Lavender Tea: ವಿಶ್ವದ ಅತ್ಯಂತ ಆರೋಗ್ಯಕರ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು
ಮಿಲ್ಕ್ ಟೀ, ಜಿಂಜರ್ ಟೀ, ತುಳಸಿ ಟೀ, ಮುಲ್ಲೀನ್ ಟೀ ಹೀಗೆ ಹಲವು ವೆರೈಟಿ ಟೀ (Tea)ಯನ್ನು ನೀವು ಕುಡಿದಿರಬಹುದು. ಆದರೆ ಲ್ಯಾವೆಂಡರ್ ಟೀ ಬಗ್ಗೆ ಕೇಳಿದ್ದೀರಾ ? ಅದರಲ್ಲೂ ಲ್ಯಾವೆಂಡರ್ ಚಹಾವು ವಿಶ್ವದಲ್ಲೇ ಅತ್ಯಂತ ಆರೋಗ್ಯ (Health)ಕರವಾಗಿದೆ ಎಂದು ನಿಮಗೆ ತಿಳಿದಿದೆಯೇ ?
ಪ್ರಪಂಚದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾದ ಚಹಾ (Tea)ವು ನೀರಿನ ನಂತರ ಜನರು ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ. ಚಹಾ ಅನೇಕ ಆರೋಗ್ಯ (Health) ಪ್ರಯೋಜನಗಳಿಂದ ಕೂಡಿದೆ. ವಿವಿಧ ರೀತಿಯ ಚಹಾ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಒಂದು ಕಪ್ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಮತ್ತು ಕೊನೆಗೊಳಿಸುವುದು ತುಂಬಾ ಉತ್ತಮವಾಗಿದೆ.
ಚಹಾ ಸೇವನೆ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಚರ್ಮ (Skin)ವನ್ನು ಬಿಗಿಯಾಗಿ ಮತ್ತು ಕಾಂತಿಯುತವಾಗಿರಿಸುತ್ತದೆ. ಒತ್ತಡ (Pressure)ವನ್ನು ನಿವಾರಿಸಿ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತದ ವಿರುದ್ಧದ ಹೋರಾಟದಲ್ಲಿ ಪ್ರಯೋಜನಕಾರಿಯಾಗಿದೆ. ಇದು ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ನಿಯಮಿತವಾಗಿ ಚಹಾ ಸೇವನೆಯು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.
Mullein Tea: ನಿದ್ದೆ ಬರ್ತಿಲ್ವಾ ? ಜಸ್ಟ್ ಒಂದು ಕಪ್ ಸ್ಪೆಷಲ್ ಟೀ ಕುಡೀರಿ ಸಾಕು
ಬೆಚ್ಚಗಿನ ಚಹಾವು ಮಿಲಿಯನ್ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲೂ ಲ್ಯಾವೆಂಡರ್ ಟೀ ವಿಶ್ವದಲ್ಲೇ ಅತ್ಯಂತ ಆರೋಗ್ಯಕರವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಲ್ಯಾವೆಂಡರ್ ಟೀ ಎಂದರೇನು ? ಇದನ್ನು ಕುಡಿಯುವುದರಿಂದ ಸಿಗೋ ಆರೋಗ್ಯ ಪ್ರಯೋಜನಗಳೇನು ತಿಳಿಯೋಣ.
ಲ್ಯಾವೆಂಡರ್ ಹಾಲಿನ ಚಹಾ ಎಂದರೇನು ?
ಲ್ಯಾವೆಂಡರ್ ಹಾಲಿನ ಚಹಾವನ್ನು ಲಾವಂಡುಲಾ ಅಂಗುಸ್ಟಿಫೋಲಿಯಾ ಸಸ್ಯದಿಂದ ಬಂದ ಕೆಲವು ಒಣಗಿದ ಲ್ಯಾವೆಂಡರ್ ಹೂವಿನ ದಳಗಳೊಂದಿಗೆ ಹಾಲು ಕುದಿಸುವ ಮೂಲಕ ತಯಾರಿಸಲಾಗುತ್ತದೆ. ಈ ಹಿತವಾದ ಚಹಾ ಮಿಶ್ರಣವು ಇಂದ್ರಿಯವನ್ನು ಉಲ್ಲಸಿತಗೊಳಿಸುತ್ತದೆ. ದೇಹದ ಕಾಯಿಲೆಗಳನ್ನು ಒಳಗಿನಿಂದ ಗುಣಪಡಿಸುತ್ತದೆ. ಇದಕ್ಕಾಗಿಯೇ ಲ್ಯಾವೆಂಡರ್ ಚಹಾದ ಉಲ್ಲೇಖವನ್ನು ಇತಿಹಾಸದ ಪುಸ್ತಕಗಳಲ್ಲಿ ಕಾಣಬಹುದು. ಹಿಪ್ಪೊಕ್ರೇಟ್ಸ್ 'ಲ್ಯಾವೆಂಡರ್ ಮೆದುಳನ್ನು ಬೆಚ್ಚಗಾಗಿಸುತ್ತದೆ' ಎಂದು ಹೇಳಿದ್ದಾರೆ. ಜನಪ್ರಿಯ ಇಂಗ್ಲಿಷ್ ವೈದ್ಯ ಜಾನ್ ಪಾರ್ಕಿನ್ಸನ್ ಈ ಸಸ್ಯವನ್ನು 'ಎಲ್ಲ ತಲೆ ಮತ್ತು ಮೆದುಳಿನ ಕಾಯಿಲೆಗಳಿಗೆ ಅದ್ಭುತ ಪರಿಹಾರ' ಎಂದು ವಿವರಿಸಿದ್ದಾರೆ.
