ಪಡುಬಿದ್ರೆಯ ಕಟ್ಟದಪ್ಪ ಸೇವೆ, ಜಗದಗಲ ಹರಡಿದೆ ದೇವರ ಕಾರಣಿಕ
100 ಮುಡಿ ಅಕ್ಕಿ ಹಿಟ್ಟು, 1500 ತೆಂಗಿನ ಕಾಯಿ, 3500 ಬಾಳೆ ಹಣ್ಣು, 3700 ಕೆಜಿ ಬೆಲ್ಲ, 30 ಗೋಣಿ ಚೀಲ ಅರಳು, 15 ಕೆಜಿ ಏಲಕ್ಕಿ ಮತ್ತು 80 ಡಬ್ಬಿ ಕೊಬ್ಬರಿ ಎಣ್ಣೆ. ಇದನ್ನೆಲ್ಲಾ ಸೇರಿಸಿ ಬೆಳಗಿನ ಜಾವ 1.39 ಗಂಟೆಯಿಂದ ಆರಂಭಿಸಿ ರಾತ್ರಿ ಆರರಿಂದ ಏಳು ಗಂಟೆ ತನಕ ಸುಮಾರು 2 ಲಕ್ಷ ಅಪ್ಪಗಳನ್ನು ತಯಾರಿಸಲಾಯಿತು ಇದೆಲ್ಲಾ ನಡೆದಿದ್ದೆಲ್ಲಿ. ಇಲ್ಲಿದೆ ಮಾಹಿತಿ.
ವರದಿ: ಶಶಿಧರ ಮಾಸ್ತಿಬೈಲು , ಏಷ್ಯಾನೆಟ್ ಸುವರ್ಣ ನ್ಯೂಸ್
ಪಡುಬಿದ್ರಿ: ಉಡುಪಿಯ ಕಾಪು ತಾಲೂಕಿನ ಪಡುಬಿದ್ರಿಯಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಕಟ್ಟದಪ್ಪ ಸೇವೆ ಜರುಗಿತು. ಕರಾವಳಿಯ ಜನರು ಅತ್ಯಂತ ಶ್ರೇಷ್ಠ ಪ್ರಸಾದವೆಂದು ಆರಾಧಿಸುವ ಕಟ್ಟದಪ್ಪ ಸೇವೆ ನಡೆಯುವ ರೀತಿಯೇ ಒಂದು ಅದ್ಭುತ. ಶ್ರೀ ಮಹಾಗಣಪತಿ ದೇವರ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ನಡೆಯುವ ಕಟ್ಟದಪ್ಪ ಮತ್ತು ಪೊಟ್ಟಪ್ಪ ಸೇವೆಗಳು ಜಗತ್ಪ್ರಸಿದ್ಧ.
ಪಡುಬಿದ್ರಿಯ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಪ್ರತಿ ವರ್ಷ ಈ ವಿಶೇಷ ಕಟ್ಟದಪ್ಪ ಸೇವೆ ಜರಗುತ್ತೆ.
ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು (Devotees) ಕೂಡಾ ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀ ಮಹಾಗಣಪತಿ ದೇವರ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ನಡೆಯುವ ಕಟ್ಟದಪ್ಪ ಮತ್ತು ಪೊಟ್ಟಪ್ಪ ಸೇವೆಗಳು ಹೆಸರುವಾಸಿಯಾಗಿದೆ. ಕಟ್ಟದಪ್ಪ ಸೇವೆ ನಡೆಯುವ ಹೊತ್ತಿಗೆ ದೇವಳದ (Temple) ಪರಿಸರಕ್ಕೆ ಹೋದರೆ ಮನಸಿಗೆ ಆನಂದ ನೀಡುವ ಘಮ ಘಮ ಪಸರಿಸಿರುತ್ತೆ.
ಇಲ್ಲಿ ನಾಗ ದೇವತೆಗಳಿಗೆ ನಿತ್ಯವೂ ನೆರವೇರಲಿದೆ ಶೋಡಷೋಪಚಾರ ಪೂಜೆ!
ವಿಶಿಷ್ಟ ಆಚರಣೆಯ ಹಿಂದಿರುವ ಕಥೆಯೇನು ?
ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬಲ್ಲಿ ಜನರು ಎಷ್ಟೇ ಪ್ರಯತ್ನ ಪಟ್ಟರೂ, ಕಟ್ಟಪುಣಿ ಅಂದರೆ ಗದ್ದೆಯ ನಡುವೆ ಸಾಗುವ ದಾರಿ ಸುದೃಢವಾಗಿ ನಿಲ್ಲುತ್ತಿರಲಿಲ್ಲ. ಇದರಿಂದ ಊರ ಜನರಿಗೆ ತುಂಬಾ ಸಮಸ್ಯೆ ಆಗುತ್ತಿತ್ತು. ಹಿರಿಯರು ನೀಡಿದ ಸಲಹೆಯಂತೆ ಊರ ಜನರು ಪಡುಬಿದ್ರಿ ಮಹಾಗಣಪತಿಗೆ ಕಟ್ಟದಪ್ಪ ಹರಕೆ ಹೇಳಿದ್ದರಂತೆ. ಹರಕೆ ಸಲ್ಲಿಸಿದ ಬಳಿಕ ಕಟ್ಟಪುಣಿ ಸುದೃಢವಾಗಿ ನಿಂತಿತು ಎಂದು ಇಲ್ಲಿನ ಭಕ್ತರ ನಂಬಿಕೆ. ಆ ಬಳಿಕ ಊರ ಜನರಿಗೆ ಯಾವುದೇ ಸಮಸ್ಯೆ ಆಗಿಲ್ಲವಂತೆ. ಅವತ್ತಿನಿಂದಲೂ ಈ ಅಪರೂಪದ ಕಟ್ಟಡ ಸೇವೆಯನ್ನು ಗಣಪತಿ ದೇವರಿಗೆ (God) ನಡೆಸಲಾಗುತ್ತಿದೆ.
