ಕಬಾಬ್ ಮಾರಾಟಗಾರನ ಆಕರ್ಷಕ ಫೋಟೋ ಕ್ಲಿಕ್ಕಿಸಿದ ಭಾರತೀಯ ಛಾಯಾಗ್ರಾಹಕರಿಗೆ ಪ್ರತಿಷ್ಠಿತ ಪ್ರಶಸ್ತಿ
ಒಂದು ಫೋಟೋ (Photo)ದಲ್ಲಿ ಹಲವಾರು ಭಾವನೆಗಳು ಅಭಿವ್ಯಕ್ತಿಗೊಳ್ಳುತ್ತದೆ. ಹೀಗಾಗಿಯೇ ಕೆಲವೊಂದು ಫೋಟೋಗಳು ತುಂಬಾ ಅದ್ಭುತವಾಗಿರುತ್ತವೆ. ಕಾಶ್ಮೀರದ (Kashmir) ಕಬಾಬ್ ಮಾರಾಟಗಾರನ (Kabab seller) ಚಿತ್ರವು ಅಂತರರಾಷ್ಟ್ರೀಯ ಆಹಾರ ಫೋಟೋ ಸ್ಪರ್ಧೆಯಲ್ಲಿ ಬಹುಮಾನ (Prize) ಪಡೆದುಕೊಂಡಿದೆ. ಆ ಫೋಟೋ ವಿಶೇಷತೆಯೇನು ಎಂಬುದನ್ನು ತಿಳಿಯೋಣ.
ಕಾಶ್ಮೀರದ (Kashmir) ಶ್ರೀನಗರದಲ್ಲಿರುವ ಬೀದಿ ವ್ಯಾಪಾರಿ, ಕಬಾಬ್ ಮಾರಾಟಗಾರನ I(Kabab seller) ಆಕರ್ಷಕ ಫೋಟೋ ಕ್ಲಿಕ್ಕಿಸಿದ ಭಾರತೀಯ ಛಾಯಾಗ್ರಾಹಕರೊಬ್ಬರಿ (Photographer)ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಫರ್ಧೆಯಲ್ಲಿ ಪ್ರಶಸ್ತಿ (Award) ಲಭಿಸಿದೆ. ಕಬಾಬಿಯಾನ ಎಂಬ ಹೆಸರಿನ ಛಾಯಾಚಿತ್ರಕ್ಕೆ ನಾಮಕರಣ ಮಾಡಲಾಗಿದ್ದು, ದೇವದತ್ತಾ ಚಕ್ರವರ್ತಿ ಅವರಿಗೆ 2022ರ ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಪ್ರಶಸ್ತಿಗೆ ವಿಜೇತರಾಗಿದ್ದಾರೆ. ಚಿತ್ರದಲ್ಲಿ, ಮಾರಾಟಗಾರನು ಹೊಗೆ ತುಂಬಿದ ಆಹಾರದ ತಯಾರಿಕೆಯಲ್ಲಿ ತೊಡಗಿರುವುದನ್ನು ನೋಡಬಹುದು.
ಕಬಾಬ್ ಮಾರಾಟಗಾರನ ಆಕರ್ಷಕ ಫೋಟೋ
ಈ ಫೋಟೋವನ್ನು ಶ್ರೀನಗರದ ಖಯ್ಯಾಮ್ ಚೌಕ್‌ನಲ್ಲಿ ಚಿತ್ರೀಕರಿಸಲಾಗಿದೆ, ಇದು ಹಗಲಿನಲ್ಲಿ ಯಾವುದೇ ರಸ್ತೆಯಂತೆ ಕಾಣುವ ಗಲ್ಲಿ ಮಾರ್ಗವಾಗಿದೆ. ಆದಾಗ್ಯೂ, ಸಂಜೆಯ ಸಮಯದಲ್ಲಿ, ಮಾರಾಟಗಾರರು ಅನೇಕ ಇದ್ದಿಲು ಒಲೆಗಳನ್ನು ಬೆಳಗಿಸುವುದರಿಂದ ಇದು ಚಟುವಟಿಕೆಯ ಕೇಂದ್ರವಾಗಿ ಬದಲಾಗುತ್ತದೆ.