ಲ್ಯಾವೆಂಡರ್ ಹಾಲಿನ ಚಹಾ ಆರೋಗ್ಯಕರ ಯಾಕೆ ?
ಲ್ಯಾವೆಂಡರ್ ಚಹಾ ಅಥವಾ ಕಪ್ಪು ಲ್ಯಾವೆಂಡರ್ ಚಹಾವು ಆರೋಗ್ಯಕ್ಕೆ ಹಿತಕರವಾಗಿದೆ. ಯಾಕೆಂದರೆ ಇದು ನೈಸರ್ಗಿಕವಾಗಿ ಮೆದುಳಿನ ಆರೋಗ್ಯವನ್ನು ಗುಣಪಡಿಸುತ್ತದೆ. ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ನಿದ್ರಾಹೀನತೆಯ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
Hibiscus Benefits : ದಾಸವಾಳ ಚಹಾದಲ್ಲಿದೆ ಹಲವು ಗುಣ..!
ಪ್ರೋಟೀನ್ ಭರಿತ ಹಾಲು ಮತ್ತು ಒಣಗಿದ ಲ್ಯಾವೆಂಡರ್‌ನ ಸಂಯೋಜನೆಯು ಶಕ್ತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ. ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ ಲ್ಯಾವೆಂಡರ್ ಅನ್ನು ಪ್ರಾಚೀನ ಔಷಧಗಳು, ಪರಿಹಾರಗಳು ಮತ್ತು ಚಿಕಿತ್ಸೆಗಳಲ್ಲಿ ಖಿನ್ನತೆ ಶಮನಕಾರಿಯಾಗಿ ಬಳಸಲಾಗುತ್ತದೆ. ಮಲಗುವ ಮುನ್ನ ಲ್ಯಾವೆಂಡರ್ ಚಹಾವನ್ನು ಕುಡಿಯುವುದು ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಲ್ಯಾವೆಂಡರ್‌ನಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಸಿನೋಲ್, ಇದು ನೈಸರ್ಗಿಕ ನಂಜುನಿರೋಧಕವಾಗಿದ್ದು, ಶ್ವಾಸಕೋಶದಿಂದ ಕಫವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಈ ಚಹಾದಲ್ಲಿ ಟ್ಯಾನಿನ್ ಇರುವಿಕೆಯು ಉರಿಯೂತವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಉರ್ಸೋಲಿಕ್ ಆಮ್ಲದ ಉಪಸ್ಥಿತಿಯು ದೇಹವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಲ್ಯಾವೆಂಡರ್ ಹಾಲಿನ ಚಹಾ ತಯಾರಿಸುವುದು ಹೇಗೆ ?
ಲ್ಯಾವೆಂಡರ್ ಹಾಲಿನ ಚಹಾವನ್ನು ತಯಾರಿಸಲು, ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು 1 ಕಪ್ ನೀರು ಸೇರಿಸಿ ಮತ್ತು ನೀರನ್ನು ಕುದಿಸಿ. ನೀರು ಸಾಕಷ್ಟು ಬಿಸಿಯಾದ ನಂತರ ಗ್ಯಾಸ್ ಆಫ್ ಮಾಡಿ ಮತ್ತು 1 ಚಮಚ ಲ್ಯಾವೆಂಡರ್ ಹೂವಿನ ಮೊಗ್ಗುಗಳನ್ನು ಸೇರಿಸಿ. ಇದನ್ನು 15-20 ನಿಮಿಷಗಳ ಕಾಲ ಕುದಿಯಲು ಬಿಡಿ. ಮುಂದೆ ½ ಕಪ್ ಹಾಲು ಬಿಸಿ ಮಾಡಿ ಇದಕ್ಕೆ ಸೇರಿಸಿ. ಚಹಾವನ್ನು ಸೋಸಿಕೊಂಡು, ಇದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಕುಡಿಯಿರಿ. ಸತತವಾಗಿ ಈ ಲ್ಯಾವೆಂಡರ್ ಟೀ ಕುಡಿದರೆ ಆಗಾಗ ಕಾಯಿಲೆ ಬೀಳುವ ಭಯವಿಲ್ಲ.