ಯಾಕೆಟ್‌ನಲ್ಲಿ ಸಿಗುವ ಚಿಪ್ಸ್‌ಗಳನ್ನು ಬಿಟ್ಬಿಡಿ. ಅದರ ಬದಲಾಗಿ ಸೇವಿಸೋಕೆ ಇಲ್ಲಿದೆ ಕೆಲವೊಂದು ಹೆಲ್ದೀ ಚಿಪ್ಸ್. ಇದನ್ನು ಎಷ್ಟು ತಿಂದ್ರೂ ಅರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದ್ರೆ ಆಗಲ್ಲ. ಅದ್ಯಾವ ಚಿಪ್ಸ್ ಅಂತ ತಿಳ್ಕೊಳ್ಳೋ ಕುತೂಹಲ ನಿಮ್ಗೂ ಇದ್ಯಲ್ಲಾ. ಇಲ್ಲಿದೆ ಹೆಚ್ಚಿನ ಮಾಹಿತಿ.
ಗಾಳಿಯಿಂದಲೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ದಂಡ
ಆರೋಗ್ಯಕರ ತರಕಾರಿ ಚಿಪ್ಸ್‌ಗಳು
ಆಲೂಗಡ್ಡೆ ಚಿಪ್ಸ್: ಯಾವುದೇ ಸುವಾಸನೆಯು ಕ್ಲಾಸಿಕ್ ಆಲೂಗಡ್ಡೆಯನ್ನು ಸೋಲಿಸಲು ಸಾಧ್ಯವಿಲ್ಲ. ಮನೆಯಲ್ಲಿ ತಯಾರಿಸಿದ ಆಲೂಗೆಡ್ಡೆ ಚಿಪ್ಸ್ ಫೈಬರ್‌ನ ಉತ್ತಮ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ದೀರ್ಘಕಾಲದವರೆಗೆ ಹಸಿವಾಗದಂತೆ ನಿಮ್ಮನ್ನು ಪೂರ್ಣವಾಗಿ ಇರಿಸುತ್ತದೆ.
ಬಾಳೆಹಣ್ಣು ಚಿಪ್ಸ್: ಪೊಟ್ಯಾಸಿಯಮ್ ಮತ್ತು ನಾರಿನ ಮೂಲವಾಗಿರುವ, ಬಾಳೆ ಚಿಪ್ಸ್‌ನ್ನು ರುಚಿಕರವಾದ ಮತ್ತು ಆರೋಗ್ಯಕರ ತಿಂಡಿ ಎಂದು ಸಾಬೀತುಪಡಿಸಲಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಟೀ, ಕಾಫಿ ಜೊತೆಗೆ, ಊಟದ ಜೊತೆಗೂ ತಿನ್ನಬಹುದು.
ಕ್ಯಾರೆಟ್ ಚಿಪ್ಸ್: ಆರೋಗ್ಯಕರ ಎಂದು ಕರೆಸಿಕೊಂಡಿರುವ ಕ್ಯಾರೆಟ್‌ನಿಂದ ತಯಾರಿಸುವ ಚಿಪ್ಸ್ ನಿಮಗೆ ವಿಟಮಿನ್ ಎ, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಹೀಗಾಗಿ ಯಾವುದೇ ಕಾಯಿಲೆಗಳು ಸುಲಭವಾಗಿ ದೇಹವನ್ನು ಕಾಡುವುದಿಲ್ಲ.
ಮಕ್ಕಳು ಖುಷಿ ಪಡುತ್ತವೆ ಅಂತ ಸಿಕ್ಕಾಪಟ್ಟೆ ಚಿಪ್ಸ್ ಕೊಟ್ಟರೆ ಹಲ್ಲು ಹಾಳಾಗುತ್ತೆ!
ಬೀಟ್‌ರೂಟ್ ಚಿಪ್ಸ್: ಬೀಟ್‌ರೂಟ್‌ನಿಂದ ರುಚಿಕರವಾದ ಮತ್ತು ಆರೋಗ್ಯಕರವಾದ ಕೆಂಪು ಚಿಪ್ಸ್ ಅನ್ನು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಇದು ನಿಜ, ನಿಮ್ಮ ವಿಟಮಿನ್ ಸಿ ಪ್ರಮಾಣವನ್ನು ಪಡೆಯಲು ಇವುಗಳನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿ. ಉಪ್ಪು, ಖಾರ ಸೇರಿಸಿ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಊಟದ ಸಂದರ್ಭ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಮಶ್ರೂಮ್ ಚಿಪ್ಸ್: ಕೇಳಲು ಅಸಾಮಾನ್ಯವೆನಿಸಿದರೂ ಮಶ್ರೂಮ್ ಚಿಪ್ಸ್ ತಿನ್ನಲು ಚೆನ್ನಾಗಿರುತ್ತದೆ. ಇದು ಫೈಬರ್ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಊಟದ ಸಂದರ್ಭದಲ್ಲಿ ತಿನ್ನಲು ಚೆನ್ನಾಗಿರುತ್ತದೆ.
ಸಿಹಿ ಗೆಣಸಿನ ಚಿಪ್ಸ್: ಆಲೂಗಡ್ಡೆಯಂತೆಯೇ ಸಿಹಿ ಗೆಣಸಿನ ಚಿಪ್ಸ್ ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ. ಇದು ಪೋಷಕಾಂಶಗಳ ಅತ್ಯುತ್ತಮ ಮೂಲವೂ ಹೌದು. ಸಿಹಿ ಗೆಣಸಿನ ಚಿಪ್ಸ್ ಫೈಬರ್, ವಿಟಮಿನ್ ಬಿ ಮತ್ತು ಸಿ ಜೊತೆಗೆ ಸೂಪರ್ ಉಪಯುಕ್ತ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಕಚೇರಿಯಲ್ಲಿದ್ದಾಗ, ಆಗಾಗ ಹಸಿವಾದಾಗ ತಿನ್ನಲು ಇದು ಅತ್ಯುತ್ತಮ ತಿಂಡಿಯಾಗಿದೆ.
ಬೂದುಕುಂಬಳಕಾಯಿ ಚಿಪ್ಸ್: ಬೂದುಕುಂಬಳಕಾಯಿ ಸಾರು, ಪಲ್ಯ ಮಾಡೋದನ್ನು ನೀವು ಕೇಳಿದ್ದೀರಿ. ಆದ್ರೆ ಬೂದುಕುಂಬಳಕಾರಿ ಚಿಪ್ಸ್ ಅದೆಷ್ಟು ಸ್ವಾದಿಷ್ಟಕರ ನಿಮಗೆ ಗೊತ್ತಿದ್ಯಾ ? ಇದು ಈ ಶಾಕಾಹಾರಿ ಚಿಪ್ಸ್ ಅನ್ನು ಮೆಣಸಿನಕಾಯಿಯೊಂದಿಗೆ ಬೆರೆಸಬಹುದು. ಆರೋಗ್ಯಕ್ಕೂ ಇದು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.