ಇದು ಫೋಟೋನಾ? ಪೇಂಟಿಂಗಾ? ಫಿಲ್ಟರ್ ಕಾಫಿಯ ವೈರಲ್ ಚಿತ್ರಕ್ಕೆ ನೆಟ್ಟಿಗರು ಫುಲ್ ಕನ್ಫ್ಯೂಸ್
ಗ್ರಿಲ್‌ಗಳಿಂದ ವಾಜ್ವಾನ್ ಕಬಾಬ್‌ಗಳ ಸುವಾಸನೆ ಮತ್ತು ಹೊಗೆ ಈ ಬೀದಿಯನ್ನು ಆಹಾರಪ್ರಿಯರ ಸ್ವರ್ಗವಾಗಿ ಪರಿವರ್ತಿಸುತ್ತದೆ. ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಆಫ್ ದಿ ಇಯರ್ 2022 ಸ್ಪರ್ಧೆಯ ವಿಜೇತರನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಿದ ಸಮಾರಂಭದಲ್ಲಿ ಘೋಷಿಸಲಾಯಿತು
ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್‌ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಕ್ಯಾರೋಲಿನ್ ಕೆನ್ಯಾನ್, ಮಾತನಾಡಿ, ವಿಜೇತ ಛಾಯಾಚಿತ್ರದಲ್ಲಿ 'ಆಹಾರ ತಯಾರಿಸುವಾಗ ಹೊಗೆ, ಚಿನ್ನದ ಬಣ್ಣದ ಬೆಳಕು, ವಿಷಯದ ಅಭಿವ್ಯಕ್ತಿಯನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ' ಎಂದು ಹೇಳಿದರು. ಕಿಡಿಗಳು ಓರೆಗಳಿಂದ ಹಾರುತ್ತವೆ, ಅದರ ಹುರಿಯುವಿಕೆಯ ಚಿತ್ರಣ ಅದೆಷ್ಟು ಚೆನ್ನಾಗಿದೆಯೆಂದರೆ ಆ ಸ್ವಾದವನ್ನು ನಾವು ಅನುಭವಿಸಬಹುದು. ನಾವು ಬೆಚ್ಚಗಿನ, ರುಚಿಕರವಾದ ಸುವಾಸನೆಯನ್ನು ಊಹಿಸುತ್ತೇವೆ. ಈ ಚಿತ್ರ, ಸೌಮ್ಯ ಆದರೆ ಶಕ್ತಿಯುತ, ನಮ್ಮ ಆತ್ಮವನ್ನು ಪೋಷಿಸುತ್ತದೆ ಎಂದಿದ್ದಾರೆ.
ಮೋನಿಕಾ ಗ್ಯಾಲೆಟ್ಟಿ, ರೆಸ್ಟೋರೆಂಟ್ ಮಾಲೀಕರು, ಮಾಸ್ಟರ್‌ಚೆಫ್ ನ್ಯಾಯಾಧೀಶರು ಮತ್ತು ಅಂತರಾಷ್ಟ್ರೀಯವಾಗಿ ಹೆಸರಾಂತ ಬಾಣಸಿಗರು, ಯೂಟ್ಯೂಬ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಿದ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಿದರು. ಪ್ರಪಂಚದಾದ್ಯಂತದ ಸಾವಿರಾರು ಜನರು ಈ ವರ್ಷದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿ ವಿಭಾಗಕ್ಕೂ ಒಟ್ಟಾರೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.
Photography Tips : ಪ್ರವಾಸದಲ್ಲಿ ಫೋಟೋ ಚೆನ್ನಾಗಿ ಬರಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿರುವ ಭಾರತೀಯ ಛಾಯಾಗ್ರಾಹಕ ದೇವದತ್ತಾ ಚಕ್ರವರ್ತ, ನನಗೆ ಇದನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
2011ರಲ್ಲಿ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಸ್ಪರ್ಧೆ ಸ್ಥಾಪನೆ
ವರ್ಷದ ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಸ್ಪರ್ಧೆಯನ್ನು 2011ರಲ್ಲಿ ಸ್ಥಾಪಿಸಲಾಯಿತು. ಪ್ರಶಸ್ತಿಗಳು ಪ್ರಪಂಚದಾದ್ಯಂತದ ಅತ್ಯುತ್ತಮ ಆಹಾರ ಛಾಯಾಗ್ರಹಣ ಮತ್ತು ವೀಡಿಯೊವನ್ನು ಗೌರವಿಸುತ್ತವೆ. ವಿವಿಧ ವರ್ಗಗಳು ಆಹಾರವನ್ನು ಚಿತ್ರಿಸುವ ವಿಧಾನಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿದೆ. ಮ್ಯಾಗಜೀನ್ ಶೈಲಿಯ ಆಹಾರದಿಂದ ಹಿಡಿದು ಧಾರ್ಮಿಕ ರಜಾದಿನಗಳಲ್ಲಿ ಕುಟುಂಬಗಳು ಒಟ್ಟಿಗೆ ತಿನ್ನುವ ಛಾಯಾಚಿತ್ರಗಳವರೆಗೆ, ಆಹಾರ ಉತ್ಪಾದನೆಯ ನೈಜತೆಯ ಚಿತ್ರಣದಿಂದ ಅದರ ನೈಸರ್ಗಿಕ ಆವಾಸಸ್ಥಾನದಲ್ಲಿ ಬೆಳೆಯುವ ಆಹಾರದವರೆಗೆ, ಪ್ರತಿಯೊಬ್ಬರಿಗೂ ಏನಾದರೂ ಇರುತ್ತದೆ.