100 ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿ
ಅಂದು ಕೇವಲ ಐದಾರು ಸೇರು ಅಕ್ಕಿ ಹಿಟ್ಟು ಮೂಲಕ ಮಧ್ಯಾಹ್ನ ನಡೆಯುತ್ತಿದ್ದ ಸೇವೆ ಇಂದು ಜಗದಗಲ ಹರಡಿ 100 ಮುಡಿ ಅಂದರೆ, ಐದು ಟನ್ ಗೂ ಅಧಿಕ ತೂಕಕ್ಕೆ ಬಂದು ತಲುಪಿದೆ. ಕಳೆದ 20 ವರ್ಷಗಳಿಂದ ಶ್ರೀ ದೇವಳದಲ್ಲಿ ಯೋಗೀಶ್ ಭಟ್ ಕರ್ಕಟೆ ಹೌಸ್ ರವರ 85 ಜನರ ತಂಡ ಇಲ್ಲಿ ಕಟ್ಟದಪ್ಪ ತಯಾರಿಸುವ ಕಾಯಕ ಮಾಡುತ್ತಾ ಬಂದಿದೆ. 16 ವರ್ಷಗಳ ಹಿಂದೆ 20 ಮುಡಿ ಅಕ್ಕಿ ಹಿಟ್ಟಿನಿಂದ ಕಟ್ಟದಪ್ಪ ತಯಾರಿಸಲಾಗುತ್ತಿತ್ತು ಎನ್ನುವ ಯೋಗಿಶ್ ಭಟ್, ಈ ವರ್ಷ 100 ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿಸಲಾಗುತ್ತಿದೆ.
ಜ್ಯೋತಿರ್ಲಿಂಗ ಸರಣಿ: ಗೂಳಿ ಬೆನ್ನಿನಿಂದ ಜ್ಯೋತಿರ್ಲಿಂಗವಾಗಿ ಕಾಣಿಸಿದ ಕೇದಾರನಾಥ!
ಇದರಿಂದ ಇದರ ಜನಪ್ರಿಯತೆ ಹಾಗೂ ಭಕ್ತರ ಭಕ್ತಿ ಭಾವದ ಬಗ್ಗೆ ಅರಿಯಬಹುದು.ಈ ಬಾರಿ ಕಟ್ಟದಪ್ಪಕ್ಕೆ 100 ಮುಡಿ ಅಕ್ಕಿ ಹಿಟ್ಟು, 1500 ತೆಂಗಿನ ಕಾಯಿ, 3500 ಬಾಳೆ ಹಣ್ಣು, 3700 ಕೆಜಿ ಬೆಲ್ಲ, 30 ಗೋಣಿ ಚೀಲ ಅರಳು, 15 ಕೆಜಿ ಏಲಕ್ಕಿ ಮತ್ತು 80 ಡಬ್ಬಿ ಕೊಬ್ಬರಿ ಎಣ್ಣೆ ಬಳಸಿ ಈ ಕಟ್ಟದಪ್ಪ ತಯಾರಿಸಲಾಗುತ್ತದೆ. 85 ಜನರ ಅಡುಗೆಯಾಳುಗಳ ತಂಡ ಸೇರಿ 8 ಬಾಣಲೆ, 2 ಕೊಪ್ಪರಿಗೆ, 22 ಅಪ್ಪದ ಕಾವಲಿ ಮೂಲಕ ಬೆಳಗಿನ ಜಾವ 1.39 ಗಂಟೆಯಿಂದ ಆರಂಭಿಸಿ ರಾತ್ರಿ ಆರರಿಂದ ಏಳು ಗಂಟೆ ತನಕ ಸುಮಾರು 2 ಲಕ್ಷ ಅಪ್ಪಗಳನ್ನು ತಯಾರಿಸಿದ್ದಾರೆ.
ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಅನುವಂಶೀಯ ಮೊಕ್ತೇಸರ ರತ್ನಾಕರ ರಾಜ್ ಕಿನ್ನಕ್ಕ ಬಳ್ಳಾಲ್ ಮತ್ತು ರವಿ ಭಟ್‌ರವರು ಸಮಗ್ರ‍್ರ ಮಾಹಿತಿ ನೀಡಿದರು.